Blog Archive

ಅಕ್ರಮ ಮರಳುಗಾರಿಕೆ: 12ಕ್ಕೂ ಅಧಿಕ ಬೋಟುಗಳ​ ವಶ

Saturday, December 29th, 2018
sand-mining

ಮಂಗಳೂರು: ಸಿಆರ್‌ಝೆಡ್ ವ್ಯಾಪ್ತಿಯ ಜಪ್ಪಿನಮೊಗರು, ಹರೇಕಳ ಎಂಬಲ್ಲಿ ಪರವಾನಿಗೆಯಿಲ್ಲದೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ 12ಕ್ಕೂ ಅಧಿಕ ಬೋಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ದ.ಕ. ಜಿಲ್ಲೆಯ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮರಳುಗಾರಿಕೆ ನಡೆಸಲು 76 ಮಂದಿಗೆ ಪರವಾನಿಗೆ ನೀಡಲಾಗಿತ್ತು. ಆದರೆ ಕೆಲವರು ಪರವಾನಿಗೆಯಿಲ್ಲದೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕಾರ್ಯಾಚರಣೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ‌ ಹಿನ್ನೆಲೆಯಲ್ಲಿ […]

ವಿಷ ಪ್ರಸಾದ ಪ್ರಕರಣ: ಪೋಷಕರ ಕಳೆದುಕೊಂಡ ಅನಾಥ ಮಕ್ಕಳ ದತ್ತು ಪಡೆದ ಆಳ್ವಾಸ್ ವಿದ್ಯಾಸಂಸ್ಥೆ

Saturday, December 29th, 2018
mohan-alva

ಮಂಗಳೂರು: ಚಾಮರಾಜನಗರದ ಸುಳ್ವಾಡಿಯಲ್ಲಿ ನಡೆದ ವಿಷ ಪ್ರಸಾದ ಪ್ರಕರಣದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮೂವರು ಮಕ್ಕಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್ ವಿದ್ಯಾಸಂಸ್ಥೆ ದತ್ತು ಪಡೆದಿದೆ. ಸೋಮವಾರ ವಿದ್ಯಾರ್ಥಿಗಳು ಸಂಸ್ಥೆಯನ್ನು ಸೇರ್ಪಡೆಯಾಗಲಿದ್ದಾರೆ ಎಂದು ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ತಿಳಿಸಿದ್ದಾರೆ. ವಿಷ ಪ್ರಸಾದ ಪ್ರಕರಣ ನಡೆದ ಸಂದರ್ಭದಲ್ಲಿ ದಂಪತಿಗಳ ಸಾವಿನಿಂದ ಅನಾಥರಾದ ಮೂವರು ಮಕ್ಕಳನ್ನು ಅವರು ಇಚ್ಛಿಸಿದಲ್ಲಿ ದತ್ತು ತೆಗೆದುಕೊಳ್ಳುವುದಾಗಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮೋಹನ್ ಆಳ್ವ ಅವರು ಘೋಷಿಸಿದ್ದರು. […]

ಜನವರಿ 12-13ರಂದು ಕರಾವಳಿ ಉತ್ಸವದ ಅಂಗವಾಗಿ ‘ರಿವರ್ ಫೆಸ್ಟಿವಲ್’

Friday, December 28th, 2018
mangaluru

ಮಂಗಳೂರು: ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕರಾವಳಿ ಉತ್ಸವದ ಅಂಗವಾಗಿ ‘ರಿವರ್ ಫೆಸ್ಟಿವಲ್’ ಎಂಬ ಕಾರ್ಯಕ್ರಮ ಜನವರಿ 12 ಮತ್ತು 13ರಂದು ಕೂಳೂರು, ಬಂಗ್ರಕೂಳೂರು ಪಡಕೋಡಿ, ಸುಲ್ತಾನ್ ಬತ್ತೇರಿಯಲ್ಲಿ ನಡೆಸಲಿದೆ. ಇಂದು ಕಾರ್ಯಕ್ರಮ ಆಯೋಜನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ಸವ ಆಯೋಜನೆ ಸಂಬಂಧ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಕೂಳೂರು ಸೇತುವೆ, ಬಂಗ್ರಕೂಳೂರು ಪಡಕೋಡಿ, ಸುಲ್ತಾನ್ ಬತ್ತೇರಿ ನದಿ ತೀರಗಳಲ್ಲಿ ವಾಟರ್ ಸ್ಪೋಟರ್ಸ್, ರಿವರ್ ಕ್ರ್ಯೂಜ್, ಫ್ಲೋಟಿಂಗ್ […]

ಸಿಬಿಐ ಪೊಲೀಸರೆಂದು ನಂಬಿಸಿ ಚಿನ್ನಾಭರಣ ಎಗರಿಸಿದ ಚಾಣಾಕ್ಷ ಖದೀಮರು..!

Wednesday, December 26th, 2018
manglore

ಮಂಗಳೂರು: ಸಿಬಿಐ ಪೊಲೀಸರೆಂದು ನಂಬಿಸಿ ಚಿನ್ನ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡುವ ಖದೀಮರ ಗ್ಯಾಂಗ್ ಕಾರ್‌ಸ್ಟ್ರೀಟ್ ಸಮೀಪ ವ್ಯಕ್ತಿಯೊಬ್ಬರನ್ನು ಲೂಟಿ ಮಾಡಿ ಪರಾರಿಯಾದ ಘಟನೆ ನಿನ್ನೆ ನಡೆದಿದೆ. ಈ ಕುರಿತು ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ. ಅಳಕೆ ಸಿಂಡಿಕೇಟ್ ಬ್ಯಾಂಕ್ ಬಳಿಯ ನಿವಾಸಿ ಭಗವಾನ್ (70) ಚಿನ್ನಾಭರಣ ದರೋಡೆಗೊಳಗಾದವರು. ಅವರು ನಿನ್ನೆ ಬೆಳಗ್ಗೆ 11:45ರ ವೇಳೆ ನಗರದ ಕಾರ್‌ಸ್ಟ್ರೀಟ್ ಬಿಇಎಂ ಸ್ಕೂಲ್‌ನ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಇಬ್ಬರು ಹಿಂದಿಯಲ್ಲಿ ಮಾತನಾಡುತ್ತಾ […]

ಕೈಕೊಟ್ಟ ಕರೆಂಟ್, ಜನರೇಟರ್​: ಬೈಕ್ ಹೆಡ್‌ಲೈಟ್ ಬೆಳಕಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರು!

Wednesday, December 26th, 2018
karavali

ಮಂಗಳೂರು: ಜನರೇಟರ್ ಕೈಕೊಟ್ಟ ಪರಿಣಾಮ ಕರಾವಳಿ ಉತ್ಸವದ ವಸ್ತು ಪ್ರದರ್ಶನ ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾವಿದರು ಬೈಕ್ ಹೆಡ್‌ಲೈಟ್ ಹಾಗೂ ಮೊಬೈಲ್ ಬೆಳಕಿನ ನೆರವಿನಲ್ಲೇ ಪ್ರದರ್ಶನ ನೀಡಿದ ಘಟನೆ ಸೋಮವಾರ ಸಂಜೆ ನಡೆದಿದೆ. ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೈಮ್ ರಾಮ್‌ದಾಸ್ ಮತ್ತು ತಂಡದವರಿಂದ ಜಾನಪದ ಹಾಡುಗಳ ಗಾಯನವು ಸಂಜೆ 6 ಗಂಟೆಗೆ ನಿಗದಿಯಾಗಿತ್ತು. ಆದರೆ ಸಮಯ 6:25 ಆಗಿದ್ದರೂ ವಿದ್ಯುತ್ ವ್ಯವಸ್ಥೆ ಆಗಿರಲಿಲ್ಲ. ಜನರೇಟರ್‌ನ ಡೀಸೆಲ್ ಖಾಲಿಯಾಗಿದ್ದು, ಡೀಸೆಲ್ ಹಾಕುವ ಹೊಣೆ […]

ಉತ್ತರ ಕೊಡುವ ಧೈರ್ಯವಿದ್ದರೆ ಜಂಟಿ ಸಂಸತ್​​ ಸಮಿತಿ ರಚಿಸಲಿ: ಯು.ಟಿ.ಖಾದರ್

Wednesday, December 26th, 2018
u-t-khader

ಮಂಗಳೂರು: ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಕಾಂಗ್ರೆಸ್ನ ಪ್ರಶ್ನೆಗೆ ಉತ್ತರ ಕೊಡುವ ಧೈರ್ಯವಿದ್ದರೆ ಜಂಟಿ ಸಂಸತ್ ಸಮಿತಿ ರಚಿಸಲಿ ಎಂದು ಸಚಿವ ಯು.ಟಿ.ಖಾದರ್ ಸವಾಲು ಹಾಕಿದರು. ಹೆಚ್ಎಎಲ್ನೊಂದಿಗೆ ಆದ ಒಪ್ಪಂದವನ್ನು‌ ಮುರಿದು ವಿದೇಶಿ ಕಂಪನಿಯೊಂದಿಗೆ ರಫೇಲ್‌ ಒಪ್ಪಂದಕ್ಕೆ ಸಹಿ ಹಾಕಿದ್ದು ಯಾಕೆ ಎಂದು ಇಂದು ದೇಶದ ಜನತೆ ಕೇಳುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಲಿ ಎಂದು ಗುಡುಗಿದರು. ಒಂದು ಪ್ಲಾಸ್ಟಿಕ್ ವಿಮಾನವನ್ನು ತಯಾರಿಸದ ಅಂಬಾನಿಯ ಸಂಸ್ಥೆಗೆ ಯಾಕೆ ಇದನ್ನು ಕೊಡಬೇಕಿತ್ತು. ಐನೂರು ಕೋಟಿ ರೂ.ವರೆಗೆ […]

ಬಡ ರೋಗಿಗಳಿಗೆ ನೆರವಿನ ಹಸ್ತ: ಮಂಗಳೂರು ಯುವಕನ ಸೇವೆಗೆ ಶ್ಲಾಘನೆ

Monday, December 24th, 2018
manglore

ಮಂಗಳೂರು: ಬೇರೆಯವರ ಕಷ್ಟವನ್ನು ಕಂಡರೂ ಕಾಣದಂತೆ ಹೋಗುವವರು ಅದೆಷ್ಟೊ, ಅವರ ಬೆನ್ನಿಗೆ ನಿಂತು ಸಹಾಯ ಮಾಡುವ ಕೈಗಳು ಕೆಲವು ಮಾತ್ರ. ಮಂಗಳೂರು ಮೂಲದ ಯುವಕ ಪುನೀತ್ ಕುಮರಾ್ ಮಡಂತ್ಯಾರ್ ಬಡ ರೋಗಿಗಳ ಪಾಲಿಗೆ ಬಂಧುವಾಗಿ ನಿಂತಿದ್ದು, ಈತನ ನಿಸ್ವಾರ್ಥ ಸೇವೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಪುನೀತ್ ಸಾಮಾಜಿಕ ಕಳಕಳಿಗೆ ಮೊದಲ ಸ್ಪೂರ್ತಿ 2014 ರ ಚುನಾವಣೆಯ ಸಂದರ್ಭ, ಚುನಾವಣೆ ಎಂದರೆ ತಮ್ಮ ಪಕ್ಷಕ್ಕೆ ಮತ ಕೊಡಿ ಎಂದು ಕಾರ್ಯಕರ್ತರು ಮನೆಮನೆಗೆ ತೆರಳುವುದು ಸಾಮಾನ್ಯ. ಈ ಸಂದರ್ಭ ಪಕ್ಷವೊಂದರ […]

ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿ ವಶ

Saturday, December 22nd, 2018
tempo

  ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ತಿರುವೈಲು ಗ್ರಾಮದ ಪರಾರಿ ಜಂಕ್ಷನ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಟಿಪ್ಪರ್ನಲ್ಲಿ ತುಂಬಿದ್ದ ಮರಳಿನ ಒಟ್ಟು ಅಂದಾಜು ಮೌಲ್ಯ 25 ಲಕ್ಷದ 15 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ . ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ಹಾಗೂ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ತಂಡದೊಂದಿಗೆ ಎಎಸ್ಐ ಮೋಹನ್ ವಿಶೇಷ ಕರ್ತವ್ಯದಲ್ಲಿದ್ದಾಗ, […]

ಸರ ಕಳವು ಪ್ರಕರಣ: ಓರ್ವ ಆರೋಪಿಯ ಬಂಧನ

Friday, December 21st, 2018
arrested

ಮಂಗಳೂರು: ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರಿನ ಪಡುಪೆರಾರ ಕತ್ತಲ್ಸಾರ್ನ ತಿಲಕ್ (27) ಬಂಧಿತ ಆರೋಪಿ. ಈತನಿಂದ ಒಟ್ಟು 40 ಸಾವಿರ ಮೌಲ್ಯದ 2 ಚಿನ್ನದ ಸರ, ಹೋಂಡ ಆಕ್ಟಿವಾ ದ್ವಿಚಕ್ರ ವಾಹನ, ರೂ.3700 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈತ ಡಿಸೆಂಬರ್ 11ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಎರಮೆ ಎಂಬಲ್ಲಿ ಪುಪ್ಪಾ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಕುತ್ತಿಗೆಗೆ ಕೈ ಹಾಕಿ ಚಿನ್ನದ ಕರಿಮಣಿಸರವನ್ನು ಎಗರಿಸಿ ಪರಾರಿಯಾಗಿದ್ದ […]

ಮಂಗಳೂರು ಮೀನು ಮಾರುಕಟ್ಟೆ ಸ್ಥಳಾಂತರವನ್ನು ವಿರೋಧಿಸಿ ಪ್ರತಿಭಟನೆ

Friday, December 21st, 2018
protest

ಮಂಗಳೂರು: ಮೀನು ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಮೀನುಗಾರ ಮಹಿಳೆಯರು ಮತ್ತು ಮಂಗಳೂರು ಮೀನುಗಾರ ಮಹಿಳೆಯರ ಮಾರಾಟ ಮಂಡಳಿ ಜೊತೆಗೂಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಂಗಳೂರು ಸ್ಮಾರ್ಟ್ ಸಿಟಿ ಆಗುತ್ತಿರುವ ಹಿನ್ನೆಲೆಯಲ್ಲಿ ಮೀನು ಮಾರುಕಟ್ಟೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅದನ್ನು ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ಸ್ಟ್ಯಾಂಡ್ ಪಕ್ಕದಿಂದ ಸ್ಥಳಾಂತರಿಸುವ ಉದ್ದೇಶವಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಯಲ್ಲಿ ಮೀನುಗಾರ ಮಹಿಳೆಯರು ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಿರುವ ಮೀನು ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಬೇಕು. ಅಲ್ಲದೆ ಯಾವುದೇ […]