Blog Archive

ಇನ್ಸ್​ಪೆಕ್ಟರ್​​ ವಿರುದ್ಧ ಹಣ ಪಡೆದು ಆರೋಪಿಗಳನ್ನು ಬಿಟ್ಟ ಆರೋಪ​​: ವಿಡಿಯೋ ಆಧರಿಸಿ ತನಿಖೆ

Tuesday, October 23rd, 2018
police

ಬೆಂಗಳೂರು: ಕಳ್ಳತನ ಮಾಡಿ ಜೈಲು ಸೇರಿದ್ದ ನಾಲ್ವರು ಆರೋಪಿಗಳ ಬಳಿಯೇ ಇನ್ಸ್ಪೆಕ್ಟರ್ ಹಣ ತೆಗೆದುಕೊಂಡು ಬಿಟ್ಟಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಕಾನೂನು ಕ್ರಮಗಳನ್ನು ಪಾಲಿಸಿಬೇಕಾದ ಖಾಕಿನೇ ಇಲ್ಲಿ ಕಳ್ಳರಿಗೆ ಸಾಥ್ ನೀಡಿದೆ ಎನ್ನುವ ಆರೋಪವಿದ್ದು, ಇನ್ಸ್ಪೆಕ್ಟರ್ ಪ್ರಶಾಂತ್ ಆರೋಪಿಗಳೊಂದಿಗೆ ಹಣದ ಡೀಲ್ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತಿಚೇಗೆ ಈ ನಾಲ್ವರು ತುಪ್ಪಾ ಮಾರಾಟ ಮಾಡೋ ನೆಪದಲ್ಲಿ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ […]

ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಆಗಿ ಅಣ್ಣಾಮಲೈ ಅಧಿಕಾರ ಸ್ವೀಕಾರ

Monday, October 22nd, 2018
annamalai

ಬೆಂಗಳೂರು: ದಕ್ಷಿಣ ವಿಭಾಗ ಡಿಸಿಪಿ ಆಗಿ ಅಣ್ಣಾಮಲೈ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಖಡಕ್ ಆಫೀಸರ್ ಅಂತಾನೇ ಫೇಮಸ್ ಆಗಿರುವ ಅಣ್ಣಾಮಲೈ ಅವರನ್ನು ರಾಜ್ಯ ಸರ್ಕಾರ ಸಿಟಿಗೆ ಚಾರ್ಜ್ ತೆಗೆದುಕೊಳ್ಳುವಂತೆ ಸೂಚಿಸಿದೆ. ಇನ್ನು ನಿರ್ಗಮಿತ ಡಿಸಿಪಿ ಡಾ. ಶರಣಪ್ಪ ಎಸ್.ಡಿ. ಅವರು ಅಣ್ಣಾಮಲೈ ಅವರನ್ನು ಸ್ವಾಗತಿಸಿದ್ದಾರೆ. ಇನ್ನು ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದ ದಿನವೇ ಎಲ್ಲಾ ಠಾಣೆಗಳಿಗೆ ತೆರಳಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ.

ಆಯುಧ ಪೂಜೆ ಮಾಡಿ ಸಂಕಷ್ಟಕ್ಕೆ ಸಿಲುಕಿದ ಮುತ್ತಪ್ಪ ರೈ: ಸಿಸಿಬಿಯಿಂದ ವಿಚಾರಣೆ

Saturday, October 20th, 2018
muttappa-rai

ಬೆಂಗಳೂರು: ಆಯುಧ ಪೂಜೆ ದಿನ ಕತ್ತಿ, ಡ್ರಾಗರ್ ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಮಾಜಿ ಡಾನ್ ಮುತ್ತಪ್ಪ ರೈ ಇಂದು ಸಿಸಿಬಿ ಕಚೇರಿಗೆ ಹಾಜರಾಗಿ ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ. ಆಯುಧ ಪೂಜೆ ವೇಳೆ ಇಟ್ಟಿದ್ದ ರಿವಾಲ್ವರ್, ಬಂದೂಕುಗಳಿಗೆ ಲೈಸನ್ಸ್ ತೋರಿಸಿ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸಿಸಿಬಿಯಿಂದ ರೈಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ತಲುಪಿದ 24 ತಾಸುಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ರೈ‌ಗೆ ಸಿಸಿಬಿ ಖಡಕ್ ಸೂಚನೆ ನೀಡಿದ್ದ ಹಿನ್ನೆಲೆ ಇಂದು ಮುತ್ತಪ್ಪ ರೈ ಎಸಿಪಿ ಮರಿಯಪ್ಪ […]

ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ನಟ ಶಿವರಾಜ್​ಕುಮಾರ್ ಆಸ್ಪತ್ರೆಯಿಂದ​ ಡಿಸ್ಚಾರ್ಜ್​

Wednesday, October 17th, 2018
shivanna

ಬೆಂಗಳೂರು: ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ನಟ ಶಿವರಾಜ್ಕುಮಾರ್ ಇಂದು ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಚಳಿ ಜ್ವರ ಕಾಣಿಸಿಕೊಂಡಿದ್ದರಿಂದ ಶಿವಣ್ಣ ಎರಡು ದಿನಗಳ ಹಿಂದೆ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮೊನ್ನೆ ಸಂಜೆಯೇ ಶಿವಣ್ಣ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ವೈದ್ಯರ ಸಲಹೆಯ ಮೇರೆಗೆ 2 ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇಂದು ಸಂಪೂರ್ಣ ಗುಣಮುಖರಾದ ಕಾರಣ ಶಿವರಾಜ್‌ಕುಮಾರ್ ಅವರನ್ನು ವೈದ್ಯರು ಡಿಸ್ಚಾರ್ಜ್‌ ಮಾಡಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. […]

ಆಯುರ್ವೇದಿಕ್​ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿವೋರ್ವಳ ಬರ್ಬರ ಹತ್ಯೆ

Wednesday, October 17th, 2018
mumbai

ಬೆಂಗಳೂರು: ಕರ್ನಾಟಕದಲ್ಲಿ ಆಯುರ್ವೇದಿಕ್ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿವೋರ್ವಳ ಬರ್ಬರ ಕೊಲೆಗೈದಿರುವ ಘಟನೆ ಮಹಾರಾಷ್ಟ್ರದ ಲಾತೂರ್ನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಲಾತೂರ್ನ ವಿಶಾಲ್ನಗರದ ನಿವಾಸದಲ್ಲಿ ಯಾರು ವಾಸವಿಲ್ಲದ ವೇಳೆ ಕೆಲ ದುಷ್ಕರ್ಮಿಗಳು ಮನೆಗೆ ನುಗ್ಗಿ ಆಕೆಯ ಹೊಟ್ಟೆ ಹಾಗೂ ಕತ್ತಿನ ಮೇಲೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೃತದೇಹವನ್ನ ಈಗಾಗಲೇ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 20 ವರ್ಷದ ವಿದ್ಯಾರ್ಥಿನಿ ಅಪೂರ್ವ […]

ಸುಮಾರು 3,500 ಹಾಸ್ಟೆಲ್​ಗಳ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಲಾಗುವುದು: ಪ್ರಿಯಾಂಕ್ ಖರ್ಗೆ

Wednesday, October 17th, 2018
priyanka-kharge

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ರಾಜ್ಯದಲ್ಲಿ ನಡೆಸುತ್ತಿರುವ ಸುಮಾರು 3,500 ಹಾಸ್ಟೆಲ್ಗಳ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ರಾಜ್ಯಾದ್ಯಂತ ನಡೆಸುತ್ತಿರುವ ವಸತಿ ಶಿಕ್ಷಣ ಶಾಲೆಗಳ ಪ್ರಿನ್ಸಿಪಾಲರುಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್ಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಾಸ್ಟೆಲ್ಗಳ ಸಮಗ್ರ ಸುಧಾರಣೆಗಾಗಿ ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ವರದಿ ನೀಡಿದ ನಂತರ ಹಾಸ್ಟೆಲ್ಗಳ ಕಾರ್ಯವೈಖರಿಯಲ್ಲಿ […]

ಪ್ರಶಂಸೆ ಜತೆಗೆ ಸನ್ಮಾನ … ಈ ಯುವಕನ ಕಾರ್ಯಕ್ಕೆ ಚೆನ್ನಣ್ಣವರ ಮೆಚ್ಚುಗೆ

Wednesday, October 17th, 2018
police

ಬೆಂಗಳೂರು: ಇತ್ತೀಚೆಗೆ ಬೆಳೆಬಾಳುವ ವಸ್ತುಗಳು ಸಿಕ್ಕಿದ್ರೆ ಸಾಕು ಅದನ್ನು ಯಾರಿಗು ತಿಳಿಸದೇ ತಮ್ಮ ಜೇಬಿಗೆ ಹಾಕೋರೆ ಹೆಚ್ಚು. ಆದ್ರೆ ಇಲ್ಲೋರ್ವ ಯುವಕ ತನ್ನ ಪ್ರಾಮಾಣಿಕತೆಯಿಂದ ಪೊಲೀಸರು ಹಾಗೂ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾನೆ. ಹೌದು.., ಚಂದ್ರಕುಮಾರ್ ಎಂಬಾತ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ತನಗೆ ಸಿಕ್ಕಿದ್ದ ಸುಮಾರು 60 ಸಾವಿರ ರೂ. ಬೆಲೆಬಾಳುವ ಐಫೋನ್ ಮೊಬೈಲನ್ನು ಉಪ್ಪಾರಪೇಟೆ ಠಾಣೆಗೆ ತಂದು ಕೊಟ್ಟಿದ್ದಾನೆ. ಇನ್ನು ಈತನ ಪ್ರಾಮಾಣಿಕತೆ, ದಕ್ಷತೆಗೆ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ ಚೆನ್ನಣ್ಣನವರ ಮೆಚ್ಚಿ ಗೌರವ […]

ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿ..!

Tuesday, October 9th, 2018
police

ಬೆಂಗಳೂರು: ರಾತ್ರಿ ವೇಳೆಯಲ್ಲಿ ಮನೆ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಗಳೂರಿನ ಹೆಚ್.ಎ.ಎಲ್ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಇರ್ಫಾನ್ ಪಾಶಾ(25) ಎಂದು ತಿಳಿದು ಬಂದಿದೆ. ಈತ 2015 ರಲ್ಲಿ ಮನೆ ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ‌ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಈತ ಪೊಲೀಸರ ಕೈಗೂ ಸಿಗದೆ ರಾತ್ರಿ ವೇಳೆಯಲ್ಲಿ ಮನೆಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಹೆಚ್ಎಎಲ್ ಪೊಲೀಸರು ಖಚಿತ ಮಾಹಿತಿ ಮೇರೆಗೆ […]

ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್​​ನಿಂದ ಮ್ಯಾರಥಾನ್​ ಸಭೆ

Tuesday, October 9th, 2018
congress

ಬೆಂಗಳೂರು: ರಾಜ್ಯದ ಐದು ಉಪ ಚುನಾವಣೆಗಳಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ಪಕ್ಷ ಇಂದು ಮ್ಯಾರಥಾನ್ ಸಭೆ ನಡೆಸಲಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಈ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಮೈತ್ರಿ, ಎಲ್ಲೆಲ್ಲಿ ಕೈ ಅಭ್ಯರ್ಥಿಗಳನ್ನು […]

ಸಚಿವ ಡಿ.ಕೆ.ಶಿವಕುಮಾರ್​ ವಿರುದ್ಧ ಮತ್ತೊಂದು ಎಫ್​ಐಆರ್​​!

Monday, October 8th, 2018
d-k-shivkumar

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಅಧಿಕಾರಿ ನೀಡಿದ ದೂರಿನನ್ವಯ ಸಚಿವರ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅನಧಿಕೃತ ಜಾಹೀರಾತು ಫಲಕ ಅಳವಡಿಸಿದಕ್ಕಾಗಿ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್ ರಾಜ್ಯ ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಅನಧಿಕೃತ ಜಾಹೀರಾತು ಫಲಕ ಪ್ರದರ್ಶಿಸಿದಕ್ಕೆ ಡಿಕೆಶಿ ವಿರುದ್ಧ ಬಿಬಿಎಂಪಿ ಅಧಿಕಾರಿ ದೂರು ನೀಡಿದ್ದಾರೆ. ಅನಧಿಕೃತ ಜಾಹೀರಾತು ಫಲಕಗಳನ್ನು ನಿಷೇಧಿಸಿದ್ದ ಹೈಕೋರ್ಟ್, ಬಳಿಕ ನ್ಯಾಯಾಲಯದ ಸೂಚನೆಯಂತೆ ನಗರದಾದ್ಯಂತ […]