Blog Archive

ಕಾಂಗ್ರೆಸ್ ನಾಯಕರಂತೆ ಯಡಿಯೂರಪ್ಪ ಪಕ್ಷಾಂತರ ಮಾಡಿ ಮುಖ್ಯಮಂತ್ರಿ ಆದವರಲ್ಲ : ನಳಿನ್ ಕುಮಾರ್ ಕಟೀಲ್

Monday, May 31st, 2021
Nalin Kumar Kateel

ಮಂಗಳೂರು  :  ಸಿದ್ದರಾಮಯ್ಯ ಅವರು ತಾವು ಎಲ್ಲಿದ್ದವರು, ತಮ್ಮ ಗುರುಗಳು ಯಾರು ಎಂಬುದನ್ನು ಯೋಚಿಸಬೇಕು. ಕಾಂಗ್ರೆಸ್‍ಗೆ ಹೀನಾಮಾನವಾಗಿ ಬಯ್ಯುತ್ತಿದ್ದ ವ್ಯಕ್ತಿ, ಅದೇ ಪಕ್ಷಕ್ಕೆ ಬಂದು ಸಿಎಂ ಆಗಿದ್ದಾರೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ. “ಕಾಂಗ್ರೆಸ್ ನಾಯಕರಂತೆ ಪಕ್ಷಾಂತರ ಮಾಡಿಯೋ, ಯಾರದೋ ಕಾಲು ಹಿಡಿದು ಯಡಿಯೂರಪ್ಪ ಅವರು ಸಿಎಂ ಆದವರಲ್ಲ. “ಬಿಜೆಪಿ ಸಮರ್ಥ ರಾಜಕೀಯ ಪಕ್ಷ, ನಾಯಕತ್ವದ ಕೊರತೆ ಎದುರಾಗುವುದಿಲ್ಲ. ಅದರಲ್ಲೂ ನಾಯಕತ್ವದ ಪಾಠವನ್ನು ನಾವು ಕಾಂಗ್ರೆಸ್ ಪಕ್ಷದಿಂದ ಕಲಿಯಬೇಕಿಲ್ಲ. ಯಡಿಯೂರಪ್ಪ ಅವರು 40ರಿಂದ […]

ಬಿಜೆಪಿ ಮೂರು ಪಕ್ಷದ ಸರ್ಕಾರ ಎಂದು ಯೋಗೇಶ್ವರ್ ಹೇಳಿಕೆ ನೀಡುವುದು ಸರಿಯಲ್ಲ: ಕೆ.ಎಸ್.ಈಶ್ವರಪ್ಪ

Friday, May 28th, 2021
eshwarappa

ಶಿವಮೊಗ್ಗ: ಬಿಜೆಪಿ ಮೂರು ಪಕ್ಷದ ಸರ್ಕಾರ ಎಂದು ಸಿ.ಪಿ.ಯೋಗೇಶ್ವರ್  ಹೇಳಿಕೆ ನೀಡುವುದು ಸರಿಯಲ್ಲ. ಹೋದ ಕಡೆಯಲ್ಲೆಲ್ಲಾ ಮಾಧ್ಯಮವರು ಕೇಳುತ್ತಾರೆ. ಸರ್ಕಾರದಲ್ಲಿ ಇರಲು ಮನಸ್ಸಿಲ್ಲದಿದ್ದರೆ ಸಂಪುಟದಿಂದ ಹೊರ ಹೋಗಬಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದರು. ಯಾವುದೇ ಸಮಸ್ಯೆಗಳಿದ್ದರೆ ನಾಲ್ಕು ಗೋಡೆಯ ಮಧ್ಯೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲಿ. ಅದು ಬಿಟ್ಟು ದೆಹಲಿಗೆ ಹೋಗುವುದು, ಸಿಎಂ ವಿರುದ್ಧ ದೂರು ಹೇಳುವುದು ಸರಿಯಲ್ಲ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಅವರಿಗೆ ಅಗತ್ಯ ಸ್ಥಾನಮಾನ ನೀಡಿದೆ. ಯೋಗೀಶ್ವರ್ ನನ್ನ ಒಳ್ಳೆಯ ಸ್ನೇಹಿತ. ಆದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ […]

ಸಿಎಂ ಪಟ್ಟಕ್ಕಾಗಿ ಕಸರತ್ತು, ಮುಖ್ಯಮಂತ್ರಿ ಸೀಟಲ್ಲಿ ಕೂರಲು ಯಾರೆಲ್ಲ ರೆಡಿಯಾಗಿದ್ದಾರೆ ಎಂದು ನೀವೇ ನೋಡಿ !

Thursday, May 27th, 2021
yedyurappa

ಬೆಂಗಳೂರು :  ಕೊರೋನಾ ಸಂದಿಗ್ಧತೆ ನಡುವೆಯೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಗೆ ಬಿರುಸಿನಿಂದ ಕೂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ದಾಟುತ್ತಿದ್ದಂತೆ ಸಿಎಂ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್  ಕದ ತಟ್ಟಲು ಶುರು ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರು ಸಿಎಂ ಸ್ಥಾನದ ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿವೆ. ವಿಜಯೇಂದ್ರ ಆಡಳಿತದಲ್ಲಿ ಮೂಗು […]

ದ.ಕ ಕೊವೀಡ್ ನಿರ್ವಹಣೆಗೆ ನಳಿನ್ ಕುಮಾರ್ ಕಟೀಲ್ ರವರಿಂದ ರೂ. 2.50 ಕೋಟಿ ಅನುದಾನ

Monday, May 10th, 2021
nalin kumar

ಮಂಗಳೂರು  : ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಈ ಸಾಲಿನಲ್ಲಿ ಬಂದಂತಹ ಸಂಸದರ ಪ್ರದೇಶಾಭಿವೃದ್ಧಿ ಸಂಪೂರ್ಣ ಅನುದಾನ ರೂಪಾಯಿ ಎರಡೂವರೆ ಕೋಟಿಗಳನ್ನು ಕೋವಿಡ್ 19 ನಿರ್ವಹಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಮಿಕ ರೋಗವನ್ನು ಎದುರಿಸಲು ಬೇಕಾದ ವೈದ್ಯಕೀಯ ಪರಿಕರಗಳು ಇತ್ಯಾದಿಗಳನ್ನು ಅಳವಡಿಸಲು ಈ ಅನುದಾನ ಉಪಯೋಗಿಸಿಕೊಳ್ಳಲು ಸೂಚಿಸಿದ್ದಾರೆ.

ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲು ಬಿಡುವುದಿಲ್ಲ : ಪಿಣರಾಯಿ ವಿಜಯನ್

Wednesday, March 31st, 2021
pinarai

ಕಾಸರಗೋಡು : ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ವಿ.ವಿ. ರಮೇಶನ್, ಕಾಸರಗೋಡು ಕ್ಷೇತ್ರದ ಎಂ.ಎ. ಲತೀಫ್ ಪರ ಚುನಾವಣಾ ಪ್ರಚಾರದಲ್ಲಿರುವ ಕೇರಳ ಮುಖ್ಯಮಂತ್ರಿ  ಪಿಣರಾಯಿ ವಿಜಯನ್ ಕೇರಳದಲ್ಲಿ ಈ ಬಾರಿ  ಒಂದು ಸ್ಥಾನಕ್ಕೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಬಿಜೆಪಿ  2019 ರಲ್ಲಿ ಕೇವಲ ಒಂದೇ ಒಂದು ಸ್ಥಾನದಲ್ಲಿ ಖಾತೆ ತೆರೆದಿದ್ದು ನೇಮಂನಲ್ಲಿ ಗೆದ್ದಿತ್ತು. ಈ ಬಾರಿ ಈ ಖಾತೆಯನ್ನು ಮುಚ್ಚುತ್ತೇವೆ,   ಕಾಂಗ್ರೆಸ್ ನ ಒಳಒಪ್ಪಂದದಿಂದ ಬಿಜೆಪಿ ಗೆದ್ದಿತ್ತು. ಈ ಬಾರಿ ಅದನ್ನು ಬಂದ್ ಮಾಡುತ್ತೇವೆ ಎಂದು ಹೇಳಿದರು. ಮೊಗ್ರಾಲ್ ಶಾಲಾ ಮೈದಾನ ದಲ್ಲಿ ಮಂಜೇಶ್ವರ […]

ಮದ್ಯ ಸೇವನೆ ವಯೋಮಿತಿ ಇಳಿಕೆ : ಆಪ್ ಸರ್ಕಾರದ ನಡೆಯನ್ನು ಟೀಕಿಸಿದ ಬಿಜೆಪಿ

Wednesday, March 24th, 2021
drinks

ನವದೆಹಲಿ: ಮದ್ಯ ಸೇವನೆ ವಯೋಮಿತಿಯನ್ನು25 ರಿಂದ 21 ವರ್ಷಕ್ಕೆ ಇಳಿಸಿದ ಆಪ್ ಸರ್ಕಾರದ ನಡೆಯನ್ನು ಟೀಕಿಸಿದ ಬಿಜೆಪಿಗೆ ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದ್ದು, ಮೊದಲು ಬಿಜೆಪಿ ಮದ್ಯ ಸೇವನೆ ವಯೋಮಿತಿಯನ್ನು ತನ್ನ ಆಡಳಿತವಿರುವ ರಾಜ್ಯಗಳಲ್ಲಿ 25ಕ್ಕೆ ಏರಿಸಿದರೆ ನಾವು 30ಕ್ಕೆ ಏರಿಸುತ್ತೇವೆ ಎಂದು ಸವಾಲು ಹಾಕಿದೆ. ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್, ‘ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮದ್ಯ ಖರೀದಿಸುವ ಕನಿಷ್ಠ ವಯಸ್ಸನ್ನು 25 ವರ್ಷ ಮಾಡಿದರೆ, […]

ಜೆಡಿಎಸ್ ಪಕ್ಷದ ತತ್ವ ಸಿದ್ದಾಂತವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಅನುಸರಿಸುತ್ತಾ ಬಂದಿದೆ : ಲೀಲಾವತಿ ಆರ್ ಪ್ರಸಾದ್

Sunday, March 21st, 2021
JDS

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಜನತಾದಳ ಮಹಿಳಾ ಘಟಕದ ವತಿಯಿಂದ ಮಹಿಳಾ ಸಮಾವೇಶ ಮಹಿಳಾ ದಿನಾಚರಣೆ ಮತ್ತು ಸಾಮರಸ್ಯ ಸಂಗಮ ಕಾರ್ಯಕ್ರಮ ಮಂಗಳೂರಿನ ಕದ್ರಿಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಮಾಜಿ ಸಚಿವೆ, ಜೆಡಿಎಸ್ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಲೀಲಾವತಿ ಆರ್ ಪ್ರಸಾದ್ ದೀಪಬೆಳಗಿ ಚಾಲನೆ ನೀಡಿದರು. ಬಳಿಕ ಗ್ರಾಮಾಪಂಚಯತ್ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಮಹಿಳಾ ಸಾಧಕಿಯರಿಗೆ ಸನ್ಮಾನ […]

ತಮಿಳುನಾಡು ವಿಧಾನಸಭೆ ಚುನಾವಣೆ : ಅಣ್ಣಾಮಲೈ ಹಾಗೂ ನಟಿ ಖುಷ್ಬೂ ಸುಂದರ್ ಅವರಿಗೆ ಟಿಕೆಟ್

Sunday, March 14th, 2021
Annamalai

ಚೆನ್ನೈ:  ತಮಿಳುನಾಡು ವಿಧಾನಸಭೆ ಚುನಾವಣೆಯ 20 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ನಟಿ ಖುಷ್ಬೂ ಸುಂದರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಇದೀಗ ಒಟ್ಟೂ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಅಣ್ಣಾಮಲೈ ಅವರು ಅರವಕುರಿಚಿ ಕ್ಷೇತ್ರದಿಂದಲೂ ಖುಷ್ಬೂ ಥೌಸಂಡ್ ಲೈಟ್ಸ್ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ. ಇನ್ನೊಂದೆಡೆ ಕಾರೈಕುಡಿ […]

ಡಿ.ವಿ.ಸದಾನಂದ ಗೌಡ ಅಶ್ವಸ್ಥ, ಆಸ್ಪತ್ರೆಗೆ ದಾಖಲು

Sunday, January 3rd, 2021
sadananda Gowda

ಚಿತ್ರದುರ್ಗ : ಕೇಂದ್ರ ಸಚಿವ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರು ಲೋ ಶುಗರ್ ಉಂಟಾಗಿ ಚಿತ್ರದುರ್ಗದ ಬಸವೇಶ್ವರ  ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಸಭೆ ಮುಗಿಸಿ ಬರುವಾಗ ಘಟನೆ ನಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸಹಜಸ್ಥಿತಿಗೆ ಬಂದಿದ್ದು ಕುಟುಂಬದವರ ಜೊತೆ ಮಾತಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ

ಕಾಂಗ್ರೆಸ್ ಮುಖಂಡ ಮಾಧವ ಮಾವೆ ಹಾಗೂ ಪತ್ನಿ ಬಿಜೆಪಿಗೆ ಸೇರ್ಪಡೆ

Saturday, December 19th, 2020
Madhava Mave

ಮಂಗಳೂರು: ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿದ್ದ ಮಾಧವ ಮಾವೆ ಹಾಗೂ ಪತ್ನಿ ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ಸೇರಿದಂತೆ ಹಲವಾರು ಮಂದಿ ಕಾರ್ಯಕರ್ತರು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಲ್ಲರಿಗೂ ಬಿಜೆಪಿ ಧ್ವಜ ನೀಡಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿಗೆ ಸೇರ್ಪಡೆಯಾಗಿರುವ ಮಾಧವ ಮಾವೆ ಮಾತನಾಡಿ, ಕಟೀಲ್ ಅವರು ಯಾವಾಗಲೂ ಬೆನ್ನುತಟ್ಟಿ ಬಿಜೆಪಿಗೆ ಬರಬೇಕೆಂದು ಆಹ್ವಾನ ನೀಡುತ್ತಿದ್ದರು‌. ಅವರ ಕೈಯ ಸ್ಪರ್ಶ ದಿಂದ  ಇಂದು ನಾವು […]