Blog Archive

ಕದ್ದ ಮಾಲನ್ನು ಮೋರಿಯಲ್ಲಿಟ್ಟು ಮಾರಾಟ ಮಾಡ್ತಿದ್ದ ಮೋರಿ ಕಾಂತ ಅರೆಸ್ಟ್

Friday, November 30th, 2018
police

ಬೆಂಗಳೂರು: ಕುಖ್ಯಾತ ಮನೆಗಳ್ಳನನ್ನ ಬಂಧಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಂತರಾಜ್ ಅಲಿಯಾಸ್ ಮೋರಿ ಕಾಂತ ಬಂಧಿತ ಆರೋಪಿ. ಕಳೆದ ಇಪ್ಪತ್ತು ವರ್ಷಗಳಿಂದ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಆದ್ರೆ ಇದೀಗ ಕೋರಮಂಗಲ ಪೊಲೀಸರ ಕೈಗೆ ಸಿಕ್ಕಿದ್ದು ಬಂಧಿತನಿಂದ 1.19 ಕೆ ಜಿ ಚಿನ್ನಾಭರಣ ಮತ್ತು 900 ಗ್ರಾಂ ಬೆಳ್ಳಿ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯೂ ಚಿಕ್ಕಬಳ್ಳಾಪುರ ಮೂಲದವನ್ನಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ನಗರದಲ್ಲಿ ಬಂದು ವಾಸವಾಗಿದ್ದ. ನಂತ್ರ ಅಪಾರ್ಟ್ಮೆಂಟ್, ‌ಮನೆಗಳನ್ನ ಕಳ್ಳತನ ಮಾಡಿ […]

ಬಾಡಿಗೆ ವಿಚಾರಕ್ಕೆ ಮನೆ ಮಾಲೀಕನನ್ನೇ ಕೊಂದ ಆರೋಪ.. ನಾಲ್ವರು ಆರೋಪಿಗಳು ವಶಕ್ಕೆ!

Friday, November 30th, 2018
murder

ಬೆಂಗಳೂರು: ಮನೆ ಬಾಡಿಗೆ ವಿಚಾರಕ್ಕೆ ಕೊಲೆ ನಡೆದಿರುವ ಘಟನೆ ಕೆಂಗೇರಿ ದೀಪಾಂಜಲಿ ನಗರ ಬಳಿ ನಡೆದಿದೆ. ಮನೆ ಮಾಲೀಕ ರಮೇಶ್ ಜೈನ್ ಮೃತ ವ್ಯಕ್ತಿಯಾಗಿದ್ದಾರೆ. ಇಸ್ಲಾಮ್ ಪಾಶ ಎಂಬ ವ್ಯಕ್ತಿ ಮನೆ ಬಾಡಿಗೆ ಪಡೆದಿದ್ದ. ಆದ್ರೆ ಮನೆ ಬಾಡಿಗೆ ಹಣ ಕೊಡದೇ ಮಾಲೀಕ ರಮೇಶ್ ಜೈನ್ರನ್ನ ಸತಾಯಿಸುತ್ತಿದ್ದರು. ಇದೇ ವಿಚಾರಕ್ಕೆ ನಿನ್ನೆ ಕೊಲೆ ಮಾಡಿ ಅವರ ಶವವನ್ನು ಕೆಂಗೇರಿ ಬಳಿಯ‌ ರೈಲ್ವೆ ಪ್ಯಾರಲಲ್ ರೋಡ್ ಬಳಿ ಬಿಸಾಕಿ ಹೋಗಿದ್ದ. ಕೊಲೆಯಾಗಿರುವ ರಮೇಶ್ ಜೈನ್ ಪ್ಲಾಸ್ಟಿಕ್ ಚೇರ್ ಬ್ಯುಸಿನೆಸ್ […]

ಒಂದು ಲಕ್ಷ ಕುಟುಂಬಗಳಿಗೆ ಸಿಲಿಂಡರ್​, ಸ್ಟವ್​​ ವಿತರಣೆ: ಸಚಿವ ಜಮೀರ್ ಅಹ್ಮದ್

Thursday, November 29th, 2018
zameer-ahmed

ಬೆಂಗಳೂರು: ಬಡತನದ ರೇಖೆಗಿಂತ ಕೆಳಗಿರುವ ಒಂದು ಲಕ್ಷ ಕುಟುಂಬಗಳಿಗೆ ಡಿಸೆಂಬರ್ 15 ರೊಳಗೆ ಸಿಲಿಂಡರ್ ಮತ್ತು ಸ್ಟವ್ಗಳನ್ನು ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರತಿ ಕುಟುಂಬಕ್ಕೆ 4,450 ರೂ. ವೆಚ್ಚದಲ್ಲಿ ಎರಡು ಸಿಲಿಂಡರ್, ಒಂದು ಸ್ಟವ್ ಮತ್ತು ರೆಗ್ಯುಲೇಟರ್‌ಗಳನ್ನು ನೀಡಲಾಗುವುದು. ಈಗಾಗಲೇ 4 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ […]

ಪೊಲೀಸ್ ಪ್ರಶ್ನೆಪತ್ರಿಕೆ ಲೀಕ್​ ಪ್ರಕರಣ: ತನಿಖೆ ಮತ್ತಷ್ಟು ಚುರುಕು

Wednesday, November 28th, 2018
bangaluru

ಬೆಂಗಳೂರು: ಪೊಲೀಸ್ ಪೇದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ಬೃಹತ್ ಜಾಲವೇ ಅಡಗಿದೆ ಎಂಬ ಅನುಮಾನ ಸಿಸಿಬಿ ಪೊಲೀಸರನ್ನು ಕಾಡುತ್ತಿದೆ. ಪ್ರಕರಣದ ಕಿಂಗ್ಪಿನ್ ಶಿವಕುಮಾರ್ ಹಿಂದೆ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಎಲ್ಲಿಂದ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಇರುವಂತಹ ಆ ಕಾಣದ ಕೈ ಯಾರದ್ದು ಎಂದು ಪ್ರಶ್ನೆ‌ ಮೂಡಿದೆ. ಆರೋಪಿಗೆ ಬಲವಾದ ಲಿಂಕ್ ಇರುವುದರಿಂದಲೇ ಈ ಕೃತ್ಯ ಎಸಗಿರುವುದು‌ ಗಮನಕ್ಕೆ ಬಂದಿದೆ ಎನ್ನಲಾಗ್ತಿದೆ. […]

ನವೆಂಬರ್ 24 ರಂದು ಅನಂತಕುಮಾರ್ ವೈಕುಂಠ ಸಮಾರಾಧನೆ

Friday, November 23rd, 2018
ananth-bjp

ಬೆಂಗಳೂರು: ಇತ್ತೀಚಿಗೆ ಅಗಲಿದ ಕೇಂದ್ರ ಸಚಿವ ಅನಂತಕುಮಾರ್ ಅವರ ವೈಕುಂಠ ಸಮಾರಾಧನೆಯನ್ನು ನವೆಂಬರ್ 24 ರಂದು ಬೆಂಗಳೂರಿನ ಪಂಪ ಮಹಾಕವಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಉತ್ತರಾದಿ ಮಠದಲ್ಲಿ ಆಯೋಜಿಸಲಾಗಿದೆ. ದುಃಖದ ಸಂಧರ್ಭದಲ್ಲಿ ಲಕ್ಷಾಂತರ ಜನರು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದಾರೆ. ಸಮಯದ ಅಭಾವದ ಕಾರಣ ಈ ಎಲ್ಲಾ ಜನರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ. ಅನಂತಕುಮಾರ್ ಅವರ ಒಡನಾಡಿಗಳು ಹಾಗೂ ಸಾರ್ವಜನಿಕರಿಗೆ ವೈಕುಂಠ ಸಮಾರಾಧನೆಯ ಮಾಹಿತಿಯನ್ನು ತಿಳಿಸುವ ದೃಷ್ಟಿಯಿಂದ, ತಮ್ಮ ಮಾಧ್ಯಮದ ಮೂಲಕ ಈ ಮಾಹಿತಿಯನ್ನು ಪ್ರಕಟಿಸುವಂತೆ […]

ದೇಶದಲ್ಲೇ ಬೆಂಗಳೂರು ಅತಿ ಹೆಚ್ಚು ಸಂಬಳ ನೀಡುವ ಮಹಾನಗರ..!

Thursday, November 22nd, 2018
bengaluru

ಬೆಂಗಳೂರು: ಹಾರ್ಡ್ವೇರ್ ಆ್ಯಂಡ್ ನೆಟ್ವರ್ಕಿಂಗ್, ಸಾಫ್ಟ್ವೇರ್ ಆ್ಯಂಡ್ ಐಟಿ ಸೇವೆ ಹಾಗೂ ಗ್ರಾಹಕ ವಲಯದ ಉದ್ಯಮಗಳಲ್ಲಿ ಅತಿ ಹೆಚ್ಚಿನ ವೇತನ ಪಾವತಿಸುತ್ತಿರುವ ನಗರಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಲಿಂಕ್ಡ್ಇನ್ ಸಂಸ್ಥೆಯು ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಪ್ರಥಮ ಬಾರಿಗೆ ವೇತನ ಪಾವತಿ ಕುರಿತಂತೆ ಅಧ್ಯಯನ ನಡೆಸಿ ಈ ವರದಿ ಪ್ರಕಟಿಸಿದೆ. ತಂತ್ರಜ್ಞಾನ ಉದ್ಯಮದಲ್ಲಿ ಬೆಂಗಳೂರು ಅತಿ ಹೆಚ್ಚಿನ ಸಂಬಳ ಪಾವತಿಸುತ್ತಿದ್ದು, ಮುಂಬೈ ಮತ್ತು ದೆಹಲಿ ನಂತರದ ಸ್ಥಾನ ಪಡೆದಿವೆ. ನಗರದ ಹಾರ್ಡ್ವೇರ್ ಆ್ಯಂಡ್ ನೆಟ್ವರ್ಕಿಂಗ್ ಉದ್ಯೋಗಿಗಳು ವರ್ಷಕ್ಕೆ […]

ನವವಿವಾಹಿತೆ ಆತ್ಮಹತ್ಯೆಗೆ ಶರಣು: ಪತಿಯೇ ಕೊಲೆ ಮಾಡಿದ ಆರೋಪ

Thursday, November 22nd, 2018
murdered

ಬೆಂಗಳೂರು: ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ರೋಜಾ (18) ನೇಣು ಬಿಗಿದುಕೊಂಡವಳು. ಈಕೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ನಿವಾಸಿಯಾಗಿದ್ದು, 3 ತಿಂಗಳ ಹಿಂದೆ ರೋಜಾ ಮತ್ತು ಆಕೆಯ ಗಂಡ ಬಾಬಜಾನ್ ಬ್ಯಾಟರಯನಪುರ ಬಳಿ ವಾಸವಾಗಿದ್ದರು. ಬಾಗೇಪಲ್ಲಿ ನಿವಾಸಿಯಾದ ಬಾಬಜಾನ್ 1 ವರ್ಷದ ಹಿಂದೆ ರೋಜಾಳನ್ನ ಪ್ರೀತಿಸಿ ಜಾತಿ ವಿರೋಧದ ಮಧ್ಯೆಯು ಮದುವೆಯಾಗಿದ್ದು, ಬಳಿಕ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ನಿನ್ನೆ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ರೋಜಾ ನೇಣಿಗೆ ಶರಣಾಗಿದ್ದಾಳೆ. ಇನ್ನು […]

ಸಿಎಂ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ: ಬಿ.ಎಸ್‌.ಯಡಿಯೂರಪ್ಪ

Wednesday, November 21st, 2018
b-s-yedyurappa

ಬೆಂಗಳೂರು: ರೈತ ವಿರೋಧಿ ನೀತಿ ಅನುಸರಿಸುತ್ತಿರುವ ನಿಮಗೆ ವಿಧಾನಸೌಧದಲ್ಲಿ ಅಧಿಕಾರ ನಡೆಸೋ ನೈತಿಕ ಹಕ್ಕಿಲ್ಲ. ಕೂಡಲೇ ರಾಜೀನಾಮೆ ಕೊಟ್ಟು ತೊಲಗಿ. ನೀವು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ರೈತ ಮಹಿಳೆ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಮತ್ತು ನೂರಾರು […]

ರಾಜ್ಯಪಾಲರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ: ಮೂವರ ಬಂಧನ

Wednesday, November 21st, 2018
vajubai-vala

ಬೆಂಗಳೂರು: ರಾಜ್ಯಪಾಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಿರುವ ಘಟನೆ ಕಬ್ಬನ್ ಪಾರ್ಕ್ನ ಗ್ರಂಥಾಲಯ ಬಳಿ ನಡೆದಿದೆ. ರಾಜ್ಯಪಾಲರ ಆಗಮನದ ವೇಳೆ ಕಬ್ಬನ್ ಪಾರ್ಕ್ನ ಗ್ರಂಥಾಲಯ ಬಳಿ ವಾಹನಗಳನ್ನು ಪೊಲೀಸರು ತಡೆದಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸ್ ಪೇದೆಗೆ ಇಂಡಿಕಾ ಕಾರು ಡಿಕ್ಕಿ ಹೊಡದಿದೆ. ಕಾರಿನಲ್ಲಿದ್ದ ಚಾಲಕ ಯಾವನೋ ಹೋಗುವಾಗ ಅವನಿಗೆ ದಾರಿ ಮಾಡಿಕೊಟ್ಟು ನಮ್ಮನ್ನು ಯಾಕ್ ನಿಲ್ಲಿಸ್ತಿಯಾ ಎಂದು ಅವಾಚ್ಯಾ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಪೇದೆ […]

ಅನಂತ್​ಕುಮಾರ್ ನಿವಾಸಕ್ಕೆ ವೇಣುಗೋಪಾಲ್‌ ಭೇಟಿ!

Saturday, November 17th, 2018
ananth-kumar

ಬೆಂಗಳೂರು: ಅನಾರೋಗ್ಯದಿಂದ ಮೊನ್ನೆ ನಿಧಾನರಾಗಿದ್ದ ದಿವಂಗತ ಅನಂತ್ಕುಮಾರ್ ರವರ ಬಸನವಗುಡಿಯಲ್ಲಿರುವ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿ ನೀಡಿದರು. ಈ ವೇಳೆ ತೇಜಸ್ವಿನಿ ಅನಂತಕುಮಾರ್ರವರಿಗೆ ಸಾಂತ್ವನ ಹೇಳಿದ ಅವರು, ಪಕ್ಷಾತೀತವಾಗಿ ಅಪಾರ ಸ್ನೇಹಿತರನ್ನು‌ ಅನಂತ್ ಕುಮಾರ್ ಪಡೆದಿದ್ದರು ಎಂದು ಅವರ ನಿಧನಕ್ಕೆ ವೇಣುಗೋಪಾಲ್ ಸಂತಾಪ ಸೂಚಿಸಿದರು. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಅಂತಿಮ ನಮನ ಸಲ್ಲಿಸಿದ್ದರು. ಆದರೆ, ವೇಣುಗೋಪಾಲ್ ರಾಜ್ಯದಲ್ಲಿ ಇಲ್ಲದ ಕಾರಣಕ್ಕಾಗಿ‌‌ ಇಂದು ಅನಂತ್ಕುಮಾರ್ ನಿವಾಸಕ್ಕೆ ಭೇಟಿ […]