Blog Archive

ಡ್ರಿಪ್ಸ್​ ಹಾಕಿಕೊಂಡೇ ಸಿಎಂ ಜೊತೆಗೆ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್​

Thursday, September 20th, 2018
d-k-shivkumar

ಬೆಂಗಳೂರು: ಅನಾರೋಗ್ಯದಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಆಸ್ಪತ್ರೆಗೆ ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಶಿವಕುಮಾರ್ ಅವರ ಆರೋಗ್ಯವನ್ನು ವಿಚಾರಿಸಿದ ಸಿಎಂ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಶಿವಕುಮಾರ್ ಡ್ರಿಪ್ಸ್ ಹಾಕಿಕೊಂಡೆ ಸಿಎಂ ಜೊತೆ ಮಾತನಾಡಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಮೈತ್ರಿ ಸರ್ಕಾರ ಪತನವಾಗುತ್ತಿತ್ತು. ಈಗಲೂ ಸರ್ಕಾರವನ್ನು ಬೀಳಿಸಲು ಬಿಜೆಪಿ […]

ಹುಡುಗಿಯರಿಗೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಆರೋಪಿ ಬಂಧನ!

Thursday, September 20th, 2018
arrested

ಬೆಂಗಳೂರು: ಒಂಟಿಯಾಗಿ ತೆರಳುವ ಹುಡುಗಿಯರನ್ನು ಟಾರ್ಗೆಟ್ ಮಾಡಿ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಕಳ್ಳನನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಸರ್ಕಲ್ ನಿವಾಸಿ ದಿನೇಶ್ ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿರುವ ಉತ್ತರ ಭಾರತ ಮೂಲದ ಯುವತಿಯರಿಗೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ. ಇದನ್ನು ಸಾರ್ವಜನಿಕರು ನೋಡಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಕೆಂಗೇರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಭ್ರಷ್ಟಾಚಾರ ಹಗರಣಗಳನ್ನು ಮಾಡುವುದರಲ್ಲಿ ನೀವು ಯಾರಿಗೆ ಕಡಿಮೆ ಇದ್ದೀರಿ: ಸಿಎಂ‌ಗೆ ಬಿಎಸ್​ವೈ ಪ್ರಶ್ನೆ

Tuesday, September 18th, 2018
yedyurappa

ಬೆಂಗಳೂರು: ಇಸ್ಪೀಟು ಆಡೋರು, ಜೂಜುಕೋರರು ಅಂತಾ ಆರೋಪ ಮಾಡಿರುವ ನೀವು ಯಾರಿಗೆ ಕಮ್ಮಿ ಇದ್ದೀರಾ‌ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಹೇಗೋ ಮುಖ್ಯಮಂತ್ರಿ ಆಗಿದ್ದೇನೆ ಎಂದು ದರ್ಪದಿಂದ ನಡದುಕೊಳ್ಳುತ್ತೀರಿ. ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದೀರಿ. ಭ್ರಷ್ಟಾಚಾರ ಹಗರಣಗಳನ್ನು ಮಾಡುವುದರಲ್ಲಿ ನೀವು ಯಾರಿಗೆ ಕಡಿಮೆ ಇದ್ದೀರಿ ಎಂದು ಬಿಎಸ್ವೈ ಪ್ರಶ್ನಿಸಿದ್ದಾರೆ. ರೇವಣ್ಣ ವಿರುದ್ದ ಭೂ ಕಬಳಿಕೆ ಆರೋಪ ಮಾಡಿರುವುದು […]

ಕೊನೆಗೂ ಮಾತನಾಡಿದರು ರಶ್ಮಿಕಾ ಮಂದಣ್ಣ, ‘ಬ್ರೇಕಪ್’ ವಿಚಾರದ ಬಗ್ಗೆ ಹೇಳಿದ್ದೇನು?

Tuesday, September 18th, 2018
rashmika

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ನಟಿ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದು, ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಿನ್ನೆ ಸಂಜೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ರಶ್ಮಿಕಾ, ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಯಾವುದೇ ಕಥೆಗೂ, ವಿವಾದಕ್ಕೂ ಎರಡು ಆಯಾಮಗಳಿರುತ್ತವೆ. ಇದು ತಿಳಿಯದೇ ಯಾರೂ ಮಾತನಾಡಬಾರದು. ನಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರಲು ಬಿಡಿ ಎಂದು ಮನವಿ […]

ಗೌರಿ ಹತ್ಯೆ ಪ್ರಕರಣ: ಮಾಜಿ ಕಾರ್ಪೋರೇಟರ್​ ಎಸ್ಐಟಿ ವಶಕ್ಕೆ

Monday, September 17th, 2018
gouri-lankesh

ಬೆಂಗಳೂರು: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೋರೇಟರ್ ಒಬ್ಬನನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಮಹಾರಾಷ್ಟ್ರದ ಮಾಜಿ ಕಾರ್ಪೋರೇಟರ್ ಶ್ರೀಕಾಂತ್ ಪನ್ಗಾರ್ಕರ್ ಎಂಬಾತನನ್ನು ಗೌರಿ ಹತ್ಯೆಗೆ ಸಹಾಯ ಮಾಡಿದ್ದ ಶಂಕೆ ಮೇರೆಗೆ ಎಸ್ಐಟಿ ವಶಕ್ಕೆ ಪಡೆದಿದೆ. ಈತ ಈ ಹಿಂದೆ ಮಹಾರಾಷ್ಟ್ರದಲ್ಲಿ ಕಾರ್ಪೋರೇಟರ್ ಆಗಿದ್ದ. ದಾಬೋಲ್ಕರ್ ಹತ್ಯೆಯ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದ ಮೇರೆಗೆ ಪೊಲೀಸರು ಶ್ರೀಕಾಂತ್ನನ್ನು ಬಂಧನಕ್ಕೊಳಪಡಿಸಿದ್ದರು. ಈತ ವಿಚಾರವಾದಿಗಳು, ಚಿಂತಕರ ಹತ್ಯೆಗೆ ಹಣಕಾಸು ಸಹಾಯ ಮಾಡಿದ್ದ ಅನ್ನೋದು ಎಟಿಎಸ್ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದೀಗ […]

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸಾಧನೆ, ಕೃತಿ ಮತ್ತು ಕೊಡುಗೆಗಳು.

Saturday, September 15th, 2018
sir-m-vishveshwaraia

ಬೆಂಗಳೂರು:ಆಧುನಿಕ ಭಾರತ ನಿರ್ಮಾತೃಗಳಲ್ಲಿ ಅಗ್ರಗಣ್ಯ ಮಹಾನುಭಾವರಲ್ಲಿ ನಿಲ್ಲುವ ಕರ್ನಾಟಕದ ಪುತ್ರ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ದೇಶದ ನೀರಾವರಿ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರು.ಅದುಅಲ್ಲದೇ ದಖನ್ ಪ್ರಸ್ಥಭೂಮಿಯಲ್ಲಿ ನೀರಾವರಿ ಕ್ರಾಂತಿಗೆ ಕಾರಣೀಕರ್ತರಾಗಿ ಅಣೆಕಟ್ಟು ನಿರ್ಮಾಣದ ವಿನ್ಯಾಸದ ಆವಿಷ್ಕಾರ ಮಾಡಿದ ದೇಶಕಂಡ ಅಪರೂಪದ ಎಂಜಿನಿಯರ್. ಇಂತಹ ಅಪ್ರತಿಮ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಇಂದು 158ನೇ ಜನ್ಮ ದಿನ, ಭಾರತ ಮಾತ್ರವಲ್ಲದೆ ವಿಶ್ವದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಜೀವನವೇ ಒಂದು ಸ್ಫೂರ್ತಿದಾಯಕ. ಸೆಪ್ಟೆಂಬರ್ 15, 1861ರಂದು ಜನಿಸಿದ […]

ಬೆಂಗಳೂರು ಮತ್ತು ಮೈಸೂರು ಸಂಚಾರ ನಿರ್ವಹಣೆಗೆ ಹೊಸ ಯೋಜನೆ: ಜಪಾನ್ ತಂತ್ರಜ್ಞಾನ

Saturday, September 15th, 2018
bangalore

ಬೆಂಗಳೂರು:ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಡೆಗಟ್ಟಲು ಹೊಸ ಯೋಜನೆಯನ್ನು ಕೈಗೊಳಲ್ಗಿದೆ. ರಾಜ್ಯ ಸರ್ಕಾರದ ನಗರ ರಸ್ತೆ ಸಾರಿಗೆ ನಿರ್ದೇಶನಾಲಯ ಮತ್ತು ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ ಜಂಟಿಯಾಗಿ ಬೆಂಗಳೂರು ಮತ್ತು ಮೈಸೂರು ಸಂಚಾರ ನಿರ್ವಹಣೆಗೆ ಹೊಸ ಯೋಜನೆ ರೂಪಿಸಲಾಗಿದೆ. ಒಪ್ಪಂದದ ಪ್ರಕಾರ 2019ರ ಫೆಬ್ರವರಿಯಿಂದ ತಂತ್ರಜ್ಞಾನ ಅಳವಡಿಕೆ ಆರಂಭವಾಗಿ 2020ರ ಅಕ್ಟೋಬರ್ ವೇಳೆಗೆ ಬಳಕೆಗೆ ಸಾಧ್ಯವಾಗುತ್ತದೆ. ಹಾಗೆಯೇ ತಂತ್ರಜ್ಞಾನ ಅಳವಡಿಕೆಯ ನಂತರದ ಒಂದು ವರ್ಷಕಾಲ ಸ್ಥಳೀಯ ಸಿಬ್ಬಂದಿಗೆ ಬಗ್ಗೆ ತಿಳಿವಳಿಕೆ ಮತ್ತು ತರಬೇತಿ ನೀಡುವುದಕ್ಕೂ ಜಪಾನ್ ತಜ್ಞರು […]

ಸಹಕಾರಿ ಬ್ಯಾಂಕ್‌ನ ರೈತರ ಸಾಲಮನ್ನಾ:ಎರಡನೇ ಕಂತು ಬಿಡುಗಡೆ

Saturday, September 15th, 2018
bank

ಬೆಂಗಳೂರು:ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಕೃಷಿ ಸಾಲವನ್ನು ಮನ್ನಾ ಮಾಡಲು ಎರಡನೇ ಕಂತಾಗಿ 1495.65 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಸಹಕಾರಿ ಬ್ಯಾಂಕಿನಲ್ಲಿನ ಸಾಲದ 50,000 ಸಾವಿರ ಹಣವನ್ನು ಮನ್ನಾ ಮಾಡಲಾಗುತ್ತಿದೆ. ಹೀಗಾಗಿ ಅದರ ಮೊದಲ ಕಂತಿನಲ್ಲಿ 1000 ಕೋಟಿ ಬಿಡುಗಡೆ ಮಾಡಲಾಗಿತ್ತು.ಈಗ ಎರಡನೇ ಕಂತಾಗಿ 1495.65 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು ದಿನಾಂಕ 20/ 06/2017ರ ಒಳಗೆ ಪಡೆದಿರುವ 50,000 ಅಲ್ಪಾವಧಿ ಬೆಳೆಸಾಲ ಮನ್ನಾ ಮಾಡಲಾಗುತ್ತಿದೆ.ಒಟ್ಟು ಸಹಕಾರಿ ಬ್ಯಾಂಕಿನಲ್ಲಿನ 4000 […]

ಪರಿಸರಮಾಲಿನ್ಯ ಆಗದಂತೆ ಗಣೇಶ ಮೂರ್ತಿ ವಿಸರ್ಜನೆ

Saturday, September 15th, 2018
Ganesha-Idol

ಬೆಂಗಳೂರು: ಪರಿಸರಮಾಲಿನ್ಯ ಆಗದಂತೆ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರೀಸ್ ) ಹಾಗೂ ಬಣ್ಣದ ಗಣೇಶ ಮೂರ್ತಿಯನ್ನು ಬಳಸದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಜನಜಾಗೃತಿ ಕಾರ್ಯಕ್ರಮದ ಪರಿಣಾಮವಾಗಿ ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿಯ ಬಳಕೆ ಪ್ರಮಾಣದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪಿಒಪಿ ಗಣೇಶ ವಿಸರ್ಜನೆಯಾಗಿದೆ. ಇದರ ಅಂಕಿ ಅಂಶವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆಗೊಳಿಸಿದೆ. ಪ್ರಾದೇಶಿಕ ಕಚೇರಿಗಳಲ್ಲಿ ಒಟ್ಟು 7169 ಗಣೇಶ ಮೂರ್ತಿಗಳು ವಿಸರ್ಜನೆಯಾಗಿದೆ. ಇವುಗಳಲ್ಲಿ 80 […]

ಸರ್ಕಾರ ಬೀಳಿಸುವ ಕಿಂಗ್​ಪಿನ್​ ಯಾರೆಂಬುದು ನನಗೆ ಗೊತ್ತು: ಸಿಎಂ ಕೊಟ್ರು ಶಾಕ್​​!

Friday, September 14th, 2018
ಸರ್ಕಾರ ಬೀಳಿಸುವ ಕಿಂಗ್​ಪಿನ್​ ಯಾರೆಂಬುದು ನನಗೆ ಗೊತ್ತು: ಸಿಎಂ ಕೊಟ್ರು ಶಾಕ್​​!

ಬೆಂಗಳೂರು: ಬಿಜೆಪಿಯವರು ಸರ್ಕಾರ ಬೀಳಿಸುವ ಕೆಲಸ ಮಾಡುತ್ತಿದ್ದು, ಹಣದ ಆಮಿಷ ಮಾಡುತ್ತಿರುವುದು ಗೊತ್ತಿದೆ. ಹಣ ಎಲ್ಲಿ ಸಂಗ್ರಹ ಆಗುತ್ತಿದೆ. ಇದರ ಕಿಂಗ್ ಪಿನ್ ಯಾರು ಎಲ್ಲವೂ ಗೊತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಕಡತಕ್ಕೆ ಬೆಂಕಿ ಇಟ್ಟವರೂ ಈಗ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲವೂ ಗೊತ್ತು, ನಾನೇನು ಸುಮ್ಮನೆ ಕುಳಿತಿಲ್ಲ ಎಂದು ಹೇಳಿದರು. ಹಣ ಹಂಚಿಕೆ ಕುರಿತು ಕಾನೂನು ಕ್ರಮ […]