Blog Archive

ಕೇವಲ ಫೋಟೋಕ್ಕಾಗಿ ಮಾತ್ರ ಮಾಸ್ಕನ್ನು ತೆಗೆದು ಹಾಕಿಕೊಂಡಿದ್ದೆ : ಜಿಲ್ಲಾಧಿಕಾರಿ ಜಿ ಜಗದೀಶ್ ಸ್ಪಷ್ಟನೆ

Saturday, April 24th, 2021
G Jagadeesha

ಉಡುಪಿ : ಜಿಲ್ಲಾಧಿಕಾರಿ ಜಿ ಜಗದೀಶ್ ಮಾಸ್ಕ್ ಧರಿಸಿದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕುರಿತು ಸ್ಪಷ್ಟನೆ ನೀಡಿದ್ದು. ಕೇವಲ ಫೋಟೋಕ್ಕಾಗಿ ಮಾತ್ರ ಮಾಸ್ಕನ್ನು ತೆಗೆದು ಹಾಕಿಕೊಂಡಿದ್ದೇನೆ ಎಂದಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಕಬೇಕಿಲ್ಲ. ನನ್ನ ಮನೆಯ ಪಕ್ಕದಲ್ಲೇ ಕಾರ್ಯಕ್ರಮಿದ್ದದ್ದು. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿಯವರ ಮಗಳ ಕಾರ್ಯಕ್ರಮವಾಗಿತ್ತು.  ನಾಲ್ಕು ಮನೆಯ ಕುಟುಂಬಸ್ಥರು ಹೆಚ್ಚು ಕಮ್ಮಿ 20 ಮಂದಿ ಅದರಲ್ಲಿ ಭಾಗಿಯಾಗಿದ್ದರು. ನಾನು ಊಟಕ್ಕೂ ನಿಲ್ಲದೆ, ಐದಾರು ನಿಮಿಷವಷ್ಟೇ ಇದ್ದು ಹೊರಟೆ . ಕೇವಲ ಫೋಟೋಕ್ಕಾಗಿ ಮಾತ್ರ ಮಾಸ್ಕನ್ನು ತೆಗೆದು ಹಾಕಿಕೊಂಡಿದ್ದೇನೆ. ಸೀಮಿತ […]

ದಕ್ಷಿಣ ಕನ್ನಡ ಜಿಲ್ಲೆ 474 , ಉಡುಪಿಯಲ್ಲಿ 274 ಕೊರೊನಾ ವೈರಸ್‌ ಪ್ರಕರಣಗಳು ಪತ್ತೆ

Friday, April 23rd, 2021
corona

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ವರದಿಯಾದ 474 ಕೊರೊನಾ ವೈರಸ್‌ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 39,718 ಕ್ಕೆ ಏರಿವೆ. ಈ ಪೈಕಿ 2,825 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಒಟ್ಟು 7,00,688 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 6,60,970 ಮಾದರಿಗಳು ನೆಗೆಟಿವ್‌‌ ಆಗಿದೆ. ಗುರುವಾರ 121 ಜನರು ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 36,145ಕ್ಕೆ ಏರಿದೆ. ಈವರೆಗೆ ಒಟ್ಟು 745 ಸಾವುಗಳು ಸಂಭವಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 47,706 ಮಾಸ್ಕ್‌ […]

ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದ ಮತದಾನ ಬಿರುಸಿನಿಂದ ಆರಂಭ

Tuesday, December 22nd, 2020
GP vote

ಮಂಗಳೂರು :  ಗ್ರಾಮ ಪಂಚಾಯತ್ ಗಳಿಗೆ ನಡೆಯುತ್ತಿರುವ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. 10 ಗಂಟೆ ವೇಳೆಗೆ ಮಂಗಳೂರು ತಾಲೂಕಿನಲ್ಲಿ 14.6 ಶೆ., ಮೂಡುಬಿದರೆ15.64 ಶೇ. ಹಾಗೂ ಬಂಟ್ಟಾಳ ತಾಲೂಕಿನಲ್ಲಿ 13.75 ಶೇ. ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 14.48 ಶೇ. ಮತದಾನವಾಗಿರುವುದು ವರದಿಯಾಗಿದೆ. ಸ್ಯಾನಿಟೈಸರ್, ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ಮತದಾರರು ಮತದಾನ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತರು ಥರ್ಮಾಮೀಟರ್ ನಲ್ಲಿ ದೇಹದ […]

ಮಾಸ್ಕ್ ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ 200 ರೂ ದಂಡ : ಜಿಲ್ಲಾಧಿಕಾರಿ

Thursday, September 24th, 2020
Rajendra KV

ಮಂಗಳೂರು: ಮಾಸ್ಕ್ ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ 200 ರೂ. ಮತ್ತು ಇನ್ನುಳಿದ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಹೊಟೇಲ್‌, ರೆಸ್ಟೋರೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಮಾಲ್‌ಗಳು, ಅಂಗಡಿಗಳಲ್ಲಿ ಕಾರ್ಯನಿರ್ವಹಿ ಸುವ ಎಲ್ಲ ಸಿಬಂದಿ ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ. ಪ್ರತಿ […]

ರಾಷ್ಟ್ರಧ್ವಜದ ‘ಮಾಸ್ಕ್’ ಮಾರಾಟ ಮಾಡುವ ಅಮೇಝಾನ, ಫ್ಲಿಪ್‌ಕಾರ್ಟ್ ಇತ್ಯಾದಿ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ

Friday, August 14th, 2020
india Mask

ಮಂಗಳೂರು : ‘ಭಾರತೀಯ ರಾಷ್ಟ್ರಧ್ವಜ’ವು ಕೋಟಿಗಟ್ಟಲೆ ಭಾರತೀಯರಿಗೆ ಸ್ವಾಭಿಮಾನದ ವಿಷಯವಾಗಿದೆ; ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಅದನ್ನು ಇತರ ಯಾವುದಕ್ಕೂ ಉಪಯೋಗಿಸುವುದು ಕಾನೂನಿಗನುಸಾರ ದಾಖಲಾರ್ಹ ಹಾಗೂ ಜಾಮೀನುರಹಿತ ಅಪರಾಧವಾಗಿದೆ. ಹೀಗಿದ್ದರೂ, ಇಂತಹ ಸಂವೇದನಾಶೀಲ ವಿಷಯಗಳ ಬಗ್ಗೆ ಗಾಂಭೀರ್ಯತೆಯನ್ನಿಡದೇ ಅಮೇಝಾನ್, ಇಂಡಿಯಾಮಾರ್ಟ್, ಫೇಮಸ್‌ಶಾಪ್, ಮೀಂತ್ರಾ, ಸ್ನ್ಯಾಪಡೀಲ್, ಫ್ಲಿಪ್‌ಕಾರ್ಟ್‌ನಂತಹ ‘ಈ-ಕಾಮರ್ಸ್’ ಜಾಲತಾಣಗಳಲ್ಲಿ ಕೊರೋನಾ ಸೋಂಕನ್ನು ತಡೆಗಟ್ಟಲು ಆಗಸ್ಟ್ 15 ರ ನಿಮಿತ್ತ ಭಾರತೀಯ ರಾಷ್ಟ್ರಧ್ವಜದ ಬಣ್ಣಗಳಿರುವ ‘ಮಾಸ್ಕ್’ ನಿರ್ಮಿಸಿ ಅದನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂತಹವರ ಮೇಲೆ ರಾಷ್ಟ್ರಧ್ವಜದ ಅವಮಾನ ಮಾಡಿದ […]

ಮಾಸ್ಕ್ ಧರಿಸದೆ ವಾಹನದಲ್ಲಿ ಸಂಚರಿಸುತ್ತಿದ್ದ ಎಂಎಲ್ಎ ಮಗನನ್ನು ಪ್ರಶ್ನಿಸಿದಕ್ಕೆ ಮಹಿಳಾ ಪೊಲೀಸ್ ಪೇದೆ ಕೆಲಸವನ್ನೇ ಬೇಕಾಯಿತಂತೆ!

Sunday, July 12th, 2020
sunithayadav

ಸೂರತ್ : ಕರೊನಾ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿ  ವಾಹನದಲ್ಲಿ ಮಾಸ್ಕ್ ಧರಿಸದೆ ತೆರಳುತ್ತಿದ್ದ ಐವರನ್ನು ಪ್ರಶ್ನಿಸಿದಕ್ಕೆ ಮಹಿಳಾ ಪೊಲೀಸ್ ಪೇದೆಯೋರ್ವರು ಕೆಲಸವನ್ನೇ ಬಿಡಬೇಕಾದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ರಾತ್ರಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೋರ್ವರು ಎಂಎಲ್ಎ ಎಂದು ನಾಮಫಲಕ ಹಾಕಿ ಮಾಸ್ಕ್ ಧರಿಸದೆ ವಾಹನದಲ್ಲಿ ಸಂಚರಿಸುತ್ತಿದ್ದ ಐವರನ್ನು ಪ್ರಶ್ನಿಸಿದರು, ಆದರೆ ಹಾಗೇ ಪ್ರಶ್ನೆ ಮಾಡಿದ್ದೇ ತಪ್ಪಾಗಿ ಹೋಯ್ತು ಅವರಿಗೆ ಕೆಲಸಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿಗೆ ಬಂತು.  ಅವರ ಮೇಲಾಧಿಕಾರಿ ಆಕೆಯನ್ನು ರಾಜೀನಾಮೆ ಕೊಡಿಸುವಂತೆ ಮಾಡಿದ್ದರಂತೆ. ಗುಜರಾತ್ನ ಆರೋಗ್ಯ ಸಚಿವರಾದ ಕುಮಾರ್ ಕನನಿ ಅವರ ಮಗ ಪ್ರಕಾಶ್ ಮತ್ತು ಮಹಿಳಾ ಪೇದೆ ಸುನಿತಾ ಯಾದವ್ ನಡುವಿನ ಸಂಭಾಷಣೆಯ ಆಡಿಯೋ […]

ನಾಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಗಮನಿಸಿ

Wednesday, June 24th, 2020
sslc exam

ಬೆಂಗಳೂರು :  ಕೊರೊನಾ ಸೋಂಕಿನ ಭೀತಿ ನಡುವೆಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಸರ್ಕಾರ  ತೀರ್ಮಾನ ಕೈಗೊಂಡಿರುವ  ಹಿನ್ನಲೆಯಲ್ಲಿ  ರಾಜ್ಯಾದ್ಯಂತ  8,48,203 ವಿದ್ಯಾರ್ಥಿಗಳು ಗುರುವಾರ  ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಇರುವ 3209 ಪರೀಕ್ಷಾ ಕೇಂದ್ರಗಳಲ್ಲಿ 4,48,560 ಬಾಲಕರು ಮತ್ತು 3,99,643 ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. 7115 ಥರ್ಮಲ್ ಸ್ಕ್ಯಾನರ್, 34 ಜಿಲ್ಲಾ ಕೇಂದ್ರದ ಹೆಲ್ಪ್‍ಡೆಸ್ಕ್, 204 ತಾಲ್ಲೂಕು ಕೇಂದ್ರದ ಹೆಲ್ಪ್‍ಡೆಸ್ಕ್, 3209 ಕೇಂದ್ರಗಳಲ್ಲಿ 5755 ಆರೋಗ್ಯ ತಪಾಸಣೆ ಕೇಂದ್ರಗಳನ್ನು ತೆರೆಯಲಾಗಿದೆ. […]

ಆರೋಗ್ಯವಂತರೂ ಮಾಸ್ಕ್ ಧರಿಸಬೇಕು-ಆರೋಗ್ಯ ಸಚಿವಾಲಯ

Sunday, April 5th, 2020
mask

ನವದೆಹಲಿ  : ಆರೋಗ್ಯವಂತರೂ ಮಾಸ್ಕ್ ಧರಿಸಬೇಕು ಎನ್ನುವ ಸೂಚನೆಯನ್ನು ಆರೋಗ್ಯ ಸಚಿವಾಲಯ ಹೊರಡಿಸಿದೆ. ಮನೆಯಲ್ಲಿ ಮಾಡಲ್ಪಟ್ಟ (ಬೇಸಿಕ್‌), ಉಸಿರಾಟಕ್ಕೆ ಯೋಗ್ಯವಾಗುವಂತೆ ತಯಾರಿಸಿದ ಮಾಸ್ಕ್ ಅನ್ನು ಸೋಂಕಿನ ಲಕ್ಷಣಗಳಿಲ್ಲದ, ಆರೋಗ್ಯವಂತ ಜನರೂ ಧರಿಸಬೇಕು ಎಂದು ತಿಳಿಸಿದೆ. ಆದರೆ, ಇಂಥ ಗೃಹ ನಿರ್ಮಿತ ಮಾಸ್ಕ್ ಗಳನ್ನು ಕೋವಿಡ್ 19 ವೈರಸ್ ಸೋಂಕಿತರು, ವೈದ್ಯಕೀಯ ಸೇವೆಯಲ್ಲಿರುವವರು ಧರಿಸುವಂತಿಲ್ಲ. ಅವರು ಪಿಪಿಇ ಸುರಕ್ಷಾ ಉಡುಪಿನೊಂದಿಗೆ, ಎನ್‌- 95 ಮಾಸ್ಕ್ ಅನ್ನು ಧರಿಸಿ, ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಚಿವಾಲಯ ಹೇಳಿದೆ. ಗೃಹ […]

ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ನಿರ್ಮಾಣಕ್ಕೆ ಖೈದಿಗಳ ಬಳಕೆ

Saturday, March 28th, 2020
mask

ಬೆಂಗಳೂರು :  ವೈರಸ್ ನಿಯಂತ್ರಣದಲ್ಲಿ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ಪಾತ್ರ ಗಣನೀಯವಾಗಿದ್ದು, ಇದೇ ಕಾರಣಕ್ಕೆ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ತಯಾರಿಕಾ ಸಂಸ್ಥೆಗಳು ಇವುಗಳ ತಯಾರಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿವೆ. ಇದಾಗ್ಯೂ ದೇಶದಲ್ಲಿ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ಗಣನೀಯ ಕೊರತೆ ಕಾಣುತ್ತಿದೆ. ಇದೇ ಕಾರಣಕ್ಕೆ ದೇಶದ ಜೈಲುಗಳಲ್ಲಿರುವ ಲಕ್ಷಾಂತರ ಖೈದಿಗಳು ಇದೀಗ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಖೈದಿಗಳಿಂದ ಪ್ರತಿನಿತ್ಯ 15 ಸಾವಿರ ಮಾಸ್ಕ್ […]

ಪತ್ರಕರ್ತರಿಗೆ ಅಕ್ಕಿ, ಗೋಧಿ, ಮಾಸ್ಕ್ ವಿತರಣೆ ಮಾಡಿದ ಪತ್ರಿಕಾಭವನ ಟ್ರಸ್ಟ್

Thursday, March 26th, 2020
Rice

ಮಂಗಳೂರು: ಕೊರೊನಾ ಮಾಹಾಮಾರಿಯ ಎಫೆಕ್ಟ್ ಎಲ್ಲೆಡೆ ತಟ್ಟಿದ್ದು, ಈ ಬಗ್ಗೆ ಸಮಾಜಕ್ಕೆ ಜನಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದಲ್ಲಿರುವ ಪತ್ರಕರ್ತರಿಗೆ ನೆರವಾಗುವ ದೃಷ್ಟಿಯಿಂದ ಪತ್ರಿಕಾ ಭವನ ಟ್ರಸ್ಟ್‌ನಿಂದ ಪ್ರೆಸ್‌ಕ್ಲಬ್ ಮತ್ತು ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಉಚಿತ ಅಕ್ಕಿ, ಗೋಧಿ ಹಾಗೂ ಮಾಸ್ಕ್ ವಿತರಣೆ ನಡೆಯಿತು. ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿವರು ಅಕ್ಕಿ ವಿತರಣೆ ಮಾಡಿ ಮಾತನಾಡಿ, ಪತ್ರಕರ್ತರು ಯಾವತ್ತೂ ಕ್ರಿಯಾಶೀಲರಾಗಿ, ಸದಾ ಚಟುವಟಿಕೆಯಲ್ಲಿರುವವರು. ಯಾವುದೇ ದುರ್ಘಟನೆ, ಸಮಾಜ […]