Blog Archive

ಮಂಗಳೂರಿಗೆ ಆಗಮಿಸಿದ ಇನ್ನೆರಡು ವಿದೇಶಿ ಪ್ರವಾಸಿ ಹಡಗು

Tuesday, December 4th, 2012
foreign vessels NMPT

ಮಂಗಳೂರು :ಸೋಮವಾರ ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ವಿದೇಶಿ ಪ್ರಯಾಣಿಕ ಹಡಗುಗಳು ಆಗಮಿಸಿವೆ. ಬ್ರಿಟನ್‌ ಮತ್ತು ಅಮೆರಿಕದ ಒಟ್ಟು 1,080ಕ್ಕೂ ಅಧಿಕ ಪ್ರವಾಸಿಗರು ಹಾಗೂ 793 ಸಿಬಂದಿಯನ್ನು ಒಳಗೊಂಡ ಎಂವಿ ಸೀಬೋರ್ನ್ ಒಡಿಸ್ಸಿ ಹಾಗೂ ಎಂ.ವಿ. ಸವೆನ್‌ಸಿಸ್‌ ವೋಗಯರ್ ಹಡಗುಗಳು ಆಗಮಿಸಿದವು. ಕೆಲವು ದಿನಗಳ ಹಿಂದೆ ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ವಿದೇಶಿ ಪ್ರಯಾಣಿಕ ಹಡಗುಗಳು ಬಂದ ಬೆನ್ನಲ್ಲೇ ಈ ಐಷಾರಾಮಿ ಹಡಗುಗಳು ನಿನ್ನೆ ಆಗಮಿಸಿವೆ. 650 ಪ್ರಯಾಣಿಕರು ಮತ್ತು 454 ಸಿಬ್ಬಂದಿ ಹೊತ್ತ ಎಂವಿ ಸೆವೆನ್‌ಸೀಸ್ […]

ಬಸ್‌ ನಿಲ್ದಾಣದಲ್ಲಿ ಬಸ್ ಅಡಿ ಸಿಲುಕಿ ಕಂಡಕ್ಟರ್‌ ಸಾವು

Saturday, December 1st, 2012
Bus conductor

ಮಂಗಳೂರು :ಶುಕ್ರವಾರ ಬಿಜೈ ನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಬಸ್ ನಡಿ ಸಿಲುಕಿ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ವಿರೂಪಾಕ್ಷ ಸಜ್ಜನ್ ಬೆಟಗೇರಿ ಕಳೆದ 12 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರು ಪ್ರಸ್ತುತ ಕೊಪ್ಪಳ ಜಿಲ್ಲೆಗೆ ಸೇರಿದ ಬಸ್ ನಲ್ಲಿ ಮಂಗಳೂರು -ಗಂಗಾವತಿ ನಡುವೆ ಸಂಚರಿಸುತ್ತಿದ್ದ ಬಸ್ ನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಬಸ್ ಶುಕ್ರವಾರ ಮಂಗಳೂರಿಗೆ ಬಂದಿದ್ದು, ಸಂಜೆ ಹೊತ್ತಿಗೆ ಹೊರಡುವುದಿತ್ತು. ಬಸ್ […]

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಯವರಿಂದ ಮಂಗಳೂರಿನ ನೂತನ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

Thursday, November 15th, 2012
ಇಂಧನ ಸಚಿವೆ ಶೋಭಾ ಕರಂದ್ಲಾಜೆ ಯವರಿಂದ ಮಂಗಳೂರಿನ ನೂತನ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು :ಇಂಧನ ಸಚಿವೆ ಶೋಭಾ ಕರಂದ್ಲಾಜೆ ಇಂದು ನಗರದ ಕಾಪಿಕಾಡ್ ಬಳಿ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಹಾಗೂ ಉತ್ಪಾದನೆಯಾದ ವಿದ್ಯುತ್ ನ್ನು ಗ್ರಾಹಕರಿಗೆ ಸಮರ್ಪಕವಾಗಿ ತಲುಪಿಸುವ ಕುರಿತು ಅನೇಕ ಸಮಸ್ಯೆಗಳಿದ್ದು ವಿದ್ಯುತ್ ಸಚಿವೆಯಾಗಿ ನೇಮಕಗೊಂಡ ಸಂದರ್ಭದಲ್ಲಿ ಇವೆರಡು ಸವಾಲಿನ ವಿಷಯವಾಗಿ ಪರಿಣಮಿಸಿತ್ತು ಆದರೆ ಅಧಿಕಾರಿಗಳ ಸಹಕಾರದಿಂದ ನಂತರ ಈ ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ಪರಿಹರಿಸಲಾಯಿತು ಎಂದರು. ಪ್ರಾರಂಭದಲ್ಲಿ ಸರಕಾರ ರಾಜ್ಯಕ್ಕೆ 5000 […]

ಮಂಗಳೂರು : ನಕಲಿ “ಹಿಜಡಾ”ಗಳ ಕಾಟ

Tuesday, November 13th, 2012
Mangalore Hijras

ಮಂಗಳೂರು :ನಾವು ನಿಮ್ಮವರೇ… ನಮ್ಮನ್ನು ನಿಮ್ಮಂತೆ ಕಾಣಿ… ನಮ್ಮ ಬಗ್ಗೆ ಮುಜಗರ… ಆತಂಕ ಬೇಡ. ಸಮಾಜದಲ್ಲಿ ನಮಗೂ ಗೌರವದ ಉದ್ಯೋಗ ಕೊಡಿ… ಭಿಕ್ಷೆ ಬೇಡುವುದನ್ನು ತತ್ಕ್ಷಣದಿಂದ ನಿಲ್ಲಿಸುವೆವು… ಹೀಗೆ ಕೆಲವು ಮಂಗಳಮುಖಿಯರು ಮಾಧ್ಯಮದ ಮೊರೆ ಹೊಕ್ಕಿದ್ದಾರೆ. ಅಂದಹಾಗೆ, ಈ ಮಂಗಳಮುಖಿಯರನ್ನು ತೃತೀಯ ಲಿಂಗಿಗಳು, ಹಿಜಡಾಗಳು, ಚಕ್ಕಾಗಳು, ಹುಸ್ರಾಗಳು, ಕೊಟ್ಟಗಳು ಎಂದೆಲ್ಲಾ ಹೇಳುತ್ತಾರೆ. ನೋಡಲು ಇವರು ಗಂಡಸರ ಹಾಗೆ ಕಾಣುತ್ತಾರೆ. ಆದರೆ ವರ್ತನೆ ಮಾತ್ರ ಹೆಂಗಸರದ್ದು. ಹಾಗಾಗಿ ಇವರಲ್ಲಿ ಹೆಚ್ಚಿನವರು ಹೆಂಗಸಿನ ವೇಷ ಧರಿಸುತ್ತಾರೆ. ಅವರ ಹಾಗೆ ಮಾತನಾಡುತ್ತಾರೆ. […]

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಹುಲಿ ಶಾಂಭವಿ

Friday, November 9th, 2012
Pilkula tiger Shaambhavi

ಮಂಗಳೂರು :ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದ ವನ್ಯಜೀವಿ ಸಂಕುಲಕ್ಕೆ ಐದು ಹೊಸ ಸದಸ್ಯರ ಸೇರ್ಪಡೆಯಾಗಿದೆ. 4 ವರ್ಷ ಪ್ರಾಯದ ಹುಲಿ ಶಾಂಭವಿ ಬುಧವಾರ ಅವಳಿ ಮರಿಗಳಿಗೆ ಜನ್ಮನೀಡಿದೆ. ಹೊಸ ಅತಿಥಿಗಳ ಆಗಮನದಿಂದ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 9ಕ್ಕೆ ಏರಿದೆ. ಉದ್ಯಾನದ ಸಿಬ್ಬಂದಿ ವಿಶೇಷ ಕಾಳಜಿಯಿಂದ ಶಾಂಭವಿಯ ಆರೈಕೆ ಮಾಡುತ್ತಿದ್ದು, ಪ್ರಸ್ತುತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಜ, ವಿಕ್ರಮ, ನೇತ್ರಾವತಿ, ಶರಾವತಿ, ಕೃಷ್ಣ, ಕದಂಬ ಸೇರಿದಂತೆ 7 ಹುಲಿಗಳಿವೆ. ಈ ಉದ್ಯಾನವನದಲ್ಲಿಯೇ ಗೌರಿ ಎಂಬ ಹೆಸರಿನ ಚಿರತೆಯೊಂದು ಒಂದು […]

ಭೂಗತ ಪಾತಕಿ ರವಿಪೂಜಾರಿಯ ಇಬ್ಬರು ಸಹಚರರ ಬಂಧನ

Friday, November 9th, 2012
Ravi Poojari aides

ಮಂಗಳೂರು :ಮಂಗಳೂರು ನಗರ ಪೊಲೀಸ್ ಅಯುಕ್ತ ಮನೀಷ್ ಕರ್ಬಿಕರ್ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭೂಗತ ಪಾತಕಿಗಳಾದ ರವಿಪೂಜಾರಿ ಮತ್ತು ಕಲಿಯೋಗೀಶ ರವರುಗಳ ಇಬ್ಬರು ಸಹಚರರನ್ನು ಹಫ್ತಾ ಹಣದೊಂದಿಗೆ ಬಂಧಿಸಿರುವುದಾಗಿ ತಿಳಿಸಿದರು. ಬಂಧಿತರನ್ನು ಸುರತ್ಕಲ್ ಸಮೀಪದ ತಾರಾನಾಥ ಮತ್ತು ಸುಬ್ರಮಣ್ಯ ಅಲಿಯಾಸ್ ಸುಬ್ಬು ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳಿಂದ ಒಂದು ಲಕ್ಷ ರೂಪಾಯಿ ನಗದು ಹಣ ಮತ್ತು 8 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರವಿಪೂಜಾರಿ ಮತ್ತು ಕಲಿಯೋಗೀಶ ರವರುಗಳು ಶ್ರೀಮಂತ ಉಧ್ಯಮಿಗಳಿಂದ ಹಫ್ತಾ ಹಣಕ್ಕಾಗಿ ಬೇಡಿಕೆ ಒಡ್ಡುತ್ತಿದ್ದು, ಅದನ್ನು […]

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಗುಂಪು ಘರ್ಷಣೆ

Saturday, October 27th, 2012
Mangalore sub jail

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಕೈದಿಗಳ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿದ್ದು, ಜೈಲ್ ವಾರ್ಡನ್ ಪುಟ್ಟಣ್ಣ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ಕೈದಿಗಳಿಗೆ ಊಟಕ್ಕೆ ಹೊರಗಡೆ ಬಿಟ್ಟ ಸಂದರ್ಭ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಕೈದಿಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಬೇಕೆಂಬ ಕೋರಿಕೆಯ ಮೇರೆಗೆ ಪೊಲೀಸರ ಸಮ್ಮತಿಯೊಂದಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಿದ್ದರು, ನಮಾಜು ಮುಗಿಸಿ ಕೈದಿಗಳು ತಮ್ಮಸೆಲ್ ಗಳಿಗೆ ವಾಪಾಸಾಗುತ್ತಿದ್ದಾಗ ಇನ್ನೊಂದು ಗುಂಪಿನ […]

ಮುಂಬಯಿ- ಮಂಗಳೂರು ಖಾಸಗಿ ಬಸ್ಸಿನಲ್ಲಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕನ ಲೂಟಿ

Friday, August 5th, 2011
Bus-Passenger-Luted/ಬಸ್ಸಿನಲ್ಲಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕನ ಲೂಟಿ

ಮಂಗಳೂರು : ಮುಂಬಯಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದ್ದ ಕಾಸರಗೋಡಿನ ಕುಂಬಳೆಯ ವಿಶ್ವನಾಥ ಶೆಟ್ಟಿ (36) ಯವರನ್ನು ಬುಧವಾರ ರಾತ್ರಿ ಮತ್ತು ಬರುವ ಪದಾರ್ಥ ನೀಡಿ. ಪ್ರಜ್ಞೆ ತಪ್ಪಿಸಿ ನಗದು ಹಾಗೂ ಚಿನ್ನಾಭರಣಗಳನ್ನು ಲೂಟಿಗೈಯಲಾಗಿದೆ. ಮಂಗಳೂರಿಗೆ ತಲುಪುವಾಗ ಅರೆ ಪ್ರಜ್ಞಾವಸ್ಥೆಯಲ್ಲಿ ಉಟ್ಟ ಬಟ್ಟೆ ಮತ್ತು ಮೊಬೈಲ್‌ ಫೋನ್‌ ಹೊರತು ಪಡಿಸಿ ಉಳಿದೆಲ್ಲವನ್ನೂ ಕಳೆದುಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಮುಂಬಯಿನ ಮಲಾಡ್‌ನಿಂದ ಖಾಸಗಿ ಸಂಸ್ಥೆಯ ವೋಲ್ವೊ ಬಸ್ಸನ್ನೇರಿದ ವಿಶ್ವನಾಥ ಶೆಟ್ಟಿ ಅವರು ಗುರುವಾರ ಪೂರ್ವಾಹ್ನ 10.30 ಕ್ಕೆ ಮಂಗಳೂರಿಗೆ ತಲುಪಿದಾಗ […]

ಹೆಚ್.ಐ.ವಿ ಬಗ್ಗೆ ಭಯ ಬೇಡ, ತಿಳುವಳಿಕೆ ಬೇಕು : ಡಾ. ಓ. ಆರ್. ಶ್ರೀರಂಗಪ್ಪ

Wednesday, December 1st, 2010
ಡಾ. ಓ. ಆರ್. ಶ್ರೀರಂಗಪ್ಪ

ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ದ.ಕ ಇದರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ರೆಡ್ ರಿಬ್ಬನ್ ಕ್ಲಬ್ಗಳು ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ಸ್, ರೋಶನಿ ನಿಲಯ, ಮಂಗಳೂರು ವತಿಯಿಂದ ಇಂದು ನಗರದ ರೋಶನಿ ನಿಲಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ. ಡಾ. ಓ. ಆರ್. ಶ್ರೀರಂಗಪ್ಪ, ಜಿಲ್ಲಾ […]