Blog Archive

ಶ್ರೀಲಂಕಾದಲ್ಲಿರುವ ಹಿಂದೂಗಳ ರಕ್ಷಣೆಗೆ ಮುಂದಾದ ಭಾರತ ಹಿಂದೂ ಸಂಘಟನೆಗಳು

Thursday, June 15th, 2017
sachidanandan

ಗೋವಾ : “ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಯುದ್ಧದಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಶೇ. 30 ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.15 ಕ್ಕೆ ಅಂದರೆ ಕೇವಲ 20 ಲಕ್ಷಕ್ಕೆ ಬಂದಿದೆ. ಮತಾಂತರವಾಗಲು ಹಿಂದೂಗಳ ಮೇಲೆ ಸತತವಾಗಿ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳಿಗೆ ನ್ಯಾಯ ನೀಡಲು ಭಾರತದಲ್ಲಿರುವ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮುಂದಾಳತ್ವ ವಹಿಸುವುದು ಅವಶ್ಯವಾಗಿದೆ”, ಎಂದು ಭಾವನಾತ್ಮಕ ಕರೆಯನ್ನು ಶ್ರೀಲಂಕಾದ 76 ವರ್ಷದ ಮರವನಪುಲಾವೂ ಸಚ್ಚಿದಾನಂದನ್ […]

12 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ವಿಯೆಟ್ನಾಂ ಸಹಿ

Saturday, September 3rd, 2016
India,-Vietnam-

ವಿಯೆಟ್ನಾಂ: ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ಹಾಗೂ ಆರೋಗ್ಯ ಸೇರಿದಂತೆ 12 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ವಿಯೆಟ್ನಾಂ ಶನಿವಾರ ಸಹಿ ಹಾಕಿವೆ. ಸೆಪ್ಟೆಂಬರ್ 4ರಂದು ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಯಾಣ ಬೆಳಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಏತನ್ಮಧ್ಯೆ 2 ದಿನಗಳ ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾರೆ. ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ಅವರು 12 ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಯೆಟ್ನಾಂ […]

ಶಾಂತಿ ಸೌಹಾರ್ದತೆಯ ಭಾರತ ಕಟ್ಟೋಣ : ಹರ್ಷಾದ್ ವರ್ಕಾಡಿ

Thursday, January 28th, 2016
Harshad

ಮಂಜೇಶ್ವರ : ಜಗತ್ತೇ ಗೌರವಿಸುವ ಪ್ರಜಾಪ್ರಭ್ರುತ್ವ ರಾಷ್ರ್ರ ನಮ್ಮ ಭಾರತವಾಗಿದೆ. ಭಾರತದ ಸಂವಿಧಾನ ಇಡೀ ಜಗತ್ತಿಗೇ ಮಾದರಿಯಾಗಿದ್ದು ಸಹಿಷ್ಣುತೆ, ಸಹಬಾಳ್ವೆಯ ಜೀವನದೊಂದಿಗೆ ಶಾಂತಿ ಸೌಹಾರ್ದತೆ, ಭಾರತವನ್ನು ನಾವು ಕಟ್ಟೋಣ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಕರೆ ನೀಡಿದ್ದಾರೆ. ಅವರು ವರ್ಕಾಡಿ ಕಳಿಯೂರಿನ ಸೈಂಟ್ ಮೇರೀಸ್ ಆಂಗ್ಲ ಮಾಧಮ ಶಾಲೆಯಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಕ್ಷ ಸ್ಥಾನ ವಹಿಸಿ ಮಾತನಾಡಿದರು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರು ರೂಪಿಸಿದ ಸಂವಿಧಾನ ಇಂದು […]

ಪಾಕಿಸ್ಥಾನಃ ಗಡಿ ಉಲ್ಲಂಘನೆ ಮಾಡಿದ ಆರೋಪ ೨೫ ಮೀನುಗಾರರ ಬಂಧನ

Tuesday, September 30th, 2014
Fishermen

ಇಸ್ಲಮಾಬಾದ್‌ : ಭಾನುವಾರ ಸಂಜೆ ಮೀನು ಹಿಡಿಯಲು ತೆರಳಿದ 25 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಬಂದರು ರಕ್ಷಣಾ ಪಡೆ ಭಂದಿಸಿದೆ. ಗಡಿ ಉಲ್ಲಂಘನೆ ಮಾಡಿದ ಆರೋಪ ಎದುರಿಸಿತ್ತುರುವ  ಎಲ್ಲಾ ಮೀನುಗಾರರನ್ನು ಕರಾಚಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇವರೆಲ್ಲರಿಗೂ ಕನಿಷ್ಠ 1 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.

ಭಾರತ ಜಗತ್ತಿನ 3ನೇ ಅಪಾಯಕಾರಿ ದೇಶ..!

Tuesday, March 4th, 2014
India-is-a-dangerous

ನವದೆಹಲಿ: ಭಾರತ ಅಫ್ಘಾನಿಸ್ತಾನಕ್ಕಿಂತ ಅಪಾಯಕಾರಿ ದೇಶವಾಗಿದ್ದು, ನೀವು ಯಾವುದೇ ಕ್ಷಣದಲ್ಲೂ ಬೇಕಾದರು ಬಾಂಬ್ ಸ್ಫೋಟದಿಂದ ಸಾಯಬಹುದು. ಹೀಗಂತ ಸರ್ಕಾರಿ ದಾಖಲೆಗಳೇ ಹೇಳುತ್ತಿವೆ. ಭಾರತ ಜಗತ್ತಿನಲ್ಲಿ ಮೂರನೇ ಅಪಾಯಕಾರಿ ದೇಶವಾಗಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಬಾಂಬ್ ಸ್ಫೋಟ ಸಂಭವಿಸುವ ದೇಶಗಳಲ್ಲಿ ಭಾರತ, ಇರಾಖ್ ಮತ್ತು ಪಾಕಿಸ್ತಾನದ ನಂತರದ ಸ್ಥಾನದಲ್ಲಿದೆ. ಯುದ್ಧದಿಂದ ತತ್ತರಿಸಿರುವ ಅಫ್ಘಾನಿಸ್ತಾನ ಮತ್ತು ಸಿರಿಯಾ ಸಹ ಭಾರತಕ್ಕಿಂತ ಉತ್ತಮ ಎಂದು ರಾಷ್ಟ್ರೀಯ ಬಾಂಬ್ ಅಂಕಿ-ಅಂಶ ಕೇಂದ್ರ(ಎನ್‌ಬಿಡಿಸಿ) ಬಿಡುಗಡೆ ಮಾಡಿರುವ ವರದಿ ಹೇಳುತ್ತಿದೆ. ಎನ್‌ಬಿಡಿಸಿ ಬಿಡುಗಡೆ ಮಾಡಿರುವ ವರದಿಯ […]

ಇ.ಎಸ್.ಐ. ಆಸ್ಪತ್ರೆಗೆ ಸಂಭಂಧಟ್ಟ ಬೇಡಿಕೆಗಳನ್ನು ಈಡೇರಿಸುವಂತೆ ಉಪವಾಸ ಸತ್ಯಾಗ್ರಹ

Tuesday, August 20th, 2013
Indefinite hunger strike begins demanding end to ESI Hospital problems

ಮಂಗಳೂರು :  ಅಖಿಲ ಭಾರತ ಕಾರ್ಮಿಕ ಸಂಘದ ರಾಜ್ಯ ಘಟಕ ಪ್ರಧಾನ ಕಾರ್‍ಯದರ್ಶಿ ಸುದತ್ತ ಜೈನ್ ಶಿರ್ತಾಡಿ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲ ವ್ಯಾಪ್ತಿಗೆ ಇ.ಎಸ್.ಐ.ಸಿ. ಸೌಲಭ್ಯ  ಒದಗಿಸುವಂತೆ ಅಗ್ರಹಿಸಿ ಹಾಗೂ ಕದ್ರಿಯ ಇ.ಎಸ್.ಐ. ಆಸ್ಪತ್ರೆಯನ್ನು ಸಂಪೂರ್ಣ ಕೇಂದ್ರ ಸರಕಾರ ವಹಿಸಿಕೊಳ್ಳುವಂತೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಿಂದ ಪಾದಯಾತ್ರೆಯಲ್ಲಿ ಸಾಗಿ ಕದ್ರಿ ಶಿವಭಾಗ್‌ನ ಇ.ಎಸ್.ಐ. ಆಸ್ಪತ್ರೆ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಇಂದು ಅನೇಕರು ಅಸುರಕ್ಷಿತ ಸ್ಥಳಗಳಲ್ಲಿ ಕೆಲಸ […]

ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾ

Sunday, April 3rd, 2011
ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾ

ಮುಂಬೈ : 28 ವರ್ಷಗಳ ಬಳಿಕ ಭಾರತವು  ಮುಂಬೈಯ ಕಿಕ್ಕಿರಿದ ವಾಂಖೇಡೆ ಕ್ರೀಡಾಂಗಣದಲ್ಲಿ 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ಶನಿವಾರ ನಡೆದ ಫೈನಲ್ ಪಂದ್ಯವು ಏಷ್ಯಾದ ಪ್ರಬಲ ತಂಡಗಳೆರಡರ  ಹೋರಾಟಕ್ಕೆ ಸಾಕ್ಷಿಯಾಗಿ ಭಾರತವು 1983ರ ಏಪ್ರಿಲ್ 2ರ ಶನಿವಾರ ಮಾಡಿದ ಸಾಧನೆಯನ್ನೇ ಅದೇ ವಾರ ಅದೇ ತಾರೀಕಿನಲ್ಲಿ 28 ವರ್ಷಗಳ ಬಳಿಕ ಪುನರಾವರ್ತಿಸಿ, ಏಕದಿನ ಕ್ರಿಕೆಟ್ ನಲ್ಲಿ ನಂ.1 ಪಟ್ಟಕ್ಕೇರಿತು. ಶ್ರೀಲಂಕಾ ಒಡ್ಡಿದ 275 ರನ್ನುಗಳ ಬೆಂಬತ್ತಿದ ಭಾರತ, ಅಂತಿಮವಾಗಿ 48.2 ಓವರುಗಳಲ್ಲಿ 4 ವಿಕೆಟ್ […]