Blog Archive

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಸ ಜವಾಬ್ದಾರಿ, ಮಹಾರಾಷ್ಟ್ರದ ಉಸ್ತುವಾರಿ ಆಗಿ ಖರ್ಗೆ ಅವರು ನೇಮಕ..!

Friday, June 22nd, 2018
mallikarjun-karge

ನವದೆಹಲಿ: ಕಾಂಗ್ರೆಸ್‌‌ನ ಹಿರಿಯ ಮುಖಂಡ, ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಮಹಾರಾಷ್ಟ್ರದ ಉಸ್ತುವಾರಿ ಆಗಿ ಖರ್ಗೆ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಹಾರಾಷ್ಟ್ರದ ಉಸ್ತುವಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತ ಅಧಿಕೃತ ಪ್ರಕಟಣೆಯನ್ನು ಪಕ್ಷದ ಟ್ವಿಟ್ಟರ್‌ ಖಾತೆಯಲ್ಲಿ ಹಾಕಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಖರ್ಗೆ ಮಹಾರಾಷ್ಟ್ರದ ಉಸ್ತುವಾರಿ ನೇಮಕಗೊಳಿಸಲಾಗಿದ್ದು, ಹಾಲಿ ಉಸ್ತುವಾರಿ […]

6 ದಿನಗಳಲ್ಲಿ ಮನೆಗೆ ಹೋಗಲಿರುವ ಸಿಎಂ ಬಗ್ಗೆ ಮಾತನಾಡಲ್ಲ: ಬಿಎಸ್‌ವೈ

Monday, May 7th, 2018
yedeyurappa

ಕೊಪ್ಪಳ: ಇನ್ನು ಕೇವಲ ಆರು ದಿನಗಳಲ್ಲಿ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ. ಮನೆಗೆ ಹೋಗುವವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಯೋಗ್ಯತೆ ಇದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಬೇಕಿತ್ತು. ಆದರೆ, ಬಾದಾಮಿಗೆ ಯಾಕೆ ಬಂದು ಸ್ಪರ್ಧಿಸಿದ್ದಾರೆ. ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಸೋಲು ನಿಶ್ಚಿತ ಎಂದರು. ನಾನು ಗೆಲ್ಲುತ್ತೇನೆ, ನಾನೇ […]

ಮಲ್ಲಿಕಾರ್ಜುನ ಖರ್ಗೆಗೆ ಅನ್ಯಾಯ ಆಗಿದೆ ಎಂದ ಮೋದಿಗೆ ಆನಂದ ಶರ್ಮ ತಿರುಗೇಟು

Friday, May 4th, 2018
malikarjun

ಮಂಗಳೂರು: ಮಲ್ಲಿಕಾರ್ಜುನ ಖರ್ಗೆಗೆ ಅನ್ಯಾಯ ಆಗಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕೇಂದ್ರದ ಮಾಜಿ ಸಚಿವ ಆನಂದ ಶರ್ಮ ತಿರುಗೇಟು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉನ್ನತ ಸ್ಥಾನವನ್ನು ಪಕ್ಷದಲ್ಲಿ ನೀಡಲಾಗಿದೆ. ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನವನ್ನು ನೀಡಲಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆಯ ಸ್ಥಾನಕ್ಕೆ ಸರಿಯಾದ ಮಾನ್ಯತೆಯನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂದರು. ಮೋದಿಯವರು ಕನಸಿನ ಸಾಮ್ರಾಜ್ಯ ಕಟ್ಟುತ್ತಿದ್ದಾರೆ. ಅವರು ಕೇವಲ ಸುಳ್ಳುಗಳನ್ನು ಮಾತ್ರ ಮಾತನಾಡುತ್ತಾರೆ. ಮೋದಿ ಕರ್ನಾಟಕ ಜನರ ಕ್ಷಮೆ ಕೇಳಬೇಕು. ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಮೋದಿ […]

ಕಾಂಗ್ರೆಸ್‌ ಉಪವಾಸ ಸತ್ಯಾಗ್ರಹ…ನಾಯಕರ ಉಪಹಾರ ಸೇವನೆ ಫೋಟೋ ಹರಿಬಿಟ್ಟ ಬಿಜೆಪಿ!

Monday, April 9th, 2018
delhi-congress-2

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಉಪವಾಸ ನಿರಶನ ಕೈಗೊಂಡಿದೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ರಾಜ್‌ಘಾಟ್‌ನಲ್ಲಿ ಕೈ ನಾಯಕರು ಸತ್ಯಾಗ್ರಹ ನಡೆಸಿದರು. ದಲಿತರ ಮೇಲಿನ ದೌರ್ಜನ್ಯ ತಡೆ ಹಾಗೂ ಸಂಸತ್ತಿನ ಕಲಾಪ ಸರಿಯಾಗಿ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ದೆಹಲಿಯಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗಿತು. ಈ ವೇಳೆ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ […]

ಪೂಜಾರಿ ‘ಕೈ’ ಹಿಡಿದ ರಾಹುಲ್‌: ಕರಾವಳಿಯಲ್ಲಿ ಒಗ್ಗಟ್ಟಿನ ಮಂತ್ರ !

Thursday, March 29th, 2018
rahul-gandhi

ಮಂಗಳೂರು: ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜನಾಶೀರ್ವಾದ ಯಾತ್ರೆ ಮೂಲಕ ಕರಾವಳಿಗೆ ನೀಡಿರುವ ಮೊದಲ ಭೇಟಿಯು ರಾಜಕೀಯವಾಗಿ ಹಲವು ರೀತಿಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಆ ಪೈಕಿ ಪ್ರಸಿದ್ಧ ಕುದ್ರೋಳಿ ದೇವಸ್ಥಾನ ಭೇಟಿ ಹಾಗೂ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಪ್ತರಾಗಿದ್ದ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರೊಂದಿಗೆ ನಡೆಸಿದ ಕುಶಲೋಪರಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಪಕ್ಷದ ಅಧ್ಯಕ್ಷರಾದ ಬಳಿಕ ರಾಹುಲ್‌ ಗಾಂಧಿ ಮೊದಲ ಬಾರಿಗೆ ಕರಾವಳಿಯ ಉಭಯ […]

ಸಂಸತ್‌‌ನಲ್ಲಿ ಸಿದ್ದರಾಮಯ್ಯ ಹೆಸರು ಉಲ್ಲೇಖ… ಮೋದಿಗೆ ಟ್ಟಿಟ್ಟರ್‌‌ನಲ್ಲಿ ಸಿಎಂ ಟಾಂಗ್‌

Thursday, February 8th, 2018
narendra-modi

ಬೆಂಗಳೂರು: ಲೋಕಸಭೆಯಲ್ಲಿ ನಡೆಯುತ್ತಿರುವ ಬಜೆಟ್‌‌ ಅಧಿವೇಶನದ ವೇಳೆ ಭಾಷಣ ಮಾಡುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸಿ ಮಾತನಾಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಸಂಸತ್‌ನಲ್ಲಿ ನನ್ನನ್ನು ಮತ್ತು ಬಸವಣ್ಣನವರನ್ನು ನೆನಪಿಸಿಕೊಂಡಿದ್ದರಿಂದ ಸಂತಸವಾಗಿದೆ. ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ ಎಂದು ಬಸವಣ್ಣ ಹೇಳಿದ್ದರು. ಬಸವಣ್ಣನವರ ತತ್ವಗಳನ್ನು ನೀವು ಅನುಸರಿಸಿದರೆ ಕನ್ನಡಿಗರು ನಿಮಗೆ ಧನ್ಯವಾದ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅಟಲ್ ಬಿಹಾರಿ […]

ಮಂಗಳೂರಿಗೆ 2 ಹೊಸ ರೈಲುಗಳ ಭಾಗ್ಯ !

Wednesday, February 12th, 2014
Manglore-Trains

ಹೊಸದಿಲ್ಲಿ: ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿಂದು ಮಂಡಿಸಿರುವ 2014-15ರ ಸಾಲಿನ ಮಧ್ಯಾಂತ್ರ ರೈಲ್ವೆ ಬಜೆಟ್‌ನಲ್ಲಿ ಮಂಗಳೂರಿಗೆ ಎರಡು ಹೊಸ ರೈಲುಗಳ ಭಾಗ್ಯ ಒದಗಿ ಬಂದಿದೆ. ಈ ಎರಡು ಹೊಸ ರೈಲುಗಳೆಂದರೆ ಮಂಗಳೂರು – ಮಡಗಾಂವ್‌ ಇಂಟರ್‌ ಸಿಟಿ (ದಿನನಿತ್ಯ) ರೈಲು ಮತ್ತು ಮಂಗಳೂರು – ಕಾಚಿಗುಡ ರೈಲು. ಮಂಗಳೂರು – ಕಾಚಿಗುಡ ರೈಲು ಕೊಯಮುತ್ತೂರು, ರೆಣಿಂತಾ ಮತ್ತು ಗೂಟಿ ಮಾರ್ಗವಾಗಿ ಸಾಗಲಿದೆ. ಈ ಎರಡೂ ಹೊಸ ರೈಲುಗಳಿಗೆ ಸ್ವತಃ ಸಚಿವ ಖರ್ಗೆ ಅವರೇ ಫೆ.23 […]

ಕೇಂದ್ರ ಮಧ್ಯಂತರ ರೇಲ್ವೆ ಬಜೆಟ್ -2014 ಮಂಡನೆ

Wednesday, February 12th, 2014
Mallikarjun-karge

ನವದೆಹಲಿ: ಲೋಕಸಭೆಯಲ್ಲಿ ತೆಲಂಗಾಣ ಗದ್ದಲದ ನಡುವೆಯೇ ಯುಪಿಎ-2 ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಬುಧವಾರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು 4 ತಿಂಗಳುಗಳಿಗಾಗಿ ಇರುವ ಮಧ್ಯಂತರ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಖರ್ಗೆ ಅವರ ಪಾಲಿಗೆ ಇದು ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಬಜೆಟ್ ಮಂಡನೆಗೆ ಮುನ್ನ “ಕಳಬೇಡ ಕೊಲಬೇಡ” ವಚನ ಪಠಿಸಿದ ಸಚಿವ ಖರ್ಗೆ , ದೇಶದ ಅಭಿವೃದ್ಧಿಗೆ ರೇಲ್ವೇ ವಿಕಾಸ ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರೇಲ್ವೆ ಬಜೆಟ್ ಮುಖ್ಯಾಂಶಗಳು ಜಮ್ಮು ಕಾಶ್ಮೀರದಲ್ಲಿ ಸಂಪರ್ಕ ಕಲ್ಪಿಸಲು […]