ಮಂಗಳೂರು ಭಾರತ್ ಮಾಲ್‌ನ ಪಬ್ಬಾಸ್ ನಲ್ಲಿ ಐಸ್‌ಕ್ರೀಂ ಥಾಲಿ

Wednesday, October 27th, 2021
IThali

ಮಂಗಳೂರು :  ಈಗ ಭಾರತ್ ಮಾಲ್ ನಲ್ಲಿ ಐಸ್ ಕ್ರೀಮ್ ಥಾಲಿಯದ್ದೇ ಸುದ್ದಿ, ಮಂಗಳೂರಿನ ಐಡಿಯಲ್ ಐಸ್‌ಕ್ರೀಂ ಮಾಲೀಕತ್ವದ ಪಬ್ಬಾಸ್(Pabbas) ಐಡಿಯಲ್ ಕೆಫೆಯಲ್ಲಿ ‘ಐಸ್‌ಕ್ರೀಂ ಥಾಲಿ’ಯನ್ನು ಸವಿಯಲು ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ . ಒಂದೇ ಥಾಲಿಯಲ್ಲಿ ಹಲವು ಬಗೆ ಐಸ್‌ಕ್ರೀಂ(Ice cream)  ಐಸ್ ಕ್ರೀಮ್ ಪ್ರಿಯರಿಗೆ ಖುಷಿ ಕೊಟ್ಟಿದೆ. ಸೌತ್, ನಾರ್ಥ್ ಇಂಡಿಯನ್ ಥಾಲಿ ಮಾದರಿಯಲ್ಲಿ ಇಲ್ಲಿ ಕೂಡ ಐಸ್‌ಕ್ರೀಂ ಥಾಲಿ ರೂಪದಲ್ಲಿ ಗ್ರಾಾಹಕರಿಗೆ ಸಿಗುತ್ತದೆ. ಊಟದ ಮಾದರಿಯಲ್ಲೇ ಐಸ್‌ಕ್ರೀಂ ಥಾಲಿಯ ಮೆನು ಸಿದ್ಧಪಡಿಸಲಾಗಿದೆ. ಹಾಗಾಗಿ ಇದು ಐಸ್‌ಕ್ರೀಂ ಪಾರ್ಲರ್‌ಗೆ ಆಗಮಿಸುವ […]

ಮಂಗಳೂರಿನಲ್ಲಿ ಕಾಲಾ ಚಿತ್ರಕ್ಕಿಲ್ಲ ಅಡ್ಡಿ ಆತಂಕ

Thursday, June 7th, 2018
kaala-release

ಮಂಗಳೂರು: ಸೂಪರ್‌‌ ಸ್ಟಾರ್‌ ರಜನಿಕಾಂತ್ ಅಭಿನಯದ ಕಾಲ‌ಚಿತ್ರಕ್ಕೆ ರಾಜ್ಯದ ವಿವಿಧೆಡೆ ವಿರೋಧ ವ್ಯಕ್ತವಾದರೂ ಮಂಗಳೂರಿನಲ್ಲಿ‌ ಈ ಚಿತ್ರಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲದೆ ಬಿಡುಗಡೆಯಾಗುತ್ತಿದೆ. ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನೆಮಾ ಮತ್ತು ಫೋರಂ ಮಾಲ್‌ನ ಪಿ ವಿ ಆರ್ ಸಿನಿಮಾದಲ್ಲಿ ಕಾಲ ಚಿತ್ರ ಇಂದು ಪ್ರದರ್ಶನಗೊಳ್ಳಲಿದೆ. ಚಿತ್ರಕ್ಕೆ‌ ಯಾವುದೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಾಲ್ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.