ಕನಕದಾಸರು ಸರ್ವಕಾಲಕ್ಕೂ ಸಲ್ಲುವ ಮಹಾನ್ ದಾರ್ಶನಿಕ- ಪ್ರೊ.ಎ.ವಿ.ನಾವುಡ
Monday, July 25th, 2016ಮಂಜೇಶ್ವರ: ಕನ್ನಡ ಸಾಹಿತ್ಯ ಲೋಕದಲ್ಲಿ ದಾಸ ಸಾಹಿತ್ಯ ಅಗಾಧ ಶ್ರೀಮಂತಿಕೆಯುಳ್ಳದ್ದು. ಅದರಲ್ಲೂ ಕನಕದಾಸರ ಸಾಹಿತ್ಯ ಎಲ್ಲಾ ಕಾಲಕ್ಕೂ ಪ್ರಸ್ತುವೆನಿಸಿದ್ದರಿಂದಲೇ ಆತನನ್ನು ಕೇವಲ ಕವಿ, ಕೀರ್ತನಕಾರ ಎಂದು ಪರಿಗಣಿಸದೆ ಸರ್ವಕಾಲಕ್ಕೂ ಸಲ್ಲುವ ಮಹಾನ್ ದಾರ್ಶನಿಕ ಎಂದು ಕರೆಯುವುದು ಸೂಕ್ತ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ ನಾವುಡ ಅವರು ಅಭಿಪ್ರಾಯಪಟ್ಟರು. ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಾಸರಗೋಡು ಪಾರೆಕಟ್ಟೆ ರಂಗ ಕುಟೀರ ಹಾಗೂ ಪದ ಬೆಂಗಳೂರು ಇದರ ಸಹಯೋಗದಲ್ಲಿ ಶನಿವಾರ ಮಂಜೇಶ್ವರ ಗೋವಿಂದ […]