Blog Archive

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಆಗಮನ

Tuesday, October 3rd, 2017
amith-sha

ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಮುಂಜಾನೆ ಮಂಗಳೂರಿಗೆ ಆಗಮಿಸಿದ್ದಾರೆ. ಅಹಮದಾಬಾದ್ ನಿಂದ ವಿಶೇಷ ವಿಮಾನದ ಮೂಲಕ ಹೊರಟ ಅಮಿತ್ ಶಾ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ ಸುಮಾರು 1:30 ಗಂಟೆಗೆ ಆಗಮಿಸಿದರು. ಕಮಲ ಪಾರ್ಟಿಯ ಚಾಣಕ್ಯನನ್ನು ವಿಮಾನ ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕೇರಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೆ ಸುರೇಂದ್ರನ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರ್ ಸೇರಿದಂತೆ ಪ್ರಮುಖ ನಾಯಕರು ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ತಡರಾತ್ರಿಯವರೆಗೂ ಕಾದು […]

ರಮಾನಾಥ ರೈ ವರ್ಚಸ್ಸನ್ನು ಕುಗ್ಗಿಸಲು ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನ ಮಾಡುತ್ತಿವೆ : ಮಿಥುನ್ ರೈ

Wednesday, June 21st, 2017
mithun

ಮಂಗಳೂರು : ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಬಂಧಿಸಲು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ.  ಸಚಿವ ರಮಾನಾಥ ರೈ ವರ್ಚಸ್ಸನ್ನು ಕುಗ್ಗಿಸಲು ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನ ಮಾಡುತ್ತಿವೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಮಾತನಾಡಿದ ಮಿಥುನ್, ಕಾಂಗ್ರೆಸ್‌ಗೆ ಶಾಂತಿ ಮುಖ್ಯ,  ಜಿಲ್ಲೆಯ ಅಬಿವೃದ್ಧಿ ಕಾಪಾಡುವ ದೃಷ್ಟಿಯಿಂದ ರಮಾನಾಥ ರೈ ನೀಡಿರುವ ಸೂಚನೆಯನ್ನೇ ಅಪರಾಧ ಎಂಬಂತೆ ಬಿಂಬಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ […]

ಕೃಷಿಕರು ಬಿಜೆಪಿ ಪರ ಸಂಸದ ನಳಿನ್ ಹರ್ಷ

Thursday, April 27th, 2017
Nalin Kumar

ಮಂಗಳೂರು : ಸುಳ್ಯ ಮತ್ತು ಪುತ್ತೂರು ಎಪಿಎಂಸಿಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದು, ಕೃಷಿಕರು ಬಿಜೆಪಿ ಪರವಾಗಿದ್ದಾರೆ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಕೃಷಿಕರ ವಿಶ್ವಾಸಕ್ಕೆ ಪೂರಕವಾಗಿ ಪಾರದರ್ಶಕ ಆಡಳಿತ ನೀಡಲು ಬಿಜೆಪಿ ಸದಾ ಬದ್ಧವಾಗಿದೆ ಎಂದು ದ.ಕ.ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಜನ ವಿರೋಧಿ ನೀತಿಯಿಂದ ಜನತೆ ರೋಸಿ ಹೋಗಿದ್ದಾರೆ. ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಹಾಗೂ ಪಾರದರ್ಶಕ ಆಡಳಿತಕ್ಕೆ ಇಡೀ ದೇಶದಲ್ಲಿ ಜನ […]

ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಳ, ಪರಿಹಾರಕ್ಕೆ ಸರಕಾರದ ದಿವ್ಯ ನಿರ್ಲಕ್ಷ್ಯ : ಮೋನಪ್ಪ ಭಂಡಾರಿ

Friday, March 10th, 2017
bjp protest

ಮಂಗಳೂರು  :  ರಾಜ್ಯ ಸರಕಾರದ ಬರ ನಿರ್ವಹಣಾ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ದಕ ಜಿಲ್ಲಾ ಸಮಿತಿಯ ಸದಸ್ಯರು  ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು . ರಾಜ್ಯದಲ್ಲಿ ಅಧಿಕೃತವಾಗಿ 160 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು ರಾಜ್ಯ ಸರ್ಕಾರ ಈ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ದುರದೃಷ್ಟದ ಸಂಗತಿಯೆಂದರೆ ಬರಗಾಲದ ಭೀಕರತೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಯನ್ನು ಕೈಗೊಳ್ಳಬೇಕಾದ ಮುಖ್ಯಮಂತ್ರಿ ಮತ್ತು ಆಡಳಿತ ಪಕ್ಷದ ಅಧ್ಯಕ್ಷರು ದಿವ್ಯ ನಿರ್ಲಕ್ಷ್ಯ ತೋರುತ್ತಿ ದ್ದಾರೆ  ಎಂದು […]

ಡಿ ವೈ ಎಫ್ ಐ – ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ -ಕಾರಿಗೆ ಬೆಂಕಿ

Thursday, January 12th, 2017
car fire

ಕಾಸರಗೋಡು  : ಡಿ ವೈ ಎಫ್ ಐ – ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಘಟನೆ ಬುಧವಾರ ಸಂಜೆ ಬೋವಿಕ್ಕಾನದಲ್ಲಿ ನಡೆದಿದ್ದು, ಒಂದು ಕಾರಿಗೆ ಬೆಂಕಿ ಹಚ್ಚಲಾಗಿದೆ. ಆಟೋ ರಿಕ್ಷಾ ಹಾನಿಗೊಳಿಸಲಾಗಿದ್ದು , ಅಂಗಡಿಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಎಂಡೋಸಲ್ಫಾನ್ ಸಂತ್ರಸ್ಥರಿಗೆ ನಷ್ಟ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಅಭಿನಂದನೆ ಸಲ್ಲಿಸಿ ಡಿ ವೈ ಎಫ್ ಐ ಕಾರ್ಯಕರ್ತರು ಸಂಜೆ ಬೋವಿಕ್ಕಾನ ಪೇಟೆಯಲ್ಲಿ ಮೆರವಣಿಗೆ ನಡೆಸಿತ್ತು .ಈ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು, ಈ […]

ನೋಟು ರದ್ಧತಿಯಿಂದಾಗಿ ಸ್ವಚ್ಛ ಭಾರತದ ಬದಲಾಗಿ ಸ್ವಚ್ಛ ಬಿಜೆಪಿ ಆಗುವ ದಿನ ದೂರವಿಲ್ಲ: ಐವನ್ ಡಿಸೋಜ

Saturday, November 19th, 2016
Ivan

ಮಂಗಳೂರು: 500 ಮತ್ತು 1000 ರೂ. ಮುಖಬೆಲೆಯ ನೋಟು ರದ್ಧತಿಯಿಂದಾಗಿ ಸ್ವಚ್ಛ ಭಾರತದ ಬದಲಾಗಿ ಸ್ವಚ್ಛ ಬಿಜೆಪಿ ಆಗುವ ದಿನ ದೂರವಿಲ್ಲ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ರದ್ಧತಿಯಿಂದಾಗಿ ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರ ಎಪಿಎಂಸಿ ಚುನಾವಣೆ, ಊಂಛ್ನ ಸ್ಥಳೀಯ ಸಂಸ್ಥೆಗಳ ಚುನಾವಣೆ, ಗುಜರಾತ್ ಪುರಸಭೆ ಚುನಾವಣೆಗಳಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಹೀಗೆ ಮುಂದುವರಿದಲ್ಲಿ ಸ್ವಚ್ಛ ಭಾರತದ ಬದಲಾಗಿ ಸ್ವಚ್ಛ ಬಿಜೆಪಿ ಆಗುವ […]

ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ: ಯು. ಟಿ. ಖಾದರ್

Monday, November 14th, 2016
U-t-khadar

ಮಂಗಳೂರು: ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿತಕರ ಘಟನೆಯಲ್ಲಿ ನನ್ನ ಪಾತ್ರವಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದ್ದಾರೆ. ಆರೋಪದಲ್ಲಿ ಹುರುಳಿಲ್ಲ. ಅಹಿತಕರ ಘಟನೆ ಯಾರೇ ಮಾಡಿದರೂ ಖಂಡನೀಯ. ಶಾಂತಿಯನ್ನು ಬಯಸುವ ಯಾವ ನಾಗರಿಕನೂ ಇಂತಹ […]

ಟಿಪ್ಪು ಜಯಂತಿ: ರಾಜ್ಯಾದ್ಯಂತ ಬಿಜೆಪಿ ಸೇರಿದಂತೆ ಮಡಿಕೇರಿ ಮತ್ತು ಮಂಗಳೂರಿನಲ್ಲಿ ಪ್ರತಿಭಟನೆ

Thursday, November 10th, 2016
Bjp Protest

ಮಂಗಳೂರು: ಸಾಕಷ್ಟು ವಿರೋಧದ ನಡುವೆ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ. ಈ ಮಧ್ಯೆ ರಾಜ್ಯಾದ್ಯಂತ ಬಿಜೆಪಿ ಸೇರಿದಂತೆ ಮಡಿಕೇರಿ ಮತ್ತು ಮಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಕೊಡಗು ಜಿಲ್ಲೆಯ ಕುಶಾಲ್‌ ನಗರ, ಸೋಮವಾರ ಪೇಟೆಗಳಲ್ಲಿ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ಧಾರೆ. ಇತ್ತ, ಮಂಗಳೂರಿನಲ್ಲೂ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಟಿಪ್ಪು ಜಯಂತಿ ವಿರುದ್ಧ ಬೀದಿಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು. ಅಲ್ಲದೆ, ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ಧಾರೆ.

60 ವರ್ಷಗಳ ಎಡ, ಬಲ ರಂಗಗಳ ಆಡಳಿತದಿಂದ ರಾಜ್ಯ ಕಂಗೆಟ್ಟಿದೆ : ಸುರೇಶ್ ಗೋಪಿ

Monday, April 18th, 2016
Kerala Bjp

ಕುಂಬಳೆ: ರಾಜ್ಯದಲ್ಲಿ ಅನಿವಾರ್ಯ ರಾಜಕೀಯ ಬದಲಾವಣೆಗೆ ಕಾಲ ಸನ್ನಿಹಿತವಾಗಿದ್ದು, ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಅನುಕೂಲಕರ ವಾತಾವರಣ ಹಿಂದಿಗಿಂತ ಇಂದು ಅತಿ ಹೆಚ್ಚಿದೆಯೆಂದು ಮಲೆಯಾಳಂ ಚಲನಚಿತ್ರ ತಾರೆ, ಭರತ್ ಸುರೇಶ್ ಗೋಪಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎನ್‌ಡಿಎ ಬೃಹತ್ ಚುನಾವಣಾ ಪ್ರಚಾರ ಸಭೆಯ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ಕಳೆದ 60 ವರ್ಷಗಳ ಎಡ,ಬಲ ರಂಗಗಳ ಸ್ವಾರ್ಥ ಲಾಲಸೆಯ […]

ಬಿಜೆಪಿ ಮಂಜೇಶ್ವರ ಮಂಡಲ ಚುನಾವಣಾ ಸಮಿತಿ ಕಛೇರಿ ಉದ್ಘಾಟನೆ

Friday, March 18th, 2016
Bjp Manjeshwara

ಉಪ್ಪಳ : ದೇಶ ಕಾತರತೆಯಿಂದ ಈ ಸಾಲಿನ ಕೇರಳದ ವಿಧಾನ ಸಭಾ ಚುನಾವಣೆಯನ್ನು ಕಾಯುತ್ತಿದೆ. ರಾಜ್ಯದ ಜನತೆಯ ಸಹಿತ ಪ್ರತಿಯೊಬ್ಬರ ದೃಷ್ಟಿಯು ಚುನಾವಣೆಯತ್ತ ಹಾಯಿಸುವಂತಾಗಿದೆ. ಇದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಜನರಪರ ಆಡಳಿತವೇ ಕಾರಣ ಎಂಬುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿ ಯಾವ ಕಾಲಕ್ಕೂ ಜನಪರ ಹೋರಾಟದ ಹಾದಿಗೆ ದನಿಯಾದ ಪಕ್ಷವಾಗಿದೆ. ಅಲ್ಲದೆ ಭಾರತೀಯ ಜನ ಸಂಘದ ಕಾಲದಿಂದಲೂ ಮಂಜೇಶ್ವರ ಮಂಡಲ ಪ್ರತಿಭಟನೆ, ಹೋರಾಟಗಳಿಗೆ ಸಾಕ್ಷಿ ಎನಿಸಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಸಿ.ಕೆ.ಪದ್ಮನಾಭನ್ ಅವರು ಅಭಿಪ್ರಾಯಪಟ್ಟರು. […]