ಪರವಾನಿಗೆ ಇಲ್ಲದ ಮಾಂಬುಳಿ ಕ್ಲಿನಿಕ್‍ನ್ನು ಮುಚ್ಚಿಸಿದ ಆರೋಗ್ಯ ಇಲಾಖೆ

Thursday, June 30th, 2022
mambuli

ಸುಳ್ಯ : ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದ್ದ ಮಾಂಬುಳಿ ಕ್ಲಿನಿಕ್‍ನ್ನು ಆರೋಗ್ಯ ಇಲಾಖೆ ಬುಧವಾರ ಮುಚ್ಚಿಸಿದೆ. ಅಲ್ಲದೇ ಕ್ಲಿನಿಕ್ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಿಸಿ ಅದರಲ್ಲಿದ್ದ ವಸ್ತುವನ್ನು ಮುಟ್ಟುಗೋಲು ಹಾಕಲಾಗಿದೆ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ರೋಸ್ಲಿ ಮ್ಯಾಥ್ಯೂ ಎಂಬವರು ಪರವಾನಿಗೆ ಇಲ್ಲದೆ ಮಾಂಬುಳಿ ಕ್ಲಿನಿಕ್ ನಡೆಸುತ್ತಿದ್ದು ಈ ಕುರಿತು ಆರೋಗ್ಯ ಇಲಾಖೆಗೆ ದೂರು ಹೋಗಿತ್ತು. ಬಳಿಕ ಆರೋಗ್ಯ ಇಲಾಖೆ ಕಡೆಯಿಂದ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಕರ್ನಾಟಕ ಆಯುರ್ವೇದ, ಯುವಾನಿ ವೈದ್ಯ ಮಂಡಳಿಯಿಂದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಲು ಜಿಲ್ಲಾ ಆರೋಗ್ಯ […]