Blog Archive

ಬಿಜೆಪಿ ಮೇಲೆ ವಿಶ್ವಾಸವಿಟ್ಟು ಮತದಾರರು ಅಭೂತಪೂರ್ವ ಜಯ ನೀಡಿದ್ದಾರೆ : ನಳಿನ್ ಕುಮಾರ್

Friday, November 15th, 2019
nalin-kumar

ಮಂಗಳೂರು : ಬಿಜೆಪಿಯ ಮೇಲೆ ವಿಶ್ವಾಸವಿಟ್ಟು ಮಂಗಳೂರಿನ ಜನತೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ ನೀಡಿದ್ದಾರೆ. ಜನತೆಯ ಆಶಯಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜವಾಬ್ದಾರಿಯುತ ಆಡಳಿತ ನೀಡಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಬರಬೇಕು ಎಂಬ ನೆಲೆಯಲ್ಲಿ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಮಂಗಳೂರು ಮಹಾನಗರ ಅಭಿವೃದ್ಧಿಗೆ ಈಗ […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ

Thursday, November 14th, 2019
MCC-Election

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಾಲಿಕೆಯಲ್ಲಿ ಈ ಬಾರಿ ಭಾರತೀಯ ಜನತಾಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. 60 ವಾರ್ಡ್ ಗಳಲ್ಲಿ 44ರಲ್ಲಿ ಬಿಜೆಪಿ ಗೆಲುವು ತನ್ನದಾಗಿಸಿದ್ದು, ಕಾಂಗ್ರೆಸ್ 14 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದೆ. ಇದರಿಂದ ಕಳೆದ ಬಾರಿ 35 ಸ್ಥಾನ ಪಡೆದು ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಗೆ ಇದರಿಂದ ತೀವ್ರ ಮುಖಭಂಗವಾಗಿದೆ. ಎಸ್ ಡಿಪಿಐ 2 ವಾರ್ಡ್ ಗಳಲ್ಲಿ ಜಯಗಳಿಸಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತವರಲ್ಲಿ […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 18 ಗೆಲುವು, ಕಾಂಗ್ರೆಸ್ ಗೆ 7ರಲ್ಲಿ ಗೆಲುವು

Thursday, November 14th, 2019
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಪ್ರಕಟವಾಗಿರುವ ವಾರ್ಡ್ ಗಳಲ್ಲಿ ಬಿಜೆಪಿ 18, ಕಾಂಗ್ರೆಸ್ ಗೆ 7ರಲ್ಲಿ ಗೆಲುವು ಸಾಧಿಸಿದೆ. ವಾರ್ಡ್ ನಂ.3 ಕಾಟಿಪಳ್ಳ ಪೂರ್ವ: 2486 ಮತಗಳನ್ನು ಗಳಿಸಿರುವ ಬಿಜೆಪಿಯ ಲೋಕೇಶ್ ಬೊಳ್ಳಾಜೆ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಬಶೀರ್ ಅಹ್ಮದ್ ಗೆ‌ ಸೋಲುಂಡಿದ್ದಾರೆ. ವಾರ್ಡ್ ನಂ.57 ಹೊಯ್ಗೆ ಬಝಾರ್: ಬಿಜೆಪಿಯ ರೇವತಿ ಶ್ಯಾಂಸುಂದರ್ 2116 ಮತಗಳನ್ನು ಪಡೆದು ಜಯಸಿದ್ದಾರೆ. ವಾರ್ಡ್ ನಂ.6 ಇಡ್ಯಾ ಪೂರ್ವ: ಬಿಜೆಪಿಯ ಸರಿತಾ ಶಶಿಧರ್ […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ

Thursday, November 14th, 2019
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಬಿಜೆಪಿ ಇದುವರೆಗೆ ಐದು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಸುರತ್ಕಲ್ ಪಶ್ಚಿಮ 1ನೇ ವಾರ್ಡ್‌ ಹಾಗೂ ಸೆಂಟ್ರಲ್ ಮಾರ್ಕೆಟ್ ವಾರ್ಡ್ 41ರಲ್ಲಿ ಗೆದ್ದಿರುವ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಸುರತ್ಕಲ್ ಪಶ್ಚಿಮ 1ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್ ವಿಜಯಿಯಾಗಿದ್ದಾರೆ. ಶೋಭಾ ರಾಜೇಶ್ 985 ಮತಗಳನ್ನು ಗಳಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ ರೇವತಿ ಪುತ್ರನ್ 760 ಮತ, ಶಾಂತಾ ರಾವ್ 548 ಮತಗಳನ್ನು […]

ನಾಳೆ ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ

Wednesday, November 13th, 2019
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ನ.12ರಂದು ನಡೆದ ಚುನಾವಣೆಯ ಮತ ಎಣಿಕೆ ನಾಳೆ ನ.14ರಂದು ನಗರದ ರೊಸಾರಿಯೊ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಣಿಕೆ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ಸಿಆರ್‌ಪಿಸಿ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷಗಳ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಸುತ್ತ […]

ನ.14 ರಂದು ಕಾಂಗ್ರೆಸಿಗರು ಕಣ್ಣೀರು ಸುರಿಸಲಿದೆ : ಬಿ ಜನಾರ್ದನ ಪೂಜಾರಿ

Friday, November 8th, 2019
Janardhana-Poojary

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಹೇಳಿದ್ದಾರೆ. ಫಲಿತಾಂಶ ಪ್ರಕಟಣೆಯ ದಿನ ಅಂದರೆ ನ. 14 ರಂದು ಕಾಂಗ್ರೆಸ್ ನಾಯಕರು ಕಣ್ಣೀರು ಸುರಿಸಲಿದೆ, ಎಂದು ಬಿ ಜನಾರ್ದನ ಪೂಜಾರಿ ಹೇಳಿದ್ದಾರೆ. ನ.8ರ ಶುಕ್ರವಾರದಂದು ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಜನಾರ್ದನ ಪೂಜಾರಿಯವರು ತಿಳಿಸಿದ್ದಾರೆ. ಅಯೋಧ್ಯೆ ತೀರ್ಪು ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ಅಯೋಧ್ಯೆ ತೀರ್ಪು ಹೊರಬೀಳುವಾಗ ಪ್ರತಿಯೊಬ್ಬರು ಶಾಂತಿ ಸಾಮರಸ್ಯ ಕಾಪಾಡಬೇಕು. ನ್ಯಾಯಾಂಗದ ತೀರ್ಪಿಗೆಗೆ ಎಲ್ಲರೂ […]

ಸಿದ್ದರಾಮಯ್ಯರಿಂದ ನ.6ರಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ : ಐವನ್ ಡಿಸೋಜ

Tuesday, November 5th, 2019
Ivan-D'-Soza

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನ.6ರಂದು ಬಿಡುಗಡೆಗೊಳಿಸಲಾಗುವುದು. ಮಾಜಿ ಮುಖ್ಯಮಂತ್ರಿ, ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಸಂಜೆ 5ಕ್ಕೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಕಾಂಗ್ರೆಸ್ ಮನಪಾದಲ್ಲಿ ಆಡಳಿತ ಇರುವ ಸಂದರ್ಭದಲ್ಲಿ ಮನೆ ಬಳಕೆ ನೀರಿನ ದರ ಏರಿಸಿಲ್ಲ. ಮನಪಾದಲ್ಲಿ ಆಡಳಿತಾಧಿಕಾರಿ ಇದ್ದ ಅವಧಿಯಲ್ಲಿ ಈ ಏರಿಕೆ ಆಗಿದೆ. ವಿಧಾನಸಭಾ ಚುನಾ ವಣೆಯಲ್ಲಿ ಜಯ ಗಳಿಸಿದ […]

ನ.12ರಂದು ಮನಪಾ ಚುನಾವಣೆ : ನ.14ರಂದು ಮತ ಎಣಿಕೆ

Thursday, October 24th, 2019
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಗುರುವಾರದಿಂದ ಆರಂಭಗೊಂಡಿದೆ. ಅ.31ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು, ನ. 12ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನದ ನಡೆಯಲಿದೆ. ನಾಮಪತ್ರ ಪರಿಶೀಲನೆಗೆ ನ.2 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ನ.4 ಕೊನೆಯ ದಿನ. ನ.14ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಹೇಳಿದರು. ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯು […]

ಮಂಗಳೂರು ಮಹಾನಗರ ಪಾಲಿಕೆಗೆ ನವೆಂಬರ್ 12ಕ್ಕೆ ಚುನಾವಣೆ

Tuesday, October 22nd, 2019
mcc

ಮಂಗಳೂರು  : ರಾಜ್ಯ ಚುನಾವಣೆ ಆಯೋಗವು ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪುರಸಭೆ ಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಮಂಗಳೂರು ಮಹಾನಗರ ಪಾಲಿಕೆ 60 ವಾರ್ಡ್ ಗಳಿಗೆ  ನವೆಂಬರ್ 12ನೇ ತಾರೀಕು ಮತದಾನ ನಡೆಯಲಿದೆ. ಅಕ್ಟೋಬರ್ 20ನೇ ತಾರೀಕು ಭಾನುವಾರದಿಂದ ಚುನಾವಣೆ ಮಾದರಿ ನೀತಿ ಸಂಹಿತೆಯು ಜಾರಿ ಆಗುತ್ತದೆ ಎಂದು ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ  ಬಗ್ಗೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸುವ ದಿನಾಂಕ 24.10.2019 ನಾಮಪತ್ರ ಸಲ್ಲಿಸಲು ಕೊನೆ ದಿನ 31.10.2019 ನಾಮಪತ್ರ ಪರಿಶೀಲಿಸಲು ಕೊನೆ ದಿನ 2.11.2019 […]

ನಗರದ 2,641.15 ಲಕ್ಷ ರೂ.ಗಳ ಕಾಮಗಾರಿಗಳನ್ನು ಪರಿಶೀಲಿಸಿದ ಮೇಯರ್ ತಂಡ

Thursday, July 12th, 2018
Mayor

ಮಂಗಳೂರು : ಮಹಾನಗರ ಪಾಲಿಕೆ  ಮೇಯರ್ ಭಾಸ್ಕರ ಮೊಯ್ಲಿ, ಸ್ಥಾಯಿ ಸಮಿತಿ ಉಪ ಮೇಯರ್ ಹಾಗೂ ಆಯುಕ್ತ ಮುಹಮ್ಮದ್ ನಝೀರ್   ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ನಗರದ ವಿವಿಧ ಕಡೆಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿತು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣ, ಸೇತುವೆ ನಿರ್ಮಾಣ, ಫುಟ್‌ಪಾತ್ ಅಭಿವೃದ್ಧಿ ಸೇರಿದಂತೆ 2,641.15 ಲಕ್ಷ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ವಾಮಂಜೂರು- ಬೊಂದೇಲ್ ಸಂಪರ್ಕ ರಸ್ತೆ , ಪಚ್ಚನಾಡಿ  ಸೇತುವೆ, ಕದ್ರಿ ಪಾರ್ಕ್, ಬಳ್ಳಾಲ್‌ಬಾಗ್‌ನಿಂದ ದುರ್ಗಾ ಮಹಲ್‌ ಫುಟ್‌ಪಾತ್‌, ಪಡೀಲ್- ಬಜಾಲ್ ರಸ್ತೆ, ಕಂಕನಾಡಿ ರೈಲ್ವೇ ನಿಲ್ದಾಣ ರಸ್ತೆ , ಕಂಕನಾಡಿ – […]