Blog Archive

ಬಂಧಿಸಲು ಹೋದಾಗ ಹಲ್ಲೆಗೆ ಯತ್ನ: ಪೊಲೀಸರಿಂದ ಫೈರಿಂಗ್​..!

Wednesday, November 14th, 2018
arrested

ಬೆಂಗಳೂರು: ಕುಖ್ಯಾತ ಕಳ್ಳ ದಿನೇಶ್ ದೋರಾ ಎಂಬಾತನ ಮೇಲೆ ನಿನ್ನೆ ತಡರಾತ್ರಿ 12ರ ವೇಳೆಗೆ ಬಾಣಸವಾಡಿ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ದಿನೇಶ್ ದೋರಾ ಇಂದಿರಾನಗರ, ಡಿಜೆಹಳ್ಳಿ ,ಹೆಣ್ಣೂರು, ಜೆಸಿನಗರ, ಬಸವೇಶ್ವರ ನಗರ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ 12 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಈತ ಕೆ.ಜಿ. ಹಳ್ಳಿಯ ಹೆಚ್ಬಿಆರ್ ಲೇಔಟ್ನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಆರೋಪಿಯನ್ನ ಬಂಧಿಸಲು ಬಾಣಸವಾಡಿ ಪೊಲೀಸರು […]

ಜೈಲಿನ ಬಳಿಯೇ ಬೀಡುಬಿಟ್ಟ ರೆಡ್ಡಿ ಆಪ್ತ ಅಲಿಖಾನ್ ಅಂಡ್ ಟೀಂ!

Tuesday, November 13th, 2018
janardhan-reddy

ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ಈಗಾಗಲೇ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆದ್ರೆ ಜೈಲಿನ ಬಳಿಯೇ ರೆಡ್ಡಿ ಆಪ್ತ ಅಲಿಖಾನ್ ಅಂಡ್ ಟೀಂ ಬೀಡು ಬಿಟ್ಟಿದೆ. ನಂಬರ್ ಪ್ಲೇಟ್ ಇಲ್ಲದ ಬಿಳಿಯ ಬಣ್ಣದ ಇನೋವಾ ಕಾರಿನಲ್ಲಿ ಅಲಿಖಾನ್ ಅಂಡ್ ಟೀಂ ಬಂದಿದ್ದು, ಮಾಧ್ಯಮಗಳ ಕ್ಯಾಮರಾ ಕಂಡ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ರೆಡ್ಡಿ ಜೈಲಿಗೆ ಹೋದಾಗಲಿಂದಲೂ ಜೈಲ್ ಬಳಿಯೇ ಬೀಡು ಬಿಟ್ಟು ರೆಡ್ಡಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿರುವ ಹಿನ್ನೆಲೆ […]

ರಾಜ್ಯ ಲೋಕಸಭೆಯ ಚುನಾವಣೆಗೂ ನಾವು ಒಟ್ಟಾಗಿ ಸ್ಪರ್ಧಿಸಲಿದ್ದೇವೆ: ಹೆಚ್​.ಡಿ. ದೇವೇಗೌಡ

Tuesday, November 6th, 2018
devegouda

ಬೆಂಗಳೂರು: ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ಮಿನಿ ಸಮರದಲ್ಲಿ ಮೈತ್ರಿ ಸರ್ಕಾರ ಭರ್ಜರಿ ಗೆಲುವು ಸಾಧಿಸಿದ್ದು, ಈ ಕುರಿತಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಮೈತ್ರಿ ಸರ್ಕಾರದ ಗೆಲುವು ಇದಾಗಿದ್ದು, ಜನರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತ್ರ ಗೆದ್ದಿರುವ ಬಿಜೆಪಿ ಹೆಚ್ಚಿನ ಸಂತಸಪಡುವ ಅಗತ್ಯವಿಲ್ಲ ಎಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯಲಿದೆ ಎಂದಿರುವ ಹೆಚ್ಡಿಡಿ, ಈ ಕುರಿತಾಗಿ ಎರಡೂ ಪಕ್ಷದ ಮುಖಂಡರು ಒಟ್ಟು ಸೇರಿ ಚುನಾವಣಾ ರೂಪುರೇಷೆ ಸಿದ್ಧಪಡಿಸುವುದಾಗಿ ಹೇಳಿದ್ದಾರೆ.

ಇಂದಿನಿಂದ ರಾಜ್ಯಕ್ಕೆ ಹಿಂಗಾರು ಮಳೆ ಪ್ರವೇಶ

Friday, November 2nd, 2018
bengalore

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆಯಿಂದಲೂ ಕೂಲ್ ಕೂಲ್ ವಾತಾವರಣ ಇದೆ. ಇದೇನಪ್ಪ ಮಳೆ ಬರೋ ಹಾಗಿದೆಯಲ್ಲ ಅಂತೆಲ್ಲ ನೀವು ಅನ್ಕೊಂಡ್ರೆ ನಿಮ್ಮ ಊಹೆ ಸರಿ. ಹೌದು, ಇಂದಿನಿಂದ ಹಿಂಗಾರು ಮಳೆ ರಾಜ್ಯಕ್ಕೆ ಪ್ರವೇಶ ಆಗಲಿದೆ. ನಿನ್ನೆಯೇ ಕೇರಳ ಹಾಗೂ ತಮಿಳುನಾಡಿಗೆ ಮಳೆಯಾಗಿದ್ದು, ಇಂದು ರಾಜ್ಯಕ್ಕೆ ಪ್ರವೇಶ ಆಗಲಿದೆ. ದಕ್ಷಿಣ ಒಳನಾಡಿನ ಕೆಲವು ಭಾಗಗಳಾದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ […]

ಬೆಂಗಳೂರಲ್ಲಿ ಖ್ಯಾತ ಗಾಯಕಿ‌ಗೆ ಕ್ಯಾಬ್ ಚಾಲಕನಿಂದ ಕಿರುಕುಳ..!

Friday, November 2nd, 2018
harresment

ಬೆಂಗಳೂರು: ಖ್ಯಾತ ಗಾಯಕಿ‌ಗೆ ಕ್ಯಾಬ್ ಚಾಲಕನೋರ್ವ ಕಿರುಕುಳ ನೀಡಿರುವ ಘಟನೆ ನಗರದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಬಳಿ ನಡೆದಿದೆ. ವಸುಂಧರಾ ದಾಸ್ ಕಿರುಕುಳಕ್ಕೆ ಒಳಗಾಗಿರುವ ಗಾಯಕಿ. ನವೆಂಬರ್ 29ರ ಸಂಜೆ 4.30ರ ಸುಮಾರಿಗೆ ಮಲ್ಲೇಶ್ವರಂ ಬಳಿ ವಸುಂದರಾ ಇಟಿಯಸ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರ್ ನಂಬರ್ KA-05..AE-3933 ನ ಕ್ಯಾಬ್ ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್‌ನಿಂದ ಗಾಯಕಿಯನ್ನ ಹಿಂಬಾಲಿಸಿದ್ದ. ನಂತರ ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿ ಕಾರಿನಿಂದ ಇಳಿದು ವಸುಂಧರಾ ದಾಸ್ ಕಾರಿನ […]

ಅರ್ಜುನ್​ ಸರ್ಜಾ ವಿರುದ್ಧ ಎಫ್​ಐಆರ್ ದಾಖಲು..!

Saturday, October 27th, 2018
arjun-sarja

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯ ಪಿಎಸ್ಐ ರೇಣುಕಾ ನೇತೃತ್ವದ ತಂಡ ಮಹಜರ್ (ಸ್ಥಳ ಪರಿಶೀಲನೆ) ಮಾಡೋದಕ್ಕೆ ಶೃತಿ ಹರಿಹರನ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವ ಹೆಬ್ಬಾಳ, ದೇವನಹಳ್ಳಿ ಹಾಗೂ ಯುಬಿ ಸಿಟಿಯಲ್ಲಿ ‌ಮಹಜರ್ ಮಾಡಿದ್ದಾರೆ. ಇನ್ನು ಇಂದು ಮುಂಜಾನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ದೂರು ನೀಡಿದ್ದಾರೆ. ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 504, 506, 354 […]

ಕಾರ್ಪೊರೇಷನ್‍ ಬ್ಯಾಂಕ್‍ಗೆ ಪ್ರತಿಷ್ಠಿತ ಎಂಎಸ್ಎಂಇ ಬ್ಯಾಂಕ್ ಪ್ರಶಸ್ತಿ

Friday, October 26th, 2018
corporation-bank

ಬೆಂಗಳೂರು: ಅಸ್ಸೋಚಾಮ್ ಸಂಸ್ಥೆ ಸ್ಥಾಪಿಸಿದ ಅತ್ಯುತ್ತಮ ಎಂಎಸ್ಎಂಇ ಬ್ಯಾಂಕ್-2018 ಪ್ರಶಸ್ತಿಗೆ ಕಾರ್ಪೊರೇಷನ್ ಬ್ಯಾಂಕ್ ಭಾಜನವಾಗಿದೆ. ಬುಧವಾರ ಹೊಸದಿಲ್ಲಿಯಲ್ಲಿ ನಡೆದ 6ನೇ ಆವೃತ್ತಿಯ ಅಸೋಚಾಮ್ ಎಸ್ಎಂಇ ಎಕ್ಸಲನ್ಸ್ ಪ್ರಶಸ್ತಿ -2018 ಪ್ರಧಾನ ಸಮಾರಂಭದಲ್ಲಿ ಮೇಘಾಲಯದ ಮುಖ್ಯಮಂತ್ರಿ ಕಾನ್ರಾದ್ ಕೆ. ಸಂಗ್ಮಾ ಅವರು ಕಾರ್ಪೊರೇಷನ್ ಬ್ಯಾಂಕ್ನ ಡಿಜಿಎಂ ಶಿವಾನಂದ್ ಹೆಬ್ಬಾರ್ ಅವರಿಗೆ ಪ್ರಶಸ್ತಿ ನೀಡಿದರು. ಸಣ್ಣ ಹಾಗೂ ಮಧ್ಯಮ ಉದ್ಯಮ ಕ್ಷೇತ್ರದಲ್ಲಿ ಬ್ಯಾಂಕ್ ತೋರಿಸಿದ ಅತ್ಯುತ್ತಮ ಸಾಧನೆಗೆ ಪ್ರಶಸ್ತಿ ಸಂದಿದೆ. ದೇಶಾದ್ಯಂತ 177 ವಿಶಿಷ್ಟ ಎಂಎಸ್ಎಂಇ ಶಾಖೆಗಳನ್ನು ಬ್ಯಾಂಕ್ ಸ್ಥಾಪಿಸಿದೆ. […]

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಡಿಸಿಎಂ

Thursday, October 25th, 2018
parameshwar

ಬೆಂಗಳೂರು: ಎಲ್ಲದಕ್ಕೂ ನಿಮಗೆ ಕೋರ್ಟ್ ಹೇಳಬೇಕಾ? ಸರ್ಕಾರದ ಇರುವುದು ಯಾಕೆ, ನಾವೆಲ್ಲ ಇರುವುದು ಏಕೆ? ನಿಮಗೆ ಜವಾಬ್ದಾರಿ ಇಲ್ಲವೇ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ವಿಕಾಸಸೌಧದಲ್ಲಿ ಇಂದು ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ವೇಳೆ ಗರಂ ಆದ ಡಿಸಿಎಂ, ಕೆಲಸ ಮಾಡದೆ ಸುಮ್ಮನೆ ಕುಳಿತು ಸರ್ಕಾರದ ಮೇಲೆ ನ್ಯಾಯಾಲಯ ಚಾಟಿ ಬೀಸುವಂತೆ ಮಾಡುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಮಗೆ ಕರ್ತವ್ಯ ನಿರ್ವಹಣೆ ಮಾಡೋಕೆ […]

ಉದರ ಬೇನೆಯ ಕಾರಣದಿಂದಾಗಿ ಮುಖ್ಯಮಂತ್ರಿ ಅವರ ಇಂದಿನ ಎಲ್ಲಾ ಕಾರ್ಯಕ್ರಮ ರದ್ದು

Wednesday, October 24th, 2018
kumarswamy

ಬೆಂಗಳೂರು: ಉದರ ಬೇನೆಯ ಕಾರಣದಿಂದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವಿಧಾನಸೌಧದ ಬಾಕ್ವೆಟ್ ಹಾಲ್ನಲ್ಲಿ ಇಂದು ಬೆಳಗ್ಗೆ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರು ವಾಲ್ಮೀಕಿ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಪ್ರದಾನ ಮಾಡಬೇಕಾಗಿತ್ತು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಅದೇ ರೀತಿ ಇಂದು ಮಧ್ಯಾಹ್ನ ಇಂಧನ ಇಲಾಖೆ ಅಧಿಕಾರಿಗಳ ಜೊತೆ ಸಭೆ ಕೂಡ ರದ್ದುಪಡಿಸಲಾಗಿದೆ.

ಬೆಂಗಳೂರು ಸರಣಿ ಬಾಂಬ್​​ ಬ್ಲಾಸ್ಟ್​​ ಪ್ರಕರಣ: ಸಿಸಿಬಿ ಪೊಲೀಸರ ಮುಂದೆ ಕಣ್ಣೀರಿಟ್ಟ ಆರೋಪಿ

Wednesday, October 24th, 2018
bangalore

ಬೆಂಗಳೂರು: 2008 ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಸಲೀಂ ಸಿಸಿಬಿ ವಶದಲ್ಲಿದ್ದು, ಈಗ ಆತ ಮಾಡಬಾರದ ತಪ್ಪು‌ ಮಾಡಿಬಿಟ್ಟೆ. ಈಗ ನನ್ನನ್ನ ಯಾರು ರಕ್ಷಿಸ್ತಾರೆ ಅಂತಾ ಪೊಲೀಸರ ಎದುರು ಕಣ್ಣೀರಿಟ್ಟಿದ್ದಾನೆ ಎನ್ನಲಾಗಿದೆ. ಜುಲೈ 25, 2008 ರಲ್ಲಿ ನಗರದ ಮಡಿವಾಳ, ಆಡುಗೋಡಿ, ಕೋರಮಂಗಲ, ಮಲ್ಯ ಆಸ್ಪತ್ರೆ ಬಳಿ ಸೇರಿ ಒಂಭತ್ತು ಕಡೆ ಸೀರಿಯಲ್ ಬ್ಲಾಸ್ಟ್ ನಡೆದಿತ್ತು. ಈ ಬಾಂಬ್ ಬ್ಲಾಸ್ಟ್ನ ಪ್ರಮುಖ ರೂವಾರಿ ಕೇರಳ ಮೂಲದ ಉಗ್ರ ಸಲೀಂನನ್ನು ಸಿಸಿಬಿ ಪೊಲೀಸರು ಬಂಧಿಸಿ […]