ಮಂಗಳೂರು ಪುರಭವನದ ಬಳಿ ಹೊತ್ತಿ ಉರಿದ ಇಂಡಿಕಾ ಕಾರು

Wednesday, January 12th, 2022
Car Fire

ಮಂಗಳೂರು : ಕಾರು ಚಾಲಕರೊಬ್ಬರು ಮಂಗಳೂರು ಪುರಭವನದ ಬಳಿ ನಿಲ್ಲಿಸಿದ್ದ ಕಾರು ಧಗಧಗನೆ ಉರಿದು ಕಾರಿನ ಇಂಜಿನ ಸಮೇತ ಮುಂಭಾಗ ಬೆಂಕಿಗೆ ಆಹುತಿಯಾಯಿತು. ಬುಧವಾರ ಸಂಜೆ ಕೊಣಾಜೆ ದಾಸರ ಮೂಳೆಯ ಕೃಷ್ಣಪ್ಪ ದಾಸ್ ಎಂಬವರು ಕಾರು ನಿಲ್ಲಿಸಿ ಆಸ್ಪತ್ರೆಗೆ ಹೋಗಿದ್ದರು. ಅಷ್ಟರಲ್ಲೇ ಅವರ ಇಂಡಿಕಾ ಐಸಿಎಸ್ ಬೆಂಕಿಗೆ ಆಹುತಿಯಾಗಿದೆ. ಈ ಸಂದರ್ಭ ಕಾರಿನಲ್ಲಿ ಯಾರು ಇರದೇ ಇದ್ದುದರಿಂದ ಯಾವುದೇ ಅಪಾಯ ಉಂಟಾಗಿಲ್ಲ. ಕಾರಿನ ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ. ಪಾಂಡೇಶ್ವರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ […]

ಎಂಪಿಎಂಎಲ್ಎ ನ್ಯೂಸ್ 11ನೇ ಸೌಹಾರ್ದ ಸಂಗಮ, ಮಂಗಳೂರು ಪುರಭವನ ಜನವರಿ 7, 2020

Tuesday, January 7th, 2020
ಎಂಪಿಎಂಎಲ್ಎ ನ್ಯೂಸ್ 11ನೇ ಸೌಹಾರ್ದ ಸಂಗಮ, ಮಂಗಳೂರು ಪುರಭವನ ಜನವರಿ 7, 2020

ಇಂದಿನಿಂದ 3 ದಿನಗಳ ಗಡಿನಾಡು ಸಂಸ್ಕೃತಿ ಉತ್ಸವ

Tuesday, November 5th, 2019
KSSAP

ಮಂಗಳೂರು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ನವೆಂಬರ್ 5 ಮಂಗಳವಾರದಿಂದ ನವೆಂಬರ್ 7ರ ತನಕ ಮೂರು ದಿನಗಳ ಗಡಿನಾಡು ಸಂಸ್ಕೃತಿ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಗಡಿನಾಡು ಸಂಸ್ಕೃತಿ ಉತ್ಸವ ಉದ್ಘಾಟನೆಯನ್ನು ನವೆಂಬರ್ 5ರಂದು ಸಂಜೆ 4 ಗಂಟೆಗೆ ದಕ್ಷಿಣ ಕನ್ನಡ ಮುಖ್ಯಕಾರ್ಯನಿರ್ವಹಣಾಧಕಾರಿ ಡಾ. ಆರ್. ಸೆಲ್ವಮಣಿ ನೆರವೇರಿಸಲಿದ್ದಾರೆ. ಗಡಿನಾಡು ಸಂಸ್ಕೃತಿ ಉತ್ಸವ ಅಂಗವಾಗಿ ಮೂರು ದಿನಗಳ ಕಾಲ ಪ್ರತಿದಿನ […]

ಮಂಗಳೂರು ಪುರಭವನ ನವೀಕರಣಕ್ಕೆ ಚಾಲನೆ

Tuesday, September 16th, 2014
ಮಂಗಳೂರು ಪುರಭವನ ನವೀಕರಣಕ್ಕೆ ಚಾಲನೆ

ಮಂಗಳೂರು : ಮಂಗಳೂರು ಪುರಭವನಕ್ಕೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪುರಭವನದ ಆಧುನೀಕರಣ ಮತ್ತು ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು. ಅವರು ಮಂಗಳವಾರ(ಸೆ.16) ಪುರಭವನದಲ್ಲಿ ಮಾತನಾಡಿ, ಪುರಭವನಕ್ಕೆ ಸಂಪೂರ್ಣ ಎ.ಸಿ.ಅಳವಡಿಕೆ,ನೆಲಹಾಸು,ಹೊರಭಾಗದಲ್ಲಿ ಗ್ರಾನೈಟ್ ಅಳವಡಿಕೆ,ಆಕರ್ಷಕ ಬಾಗಿಲು ,ವಿಐಪಿ ಕೊಠಡಿ,ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು,ಡಿಸೆಂಬರ್ 29 ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೋ,ಉಪಮೇಯರ್ […]