Blog Archive

ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಹಿರಿಯ ಪ್ರಬಂಧಕ ಕೆ. ರಾಜಾರಾಮ ಮಡಿ ನಿಧನ

Friday, December 14th, 2018
karnataka-bank

ಮಂಗಳೂರು: ಕರ್ಣಾಟಕ ಬ್ಯಾಂಕ್‌ರಿಟೈರೀಸ್ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಕೆ. ರಾಜಾರಾಮ ಮಡಿ (79 ವರ್ಷ) ಅಸೌಖ್ಯದಿಂದ ಡಿ. 11 ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕರ್ಣಾಟಕ ಬ್ಯಾಂಕ್‌ನ ಹಿರಿಯ ಪ್ರಬಂಧಕರಾಗಿ ನಿವೃತ್ತಿ ಹೊಂದಿದ್ದ ದಿವಂಗತರು ಪತ್ನಿ ಹಾಗೂ ಇಬ್ಬರು ಪುತ್ರರನ್ನುಅಗಲಿದ್ದಾರೆ.

ಷಷ್ಠಿ ಪ್ರಯುಕ್ತ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಎಡೆಸ್ನಾನ ಸೇವೆ

Wednesday, December 12th, 2018
ayyappa-swami

ಮಂಗಳೂರು: ವರ್ಷ ಪ್ರತಿಯಂತೆ ಈ ಸಲವೂ ಷಷ್ಠಿ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಎಡೆಸ್ನಾನ ಸೇವೆ ಇಂದು ಮಧ್ಯಾಹ್ನ ನಡೆಯಿತು. ಸುಮಾರು 134 ಮಂದಿ ಪುರುಷರು, ಮಹಿಳೆಯರು ಈ ಎಡೆಸ್ನಾನ ಸೇವೆಯಲ್ಲಿ ಭಾಗವಹಿಸಿದ್ದರು. ಶ್ರೀ ದೇವರ ಮಧ್ಯಾಹ್ನದ ಪೂಜೆಯ ನಂತರ ದೇವಾಲಯದ ಗರ್ಭ ಗುಡಿಯ ಸುತ್ತಲೂ 108 ಎಲೆ ಹಾಕಿ ಅದಕ್ಕೆ ಅನ್ನ, ಸಾರು, ಪಲ್ಯ, ಸಾಂಬಾರ್, ಮಜ್ಜಿಗೆ ಬಡಿಸಲಾಯಿತು. ಬಳಿಕ ದೇವಾಲಯದ ಗೋವುಗಳಿಂದ ತಿನ್ನಿಸಲಾಯಿತು. ಉಳಿದ ಶೇಷ ಅನ್ನದ ಮೇಲೆ ಭಕ್ತರು ಉರುಳು ಸೇವೆ […]

ಮಂಗಳೂರು ಏರ್​ಪೋರ್ಟ್​ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

Tuesday, December 11th, 2018
ಮಂಗಳೂರು ಏರ್​ಪೋರ್ಟ್​ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

ಮಂಗಳೂರು: ಕೇಂದ್ರ ಸರ್ಕಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು‌ ಖಾಸಗೀಕರಣ ಮಾಡಲು ಹೊರಟಿರುವುದನ್ನು ವಿರೋಧಿಸಿ ವಿಮಾನ ನಿಲ್ದಾಣದ ಕಾರ್ಮಿಕರ ಒಕ್ಕೂಟದಿಂದ ಇಂದಿನಿಂದ ಮೂರು ದಿನಗಳ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ಕಾರ್ಮಿಕಾಧಿಕಾರಿಗಳ ಒಕ್ಕೂಟಗಳ ಶಾಖಾ ಕಾರ್ಯದರ್ಶಿ ಶ್ರವಣ್ ಕುಮಾರ್ ಧರಣಿಯನ್ನು ಉದ್ಘಾಟಿಸಿದರು. ಈ ಸಂದರ್ಭ ಭೇಟಿ ನೀಡಿದ್ದ ಕಾಸರಗೋಡಿನ ಸಂಸದ ಪಿ.ಕರುಣಾಕರನ್ ಮಾತನಾಡಿ, ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವೆ ಎಂದು ಹೇಳಿದ್ರು. ವಿಮಾನ ನಿಲ್ದಾಣ ಕಾರ್ಮಿಕಾಧಿಕಾರಿಗಳ ಒಕ್ಕೂಟಗಳ ಶಾಖಾ ಅಧ್ಯಕ್ಷ […]

27 ಲಕ್ಷ ನಗದು ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

Monday, December 10th, 2018
bajpe

ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಬೇಧಿಸಿರುವ ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ರೂ.16,57,000/- ನಗದು ಹಣ,ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ ಇಳಂತಿಲ ನಿವಾಸಿ ಮಹಮ್ಮದ್ ಶಾಫಿ(26) ಹಾಗೂ ಬೆಳ್ತಂಗಡಿ ನೆಜಿಕಾರ್ ನಿವಾಸಿ ಮಹಮ್ಮದ್ ರಿಯಾಜ್(19) ಬಂಧಿತ ಆರೋಪಿಗಳು. ದಿನಾಂಕ:20-10-2018 ರಂದು ರಾತ್ರಿ 7-30 ಗಂಟೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಶ್ರೀರಾಮ […]

ಸರ್ಕಾರಿ ‌ಲೇಡಿಗೋಷನ್ ಆಸ್ಪತ್ರೆಯ ಮಕ್ಕಳ ಎನ್​ಐಸಿಯು ವಿಭಾಗದಲ್ಲಿ ಬೆಂಕಿ

Monday, December 10th, 2018
lady-goshan

ಮಂಗಳೂರು: ನಗರದ ಸರ್ಕಾರಿ ‌ಲೇಡಿಗೋಷನ್ ಆಸ್ಪತ್ರೆಯ ಮಕ್ಕಳ ಎನ್ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾರ್ಡ್ನಲ್ಲಿದ್ದ 4 ಮಕ್ಕಳನ್ನು ರಕ್ಷಿಸಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ಐಸಿಯುನಲ್ಲಿ ನಾಲ್ಕು ಕಂದಮ್ಮಗಳು ಚಿಕಿತ್ಸೆ ಪಡೆಯುತ್ತಿದ್ದು, ಮಕ್ಕಳ ತುರ್ತು ನಿಗಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಮಕ್ಕಳನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಕೇಂದ್ರ ನಯಾಪೈಸೆ ಕೊಟ್ಟಿಲ್ಲ: ಯು ಟಿ ಖಾದರ್

Monday, December 10th, 2018
u-t-khader

ಮಂಗಳೂರು: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಉಂಟಾಗಿ ಸಾವಿರಾರು ಕೋಟಿ ರೂಪಾಯಿ ನಷ್ಟವಾದರೂ ಕೇಂದ್ರ ಸರ್ಕಾರ ಈವರೆಗೆ ನಯಾಪೈಸೆ ಕೊಟ್ಟಿಲ್ಲವೆಂದು ಸಚಿವ ಯು ಟಿ‌ ಖಾದರ್ ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್‌ಡಿಆರ್ಎಫ್ ನಿಂದ ರಾಜ್ಯದ 8 ಜಿಲ್ಲೆಗಳಿಗೆ 546 ಕೋಟಿ ರೂಪಾಯಿ ನೀಡಲಾಗಿದೆ. ಸರಾಸರಿ ಲೆಕ್ಕ ಹಾಕಿದರೆ ಒಂದು ಜಿಲ್ಲೆಗೆ 60 ಕೋಟಿ ಸಿಗುತ್ತದೆ. 60 ಕೋಟಿಯಲ್ಲಿ ಸಂಪಾಜೆ ರಸ್ತೆ ಸರಿಮಾಡಲಾದರೂ ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ. ಕೊಡಗು ಜನತೆ ಮನೆ ಮಠ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ […]

ಯುವಕನ ಅಪಹರಣ: ಮಾರಣಾಂತಿಕ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ!

Friday, December 7th, 2018
attacked

ಮಂಗಳೂರು: ಯುವಕನೋರ್ವನನ್ನು ಐವರು ದುಷ್ಕರ್ಮಿಗಳ ಗುಂಪೊಂದು ಅಪಹರಿಸಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತದನಂತರ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ನಗರದ ಫಳ್ನೀರ್ ನಿವಾಸಿ ಶಿಮಾಕ್ ಹಸನ್(22) ಮಾರಣಾಂತಿಕ ಹಲ್ಲೆಗೊಳ ವ್ಯಕ್ತಿ. ಗೌತಮ್, ಲಾಯ್‌ವೆಗರ್, ಅಂಕಿತ್, ಆದಿತ್ಯ ವಾಲ್ಕೆ ಹಲ್ಲೆನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಶಿಮಾಕ್ ನಗರದ ಕಾಲೇಜ್ನಲ್ಲಿ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದು, ನಿನ್ನೆ ಸಂಜೆ 5 ಗಂಟೆಗೆ ನಗರದ ಅತ್ತಾವರ ಸ್ನಾಕೀಸ್ ಎಂಬ ಮಳಿಗೆಯೊಂದರಲ್ಲಿ ಶಿಮಾಕ್ ಹಾಗೂ ಅವರ ಸ್ನೇಹಿತರಾದ ನೌಶಾದ್, ಸೌರವ್ […]

ಡಿಸೆಂಬರ್ 10 ರಂದು ಪಟ್ಲ ಯಕ್ಷಾಶ್ರಯದ 3ನೇ ಮನೆಯ ಗೃಹಪ್ರವೇಶ

Thursday, December 6th, 2018
sathish-patla

ಮಂಗಳೂರು: ಕುಂಜತ್ತಬೈಲ್ ಎಂಬಲ್ಲಿ ಯಕ್ಷಗಾನ ಕಲಾವಿದರಾದ ಪುರಂದರ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿ ಮನೆಯನ್ನು ನಿರ್ಮಿಸಿಕೊಡಲಾಗುತ್ತಿದ್ದು, ಗೃಹಪ್ರವೇಶದ ಬಗ್ಗೆ ಕುಂಜತ್ತಬೈಲ್ ಅಯ್ಯಪ್ಪ ಮಂದಿರದ ಆವರಣದಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಸಭೆ ಸೇರಿ ಸಿದ್ಧತೆಗಳ ಬಗ್ಗೆ ನಿರ್ಧರಿಸಲಾಯಿತು. ಡಿಸೆಂಬರ್ 10ರಂದು ಸೋಮವಾರ ಬೆಳಿಗ್ಗೆ ಶ್ರೀ ದೇವಿ ನಿಲಯ, ಪಟ್ಲ ಯಕ್ಷಾಶ್ರಯ – 3 ಇದರ ಗೃಹಪ್ರವೇಶ ನೆರವೇರಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪ್ರಕಟನೆ ತಿಳಿಸಿದೆ. ಇದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ನಿರ್ಮಿಸಿಕೊಡುತ್ತಿರುವ ಮೂರನೇ ಮನೆಯಾಗಿದೆ. ಸಮಾರಂಭದಲ್ಲಿ ಪಟ್ಲ ಫೌಂಡೇಶನ್ […]

ಮಾಜಿ ಸಚಿವ ವಿ.ಧನಂಜಯ್​ ಕುಮಾರ್ ಆರೋಗ್ಯ ಸ್ಥಿತಿ‌ ಗಂಭೀರ

Thursday, December 6th, 2018
ex-minister

ಮಂಗಳೂರು: ಕೇಂದ್ರದ ಮಾಜಿ ಸಚಿವರಾಗಿದ್ದ ವಿ.ಧನಂಜಯ ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಿ. ಧನಂಜಯ ಕುಮಾರ್ ಅವರನ್ನು ಕೆಲ ತಿಂಗಳುಗಳಿಂದ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಆರೋಗ್ಯ ತೀರಾ ಹದಗೆಟ್ಟಿದ್ದು, ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ. ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದ್ದು, ಧನಂಜಯ ಕುಮಾರ್ ಈಗ ಗುರುತು ಹಿಡಿಯಲಾರದಷ್ಟು ಕೃಶರಾಗಿದ್ದಾರೆ. ಅಟಲ್ […]

ಬಾಬರಿ ಮಸೀದಿ ಧ್ವಂಸ ದಿನ: ಮಂಗಳೂರಿನಲ್ಲಿಂದು ನಿರ್ಬಂಧಕಾಜ್ಞೆ

Thursday, December 6th, 2018
mangaluru

ಮಂಗಳೂರು: ಬಾಬರಿ ಮಸೀದಿ ಧ್ವಂಸ ದಿನ‌ದ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಿ ಪೊಲೀಸ್ ಆಯಕ್ತರ ಆದೇಶ ಹೊರಡಿಸಿದ್ದಾರೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆ ಕರಾಳ ದಿನ ಆಚರಿಸುವ ಹಾಗೂ ಕೆಲ ಸಂಘಟನೆ ವಿಜಯೋತ್ಸವ ಆಚರಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯಕ್ತ ಟಿ‌.ಆರ್.ಸುರೇಶ್ ನಿರ್ಬಂಧಕಾಜ್ಞೆ ಆದೇಶ ಹೊರಡಿಸಿದ್ದಾರೆ. ಈ‌ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಗೆ ಅನ್ವಯಿಸುವಂತೆ ಇಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ರತನಕ‌ ಯಾವುದೇ ಮೆರವಣಿಗೆ, […]