Blog Archive

33 ಗಂಟೆಗಳ ಸಂಪೂರ್ಣ ಲಾಕ್ ಡೌನ್, ಮಂಗಳೂರು ಸ್ತಬ್ಧ

Sunday, July 5th, 2020
Lockdown

ಮಂಗಳೂರು :  ರಾಜ್ಯ ಸರಕಾರ ಮಾರಕ ರೋಗ ಕೊರೋನ ಹಿನ್ನೆಲೆಯಲ್ಲಿ ಪ್ರತಿ ರವಿವಾರ ಕರ್ಫ್ಯೂ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶನಿವಾರ ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 5 ರ ವರೆಗೆ 33 ಗಂಟೆಗಳ ಸಂಪೂರ್ಣ ಲಾಕ್ ಡೌನ್ ಜಾರಿಮಾಡಲಾಗಿದೆ. ಮಂಗಳೂರು  ನಗರದಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಓಡಾಡುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಪಹರೆ ನೀಡುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ ಒಳ ರಸ್ತೆಗಳೂ ಬಹುತೇಕ ನಿರ್ಜನವಾಗಿವೆ. ಕೆಲವೇ ಕೆಲವರು ಮನೆ ಸಮೀಪದ ಅಂಗಡಿಗಳಿಗೆ ತೆರಳುತ್ತಿರುವುದು ಕಂಡು ಬರುತ್ತಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಕೆಲವೊಂದು […]

ಮಂಗಳೂರು – ಕಾಸರಗೋಡಿನ ಮಧ್ಯೆ ಪಾಸ್ ಬಳಸಿ ಸಂಚರಿಸಲು ಅನುಮತಿ

Wednesday, June 3rd, 2020
sidhu-roopesh

ಮಂಗಳೂರು:   ಮಂಗಳೂರು – ಕಾಸರಗೋಡಿನ ಮಧ್ಯೆಯ ನಿತ್ಯ ಸಂಚಾರಕ್ಕೆ ಈಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರು ಪಾಸ್ ಬಳಸಿ ಸಂಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ನೀಡಿದ್ದಾರೆ. ಕಾಸರಗೋಡಿನಲ್ಲಿರುವ ಬಹಳಷ್ಟು ಗಡಿನಾಡ ಕನ್ನಡಿಗರು ಉದ್ಯೋಗ, ಶಿಕ್ಷಣ ನಿಮಿತ್ತ ದಿನನಿತ್ಯ ಮಂಗಳೂರಿಗೆ ಸಂಚರಿಸುತ್ತಾರೆ. ಇಂತವರಿಗೆ ಪಾಸ್ ಬಳಸಿ ನಿತ್ಯ ಸಂಚರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಅವಕಾಶ ಕಲ್ಪಿಸಿದರು. ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು […]

ಲಕ್ಷದ್ವೀಪದಿಂದ 19 ಮಂದಿ ಮಂಗಳೂರಿಗೆ ವಾಪಾಸ್ , 7 ದಿನಗಳ ಗೃಹ ಬಂಧನದಲ್ಲಿ ನಿಗಾ

Friday, May 29th, 2020
lakshadeep

ಮಂಗಳೂರು:  ಲಾಕ್‌ಡೌನ್‌ ಪರಿಣಾಮ ಎರಡು ತಿಂಗಳಿಂದ ಲಕ್ಷದ್ವೀಪಕ್ಕೆ ತೆರಳಿ ಬಾಕಿಯಾಗಿದ್ದ ಮಂಗಳೂರಿನ 19 ಮಂದಿ ನಗರಕ್ಕೆ ಮರಳಿದ್ದಾರೆ. ಲಾಕ್‌ಡೌನ್‌ ಘೋಷಣೆ ಬಳಿಕ ಮಂಗಳೂರು- ಲಕ್ಷದ್ವೀಪ ನಡುವಿನ ಪ್ರಯಾಣಿಕರ ಹಡಗು ಸಂಚಾರ ಸ್ಥಗಿತವಾಗಿತ್ತು. ಮೂವರು ಮಹಿಳೆಯರೂ ಸೇರಿದಂತೆ 19 ಮಂದಿ ಲಕ್ಷದ್ವೀಪದ ಕವರತ್ತಿ, ಅಗಟ್ಟಿ ಮತ್ತು ಕಿಲ್ತಾನ್‌ ದ್ವೀಪಗಳಲ್ಲಿ ಬಾಕಿಯಾಗಿದ್ದರು. ವ್ಯಾಪಾರ ಹಾಗೂ ನಿರ್ಮಾಣ ಕೆಲಸಕ್ಕೆಂದು ತೆರಳಿ ದವರು ಅಲ್ಲಿಗೆ ಕರೆಸಿಕೊಂಡವರ ವಾಸ್ತವ್ಯದಲ್ಲಿ ಹಾಗೂ ಸಂಬಂಧಿಕರ ಮನೆಗೆಂದು ತೆರಳಿದವರು ಅಲ್ಲಿಯೇ ಉಳಿದುಕೊಂಡಿದ್ದರು. ಲಕ್ಷದ್ವೀಪದಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣಗಳಿಲ್ಲ. ಮಂಗಳೂರಿನಲ್ಲಿ […]

ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಶಾಸಕ‌ ಯು.ಟಿ. ಖಾದರ್ ಸೂಚನೆ

Friday, April 3rd, 2020
utkader

ಮಂಗಳೂರು  : ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡುದಾರರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಚ್ಚಲಕ್ಕಿ ನೀಡಲು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ. ಕರೋನಾ ನಿರ್ಬಂಧ ಹಿನ್ನೆಲೆಯಲ್ಲಿ ಪಡಿತರ ಅಕ್ಕಿಗೆ ವ್ಯಾಪಕ ಬೇಡಿಕೆ ಇದ್ದು, ಜಿಲ್ಲೆಯ ಜನತೆ ಕುಚ್ಚಲಕ್ಕಿ ಅನ್ನ ತಿನ್ನುವುದರಿಂದ ಅದನ್ನೇ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಬೇಕು. ಈ ಬಗ್ಗೆ ಮುಖ್ಯ ಮಂತ್ರಿ ಪ್ರಧಾನ ಕಾರ್ಯದರ್ಶಿ ಹಾಗೂ ಆಹಾರ ಇಲಾಖೆ‌ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ತಾನು ಸಮಾಲೋಚಿಸಿದ್ದು, ಜಿಲ್ಲೆಯಲ್ಲಿ ಕುಚ್ಚಲಕ್ಕಿ ಪಡಿತರದಲ್ಲಿ […]

ಮಂಗಳಾ ಅಲ್ಯುಮ್ನೈ ಅಸೋಸಿಯೇಶನ್‌ನಿಂದ ಮಂಗಳೂರು ವಿವಿಗೆ ವಿಶನ್ ಡಾಕ್ಯುಮೆಂಟ್ ಸಲ್ಲಿಕೆ

Friday, March 13th, 2020
MAA

ಮಂಗಳೂರು : ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮಂಗಳೂರು ವಿಶ್ವವಿದ್ಯಾನಿಲಯ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ಬೆಳವಣಿಗೆಯನ್ನು ಸಾಧಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘ(ಎಂ.ಎ.ಎ.)ದಿಂದ ಪ್ರಮುಖ ೪ ಅಂಶಗಳನ್ನೊಳಗೊಂಡ ವಿಶನ್ ಡಾಕ್ಯುಮೆಂಟ್ ಅನ್ನು ತಯಾರಿಸಿ ಮಂಗಳೂರು ವಿವಿಗೆ ನೀಡಲಾಗಿದೆ. ವಿಶ್ವವಿದ್ಯಾನಿಲಯದ ಪರಿಚಯ, ಸದ್ಯದ ಚಿತ್ರಣ, ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ ಯೋಜನೆಗಳು, ಗುರಿ ಸಾಧನೆಯ ಯೋಜನೆ ಹಾಗೂ ತಂತ್ರಗಳು ಮತ್ತು ಸಂಶೋಧನೆ ಮುಂತಾದವುಗಳನ್ನು ಈ ವಿಶನ್ ಡಾಕ್ಯುಮೆಂಟ್ ಒಳಗೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯ ಭಾರತದಲ್ಲಿ ಮನ್ನಣೆ ಪಡೆದ ಟಾಪ್ […]

ಮಂಗಳೂರು ವಿಶ್ವವಿದ್ಯಾ ಸಂವಾದದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Monday, February 17th, 2020
VVV

ಮಂಗಳೂರು : ಸಮಸ್ತ ಭಾರತೀಯ ವಿದ್ಯೆ- ಕಲೆಗಳ ಸಂರಕ್ಷಣೆ- ಸಂವರ್ಧನೆ- ಸಂಶೋಧನೆ ಮತ್ತು ಸಂಯೋಜನೆಯ ಮೂಲಕ ದೇಶಭಕ್ತ, ಧರ್ಮನಿಷ್ಠ, ಸಂಸ್ಕೃತಿ ಪ್ರೇಮಿ, ವಿಶ್ವಹಿತೈಷಿ ಸತ್ಪ್ರಜೆಗಳ ನಿರ್ಮಾಣದ ಮಹದುದ್ದೇಶದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸಲಾಗುತ್ತಿದೆ. ಇದು ಇತರ ವಿಶ್ವವಿದ್ಯಾಲಯಗಳಂತಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ದರ ಭಾರತೀ ಸ್ವಾಮೀಜಿ ಹೇಳಿದರು. ಮಂಗಳೂರಿನ ಪುರಭವನದಲ್ಲಿ ಭಾನುವಾರ ಆಯೋಜಿಸಲಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತ ಬೃಹತ್ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು. ಸಾಮಾನ್ಯ ವಿಶ್ವವಿದ್ಯಾಲಯಗಳು […]

ಮಂಗಳೂರು-ಮಡ್‌ಗಾಂವ್ ಇಂಟರ್ ಸಿಟಿ ರೈಲು ಸಂಚಾರ 20 ದಿನ ರದ್ದು

Saturday, September 21st, 2019
railu

ಮಂಗಳೂರು : ಮಂಗಳೂರಿನಿಂದ ಮಡ್‌ಗಾಂವ್ ಗೆ ತೆರಳುವ ಇಂಟರ್ ಸಿಟಿ ರೈಲು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 10ರವರೆಗೆ ರದ್ದುಗೊಂಡಿರುತ್ತದೆ. ಮಂಗಳೂರು, ಪಣಂಬೂರು, ಜೋಕಟ್ಟೆ ಭಾಗದ ರೈಲ್ವೇ ಮಾರ್ಗದಲ್ಲಿ ವಿದ್ಯುದೀಕರಣ ಕಾರ್ಯ ನಡೆಯುತ್ತಿರುವುದರಿಂದ ಈ ರೈಲು ಸಂಚಾರವನ್ನು 20 ದಿನಗಳ ಕಾಲ ರದ್ದುಗೊಳಿಸಲಾಗಿರುತ್ತದೆ ಎಂದು ಮಂಗಳೂರು ಕೊಂಕಣ್ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸುಧಾ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.    

ಮಂಗಳೂರು : ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ

Friday, September 6th, 2019
sasikanth

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ತಮಿಳುನಾಡು ಮೂಲದವರಾದ ಸಸಿಕಾಂತ್ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರ್ ಪದವೀಧರರು. ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ದ.ಕ ಜಿಲ್ಲಾಧಿಕಾರಿಗೂ ಮುಂಚೆ ಇವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದರು. ಅಕ್ಟೋಬರ್ 2017 ನಿಂದ ಸಸಿಕಾಂತ್ ಸೆಂಥಿಲ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾಗಿದ್ದರು. ಜಿಲ್ಲೆಯಲ್ಲಿ ಕಳೆದ ವರ್ಷದ […]

ಕುವೈತ್ ನಿಂದ ಮಂಗಳೂರಿಗೆ ಆಗಮಿಸಿದ ಯುವಕರನ್ನು ಸ್ವಾಗತಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ

Friday, July 19th, 2019
Mijar

ಮಂಗಳೂರು : ಕುವೈತ್ ನಿಂದ ನಿನ್ನೆ ಮುಂಬೈಗೆ ಬಂದ ಈ 10 ಮಂದಿ ಮುಂಬೈನಿಂದ ಬಸ್ ಮೂಲಕ ಶುಕ್ರವಾರ ಮಂಗಳೂರಿಗೆ ಬಂದಿಳಿದಿದ್ದಾರೆ. ಈ ಸಂತ್ರಸ್ತ ಯುವಕರನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರು ನಗರದ ಪಂಪ್ವೆಲ್ ಬಳಿ ಸ್ವಾಗತಿಸಿದ್ದಾರೆ. ಯುವಕರು ಕುವೈತ್ ಗೆ ಉದ್ಯೋಗಕ್ಕೆಂದು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದರು. ನಷೂದ್, ವರುಣ್, ಕಲಂದರ್ ಶಫೀಕ್, ನಷೂದ್, ರಫೀಕ್, ಯಕೂಬ್ ಮುಲ್ಲಾ, ಪಾರ್ಲ್ಟ್ರಿಕ್ ಫರ್ನಾಂಡಿಸ್, ಜಗದೀಶ್, ಆಶೀಕ್, ಪಾರ್ಥಿಕ್, ಮಹಮ್ಮದ್ ಹಸನ್, ಮಹಮ್ಮದ್ ಇಸ್ಮಾಯಿಲ್, ಅಬ್ದುಲ್ ಮಸೀದ್, ಮಹಮ್ಮದ್ ಸುಹೇಲ್, ನೌಫಾಲ್ […]

ಉಡುಪಿ , ಮಂಗಳೂರು ಪೊಲೀಸ್ ಅಧಿಕಾರಿಗಳ ವರ್ಗಾವಣೆ

Thursday, February 21st, 2019
Laxman nimbargi

ಉಡುಪಿ : ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಲಕ್ಷ್ಮಣ ನಿಂಬರ್ಗಿ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹಾಗೆಯೇ, ಉಡುಪಿ ಜಿಲ್ಲೆಯ ನೂತನ ಎಸ್ಪಿಯಾಗಿ ನಿಶಾ ಜೇಮ್ಸ್ ಅವರನ್ನು ರಾಜ್ಯ ಸರಕಾರ ನಿಯುಕ್ತಿಗೊಳಿಸಿದೆ. ಲಕ್ಷ್ಮಣ ನಿಂಬರ್ಗಿ ಅವರನ್ನು ಬೆಂಗಳೂರಿನ ಪೊಲೀಸ್ ವಯರ್ ಲೆಸ್ ಎಸ್.ಪಿ.ಯಾಗಿ ವರ್ಗಾವಣೆಗೊಳಿಸಲಾಗಿದೆ. ಉಡುಪಿ ಜಿಲ್ಲೆಯ ನೂತನ ಎಸ್.ಪಿ.ಯಾಗಿ ನೇಮಕಗೊಂಡಿರುವ ನಿಶಾ ಜೇಮ್ಸ್ ಅವರು 2013ನೇ ಸಾಲಿನ ಐ.ಪಿ.ಎಸ್. ಅಧಿಕಾರಿಯಾಗಿದ್ದು, ಬೆಂಗಳೂರಿನಲ್ಲಿ ಕೆ.ಎಸ್.ಆರ್.ಪಿ.ಯ ನಾಲ್ಕನೇ ಬೆಟಾಲಿಯನ್ ನ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳೂರು […]