Blog Archive

ಮಂಗಳೂರು ಮಹಾನಗರ ಪಾಲಿಕೆಗೆ ಮಿಗತೆ ಬಜೆಟ್… ಬಿಜೆಪಿಯಿಂದ ಟೀಕೆ

Tuesday, February 27th, 2018
mayor

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ 2018-19ನೇ ಸಾಲಿಗೆ 26,955.07 ಲಕ್ಷ ರೂ.ಗಳ ಉಳಿತಾಯದ ಬಜೆಟ್‌ಅನ್ನು ಮಂಡಿಸಲಾಗಿದೆ. ಆದರೆ, ಯಾವುದೇ ಹೊಸ ಯೋಜನೆಯನ್ನು ಪ್ರಕಟಿಸದೆ ಜನರನ್ನು ನಿರಾಸೆಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿವೆ. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ನಿನ್ನೆ ನಡೆದ ವಿಶೇಷ ಸಭೆಯಲ್ಲಿ ಹಣಕಾಸು, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಬಜೆಟ್ ಮಂಡಿಸಿದರು. ಹಿಂದಿನ ಸಾಲಿನ ಉಳಿತಾಯ 28,560.74 ಲಕ್ಷ ರೂ. ಹಾಗೂ ಈ ಸಾಲಿನ ಆದಾಯ 69,840.38 ಲಕ್ಷ ರೂ. ಸೇರಿ […]

ಪಾರ್ಕಿಂಗ್ ಅವ್ಯವಸ್ಥೆ… ಮಂಗಳೂರಲ್ಲೂ ಸಂಚಾರ ದುಸ್ತರ

Monday, December 11th, 2017
parking-problem

ಮಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಸೇರ್ಪಡೆಗೊಂಡ ನಗರ. ಆದರೆ ನಗರದಲ್ಲಿ ವಾಹನ ದಟ್ಟಣೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ನಗರಕ್ಕೆ ಒಂದು ಸುವ್ಯವಸ್ಥಿತ ರೂಪ ಕೊಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ ಸೆಟ್‌ಬ್ಯಾಕ್‌ಗಾಗಿ ಇಂತಿಷ್ಟು ಜಾಗವನ್ನು ಬಿಡಬೇಕು ಮತ್ತು ಅದಕ್ಕೆ ಅಗತ್ಯ ಬೀಳುವ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಬೇಕು ಎಂಬ ನಿಯಮಗಳಿವೆ. ಆದರೆ ಇಲ್ಲಿರುವ ಹೆಚ್ಚಿನ ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್‌ಗೆ […]

ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

Friday, October 13th, 2017
mahanagara palike

ಮಂಗಳೂರು: “ಸ್ತ್ರೀಯರು ಪುರುಷರಿಗೆ, ಪುರುಷರು ಸ್ತ್ರೀಯರಿಗೆ ಮಸಾಜ್ ಮಾಡಬಾರದು ಎಂದು ಯಾವ ಕಾನೂನು ಹೇಳುತ್ತದೆ? ಒಂದು ವೇಳೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಕಾನೂನು ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದಲ್ಲವೇ? ಎಂದು ಹೈಕೋರ್ಟ್ ಪಾಲಿಕೆಯನ್ನು ಪ್ರಶ್ನಿಸಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗದಿದ್ದರೂ ಮಸಾಜ್ ಸೆಂಟರ್ ಗಳ ಪರವಾನಿಗೆ ಹೇಗೆ ರದ್ದು ಪಡಿಸಿದ್ದೀರಿ?” ಎಂದು ಮಂಗಳೂರು ಮಹಾನಗರ ಪಾಲಿಕೆ (ಮನಪಾ)ಯ ಆಡಳಿತವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಂಗಳೂರು ಮೇಯರ್ ಕವಿತಾ […]

ಚಲಿಸುವ ಮಾರುತಿ ವ್ಯಾನಿಗೆ ದಾರಿದೀಪ ಕಂಬ ಬಿದ್ದು ಓರ್ವನಿಗೆ ಗಾಯ

Monday, October 9th, 2017
Car Accident

ಮಂಗಳೂರು: ನಗರದ ರಾವ್ ಎಂಡ್ ರಾವ್ ಸರ್ಕಲ್ ಬಳಿ ಸೋಮವಾರ ಮದ್ಯಾಹ್ನ 2.30 ರ ವೇಳೆಗೆ ಮಂಗಳೂರು ಮಹಾನಗರ ಪಾಲಿಕೆ ಅಳವಡಿಸಿದ ವಿದ್ಯುತ್ ದಾರಿದೀಪ ಚಲಿಸುವ ಮಾರುತಿ ವ್ಯಾನಿಗೆ ಬಿದ್ದು ಓರ್ವನಿಗೆ ಗಾಯವಾಗಿದೆ. ಆಶಿಪ್ ಎಂಬವರು ಕೆ.ಎ 19 ಎಂ 6427 ಕಾರಿನಲ್ಲಿ ಸ್ಟೇಟ್‌ಬ್ಯಾಂಕ್ ಸಮೀಪದ ರಾವ್ ಆಂಡ್ ರಾವ್ ಸರ್ಕಲ್ ಹತ್ತಿರ ಚಲಿಸುತಿದ್ದ ಸಂದರ್ಭ ವಿದ್ಯುತ್ ದಾರಿದೀಪ ಆಕಸ್ಮಿಕವಾಗಿ ಬಿದ್ದು ಕಾರು ಜಖಂಗೊಂಡಿದೆ. ಅದರಲ್ಲಿದ್ದ ಆಶಿಪ್ ಅವರಿಗೆ ಗಾಯವಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ರಸ್ತೆಯಲ್ಲಿ ಈ ಹಿಂದೆಯೂ ಇನ್ನೆರಡು ದಾರಿದೀಪ […]

ಬೀದಿಬದಿ ವ್ಯಾಪಾರಸ್ಥರ ಮೇಲಿನ ದಾಳಿಯನ್ನು ಖಂಡಿಸಿ ಸಿಐಟಿಯು ಪ್ರತಿಭಟನೆ

Friday, August 18th, 2017
citu

ಮಂಗಳೂರು: ಬೀದಿಬದಿ ವ್ಯಾಪಾರಸ್ಥರ ಮೇಲಾಗುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗಾಗಿ ಒತ್ತಾಯಿಸಿ ಬೀದಿಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಬೀದಿಬದಿ ವ್ಯಾಪಾರಸ್ಥರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವ ಮಂಗಳೂರು ಮಹಾನಗರ ಪಾಲಿಕೆ ನಿರಂತರವಾಗಿ ದಾಳಿ ನಡೆಸುವ ಮೂಲಕ ಬೀದಿಬದಿ ವ್ಯಾಪಾರಸ್ಥರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿದರು. […]

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಐದು ಇ-ಟಾಯ್ಲೆಟ್‌ಗಳು ಲೋಕಾರ್ಪಣೆ

Tuesday, July 11th, 2017
e toilet

ಮಂಗಳೂರು : ಖಾಸಗಿ ಸಹಭಾಗಿತ್ವದಲ್ಲಿ  ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಚ್‌ಪಿಸಿಎಲ್ ಸಹಯೋಗದೊಂದಿಗೆ ನಿರ್ಮಾಣಗೊಂಡ ಐದು ಇ-ಟಾಯ್ಲೆಟ್‌ಗಳು ಇಂದು ಲೋಕಾರ್ಪಣೆಗೊಂಡವು. ನಗರದ ಲಾಲ್‌ಬಾಗ್ ಬಸ್ ನಿಲ್ದಾಣ ಬಳಿ ಶಾಸಕ ಜೆ.ಆರ್.ಲೋಬೊ ಇ-ಟಾಯ್ಲೆಟ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಇದೇ ಮಾದರಿಯ ಇನ್ನಷ್ಟು ಟಾಯ್ಲೆಟ್‌ಗಳು ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದರು. ಸುಮಾರು ಆರೂವರೆ ಲಕ್ಷ ರೂ. ವೆಚ್ಚದಲ್ಲಿ ಇ-ಟಾಯ್ಲೆಟ್‌ ನಿರ್ಮಿಸಲಾಗಿದೆ . ಈ ಪೈಕಿ ಲಾಲ್‌ಭಾಗ್‌ನಲ್ಲಿ 2, ಕದ್ರಿಯಲ್ಲಿ 2 ಮತ್ತು ಹಂಪನಕಟ್ಟೆಯ ಬಳಿ ಒಂದು ಟಾಯ್ಲೆಟನ್ನು ಸಾರ್ವಜನಿಕ ಸೇವೆಗೆ […]

ಸ್ಕಿಲ್ ಗೇಮ್ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಜೂಜು ಕೇಂದ್ರಕ್ಕೆ ಮಂಗಳೂರು ಮಹಾನಗರ ಪಾಲಿಕೆ ದಾಳಿ

Thursday, July 6th, 2017
silk Game

ಮಂಗಳೂರು : ಜೂಜು ಆಡುವ ಮೂಲಕ ಆಡುವವರು ಮತ್ತು ಆಡಿಸುವವರು ಸುಲಭದಲ್ಲಿ ದುಡ್ಡು ಮಾಡಬಹುದು. ಒಮ್ಮೆ ಜೂಜು ಆಡಲು ಸುರು ಮಾಡಿದರೆ ಮನೆ, ಅಸ್ತಿ ಎಲ್ಲವನ್ನು ಕಳಕೊಂಡೇ ಜನ ಆಟ ನಿಲ್ಲಿಸುವುದು. ಜನರನ್ನು ಸುಲಿಗೆ ಮಾಡುವ ಅಂತಹ ಆಟದ ಅಡ್ಡೆಗಳು ಮಂಗಳೂರಿನಲ್ಲಿ 80 ಕ್ಕೂ ಹೆಚ್ಛೇ ಇದೆ ಎಂದು ಹೇಳಲಾಗಿದೆ. ಅಂತಹ ಜೂಜು ಕೇಂದ್ರಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮಂಗಳೂರಿನ ಮೇಯರ್ ಕವಿತಾಸನಿಲ್  ಗುರುವಾರ ಸಂಜೆ ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಿದರು. ಸಂಜೆ 5 ಗಂಟೆ ಹೊತ್ತಿಗೆ […]

ರಸ್ತೆ ಅಗಲೀಕರಣಕ್ಕಾಗಿ ಮನೆ ಕಳಕೊಂಡವರಿಗೆ ಪಾಲಿಕೆ ವತಿಯಿಂದ ಮನೆ ಹಸ್ತಾಂತರ

Wednesday, July 5th, 2017
Mcc House

ಮಂಗಳೂರು: ಸೂರ್ಯನಾರಾಯಣ ದೇವಸ್ಥಾನದ 37 ನೇ ವಾರ್ಡ್ ನಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಮನೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಮನೆಯನ್ನು ನಿರ್ಮಿಸಿ ಮಂಗಳೂರು ಮಹಾನಗರ ಪಾಲಿಕೆ ಹಸ್ತಾಂತರಿಸಿತು. ಶಾಸಕ ಜೆ.ಆರ್.ಲೋಬೊ ಅವರ ವಿಶೇಷ ಶಿಫಾರಸು ಮೇರೆಗೆ ಕಲ್ಯಾಣಿ ಅವರಿಗೆ 17 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರಪಾಲಿಕೆ ಮನೆ ನಿರ್ಮಿಸಿ ಕೊಟ್ಟಿತು. ನೂತನ ಮನೆಯ ಕೀಲಿ ಕೈಯನ್ನು ಕಲ್ಯಾಣಿ ಅವರಿಗೆ ಶಾಸಕ ಜೆ.ಆರ್.ಲೋಬೊ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ನಗರಪಾಲಿಕೆ […]

ನಗರದ ರಸ್ತೆ ಅಥವಾ ವೃತ್ತಕ್ಕೆ ಕಯ್ಯಾರ ಕಿಂಞಣ್ಣ ರೈಯವರ ಹೆಸರು ಇಡಲು ಚಿಂತನೆ

Friday, June 9th, 2017
Kinanana

ಮಂಗಳೂರು : ಕಯ್ಯಾರರು ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆ ಗೊಳಿಸಲು  ಪ್ರಯತ್ನ ಮಾಡಿದವರಲ್ಲಿ ಪ್ರಮುಖರು ಅವರು ಕೇವಲ ಕವಿ ಮಾತ್ರವಲ್ಲ  ಬಹುಮುಖ ಪ್ರತಿಭೆ, ಸಾಹಿತಿ, ಕವಿ, ಸ್ವಾತಂತ್ರ್ಯ ಹೋರಾಟಗಾರ, ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು. ಅವರು ನಗರದ ರಥಬೀದಿ ಬಿಇಎಂ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ದಿ. ಕಯ್ಯಾರ ಕಿಂಞಣ್ಣ ರೈಯವರ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿ ಸಾಂಸ್ಕೃತಿಕ ಲೋಕದಲ್ಲಿ ಮೇರು ಸಾಧನೆಯನ್ನು ಮಾಡಿದವರು.  ವಿಶಾಲ ಭಾರತದ ಕಲ್ಪನೆಯನ್ನು ಕಟ್ಟಿಕೊಂಡ ಮಹಾಕವಿ. ಕನ್ನಡ ಸಾರಸ್ವತ ಲೋಕದಲ್ಲಿ ಅವರ […]

ಮೇಯರ್ ಅವೈಜ್ಞಾನಿಕ ಯೋಜನೆಯಿಂದ ಜನರು ಸಂಕಟ ಅನುಭವಿಸುವಂತಾಗಿತ್ತು- ವೇದವ್ಯಾಸ ಕಾಮತ್

Friday, May 19th, 2017
Vedavyasa

ಮಂಗಳೂರು : ಜನರಿಗೆ ನೀರು ಕೊಡದೆ ಸತಾಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಈಗ ನೀರನ್ನು ಸಮುದ್ರಕ್ಕೆ ಬಿಡುವ ಮೂಲಕ ಜನರ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಮಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವಾಗ ನೀರು ಮೂರು ದಿನಕ್ಕೊಮ್ಮೆ ಬಿಡುತ್ತೇವೆ ಎಂದು ಮೇಯರ್ ಕವಿತಾ ಸನಿಲ್ ಅವರು ನೀರಿಗೆ ರೇಶನಿಂಗ್ ವ್ಯವಸ್ಥೆ ಮಾಡಿದ್ದರು. ಆಗ ಬಿಜೆಪಿಯ ನಿಯೋಗ ಸ್ವತ: ತುಂಬೆ ವೆಂಟೆಂಡ್ […]