ಕೇರಳ ಪೊಲೀಸರನ್ನು ಮಂಗಳೂರು ಬಂದರಿನಲ್ಲಿ ಇಳಿಸಿದ ಕರ್ನಾಟಕ ಮೀನುಗಾರರ ಬೋಟ್

Tuesday, December 22nd, 2020
Karnataka Boat

ಕಾಸರಗೋಡು :  ಕರ್ನಾಟಕ ನೋಂದಣಿಯ ಬೋಟ್ ಕೇರಳ ಸರಹದ್ದಿನ ಮಂಜೇಶ್ವರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಕ್ಕೆ ಕೇರಳ ಪೊಲೀಸರು ಬೋಟನ್ನು ವಶಪಡಿಸಿದ್ದರು ಆದರೆ  ಮೀನುಗಾರರ ತಂಡ ಇಬ್ಬರು ಕೇರಳ ಪೊಲೀಸರನ್ನು ಮಂಗಳೂರು ಬಂದರಿನಲ್ಲಿ ಇಳಿಸಿದ ಘಟನೆ ಸೋಮವಾರ ನಡೆದಿದೆ. ಕರಾವಳಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ನೇತೃತ್ವದ ತಂಡವು ಸೋಮವಾರ ಕುಂಬಳೆ ಶಿರಿಯದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಣಿಯ ಬೋಟ್ ಕಂಡುಬಂದಿದೆ. ಈ ವೇಳೆ ಅದರ ದಾಖಲೆ ಗಳನ್ನು ಪರಿಶೀಲಿಸಿದಾಗ ಕೆಲ ಸಂಶಯ ಉಂಟಾದ […]

ನಾಲ್ಕನೇ ದಿನವೂ ಪತ್ತೆಯಾಗದ ಓರ್ವ ಮೀನುಗಾರನ ಮೃತದೇಹ

Friday, December 4th, 2020
Boat Tragedy

ಮಂಗಳೂರು: ಪರ್ಸಿನ್ ಬೋಟ್ ದುರಂತದಲ್ಲಿ ಸಾವಿಗೀಡಾದ ಆರು ಜನರ ಪೈಕಿ ಇನ್ನೋರ್ವನ  ಓರ್ವನ ಮೃತದೇಹ ಪತ್ತೆಗೆ ನಾಲ್ಕನೇ ದಿನ ಕೂಡಾ ಹುಡುಕಾಟ ಮುಂದುವರೆದಿದೆ. ಶ್ರೀರಕ್ಷಾ ಎಂಬ ಬೋಟ್ ಮೀನುಗಳನ್ನು ತುಂಬಿಸಿಕೊಂಡು ವಾಪಸ್ ಬರುವ ವೇಳೆ ಇತ್ತೀಚೆಗೆ ಅಳಿವೆ ಬಾಗಿಲಿನಲ್ಲಿ ದುರಂತಕ್ಕೀಡಾಗಿತ್ತು. ಪರಿಣಾಮ, ಆರು ಮಂದಿ ಮೀನುಗಾರರು ಮೃತಪಟ್ಟಿದ್ದರು. ಈ ಪೈಕಿ ಐವರ ಮೃತದೇಹ ಪತ್ತೆಯಾಗಿತ್ತು. ಅನ್ಸಾರ್ ಮೃತದೇಹ ಸಿಕ್ಕಿತಾದರೂ ಸಮುದ್ರದಾಳದಿಂದ ಮೇಲಕ್ಕೆ ತರುವಾಗ ಮುಳುಗು ತಜ್ಞರ ಕೈಜಾರಿ ಮತ್ತೆ ಸಮುದ್ರದಾಳ ಸೇರಿತ್ತು. ಇದಾಗಿ ಎರಡು ದಿನವಾದರೂ ಮೃತದೇಹ ಸಿಕ್ಕಿರಲಿಲ್ಲ. […]

ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇಬ್ಬರ ಮೃತದೇಹ ಪತ್ತೆ, ಇಬ್ಬರಿಗಾಗಿ ಶೋಧ

Wednesday, December 2nd, 2020
Chintan Hasainar

ಮಂಗಳೂರು:  ಸೋಮವಾರ ರಾತ್ರಿ ನಡೆದ ಬೋಟ್ ಮುಳುಗಡೆ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಬುಧವಾರ ಇಬ್ಬರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ನಾಲ್ಕು ಜನರ ಮೃತದೇಹ ಪತ್ತೆಯಾದಂತಾಗಿದೆ. ಬೊಕ್ಕಪಟ್ಣ ನಿವಾಸಿ ಚಿಂತನ್ (21) ಮತ್ತು ಕಸ್ಬಾ ಬೆಂಗ್ರೆ ನಿವಾಸಿ ಹಸೈನಾರ್ (25) ಅವರ ಮೃತದೇಹ ಇಂದು ಪತ್ತೆಯಾಗಿದೆ. ಬೊಕ್ಕಪಟ್ಣ ಬೆಂಗ್ರೆಯ ಪಾಂಡುರಂಗ ಸುವರ್ಣ (58) ಮತ್ತು ಪ್ರೀತಂ (25) ಅವರ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಶ್ರೀ ರಕ್ಷಾ ಬೋಟ್ ಮುಳುಗಡೆ ದುರಂತದಲ್ಲಿ ಆರು ಮಂದಿ ನಾಪತ್ತೆಯಾಗಿದ್ದರು. ಕಸ್ಬಾ ಬೆಂಗ್ರೆಯ ಅನ್ಸಾರ್ […]

ಜ. 6ರಂದು ಪ್ರತಿಭಟನೆ-ಮೀನು ಮಾರಾಟ ಬಂದ್

Saturday, January 5th, 2019
Boat

ಮಲ್ಪೆ:  ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಜ. 6ರಂದು ಆಯೋಜಿಸಿರುವ ಬೃಹತ್‌ ಪ್ರತಿಭಟನ ಜಾಥಾ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಮನವಿ ಮಾಡಿದ್ದಾರೆ. ಮೀನುಗಾರಿಕೆಯ ಇತಿಹಾಸದಲ್ಲೇ ಕಂಡು ಕೇಳರಿಯದ ಈ ಪ್ರಕರಣದಿಂದ ಮೀನುಗಾರರು ಮಾನಸಿಕವಾಗಿ ಕುಗ್ಗಿದ್ದು ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸದೇ ಮೀನುಗಾರರನ್ನು ನಿರ್ಲಕ್ಷಿಸಿರುವುದು ದುರದೃಷ್ಟಕರ. ಈ ಘಟನೆ ಮೀನುಗಾರರ ನೈತಿಕ ಸ್ಥೈರ್ಯವನ್ನೇ ಅಡಗಿಸಿದೆ. […]