ಆಳ್ವಾಸ್ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಚಿತ್ರಕಲಾ ಸ್ಪರ್ಧೆ
Wednesday, June 6th, 2018ಮೂಡುಬಿದಿರೆ: ಪರಿಸರ ನಮ್ಮ ಬದುಕಿಗೆ ಬೇಕಾದ ಎಲ್ಲವನ್ನೂ ಕೊಟ್ಟಿದೆ. ಆದರೆ ಪರಿಸರದ ಕೊಡುಗೆಯನ್ನು ನಾವು ಹಾಳು ಮಾಡುತ್ತಿದ್ದೇವೆ. ಪರಿಸರಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಪರಿಸರ ಜಾಗೃತಿ ಎಳವೆಯ ಹಂತದಲ್ಲಿ ಮನೆಯಲ್ಲಿಯೇ ಮೂಡಬೇಕು. ಮತ್ತು ಅದು ನಿತ್ಯದ ದಿನಚರಿಯಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಹೇಳಿದರು. ಆಳ್ವಾಸ್ ಪ್ರೌಢಶಾಲೆಯಲ್ಲಿ `ಪ್ಲಾಸ್ಟಿಕ್ ಮುಕ್ತ ಪರಿಸರ’ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಶಿಕ್ಷಣ […]