Blog Archive

ಮಂಗಳೂರು ವಿವಿ ಹಗರಣಗಳ ಬಗ್ಗೆ ಶಾಸಕ ಡಿ ವೇದವ್ಯಾಸ ಕಾಮತ್ ಪ್ರಶ್ನೆ

Thursday, December 20th, 2018
vedvyas-kamth

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಹಗರಣಗಳ ಕುರಿತು ರಾಜ್ಯ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ. ಈ ಕುರಿತು ಅಧಿವೇಶನದಲ್ಲಿ ಮಾತನಾಡಿದ ಅವರು ಮಂಗಳೂರು ವಿವಿಯಲ್ಲಿ ಮೂರು ವರ್ಷಗಳಿಂದ ನಡೆದ ಹಗರಣಗಳು ಸರಕಾರದ ಗಮನಕ್ಕೆ ಬಂದಿದೆಯಾ ಎಂದು ಪ್ರಶ್ನೆ ಕೇಳಿದಾಗ ಗಮನಕ್ಕೆ ಬಂದಿಲ್ಲ ಎಂದು ಸರಕಾರ ಕಡೆಯಿಂದ ಉನ್ನತ ಶಿಕ್ಷಣ ಸಚಿವರು ಉತ್ತರ ನೀಡಿದ್ದಾರೆ. ಮಂಗಳೂರು ವಿವಿಯಲ್ಲಿ ನಡೆದ ಹಗರಣಗಳ ಬಗ್ಗೆ ಪತ್ರಿಕೆ, […]

ಗಾಯಕ ಪದ್ಮಶ್ರೀ ಹರಿಹರನ್‌ಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ

Thursday, December 20th, 2018
play-back-singer

ಮಂಗಳೂರು: ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನೀಡುವ ಈ ಬಾರಿಯ ಆಳ್ವಾಸ್ ವಿರಾಸತ್‌ ಪ್ರಶಸ್ತಿಯನ್ನು ದೇಶದ ಖ್ಯಾತ ಗಾಯಕ ಪದ್ಮಶ್ರೀ ಹರಿಹರನ್ ಅವರಿಗೆ ನೀಡಲು‌ ನಿರ್ಧರಿಸಿದೆ. 25ನೇ ವರ್ಷದ ಆಳ್ವಾಸ್ ವಿರಾಸತ್ ಜನವರಿ 4ರಿಂದ 6 ರವರೆಗೆ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಹರಿಹರನ್ ಅವರಿಗೆ ಆಳ್ವಾಸ್ ವಿರಾಸತ್-2019 ನೀಡಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ. ಮೂಡುಬಿದಿರೆಯ ಪುತ್ತಿಗೆಯಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ವೈಭವ […]

ಮಹಿಳೆಯೋರ್ವರಿಗೆ 60 ಲಕ್ಷ ರೂ. ವಂಚನೆ: ಅಪರಾಧಿಗೆ 3 ವರ್ಷ 2 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ

Thursday, December 20th, 2018
judith

ಮಂಗಳೂರು: ಮಹಿಳೆಯೋರ್ವರಿಗೆ 60 ಲಕ್ಷ ರೂ. ವಂಚನೆ ಹಾಗೂ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಮೂಲ್ಕಿಯ ಕೆ.ಎಸ್. ರಾವ್ ನಗರದ ಮನೋಜ್ ಕುಮಾರ್(36) ಎಂಬಾತನ ಮೇಲಿನ ಆರೋಪ ಸಾಬೀತಾಗಿದ್ದು, 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಅಪರಾಧಿಗೆ 3 ವರ್ಷ 2 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15,000 ರೂ. ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ ಹಾಗೂ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ 4 ತಿಂಗಳ ಸಜೆಯನ್ನು ವಿಧಿಸಿ […]

ರಸ್ತೆಸಾರಿಗೆ ಸಮಸ್ಯೆ ದಾಖಲಿಸಲು ನೂತನ ಆ್ಯಪ್​ ಅಭಿವೃದ್ಧಿ: ಸಸಿಕಾಂತ್ ಸೆಂಥಿಲ್

Thursday, December 20th, 2018
sesikanth-senthil

ಮಂಗಳೂರು: ರಸ್ತೆ ಸಾರಿಗೆ ಸಮಸ್ಯೆಗಳನ್ನು ದಾಖಲಿಸಲು ಸಾರ್ವಜನಿಕರ ಬಳಕೆಗಾಗಿ ದ.ಕ. ಜಿಲ್ಲಾಡಳಿತದ ವತಿಯಿಂದ ನೂತನ ಆ್ಯಪ್ನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ದ‌.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಸ್ತೆ, ಸಾರಿಗೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ರಸ್ತೆ ಸಾರಿಗೆ ಇಲಾಖೆಯ ದೂರುಗಳನ್ನು ದಾಖಲಿಸಲು ಮತ್ತು ಮಾಹಿತಿ ವಿನಿಮಯಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಚಿಂತನೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕರು ಬಳಸಬಹುದಾದ ಆ್ಯಪ್ಅನ್ನು ಮುಂದಿನ ನಾಲ್ಕು ತಿಂಗಳ ಒಳಗಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ದ.ಕ. […]

ಮಂಗಳೂರು ಕಾಲೇಜಿನ ಎಂಬಿಬಿಎಸ್​ ವಿದ್ಯಾರ್ಥಿವೋರ್ವ ನೇಣಿಗೆ ಶರಣು

Wednesday, December 19th, 2018
suicide

ಮಂಗಳೂರು: ನಗರದ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿವೋರ್ವ ನೇಣಿಗೆ ಶರಣಾಗಿರುವ ಘಟನೆ ಕೃಷ್ಣರಾಜಪೇಟೆಯಲ್ಲಿ ನಡೆದಿದೆ. ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅಮೃತೇಶ್(22) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲವು ದಿನಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾದ ಅಮೃತೇಶ್ ಜೀವನದಲ್ಲಿ ಜಿಗುಪ್ಸೆ ಅನುಭವಿಸುತ್ತಿದ್ದ ಎಂದು ತಿಳಿದುಬಂದಿದೆ. ಮಂಗಳವಾರ ಮಧ್ಯಾಹ್ನ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮೃತೇಶ್ ಮೃತದೇಹವನ್ನು ಇಂದು ಬೆಳಗ್ಗೆ ತಗಡೂರು ಗ್ರಾಮಕ್ಕೆ ಕೊಂಡೊಯ್ಯಲಾಗಿದೆ.

ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿ ಪಲ್ಟಿ: ಕ್ಲೀನರ್​ ಸಾವು

Tuesday, December 18th, 2018
tanker

ಮಂಗಳೂರು: ಮರದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಟ್ರಾಫಿಕ್ ಪೊಲೀಸ್ ನಿಲ್ಲಿಸಲು ಹೋದಾಗ ಲಾರಿ ಪಲ್ಟಿಯಾಗಿ ಲಾರಿಯಲ್ಲಿದ್ದ ಕ್ಲೀನರ್ ಸಾವಿಗೀಡಾದ ಘಟನೆ ಮಂಗಳೂರಿನ ಹೊರವಲಯದ ತೊಕ್ಕೊಟ್ಟು ಜಂಕ್ಷನ್ನಲ್ಲಿ ನಡೆದಿದೆ. ಟ್ರಾಫಿಕ್ ಪೊಲೀಸ್ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದಾಗ ಲಾರಿ ಚಾಲಕ ಲಾರಿಯನ್ನು ಬದಿಗೆ ತಂದು ನಿಲ್ಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಗೆ ಹಾಸಲಾದ ಕಾಂಕ್ರೀಟ್ ಸ್ಲಾಬ್ ಮೇಲೆ ಲಾರಿ ನಿಂತ ಪರಿಣಾಮ ಸ್ಲಾಬ್ ತುಂಡಾಗಿ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾಗುವ ಸಂದರ್ಭದಲ್ಲಿ ಅದೇ ಬದಿಯಲ್ಲಿದ್ದ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದನು. […]

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿರುವುದು ಅಸ್ಪೃಶ್ಯತೆ: ಇಂದಿರಾ ಜೈಸಿಂಗ್​

Tuesday, December 18th, 2018
mangaluru

ಮಂಗಳೂರು: ಶಬರಿಮಲೆಯಲ್ಲಿ ಮಹಿಳೆಯರನ್ನು‌ ಸಂಪ್ರದಾಯದ ಹೆಸರಿನಲ್ಲಿ ಪ್ರವೇಶ ನಿಷೇಧ ಮಾಡಿರುವುದು ಒಂದು ರೀತಿಯ ಅಸ್ಪೃಶ್ಯತೆ ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ಮಹಿಳಾ ನ್ಯಾಯವಾದಿ ಮತ್ತು ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಹೇಳಿದರು. ನಗರದ ಹಂಪನಕಟ್ಟೆಯಲ್ಲಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ಏರ್ಪಡಿಸಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಲಿಂಗ ಸಮಾನತೆ ವಿಷಯದ ಬಗ್ಗೆ ಅವರು ಮಾತನಾಡಿದರು. ನೇಪಾಳದಲ್ಲಿ ಹಿಂದೆ ಋತುಚಕ್ರದ ಸಂದರ್ಭ ಹೆಂಗಸರನ್ನು ದೇವಸ್ಥಾನ ಮಾತ್ರ ಅಲ್ಲ, […]

ಕೌಶಲ್ಯ: ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ

Saturday, December 15th, 2018
kaushalya

ಮಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಹಾಗೂ ಸಿಡಾಕ್ ಧಾರವಾಡ ಇವರ ಜಂಟಿ ಆಶ್ರಯದಲ್ಲಿ ಪರಿಶಿಷ್ಟ ಪಂಗಡದ ಆಯ್ದ 40 ಮಂದಿ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಜರುಗಿದ 7 ದಿನಗಳ ವಸತಿ ಸಹಿತ ಕೌಶಲ್ಯಾ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ ನಗರದ ಸಿ.ಒ.ಡಿ.ಪಿ ಸಭಾಂಗಣದಲ್ಲಿ ನರೆವೇರಿತು. ಅಧ್ಯಕ್ಷತೆ ವಹಿಸಿದ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ತಮಗೆ ಈ ಶಿಬಿರದಲ್ಲಿ ದೊರಕಿರುವವರ ಕೌಶಲ್ಯವನ್ನು ಮೈಗೂಡಿಸಿಕೊಂಡು ಶ್ರೇಷ್ಠ ಮಟ್ಟದ ಉದ್ಯಮಿಗಳಾಗಿ ಮೂಡಿ ಬಂದು ಆರ್ಥಿಕ ಸ್ವಾತಂತ್ರ್ಯಾವನ್ನು ಗಳಿಸಿಕೊಳ್ಳಬೇಕೆಂದು ಕರೆ […]

ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭ

Saturday, December 15th, 2018
karyagara

ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಿ.ವಿ 9 ದೃಶ್ಯ ಮಾಧ್ಯಮ ಹಾಗೂ ಸಾನಿಧ್ಯ, ಭಿನ್ನ ಸಾಮಥ್ರ್ಯ ಮಕ್ಕಳ ತರಬೇತಿ ಸಂಸ್ಥೆ, ಮಂಗಳೂರು ವತಿಯಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ 2019 ಜನವರಿಯಲ್ಲಿ ಮೊದಲ ವಾರದಲ್ಲಿ ಪ್ರಾರಂಭಗೊಳ್ಳಲಿದೆ. ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಕೌಶಲ್ಯ ತರಬೇತಿದಾರರು, ವಿಶೇಷ ಶಿಕ್ಷಕಿಯರು, ಫಿಸಿಯೋಥೆರಪಿಸ್ಟ್ /ಸ್ಫೀಚ್‍ಥೆರಪಿಸ್ಟ್ /ಆಕ್ಯುಪೇಶನಲ್‍ಥೆರಪಿಸ್ಟ್/ ಸೈಕಾಲಾಜಿಸ್ಟ್ ರ ಸೇವೆ, ವಾಹನ, ಆಹಾರ ಹಾಗೂ […]

ಜೋಕಟ್ಟೆ ಬಳಿ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Saturday, December 15th, 2018
railway

ಮಂಗಳೂರು: ಪಡೀಲ್-ಜೋಕಟ್ಟೆ ನಡುವಿನ ರೈಲು ಮಾರ್ಗದಲ್ಲಿ ಶುಕ್ರವಾರ ಮಧ್ಯಾಹ್ನ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಜೋಕಟ್ಟೆ ಸಮೀಪದ ಬಬ್ಬರ್ಯ ದೇವಸ್ಥಾನ ಬಳಿಯ ನಿವಾಸಿ ಕಿಶೋರ್ (46) ಮೃತಪಟ್ಟಿದ್ದಾನೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಅವರು ಮಧ್ಯಾಹ್ನ ಊಟ ಮಾಡಿ ರೈಲು ಹಳಿ ದಾಟಲು ಯತ್ನಿಸುತ್ತಿದ್ದಾಗ ಮಂಗಳೂರಿನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಮತ್ಸಗಂಧಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರೈಲು ಅವರನ್ನು ಸುಮಾರು ದೂರಕ್ಕೆ ಎಳೆದೊಯ್ದಿದ್ದು, ತೀವ್ರ ಗಾಯಗೊಂಡ ಕಿಶೋರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಶರ್ಟ್ […]