ಎಕ್ಸ್‌ಪರ್ಟ್‌ ಎಜ್ಯುಕೇಶನಲ್‌ ಆಂಡ್‌ ಚಾರಿಟೇಬಲ್ ಫೌಂಡೇಶನ್‌ ಇವರಿಂದ ಮಂದಾರ ಸಂತ್ರಸ್ತರಿಗೆ 4ಲಕ್ಷ ರೂ. ಚೆಕ್ ವಿತರಣೆ

Friday, October 25th, 2019
pacchanady

ಮಂಗಳೂರು :ಎಕ್ಸ್‌ಪರ್ಟ್‌ ಎಜ್ಯುಕೇಶನಲ್‌ ಆಂಡ್‌ ಚಾರಿಟೇಬಲ್ ಫೌಂಡೇಶನ್‌ ಮಂಗಳೂರು ಇವರಿಂದ ಮಂದಾರದ ಸಂತ್ರಸ್ತರಿಗೆ ಒಟ್ಟು ಮೊತ್ತ 4,00,000 ರೂಪಾಯಿ ಚೆಕ್ ವಿತರಿಸಿದರು. ಆಗಸ್ಟ್ ತಿಂಗಳಿನಲ್ಲಿ ಸುರಿದ ಬಾರೀ ಮಳೆಗೆ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯರಾಶಿಯು ಕುಡುಪು ಸಮೀಪದ ಮಂದಾರ ಪ್ರದೇಶಕ್ಕೆಪ್ರವಾಹ  ರೀತಿಯಲ್ಲಿ ಹರಿದಿತ್ತು. ಆಗ ಮಂದಾರ ಪ್ರದೇಶ ವ್ಯಾಪಿಯಲ್ಲಿ ಹರಡಿದ ವಸ್ತು ಸ್ಥಿತಿಯನ್ನು ಗಮನಿಸಿ ತಕ್ಷಣವೇನಾವು ಸಾಮಾಜಿಕವಾದ ಬದ್ಧತೆಯಿಂದ ಸಂಸ್ಥೆಯ ಉಪನ್ಯಾಸಕರನ್ನು ಸ್ಥಳಕ್ಕೆಕಳುಹಿಸಿ ಗ್ರಾಮಸ್ಥರನ್ನು ಭೇಟಿ ಮಾಡಿ ಆತ್ಮಸ್ಥೈರ್ಯವನ್ನು ತುಂಬಿದ್ದೆವು.ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ನಮ್ಮ ಕೈಲಾಗುವ […]

ಮಂದಾರ ಪ್ರದೇಶಕ್ಕೆ ರಾಜ್ಯದ ವಿಶೇಷ ಅಧ್ಯಯನ ತಂಡ ಭೇಟಿ

Friday, September 20th, 2019
pacchanady

ಮಂಗಳೂರು : ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಜರಿದು ಮಂದಾರ ಪ್ರದೇಶಕ್ಕೆ ವ್ಯಾಪಿಸಿದ ಪರಿಣಾಮ ಉಂಟಾಗಿರುವ ಅನಾ ಹುತಗಳ ಬಗ್ಗೆ ಸರಕಾರಕ್ಕೆ ವರದಿ ನೀಡುವ ನೆಲೆಯಲ್ಲಿ ರಾಜ್ಯದ ವಿಶೇಷ ಅಧ್ಯಯನ ತಂಡ ಗುರುವಾರ ಮಂಗಳೂರಿಗೆ ಆಗಮಿಸಿ ಮಂದಾರ ಪ್ರದೇಶಕ್ಕೆ ಭೇಟಿ ನೀಡಿತು. ವಿವಿಧ ಕ್ಷೇತ್ರದ ತಜ್ಞರಾಗಿರುವ ಚೆನ್ನೈಯ ಎಸ್‌. ಪಟ್ಟಾಭಿರಾಮಣ್‌, ಮೈಸೂರಿನ ಡಾ| ಪಿ.ಎಂ. ಕುಲಕರ್ಣಿ, ಬೆಂಗಳೂರಿನ ರಮೇಶ್‌, ತಮಿಳುನಾಡಿನ ನಾಗೇಶ್‌ ಪ್ರಭು ಅವರನ್ನು ಒಳಗೊಂಡಿರುವ ತಂಡವು ಮಂದಾರ ಪ್ರದೇಶದಲ್ಲಿ ಪರಿ ಶೀಲನೆ ನಡೆಸಿತು. ಬಳಿಕ ಮಂದಾರ ಪ್ರದೇ ಶದ ನಿರ್ವಸಿತರು […]

ಮಂದಾರ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ನೀಡಿ : ಸಿದ್ದರಾಮಯ್ಯ ಆಗ್ರಹ

Saturday, August 31st, 2019
pacchanadi

ಮಂಗಳೂರು : ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ ಅವೈಜ್ಞಾನಿಕವಾಗಿ ಪಚ್ಚನಾಡಿಯಲ್ಲಿ ತ್ಯಾಜ್ಯ ಸಂಗ್ರಹ ಮಾಡಿದ್ದರಿಂದ ನೆರೆ ಸಂದರ್ಭದಲ್ಲಿ ಬಹಳಷ್ಟು ಮನೆಗಳಿಗೆ ಹಾನಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪಚ್ಚನಾಡಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ತ್ಯಾಜ್ಯ ಹಾಕುವ ಮೊದಲು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಮೊದಲೇ ರಿಟೈನಿಂಗ್ ಹಾಲ್ ಹಾಕಿದ್ದರೆ ಈ ರೀತಿ ಹಾನಿ ಆಗುತ್ತಿರಲಿಲ್ಲ. ಈಗಾಗಲೇ 27 ಮನೆಗಳಿಗೆ ಹಾನಿಯಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ಸೂಕ್ತ ಪರಿಹಾರ […]

ಪಚ್ಚನಾಡಿ : ಬಾವಿ, ಬೋರ್‌ವೆಲ್ ಕಲುಷಿತಗೊಳಿಸಿದ ತ್ಯಾಜ್ಯ ನೀರು

Saturday, August 17th, 2019
mandaara

ಮಂಗಳೂರು : ಪಚ್ಚನಾಡಿ ತ್ಯಾಜ್ಯರಾಶಿಯ ಗುಡ್ಡ ಜರಿದು ಮಂದಾರ ವ್ಯಾಪ್ತಿಯಲ್ಲಿ ಮನೆ-ಮರಗಳನ್ನು ಆಹುತಿ ಪಡೆದ ಘಟನೆ ಜೀವಂತವಾಗಿರುವಾಗಲೇ, ಇದೀಗ ಆ ಪರಿಸರದ ಬಾವಿ-ತೋಡುಗಳೆಲ್ಲ ಕೊಳಚೆ ನೀರಿನಿಂದ ಗಬ್ಬೆದ್ದು ಹೋಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ತ್ಯಾಜ್ಯರಾಶಿಯಿಂದ ಮೊದಲೇ ಸಂತ್ರಸ್ತ ರಾಗಿರುವ ಇಲ್ಲಿನ ಮನೆಮಂದಿ, ಮುಂದೆ ಗಲೀಜು ನೀರಿನಿಂದ ಇನ್ನೊಂದು ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ. ಇಲ್ಲಿಂದ ಹರಿಯುವ ತ್ಯಾಜ್ಯ ನೀರು ಮಂದಾರದ ಸುತ್ತಮುತ್ತಲಿನ ಹಲವು ಬಾವಿಗಳಿಗೆ ಸೇರುತ್ತಿದೆ. ಕೆಲವು ಬಾವಿಗಳಿಗೆ ನೇರವಾಗಿ ತ್ಯಾಜ್ಯನೀರು ಹರಿಯುತ್ತಿದ್ದರೆ, ಇನ್ನೂ ಕೆಲವು […]