ಕುತ್ಯಾಳ ಸಂತಾನ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಪುತ್ರಕಾಮೇಷ್ಠಿ ಯಾಗ, ಧನ್ವಂತರಿ ಹವನ

Saturday, December 26th, 2015
Kutyala

ಕಾಸರಗೋಡು: ಭಾರತೀಯ ಸಂಸ್ಕೃತಿ,ಪರಂಪರೆಯ ಆಚರಣೆ ಹಾಗೂ ನಂಬಿಕೆಗಳು ತಾತ್ವಿಕವಾಗಿ ವೈಜ್ಞಾನಿಕ ಹಿನ್ನೆಲೆಯ ಮಹತ್ವ ಹೊಂದಿರುವುದರಿಂದ ಪ್ರಕೃತಿಗೆ ಹತ್ತಿರವಾಗಿದೆ.ಆದರೆ ಇಂದಿನ ಪರಿಸ್ಥಿತಿಯಲ್ಲಿ ಕ್ಷಣಿಕ ವಿಷಯಾಸಕ್ತತೆಯ ಮೋಹಕ್ಕೊಳಗಾಗಿ ನಮ್ಮ ಪರಂಪರೆಯ ತತ್ವ,ನಿಷ್ಠೆ,ನಂಬಿಕೆಗಳಿಗೆದುರಾಗಿ ವರ್ತಿಸುವ ಕಾರಣ ಅಸಮತೋಲನಗಳು,ದುಖಃ ನಮ್ಮನ್ನು ಹಿಂಬಾಲಿಸುತ್ತಿರುವುದರ ಬಗ್ಗೆ ಜಾಗೃತರಾಗಬೇಕಾಗ ಅಗತ್ಯವಿದೆಯೆಂದು ಹಿಂದೂ ಐಕ್ಯವೇದಿಯ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೂಡ್ಲು ಕುತ್ಯಾಳ ಸಂತಾನ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ನಡೆದ ಅತ್ಯಪೂರ್ವ ಪುತ್ರಕಾಮೇಷ್ಠಿ ಯಾಗ ಹಾಗೂ ಧನ್ವಂತರಿ ಹವನದ ಸಮಾರೋಪ ಕಾರ್ಯಕ್ರಮದಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ […]