ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ರೈತರಿಗೆ ಕಡ್ಡಾಯಗೊಳಿಸಬಾರದು

Wednesday, July 27th, 2016
Rajendra-kumar

ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ರೈತರಿಗೆ ಕಡ್ಡಾಯಗೊಳಿಸಬಾರದು ಎಂದು ಸರಕಾರವನ್ನು ಆಗ್ರಹಿಸಿ ದ.ಕ. ಜಿಲ್ಲಾ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಿಶೇಷ ಸಭೆ ನಿರ್ಣಯ ಕೈಗೊಂಡಿದೆ. ಸಹಕಾರ ಸಂಘಗಳ ಪಡಿತರ ವಿತರಣಾ ಕೇಂದ್ರಗಳಿಂದ ಸಂಘಗಳಿಗೆ ಆಗುತ್ತಿರುವ ನಷ್ಟ, ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ, ಅನುಷ್ಠಾನ ಹಾಗೂ ಗ್ರಾಮೀಣ ಮತ್ತು ನಗರ ಯಶಸ್ವಿನೀ ವಿಮಾ ಯೋಜನೆ ಕುರಿತು ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಆಶ್ರಯದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| […]

ಕಾನತ್ತೂರು ಅರಣ್ಯದಲ್ಲಿ ಮಾವೋವಾದಿ ವದಂತಿ

Wednesday, February 3rd, 2016
Kerla Naxalas

ಮುಳ್ಳೇರಿಯಾ: ಕಾರಡ್ಕ ಅರಣ್ಯ ವಲಯಕ್ಕೆ ಒಳಪಟ್ಟ ಕಾನತ್ತೂರು ಅರಣ್ಯದಲ್ಲಿ ಮಾವೋವಾದಿಗಳಿರುವ ಬಗ್ಗೆ ದಟ್ಟ ವದಂತಿಗಳು ಹಬ್ಬಿದ್ದು, ಆದರೆ ಪೋಲೀಸ್ ಇಲಾಖೆ ಖಚಿತಪಡಿಸಿಲ್ಲ. ಇತ್ತೀಚೆಗೆ ಕಾನತ್ತೂರಿನ ಅರಣ್ಯದಂಚಿನ ಮನೆಗೆ ತಲಪಿದ್ದ ಮಹಿಳೆಯೋರ್ವೆ ಕೇರಳ,ಕರ್ನಾಟಕ ಸಹಿತ ವಿವಿಧೆಡೆಗಳಲ್ಲಿ ಮಾವೋವಾದಿ ನಿಗ್ರಹ ಪಡೆಗೆ ಬೇಕಾಗಿದ್ದ ಮುಂಚೂಣಿಯ ನಾಯಕಿ ಇರಬಹುದೆಂದು ಸಂಶಯಿಸಲಾಗಿದೆ.ಮುಳ್ಳೇರಿಯಾ ಸಮೀಪದ ಕೊಟ್ಟಂಗುಳಿ ಅರಣ್ಯದೊಳಗೆ ಇತ್ತೀಚೆಗೆ ಸೌದೆಗೆ ತೆರಳಿದ್ದ ಕೆಲವು ಮಹಿಳೆಯರು ಕಾಡೊಳಗೆ ಅಪರಿಚಿತರನ್ನು ಕಂಡಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಾವೋವಾದಿಗಳು ಇರಬಹುದೆಂದು ಸಂಶಯಿಸಲಾಗಿದ್ದರೂ ಪೋಲೀಸ್ ಇಲಾಖೆ ಇನ್ನೂ ದೃಢಪಡಿಸಿಲ್ಲ.ಕಾನತ್ತೂರು,ಕೊಟ್ಟಂಗುಳಿ,ಅಡೂರು,ಪಾಂಡಿ ಮೂಲಕ […]