Blog Archive

ಮಂಗಳೂರು ದಸರಾ: ನಗರದ ಅಂದ ಹೆಚ್ಚಿಸಿದ ವರ್ಣಮಯ ದೀಪಾಲಂಕಾರ

Thursday, October 6th, 2016
mangaluru-dasara

ಮಂಗಳೂರು: ಜನರ ದಸರಾ ಎಂದೇ ಪ್ರಸಿದ್ಧಿಯಾದ ಮಂಗಳೂರು ದಸರಾ ಸಂಭ್ರಮದಲ್ಲಿ ಕರಾವಳಿ ನಗರಿ ಮಿನುಗುತ್ತಿದೆ. ನಗರದ 8 ಕಿ.ಮೀ. ಪ್ರದೇಶದಲ್ಲಿ ನವರಾತ್ರಿಯ ರಾತ್ರಿಗಳಂತೂ ನಕ್ಷತ್ರಗಳ ಲೋಕ. ಆಕಾಶದಲ್ಲಿ ಮಿನುಗುತ್ತಿರುವ ತಾರೆಗಳೇ ಧರೆಯನ್ನೇ ಸ್ಪರ್ಶಿಸಿವೆಯೇನೋ ಎಂಬಂತೆ 20 ಲಕ್ಷ ವಿದ್ಯುತ್‌ ಬಲ್ಬ್‌‌ಗಳು ಇಡೀ ನಗರದ ಅಂದವನ್ನು ಇಮ್ಮಡಿಗೊಳಿಸಿವೆ. ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಮಂಗಳೂರು ದಸರಾದ ಕೇಂದ್ರ ಬಿಂದು ಎಂದೇ ಖ್ಯಾತಿ ಗಳಿಸಿದೆ. ಪ್ರಾರಂಭದಲ್ಲಿ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಆರಂಭಗೊಂಡ ಈ ದಸರಾ ವರ್ಷದಿಂದ ವರ್ಷಕ್ಕೆ ಜನಾಕರ್ಷಣೆ ಪಡೆಯುತ್ತಲೇ […]

ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ

Monday, October 3rd, 2016
Mangaluru dasara

ಮಂಗಳೂರು: ಅದ್ಧೂರಿ ಮಂಗಳೂರು ದಸರಾಕ್ಕೆ ಇಂದು ಪೊಲೀಸ್ ಕಮಿಷನರ್ ಚಂದ್ರಶೇಖರ್ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದುಷ್ಟ ಸಂಹಾರದ ವಿಜಯೋತ್ಸವವನ್ನು ಆಚರಿಸುವ ದಸರಾ ಹಬ್ಬ ಸಮಾಜಕ್ಕೆ ಸಂದೇಶವನ್ನು ಸಾರಿದೆ. ಜನರು ದುಷ್ಚಟಗಳಿಗೆ ಬಲಿಯಾಗದೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕೆಂದು ಸಂದೇಶ ನೀಡಿದರು. ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸುವ ಮೂಲಕ ಇಂದಿನಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ನಗರ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿದೆ.

ಮಂಗಳೂರು ದಸರಾ – 2013 ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

Friday, October 11th, 2013
virendra-hegde

ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ಇದರ ವತಿಯಿಂದ ನಡೆಯುವ ವಿಶ್ವ ವಿಖ್ಯಾತ ವರ್ಣರಂಜಿತ, ಮಂಗಳೂರು ದಸರಾ – 2013 ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಗುರುವಾರ ಪದ್ಮಭೂಷಣ, ರಾಜರ್ಷಿ, ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ಮಂಗಳೂರು ನಗರಕ್ಕೆ ಬಹಳ ಮಹತ್ತರವಾದ ಕೊಡುಗರಯನ್ನು ನೀಡಿದೆ. ಹಾಗಾಗಿ ನಗರಕ್ಕೆ ಯಾರೇ ಬಂದರೂ ಒಮ್ಮೆ ಅವರು ಈ ದೇವಾಲಯ ನೋಡಲೇ ಬೇಕು. ಹಿಂದಿನ […]

ಮಂಗಳೂರು ದಸರಾ 2013 ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ 101ನೇ ವಾರ್ಷಿಕ ಉತ್ಸವ

Saturday, October 5th, 2013
Mangalore-Dasara

ಮಂಗಳೂರು : ಮಂಗಳೂರು ದಸರಾ 2013 ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ 101ನೇ ವಾರ್ಷಿಕ ಉತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆಯನ್ನು ಶನಿವಾರ  ಭಕ್ತ ಸಮೂಹದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಶಾರದ ಮಾತೆಯನ್ನು ವಾದ್ಯ, ಚಂಡೆ, ವಾದಗದೊಂದಿಗೆ ಹುಲಿವೇಷದ ನೃತ್ಯದ ಜೊತೆ ಜೊತೆಯಲ್ಲಿ ಮೆರವಣಿಗೆಯಲ್ಲಿ ದೇವಳಕ್ಕೆ ಸುತ್ತ ಪ್ರದಕ್ಷಿಣಿ ಹಾಕಲಾಯಿತು. ಬಳಿಕ ಸಕಲ ವಿಧಿವಿಧಾನಗಳನ್ನು ಅನುಸರಿಸಿ ಮಾತೆ ಶಾರದ ದೇವಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ನಗರದ ಖ್ಯಾತ ಉದ್ಯಮಿ […]

ಮಂಗಳೂರು ದಸರಾ ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಂದ 101ನೇ ದಸರಾ ಮಹೋತ್ಸವ ಉದ್ಘಾಟನೆ

Tuesday, September 24th, 2013
kudroli

ಮಂಗಳೂರು : ಕುದ್ರೋಳಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ನಗರದ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಅಕ್ಟೋಬರ್ 5 ರಿಂದ 14 ರವರೆಗೆ ಮಂಗಳೂರು ದಸರಾ -2013 ನ್ನು ಆಚರಿಸಲಾಗುವುದು ಎಂದು  ತಿಳಿಸಿದರು. ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್.ಎಸ್. ಸಾಯಿರಾಮ್, ಅಕ್ಟೋಬರ್ 5ರಂದು ಬೆಳಿಗ್ಗೆ 11.30 ಕ್ಕೆ ಕ್ಷೇತ್ರದ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದ ಸ್ವರ್ಣ ಕಲಾಮಂಟಪದಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರು ಸೇರಿದಂತೆ ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಈ ಬಾರಿಯ ದಸರಾ […]

ವರ್ಣವಯ ಶೋಭಾಯಾತ್ರೆ ಯೊಂದಿಗೆ ‘ಮಂಗಳೂರು ದಸರಾ’ ಸಮಾಪನ

Friday, October 7th, 2011
Mangalore-dasara

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಗುರುವಾರ ಸಂಜೆ ಶಾರದೆ, ಆದಿಶಕ್ತಿ, ಮಹಾಗಣಪತಿ ಸಹಿತ ನವದುರ್ಗೆಯರ ಅತ್ಯಾಕರ್ಷಕ ಶೋಭಾಯಾತ್ರೆಯೊಂದಿಗೆ ಆರಭಂಗೊಂಡಿತು. ಶೋಭಾಯಾತ್ರೆ ನೇತೃತ್ವವನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ವಹಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ಸಂದೇಶ ಸಾರುವ ಟ್ಯಾಬ್ಲೋ ಸಹಿತ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯ ನೂರಾರು ಟ್ಯಾಬ್ಲೋಗಳು, ಪುಣ್ಯಕ್ಷೇತ್ರಗಳ ಸಹಕಾರದ ವರ್ಣಮಯ ಟ್ಯಾಬ್ಲೋಗಳು, ತ್ರಿಶೂರ್‌ನ ವರ್ಣರಂಜಿತ ಕೊಡೆಗಳು, ಕರಾವಳಿಯ ಹುಲಿವೇಷ, ಕೇರಳದ ಚೆಂಡೆವಾದ್ಯ, ಮಹಾರಾಷ್ಟ್ರದ ಡೋಲು ನೃತ್ಯ, […]

ಮಂಗಳೂರು ದಸರಾಕ್ಕೆ ಸಚಿವ ವಯಲಾರ್‌ ರವಿ ಅವರಿಂದ ವಿದ್ಯುಕ್ತ ಚಾಲನೆ

Monday, October 3rd, 2011
Vayalar Ravi

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಖ್ಯಾತ ಮಂಗಳೂರು ದಸರಾಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಹಾಗೂ ಸಾಗರೋತ್ತರ ಭಾರತೀಯರ ವ್ಯವಹಾರಗಳ ಸಚಿವ ವಯಲಾರ್‌ ರವಿ ಅವರು ರವಿವಾರ ಚಾಲನೆ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿ ಸಾರಿರುವ ಸಂದೇಶ ವಿಶ್ವಮಾನ್ಯವಾಗಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬುದಾಗಿ ಏಕತೆಯ ಸಂದೇಶ ನಮ್ಮೆಲ್ಲರ ಶಕ್ತಿ. ನಾನು ಬಾಲ್ಯದಿಂದಲೂಅವರ ಸಂದೇಶ ನನ್ನ ಚಿಂತನೆಗಳನ್ನು ಕೇಳುತ್ತಿದ್ದೆ. ಚಿಕ್ಕಂದಿನಲ್ಲಿ ವರ್ಕಳ ಶಿವಗಿರಿ ಮಠಕ್ಕೆ ಹೋಗುತ್ತಿದ್ದ ಪ್ರವಚನಗಳು ಇಂದಿಗೂ ನನ್ನ ಮೇಲೆ […]

ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದ ‘ಮಂಗಳೂರು ದಸರಾ’ಕ್ಕೆ ಚಾಲನೆ

Thursday, September 29th, 2011
Kudroli Temple

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ವರ್ಷಂಪ್ರತಿ ಜರಗುವ ವೈಭವದ ‘ಮಂಗಳೂರು ದಸರಾ’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಶಾರದೆ ಹಾಗೂ ನವದುರ್ಗೆಯರ ವಿಗ್ರಹ ಪ್ರತಿಷ್ಠೆ ನಡೆಯಿತು.ಉದ್ಯಮಿ ರಮೇಶ್‌ ಕುಮಾರ್‌ ಹಾಗೂ ಊರ್ಮಿಳಾ ರಮೇಶ್‌ ಕುಮಾರ್‌ ದಂಪತಿ ಪ್ರತಿಷ್ಠಾಪನಾ ದೀಪವನ್ನು ಬೆಳಗಿದರು. ಶಾರದೆಯ ವಿಗ್ರಹವನ್ನು ಕ್ಷೇತ್ರಕ್ಕೆ ಪ್ರದಕ್ಷಿಣೆ ಮಾಡಿ ನಂತರ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 11.35ಕ್ಕೆ ನವದುರ್ಗೆಯರು ಹಾಗೂ ಶಾರದೆಯ ವಿಗ್ರಹವನ್ನು ಸಾಂಪ್ರದಾಯಿಕ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸುವ ಮೂಲಕ ಮುಂದಿನ […]