Blog Archive

ಮಂಗಳೂರಿನಲ್ಲಿ ಕುಡಿಯುವ ನೀರಿನ ಕೃತಕ ಅಭಾವ-ಆರೋಪ

Wednesday, March 22nd, 2017
Tumbe Dam

ಮಂಗಳೂರು : ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದಿನನಿತ್ಯ ಸರಬರಾಜನ್ನು ಮಂಗಳೂರು ಮಹಾನಗರ ಪಾಲಿಕೆ ಕಡಿತಗೊಳಿಸಿದೆ. ಮೂವತ್ತಾರು ಗಂಟೆಗೊಮ್ಮೆ ನೀರು ಬಿಡಲಾಗುವುದೆಂದು ಘೋಷಣೆ ಮಾಡಿದೆ. ವಾಸ್ತವದಲ್ಲಿ ಜನತೆಗೆ ನೀರು ದೊರಕುತ್ತಿರುವುದು ಮೂರು ದಿನಕ್ಕೊಮ್ಮೆ ಮಾತ್ರ. ತುಂಬೆ ವೆಂಟೆಡ್ ಡ್ಯಾಮ್’ನಲ್ಲಿ ನೀರು ಶೇಖರಣೆ ಉತ್ತಮವಾಗಿದ್ದರೂ ಮಹಾ ನಗರ ಪಾಲಿಕೆ ಜನತೆಯಲ್ಲಿ ನೀರಿನ ಅಭಾವದ ಭೀತಿಯನ್ನು ಸೃಷ್ಟಿಸಿ ಜನರನ್ನು ಕುಡಿಯುವ ನೀರಿನಿಂದ ವಂಚಿಸಿ ಸಂಕಷ್ಟಕ್ಕೀಡು ಮಾಡುತ್ತಿದೆ. ಇದರಿಂದ ನಗೆರದ ಜನ ಆತಂಕಕ್ಕೀಡಾಗಿದ್ದಾರೆ. ನಗರ ಪಾಲಿಕೆಯ ಈ ನೀರು ನೀತಿಯ ಹಿಂದೆ […]

ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಬೀದಿ ವ್ಯಾಪಾರಸ್ಥರ ತೆರವು

Saturday, December 31st, 2016
MCC

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಳಿ ವ್ಯಾಪಾರ ನಡೆಸುತ್ತಿದ್ದ ಬೀದಿ ವ್ಯಾಪಾರಸ್ಥರನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ನಗರದ ಸ್ಟೇಟ್ ಬ್ಯಾಂಕ್ ಬಳಿ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳ ತರಕಾರಿ, ಹಣ್ಣು ಹಂಪಲುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಮುಂದೆ ಈ ಪ್ರದೇಶದಲ್ಲಿ ವ್ಯಾಪಾರ ನಡೆಸದಂತೆ ಎಚ್ಚರಿಕೆ ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯಿಂದ ನಗರದ ಟೌನ್ ಹಾಲ್ ಬಳಿ ಬೀದಿ ವ್ಯಾಪಾರಿಗಳಿಗೆ ಸ್ಥಳ ನಿಗದಿಪಡಿಸಲಾಗಿದೆ. ಅಲ್ಲಿಗೆ ತೆರಳದೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಅಧಿಕಾರಿಗಳು ಈ ಕಾರ್ಯಚರಣೆ […]

ಉರ್ವ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ರಮಾನಾಥ ರೈ ಶಿಲಾನ್ಯಾಸ

Tuesday, November 8th, 2016
Urwa market

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಗರದ ಉರ್ವ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಇಂದು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಪಾಲಿಕೆಯು ಉತ್ತಮವಾಗಿ ಆಡಳಿತವನ್ನು ನಿರ್ವಹಿಸುತ್ತಿದೆ. ಪಾಲಿಕೆಯ ವಾರ್ಡ್‌ಗಳಲ್ಲಿ ಸದಸ್ಯರು ಇನ್ನಷ್ಟು ಸಮರ್ಪಕವಾಗಿ ಕೆಲಸಗಳನ್ನು ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮೇಯರ್ ಹರಿನಾಥ್, ಮಾರುಕಟ್ಟೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು. ಉಪ ಮೇಯರ್ […]

ಮಂಗಳೂರು ಮಹಾನಗರ ಪಾಲಿಕೆಗೆ ಬಯಲು ಶೌಚಾಲಯ ಮುಕ್ತ ನಗರ ಪ್ರಮಾಣ ಪತ್ರ ಹಸ್ತಾಂತರ

Thursday, September 29th, 2016
clean-city

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ಬಯಲು ಶೌಚಾಲಯ ಮುಕ್ತ ನಗರವೆಂಬ ಘೋಷಣೆಯ ಪ್ರಮಾಣ ಪತ್ರ ಹಸ್ತಾಂತರಗೊಂಡಿದೆ. ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಸ್ವಚ್ಛ ಭಾರತ ಮಿಷನ್ ವತಿಯಿಂದ ಈ ಪ್ರಮಾಣ ಪತ್ರ ನೀಡಲಾಗುತ್ತಿದೆ. ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾದ ಸ್ವಚ್ಛ ಭಾರತ ಮಿಶನ್ ಯೋಜನೆಯ ಮುಖ್ಯಸ್ಥ ಅಭಿನವ್ ಯಾದವ್ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ವಿಶೇಷವೆಂದರೆ, ಈ ಪ್ರಮಾಣ ಪತ್ರವನ್ನು ನೀಡಲಾದ ದಿನಾಂಕದಿಂದ ಆರು ತಿಂಗಳ […]

ಪಾಲಿಕೆಯಲ್ಲಿ ಖಾಲಿಯಿರುವ ಹುದ್ದೆಗಳು ತುಂಬಲು ಕ್ರಮ: ರೋಶನ್ ಬೇಗ್

Friday, August 5th, 2016
MCC

ಮಂಗಳೂರು: ಪಾಲಿಕೆಯ 1,725 ಮಂಜೂರು ಹುದ್ದೆಗಳಲ್ಲಿ ಪ್ರಸ್ತುತ ಕೇವಲ 548 ಹುದ್ದೆಗಳು ಮಾತ್ರ ಇವೆ. ಉಪ ಆಯುಕ್ತರು ಸೇರಿದಂತೆ ಹಲವು ಪ್ರಮುಖ ಹುದ್ದೆಗಳು ಖಾಲಿಯಿದ್ದು, ಕೆಪಿಎಸ್‌ಸಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಇದು ಪೂರ್ಣಗೊಂಡ ಕೂಡಲೇ ತೆರವಾಗಿರುವ ಹುದ್ದೆಗಳು ಭರ್ತಿಯಾಗಲಿವೆ ಎಂದು ಸಚಿವ ಆರ್.ರೋಶನ್ ಬೇಗ್ ಹೇಳಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ, ಸುರತ್ಕಲ್ ಹಾಗೂ ಲಾಲ್‌ಬಾಗ್‌ನಲ್ಲಿ ಮಂಜೂರಾಗಿರುವ ವಲಯ ಕಚೇರಿಗಳನ್ನು ಶೀಘ್ರವೇ […]

ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮನೆಗೆ ಸೌರಶಕ್ತಿ ಮೇಲ್ಛಾವಣಿ

Friday, October 23rd, 2015
Ivan Solar

ಮಂಗಳೂರು : ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ತಮ್ಮ ಮನೆಗೆ ಸೌರಶಕ್ತಿ ಮೇಲ್ಛಾವಣಿಯನ್ನು ಅಳವಡಿಸಿದ್ದಾರೆ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಶಾಸಕ ಮೊಯಿದೀನ್ ಬಾವಾ ಬುಧವಾರ ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆಗೆ ಚಾಲನೆ ನೀಡಿದರು. ಪ್ರತಿದಿನ 47 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿಯನ್ನು ಹೊಂದಿದೆ. ಸುಮಾರು 7.50 ಲಕ್ಷದಿಂದ 8 ಲಕ್ಷ ರೂಪಾಯಿ ತನಕ ವೆಚ್ಚ ಮಾಡಿ, ದಿನವೊಂದಕ್ಕೆ 47 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕ ನಿರ್ಮಾಣ ಮಾಡಲಾಗಿದೆ. ಈ ಸೌರಶಕ್ತಿ ಘಟಕದಿಂದ ತಿಂಗಳಿಗೆ ತನ್ನ […]

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ – ಮಂಗಳೂರು ಒನ್‌ ತನಿಖೆಗೆ ಸದನ ಸಮಿತಿ

Tuesday, September 30th, 2014
MCC

ಮಂಗಳೂರು: ಮಂಗಳೂರು ಒನ್‌ ಸೇವಾ ಕೇಂದ್ರಗಳು ಜನರಿಂದ ಸಂಗ್ರಹಿಸಿದ ಆಸ್ತಿ ತೆರಿಗೆಯನ್ನು ಕ್ಲಪ್ತ ಸಮಯದಲ್ಲಿ ಪಾಲಿಕೆಯ ಖಾತೆಗೆ ಪಾವತಿಸುತ್ತಿಲ್ಲ. ಪಾಲಿಕೆಗೆ ಸಂದಾಯ­ವಾದ ಮೊತ್ತ ಹಾಗೂ ಸೇವಾ ಕೇಂದ್ರಗಳು ಸಂಗ್ರಹಿಸಿರುವ ಮೊತ್ತದಲ್ಲಿ ₨ 2.5 ಕೋಟಿ­ಯಷ್ಟು ವ್ಯತ್ಯಯ ಕಂಡುಬಂದಿದೆ’ ಎಂದು  ಪಾಲಿಕೆ ಸದಸ್ಯ ವಿಜಯ ಕುಮಾರ್‌ ಶೆಟ್ಟಿ ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್‌ ಮಹಾಬಲ ಮಾರ್ಲ ಅವರು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಸದನ ಸಮಿತಿಯನ್ನು ನೇಮಿಸಿದರು. ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ […]

ಮನಪಾ ಮೇಯರ್‌ ಆಗಿ ಮಹಾಬಲ ಮಾರ್ಲ

Thursday, March 13th, 2014
Mahabala-Morley

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 25ನೇ ಮೇಯರ್‌ ಆಗಿ ಕಾಂಗ್ರೆಸ್‌ ಸದಸ್ಯ ಮಹಾಬಲ ಮಾರ್ಲ ಅವರು ಮಾ. 13ರಂದು  ಆಯ್ಕೆಯಾಗಿದ್ದಾರೆ. ಕವಿತಾ ಅವರು ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ  ಚುನಾವಣೆಯಲ್ಲಿ  ಬಿಜೆಪಿಯಿಂದ ಸ್ಪರ್ಧಿಸಿದ ತಿಲಕ್‌ರಾಜ್‌ ಅವರು 20 ಮತಗಳನ್ನು ಪಡೆದರೆ ಮಾರ್ಲ ಅವರು 37 ಮತಗಳನ್ನು ಪಡೆದು ಜಯಶಾಲಿಯಾದರು. ಮಹಾಬಲ ಮಾರ್ಲ  ಅವರು ಕದ್ರಿ ಪದವು ವಾರ್ಡ್‌ನಿಂದ ಮೂರು ಬಾರಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೈಸೂರು ಪ್ರಾದೇಶಿಕ ಆಯುಕ್ತರು ಚುನಾವಣೆ […]

ಮಂಗಳೂರು ಮಹಾನಗರ ಪಾಲಿಕೆಯ ನೂತನ ಅಯುಕ್ತರಾಗಿ, ಕನ್ನಾಡಿ ಅಜಿತ್ ಹೆಗ್ಡೆ

Tuesday, July 9th, 2013
Kannady Ajith Hegde

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಅಯುಕ್ತರಾಗಿ, ಕನ್ನಾಡಿ ಅಜಿತ್ ಹೆಗ್ಡೆಯವರನ್ನು ನೂತನ ಸರಕಾರ ನಿಯುಕ್ತಿಗೊಳಿಸಿದೆ. ಕನ್ನಾಡಿ ಅಜಿತ್ ಹೆಗ್ಡೆಯವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ನವೆಂಬರ್ 2011 ರಂದು ಆಧಿಕಾರ ವಹಿಸಿಕೊಂಡಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕೆಲಸಮಾಡುವ ಮುನ್ನ ಅಜಿತ್ ಹೆಗ್ಡೆಯವರು ಬೆಂಗಳೂರಿನಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಲ್ಲಿ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ನಗರ ಸಭೆ, ರಾಜ್ಯ ಮಾಲಿನ್ಯ ನಿಯಂತ್ರಣ ಘಟಕದ ಕಾರ್ಯನಿರ್ವಣಾಧಿಕಾರಿಯಾಗಿ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೂರು ವರ್ಷ […]

ಸ್ಥಳೀಯ ಸಂಸ್ಥೆ ಚುನಾವಣೆ ದ.ಕ 66.24%, ಉಡುಪಿ 75.23% ಮತ ಚಲಾವಣೆ, ಅಲ್ಲಲ್ಲಿ ಮಾತಿನ ಸಂಘರ್ಷ, ಕಲ್ಲು ತೂರಾಟ

Thursday, March 7th, 2013
MCC Election

ಮಂಗಳೂರು : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಚ್  7 ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಜೆ 5ಕ್ಕೆ ಮುಕ್ತಾಯ ಗೊಂಡಿದೆ. ಮತದಾನದ ಕೊನೆಯ ಅಂಕಿ ಅಂಶ ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 66.24 ಮತದಾನ ನಡೆದಿದೆ. ಒಟ್ಟು 1,48,311 ಪರುಷ ಮತ್ತು 1,59,226 ಮಹಿಳಾ ಮತದಾರರು ಮತಚಲಾಯಿಸಿದ್ದಾರೆ. ಬಹುತೇಕ ಶಾಂತಿಯುತ ಮತದಾನ ವಾಗಿದ್ದರೂ ಅಲ್ಲಲ್ಲಿ ಸಣ್ಣ ಪುಟ್ಟ ಮಾತಿನ ಸಂಘರ್ಷ ಮತ್ತು ಸಂಜೆಯ ವೇಳೆಗೆ ಮಂಗಳೂರಿನ ಬದ್ರಿಯ ಕಾಲೇಜು ಸಮೀಪ  ಕಲ್ಲು ತೂರಾಟ […]