ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣ – ಎರಡು ಮೃತ ದೇಹ ಪತ್ತೆ

Tuesday, July 12th, 2022
Dhanush-Danush

ಪುತ್ತೂರು : ಕಾಣಿಯೂರು ಸಮೀಪದ ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಇಬ್ಬರ ಮೃತ ದೇಹ ಮಂಗಳವಾರ ಮುಂಜಾನೆ ಪತ್ತೆಯಾಗಿದೆ. ಮೃತದೇಹವನ್ನು ಇನ್ನೂ ಗುರುತಿಸಲಾಗಿಲ್ಲ. ಜೂನ್ 9ರಂದು ತಡರಾತ್ರಿ ಬಂಟ್ವಾಳ ತಾಲೂಕಿನ ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್‌ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್‌ (21) ಕಾರಿನಲ್ಲಿದ್ದರು ಎನ್ನಲಾಗಿದ್ದು, ಅವರು ನಾಪತ್ತೆಯಾಗಿದ್ದರು. ಓರ್ವನ ಮೃತ ದೇಹವು ಹೊಳೆಯ […]