Blog Archive

ವಿವಿ ಕಾಲೇಜಿನಲ್ಲಿ ʼರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನʼ- ರಾಜ್ಯಮಟ್ಟದ ವಿಚಾರ ಸಂಕಿರಣ ಸಂಪನ್ನ

Wednesday, March 17th, 2021
UCM

ಮಂಗಳೂರು: ರತ್ನಾಕರವರ್ಣಿ ಕೇವಲ ಜೈನ ಕವಿಯಲ್ಲ, ಆತ ವಿಶ್ವಕವಿ, ಸರ್ವಮಾನ್ಯ. ಆತನ ಸಾಹಿತ್ಯದ ಅವಲೋಕನದ ಜೊತೆಗೆ ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸವಾಗಬೇಕಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಎಸ್‌ ಯಡಪಡಿತ್ತಾಯ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗಗಳು ಜಂಟಿಯಾಗಿ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ʼರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನʼ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. […]

ಸಮಾಜದ ಸಮಗ್ರ ಗ್ರಹಿಕೆಗೆ ಶಿಕ್ಷಣ ಅಗತ್ಯ : ಅರವಿಂದ ಚೊಕ್ಕಾಡಿ

Friday, February 7th, 2020
aravind

ವಿದ್ಯಾಗಿರಿ : ಶಿಕ್ಷಣದ ನೆಲೆಯಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಉನ್ನತಿಯನ್ನ ಹೊಂದಲು ಸಾಧ್ಯ. ಜತೆಯಲ್ಲಿ ಹೆಣ್ಣಿನ ಸ್ವಾತಂತ್ರಕ್ಕೆ ಪ್ರಾಧಾನ್ಯತೆ ನೀಡುವ ಸಮಾಜ ನಿರ್ಮಾಣವಾಗಬೇಕು ಎಂಬುದು ನಾರಾಯಣಗುರುಗಳ ಆಶಯವಾಗಿತ್ತು ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮತ್ತು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ”ಗುರುವಿನ ಅರಿವು- ವಿಶೇಷ ಉಪನ್ಯಾಸ ಮಾಲಿಕೆ 2019-20”ರಲ್ಲಿ ’ನಾರಾಯಣಗುರು- ಸಮಗ್ರತೆಯ ಅನ್ವೇಷಣೆ’ಯ ಕುರಿತು ಮಾತನಾಡಿದರು. ಶಿಕ್ಷಣ ಕುಸಿತದಿಂದ ಸಮಾಜವು ಹತಾಶ […]

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ರಮೇಶ್ ಕೆ.

Friday, December 13th, 2019
Raresh

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ರಮೇಶ್ ಕೆ. ಅವರನ್ನು ರಾಜ್ಯ ಸರಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಪ್ರಾಧಿಕಾರಗಳ ಅಧಿನಿಯಮ 28(1)ರನ್ವಯ 39(1)ರ ಉಪಬಂಧಕ್ಕೊಳಪಟ್ಟು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ರಮೇಶ್ ಕೆ. ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ನಾಮನಿರ್ದೇಶನ ಮಾಡಿದೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಹಿಂದಿಯಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂಎ) ಹಾಗೂ ಸರಕಾರಿ ಪಾಲಿಟೆಕ್ನಿಕ್ ಕೊಪ್ಪಳದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. 2001ರಿಂದ […]

ಯುವವಾಹಿನಿ ಮಾಣಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Wednesday, October 23rd, 2019
yuva-vahini

ವಿಟ್ಲ : ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ ಮಾಣಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಉದ್ಘಾಟಿಸಿದರು. ಯುವವಾಹಿನಿಯು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಯುವ ಮನಸ್ಸುಗಳನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ತೊಡಗಿಕೊಳ್ಳುವ ಒಂದು ಅದ್ಭುತ ಸಂಘಟನೆ, ಚಂಚಲತೆಯ ಯುವ ಮನಸ್ಸುಗಳನ್ನು ಧನಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯುವವಾಹಿನಿಯ ಬದ್ಧತೆ […]

ಮಂಗಳೂರು ವಿಶ್ವವಿದ್ಯಾನಿಲಯದ 36ನೆ ವಾರ್ಷಿಕ ಘಟಿಕೋತ್ಸವ

Monday, February 26th, 2018
university

ಮಂಗಳೂರು: ಶಿಕ್ಷಣ, ತಂತ್ರಜ್ಞಾನ ವೈಯಕ್ತಿಕ ಮತ್ತು ಸಮಾಜದ ಅಭಿವೃದ್ದಿಯೊಂದಿಗೆ ದೇಶದ ಪ್ರಗತಿಗೆ ಬಳಕೆಯಾಗಲಿ ಬಳಕೆಯಾಗಲಿ ಎಂದು ಸಿಂಗಾಪುರ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧ್ಯಕ್ಷ ಪದ್ಮಶ್ರೀ ಪ್ರೊ.ಸುಬ್ರ ಸುರೇಶ್ ಎಂದು ಹೇಳಿದ್ದಾರೆ. ವಿವಿ ಆವರಣದಲ್ಲಿರುವ ಮಂಗಳ ಸಭಾಂಗಣದಲ್ಲಿ ಇಂದು ಬೆಳಗ್ಗೆ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದ 36ನೆ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ದೇಶದಲ್ಲಿ ನಾಲ್ಕನೆ ಕೃಗಾರಿಕಾ ಕ್ರಾಂತಿ 4.0 ಜಾರಿಯಾಗುತ್ತಿರುವ ಸಂದರ್ಬದಲ್ಲಿ ತಂತ್ರಜ್ಞಾನ ಮತ್ತು ಮಾನವೀಯತೆಯ ನಡುವೆ ಸಮತೋಲನದ ಅಭಿವೃದ್ಧಿ ಸಾಧಿಸಬೇಕಾಗಿದೆ. ಈ ಹಿಂದಿನ ಮೂರು ಕೈಗಾರಿಕಾ ಕ್ರಾಂತಿ […]

ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ಕನ್ನಡ ಪಠ್ಯದಲ್ಲಿ ಸೈನಿಕರ ಅವಹೇಳನ

Thursday, August 10th, 2017
baraguru

ಮಂಗಳೂರು : ಬರಗೂರು ರಾಮಚಂದ್ರಪ್ಪ ಅವರ `ಯುದ್ಧ ಒಂದು ಉದ್ಯಮ’ ಲೇಖನ ಪದಚಿತ್ತಾರ  ಪ್ರಸಕ್ತ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಪ್ರಥಮ ಬಿಸಿಎ ಕನ್ನಡ ಪಠ್ಯದಲ್ಲಿ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳೆಂದು ಬಿಂಬಿಸಿರುವ ಕುರಿತು ತೀವ್ರವಾಗಿ  ಖಂಡನೆ ವ್ಯಕ್ತವಾಗಿದೆ. ಬರಗೂರು ಅವರು ತಮ್ಮ ಸೈನಿಕ ಸ್ನೇಹಿತನೊಬ್ಬನ ಅನುಭವವನ್ನು ಈ ಲೇಖನದಲ್ಲಿ  ಕೆಳಗಿನಂತೆ ಉಲ್ಲೇಖಿಸಿದ್ದಾರೆ. ಗಡಿ ಪ್ರದೇಶದಲ್ಲಿ ಪರಸ್ಪರ ಕೌರ್ಯ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೆ ಇರುತ್ತಾರೆಂಬುದು ನನ್ನ ಗೆಳೆಯನ ಅನುಭವದ ಅಭಿಪ್ರಾಯ. ಪರಸ್ಪರ ಮುತ್ತಿಗೆ ನಡೆದಾಗ ಗಡಿಯ ಗ್ರಾಮಗಳಲ್ಲಿ […]

ಮಂಗಳೂರು ವಿವಿ ಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ಉದ್ಘಾಟನೆ

Thursday, January 19th, 2017
cm university college

ಮಂಗಳೂರು: ನಾರಾಯಣ ಗುರು ಅಧ್ಯಯನ ಪೀಠಕ್ಕೆ ಈಗಾಗಲೇ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿದ್ದು, ಇನ್ನೂ ಒಂದು ಕೋಟಿ ರೂ. ಒದಗಿಸಲು ಸಿದ್ಧವಿದೆ . ಕ್ರಿಯಾಶೀಲ ಹಾಗೂ ಹೆಚ್ಚು ಅಧ್ಯಯನಗಳನ್ನು ನಡೆಸುವ ಪೀಠಗಳಿಗೆ ಸರ್ಕಾರ ಅನುದಾನ ನೀಡಲಿದೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ, ಪ್ರಸಾರಾಂಗದ ರಜತ ಗ್ರಂಥ ಸರಣಿಯ 19 ಕೃತಿಗಳ ಲೋಕಾರ್ಪಣೆ ಹಾಗೂ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ […]

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕಬ್ಬಡಿ ಪಂದ್ಯಾಟ

Tuesday, October 18th, 2016
Kabaddi

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಮೆಮೋರಿಯಲ್ ಟ್ರೋಫಿ ಅಂತರ್ ಕಾಲೇಜು ಕಬ್ಬಡಿ ಪಂದ್ಯಾಟಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಚಾಲನೆ ನೀಡಿದರು. ಬೆಸೆಂಟ್ ಸಂಧ್ಯಾ ಕಾಲೇಜು ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಆಶ್ರಯದಲ್ಲಿ ಉರ್ವ ಮಾರ್ಕೆಟ್ ಮೈದಾನದಲ್ಲಿ ಆಯೋಜನೆಯಾಗಿರುವ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯುವಕರನ್ನು ಕ್ರೀಡೆಯತ್ತ ಆಕರ್ಷಿಸುವ ಕೆಲಸ ಅಗತ್ಯವಾಗಿ ಆಗಬೇಕಿದ್ದು, ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು. […]

ವಿವಿಗೆ ಮಸಿ ಬಳಿಯುವುದನ್ನು ಸಹಿಸುವುದಿಲ್ಲ: ಸಚಿವ ರಾಯರೆಡ್ಡಿ

Tuesday, September 20th, 2016
mu

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಂತಹ ವಿವಿಯ ಹೆಸರನ್ನು ಮತೀಯ ಶಕ್ತಿಗಳು ಹಾಳು ಮಾಡುತ್ತಿವೆ. ಇದನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಮಂಗಳೂರು ವಿವಿಯ 37ನೇ ಸಂಸ್ಥಾಪನಾ ದಿನಾಚರಣೆಯನ್ನು ಮಂಗಳ ಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿದ ಅವರು, ಕೋಮು ಸಂಘಟನೆಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ವಿವಿಯಲ್ಲಿ ಕೋಮು, ಭಾಷೆ, ಧರ್ಮದ ಹೆಸರಿನಲ್ಲಿ ಅಹಿತಕರ ಕೆಲಸ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕೋಮುವಾದಿ ಶಕ್ತಿಗಳು ಸಾಮಾಜಿಕ ಮೌಲ್ಯವನ್ನು ಹಾಳು ಮಾಡುತ್ತಿವೆ. ಕೋಮುವಾದಿ ಶಕ್ತಿಗಳನ್ನು ವಿದ್ಯಾರ್ಥಿಗಳು […]

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ವಿಭಜಿಸಲು ಕೆಲ ಗುಂಪುಗಳು ಷಡ್ಯಂತ್ರ ನಡೆಸುತ್ತಿದೆ: ಅಮಿತ್ ಷಾ

Monday, August 22nd, 2016
Amith-sha

ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ವಿಭಜಿಸಲು ಕೆಲ ಗುಂಪುಗಳು ಷಡ್ಯಂತ್ರ ನಡೆಸುತ್ತಿದ್ದು, ಇಂತಹವರನ್ನು ಪ್ರತ್ಯೇಕಿಸಿ ದೇಶದ ಐಕ್ಯತೆ ಮೆರೆಯುವ ಕಾರ್ಯವಾಗಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಭಾರತ ತಿರಂಗ ಯಾತ್ರೆ ಹಾಗೂ ಸ್ವಾತಂತ್ರ್ಯ 70ರ ಬಲಿದಾನದ ಕಾರ್ಯಕ್ರಮದಂಗವಾಗಿ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ರಾಷ್ಟ್ರ ವಿಭಜನೆಯಂತಹ ಭಾಷಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ನೀಡಲಾಗುತ್ತಿದ್ದು, ದೇಶದ […]