Blog Archive

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಆಯ್ಕೆ

Friday, July 19th, 2013
University College Students’ Union

ಮಂಗಳೂರು : ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆಯಲ್ಲಿ. ಎಬಿವಿಪಿ ಒಟ್ಟು 31 ಸೀಟ್ ನಲ್ಲಿ 26 ಸೀಟುಗಳನ್ನು ಜಯಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ, ಕಾರ್ಯದರ್ಶಿ ಯಾಗಿ ಮಹೇಶ್ ರಾಜ್ ಮೂರನೇ ಬಿಎ, ಲಲಿತಕಲಾ ಕಾರ್ಯದರ್ಶಿ ಯಾಗಿ ಅವಿನಾಶ್ ಮೂರನೇ ಬಿಎ, ಜೊತೆ ಕಾರ್ಯದಶರ್ಿಯಾಗಿ ಶ್ವೇತಾ ಮೂರನೇ ಬಿಬಿಎಂ, ಜೊತೆ ಲಲಿತಕಲಾ ಕಾರ್ಯದರ್ಶಿ ಯಾಗಿ ಪವಿತ್ರಾ ಮೂರನೇ ಬಿಕಾಂ ಆಯ್ಕೆಯಾಗಿದ್ದಾರೆ. ಚುನಾವಣೆಯ ನಂತರ ವಿದ್ಯಾರ್ಥಿ […]

ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ನಡೆದ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭ

Monday, February 25th, 2013
Mangalore University

ಮಂಗಳೂರು : ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ರಾಜ್ಯಪಾಲ ಹಾಗೂ ವಿ.ವಿ.ಕುಲಾಧಿಪತಿ ಎಚ್.ಆರ್.ಭಾರದ್ವಾಜ್ ಅವರು ಹಿರಿಯ ಹಾಕಿ ಆಟಗಾರ ಎ,.ಬಿ.ಸುಬ್ಬಯ್ಯ, ಖ್ಯಾತ ಸಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಹಾಗೂ ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಹೊಸದಿಲ್ಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕಾರ್ಯದರ್ಶಿ ರಾಮಸ್ವಾಮಿ, ದೇಶದಲ್ಲಿರುವ 600 ವಿಶ್ವ ವಿದ್ಯಾನಿಲಯಗಳ ಪೈಕಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ […]

ರವೀಂದ್ರ ಕಲಾ ಭವನದಲ್ಲಿ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣ ‘ಕಲೆ-ಹಿಂಸೆ’

Thursday, January 10th, 2013
National seminar

ಮಂಗಳೂರು : ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಕಾಲೇಜಿನ ಇಂಗ್ಲಿಷ್‌ ವಿಭಾಗ ವತಿಯಿಂದ ನಡೆದ ‘ಕಲೆ-ಹಿಂಸೆ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣವನ್ನು ಮಂಗಳೂರು ವಿಶ್ವದ್ಯಾನಿಲಯದ ಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಹಿಂಸೆ ಎನ್ನುವುದು ವಿವಿಧ ಆಯಾಮಗಳಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಪ್ರತಿಫಲಿಸಿದರೆ, ಕಲೆ ಮಾನವನ ಜೀವನದಲ್ಲಿ ಅನನ್ಯ ಭಾವರೂಪಿಯಾಗಿ ಹೊಸತನವನ್ನು ಪ್ರಜ್ವಲಿಸುತ್ತದೆ. ಕಲೆಯ ಮೂಲಕ ಹಿಂಸೆಯನ್ನು ತಡೆಗಟ್ಟಿ, ಅದನ್ನು ಮಟ್ಟಹಾಕಲು ಸಾಧ್ಯ ಎಂದವರು ಹೇಳಿದರು. […]