Blog Archive

ಆಳ್ವಾಸ್‌ನಲ್ಲಿ ನಾಯಕತ್ವ ತರಬೇತಿ ಶಿಬಿರ

Wednesday, September 5th, 2018
alwas-college

ಮೂಡಬಿದಿರೆ: “ಒಬ್ಬ ವ್ಯಕ್ತಿಯ ಧನಾತ್ಮಕ ಪರಿವರ್ತನೆಯಿಂದ ದೇಶವೇ ಪರಿವರ್ತನೆಯಾಗುತ್ತದೆ. ಹಾಗಾಗಿ ಅಂಥಹ ಬದಲಾವಣೆ ಈ ಕಾರ್ಯಕ್ರಮ ನಾಂದಿಯಾಗಬೇಕು” ಎಂದು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ|ಯೋಗೀಶ್‌ ಕೈರೋಡಿ ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಪದವಿ ಸಮಾಜಕಾರ್ಯ ವಿಭಾಗದ ‘ಸ್ಪಟಿಕ ಫೋರಂ’ನ ವತಿಯಿಂದ ಬುಧವಾರ ನಡೆದ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ನಮ್ಮೆಲ್ಲರಿಗೂ ಮಾದರಿ ಎಂಬ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ. ಅವರ ಸಾಧನೆ ನಮ್ಮನ್ನು ಪ್ರೇರಿತಗೊಳಿಸಿರುತ್ತದೆ. ಅವರೆಲ್ಲಾ ಇಂದು ಸಾಧಕ ಸ್ಥಾನದಲ್ಲಿ ಇರುತ್ತಾರಷ್ಟೇ. ಆದರೆ ಆ […]

ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಹಾಗೂ ಮಾರ್ಗದರ್ಶನ ಕಾರ್ಯಕ್ರಮ

Thursday, July 19th, 2018
alwas

ಮೂಡಬಿದಿರೆ: ಮನುಷ್ಯ ತನ್ನ ಭೌತಿಕ ಬೆಳವಣಿಗೆಯೊಂದಿಗೆ, ಮಾನಸಿಕ ಬೆಳವಣಿಗೆಯನ್ನು ಕಾಪಾಡಿಗೊಂಡಾಗ ಮಾತ್ರ, ಸಮಾಜದಲ್ಲಿ ನೆಮ್ಮದಿ ನಿರ್ಮಿಸಿ, ಆಹ್ಲಾದಕರವಾದ ಜೀವನ ನಡೆಸಲು ಸಾಧ್ಯ ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಹೇಳಿದರು. ಆಳ್ವಾಸ್ ಪದವಿ ಕಾಲೇಜಿನ ವಿದ್ಯಾಗಿರಿಯ ಕುವೆಂಪು ಹಾಲ್ ನಲ್ಲಿ ಮಾನವೀಯ ವಿಭಾಗದಿಂದ ನಡೆದ ವ್ಯಕ್ತಿತ್ವ ವಿಕಸನ ಕಾರ‍್ಯಗಾರ ಹಾಗೂ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಮ್ಮ ಸುತ್ತಮುತ್ತ ನಡೆಯುವ ಯಾವುದೇ ಕ್ರಿಯೆಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಬೇಕೇ ಹೊರತು, ಗೊಂದಲವನ್ನು ನಿರ್ಮಿಸುವ, ಸಂದರ್ಭವನ್ನು ಇನ್ನಷ್ಟು ಬಿಗಡಾಯಿಸುವ ಕೆಲಸದಲ್ಲಿ […]

ಮೂಡಬಿದಿರೆಯಲ್ಲಿ ಮಗಳ ಮೇಲೆ ಅತ್ಯಾಚಾರ ಮಾಡಿದ ತಂದೆ

Wednesday, July 4th, 2018
minor girl

ಮೂಡಬಿದರೆ :  ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ ತಂದೆಯನ್ನು ಮೂಡಬಿದಿರೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲಿಯ ಪುಚ್ಚೆಮೊಗರು ಎಂಬಲ್ಲಿನ ಗಿರಣಿಯೊಂದರಲ್ಲಿ ಕೆಲಸಕ್ಕಿದ್ದ ಈತ, ಜಾರ್ಖಂಡ್ ಮೂಲದ ಪತ್ನಿ ಹಾಗು ಮಗಳೊಂದಿಗೆ ಅಲ್ಲಿಯೇ ಸಮೀಪದ ಮನೆಯೊಂದರಲ್ಲಿ ವಾಸವಾಗಿದ್ದ. ಈತನ 14 ವರ್ಷದ ಮಗಳು ಇತ್ತೀಚೆಗೆ ರಾತ್ರಿ ಮನೆಯ ಹೊರಗೆ ಮಲಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಮೂಡಬಿದಿರೆ ಪೊಲೀಸರು ಬಾಲಕಿಯ ವಿಚಾರಣೆ ನಡೆಸಿದಾಗ ಸರಿಯಾದ ಕಾರಣ ತಿಳಿಸಿರಲಿಲ್ಲ. ಪರಿಣಾಮ ಆಕೆಯನ್ನು ಮಂಗಳೂರಿನ […]

ಮೂಡಬಿದಿರೆಯಲ್ಲಿ ಕಮಲ ಅರಳಿಸುವ ಉಮನಾಥ ಕೋಟ್ಯಾನ್

Friday, May 11th, 2018
umanath-kotiayan

ಮೂಡಬಿದಿರೆ: ಮೂಡಬಿದಿರೆಯ ಉಮನಾಥ ಕೋಟ್ಯಾನ್ ಮೊದಲಿಗೆ ಸಾಂಸ್ಕೃತಿಕ ಲೋಕದಲ್ಲಿ ಪ್ರಮುಖ ಹೆಸರು. ರಂಗಭೂಮಿ, ಸಿನಿಮಾ ರಂಗದಲ್ಲಿ ನಟನಾಗಿ ಗುರುತಿಸಕೊಂಡವರು. ಹಿಂದುಳಿದ ಕೃಷಿಕ ಕುಟುಂಬದಲ್ಲಿ ಹುಟ್ಟೆ ಬೆಳೆದ ತನ್ನ ಪರಿಶ್ರಮದಿಂದಲೇ ವಿವಿದ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಪ್ರಗತಿ ಕಂಡವರು. ಅನಂತರ ಇಲ್ಲಿನ ಸಂಸ್ಕೃತಿ, ಪರಂಪರೆಯ ಆದಮ್ಯ ಅಭಿಮಾನಿಯಾದ ಉಮನಾಥ ಕೋಟ್ಯಾನ್ ಅವರು ಸಹಜವಾಗಿ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾದವರು. ತನ್ನ ಪ್ರಮಾಣಿಕತೆ, ಪಕ್ಷ ನಿಷ್ಠೆ, ಜನಪರ ಕಾಳಜಿಯ ಕೆಲಸಗಳಿಂದಾಗಿ ತಾಲೂಕು ಪಂಚಾಯತ್ ಸದಸ್ಯರಾಗಿ ಜನಮಣ್ಣನೆ ಗಳಿಸಿದವರು. ಬಿಜೆಪಿ […]

ಕರ್ತವ್ಯ ಲೋಪ ಚುನಾವಣಾಧಿಕಾರಿಗೆ ಜಿಲ್ಲಾಧಿಕಾರಿ ನೋಟಿಸ್‌

Thursday, April 12th, 2018
sesikanth-senthil

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ನಡೆಯುತ್ತಿದ್ದು, ಚುನಾವಣೆ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ವ್ಯಾಪಕ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ, ಕರ್ತವ್ಯಲೋಪ ಎಸಗುವ ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದ.ಕ. ಜಿಲ್ಲಾಧಿಕಾರಿ ಮುಂದಾಗಿರುವ ಘಟನೆ ನಡೆದಿದೆ. ಮೂಡಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅಳವಡಿಸಿರುವ ಬ್ಯಾನರ್‌ಗಳು ಹಾಗೂ ಬಂಟಿಂಗ್‌ಗಳನ್ನು ತೆರವುಗೊಳಿಸದೇ ಇರುವ ಹಿನ್ನೆಲೆಯಲ್ಲಿ ಮೂಡಬಿದಿರೆ ಚುನಾವಣಾಧಿಕಾರಿಗೆ ದ.ಕ. ಜಿಲ್ಲಾಧಿಕಾರಿ ಅವರು ಕಾರಣ ಕೇಳಿ ನೋಟಿಸ್‌ […]

ಕಾರು – ಬಸ್‌ ಢಿಕ್ಕಿ: ಚಾರ್ಟರ್ಡ್‌ ಅಕೌಂಟೆಂಟ್‌ ಸಾವು

Saturday, March 31st, 2018
prakash-hegde

ಮೂಡಬಿದಿರೆ: ಸಮೀಪದ ಹಂಡೇಲುಸುತ್ತಿನಲ್ಲಿ ಶುಕ್ರವಾರ ಬೆಳಗ್ಗೆ ಕಾರು ಮತ್ತು ಖಾಸಗಿ ಟೂರಿಸ್ಟ್‌ ಬಸ್‌ ಮುಖಾಮುಖೀ ಢಿಕ್ಕಿಯಾಗಿ ಕಾರ್ಕಳ ಮೂಲದ ಚಾರ್ಟರ್ಡ್‌ ಅಕೌಂಟೆಂಟ್‌ ಪ್ರಕಾಶ್‌ ಹೆಗ್ಡೆ (62) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕಾಶ್‌ ಹೆಗ್ಡೆ ಅವರು ತಮ್ಮ ಸಂಬಂಧಿಕರ ಮದುವೆಯ ನಿಮಿತ್ತ ಗುರುವಾರ ಪತ್ನಿ ಮತ್ತು ಮಕ್ಕಳನ್ನು ಮಂಗಳೂರಿಗೆ ಕರೆದೊಯ್ದಿದ್ದರು. ಶುಕ್ರವಾರ ಕಾರ್ಕಳಕ್ಕೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೋಲಾರದಿಂದ ಬಂದಿದ್ದ ಪ್ರವಾಸಿಗರಿದ್ದ ಬಸ್‌ ಧರ್ಮಸ್ಥಳದಿಂದ ಕಟೀಲು ಕಡೆಗೆ ಸಾಗುತ್ತಿತ್ತು. ದುರ್ಘ‌ಟನೆ ಸಂಭವಿಸಿದ ಸ್ಥಳದಲ್ಲಿ ರಸ್ತೆ ತಿರುವಿನಿಂದ ಕೂಡಿರುವುದಲ್ಲದೆ ರಸ್ತೆ ಇಲ್ಲಿ […]

ಸರಕು ಮತ್ತು ಸೇವಾ ತೆರಿಗೆ ಕುರಿತು ಉಪನ್ಯಾಸ

Friday, March 30th, 2018
alwas-news

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗ, ಕನ್ನಡ ವಿಭಾಗ ಮತ್ತು ಪ್ರಸಾರಾಂಗ ಮಂಗಳೂರು ವಿಶ್ವವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ `ಸರಕು ಮತ್ತು ಸೇವಾ ತೆರಿಗೆ’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ವ್ಯವಹಾರ ಮತ್ತು ಆರ್ಥಿಕ ವಿಭಾಗದ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ ಮಾತನಾಡಿ ಇತ್ತೀಚೆಗೆ ತೆರಿಗೆ ಕ್ಷೇತ್ರದಲ್ಲಿನ ಬದಲಾವಣೆ ಕೆಲವರಲ್ಲಿ ಗೊಂದಲಗಳನ್ನು ಹುಟ್ಟು ಹಾಕಿದೆ. ಜಿಎಸ್‍ಟಿ ಯನ್ನು ಅರ್ಥೈಸಿಕೊಳ್ಳುವುದು ಬಹಳ ಕ್ಲಿಷ್ಟಕರ ಎನ್ನುವುದು ಸಾಮಾನ್ಯರ ಕಲ್ಪನೆಯಾಗಿದೆ.ಜಿ.ಎಸ್.ಟಿ […]

ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರೂ. ವಿನಿಯೋಗಿಸಲಾಗಿದೆ

Thursday, February 15th, 2018
moodbidre

ಮೂಡಬಿದಿರೆ: ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರೂ. ವಿನಿಯೋಗಿಸಲಾಗಿದೆ. ಗ್ರಾಮದ ಅಭಿವೃದ್ಧಿಯೇ ಸರಕಾರದ ಮೂಲ ಉದ್ದೇಶವಾಗಿದ್ದು, ಜನಪರ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್‌ ಹೇಳಿದರು. ಅವರು ಫೆ. 13 ರಂದು ಬಳ್ಕುಂಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಬಳ್ಕುಂಜೆ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ, ಬಳ್ಕುಂಜೆ ಸಂತ ಪೌಲರ ರಸ್ತೆ ಕವತ್ತಾರು, ಎಸ್‌ಟಿ ಕಾಲನಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಜಂಯ […]

ಪ್ರೇಮಿಗಳ ದಿನ ಹೊಸಭಾಷ್ಯ ಬರೆದ ಯುವ ಬ್ರಿಗೇಡ್‌…

Thursday, February 15th, 2018
uva-brigade

ಮಂಗಳೂರು: ಪ್ರೇಮಿಗಳ ದಿನದಂದು ಉತ್ತಮ ಕಾರ್ಯ ಮಾಡುವ ಮೂಲಕ ಮಂಗಳೂರಿನ ಮೂಡಬಿದಿರೆಯ ಯುವ ಬ್ರಿಗೇಡ್‌ ಘಟಕ ಯುವ ಸಮೂಹಕ್ಕೆ ಮಾದರಿಯಾಗಿದೆ. ‘ಪ್ರೇಮಿಗಳ ದಿನಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುವ ಗೆಳೆಯ-ಗೆಳತಿಯರೇ, ನಿಮ್ಮ ಖರ್ಚಿನ ಒಂದು ಭಾಗವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನಮ್ಮ ಸೋದರಿಯ ಚಿಕಿತ್ಸೆಗಾಗಿ ಸೇರಿಸಿ’ ಎಂದು ಮೂಡುಬಿದಿರೆಯ ಯುವ ಬ್ರಿಗೇಡ್ ಮತ್ತು ನವೋದಯ ಫ್ರೆಂಡ್ಸ್ ಬೆದ್ರದ ಸದಸ್ಯರು ಮೂಡುಬಿದಿರೆ ಪೇಟೆಯ ಆವರಣದಲ್ಲಿ ಚೇರ್ ಹಾಕಿ ಧನ ಸಂಗ್ರಹಣೆ ಮಾಡುವ ಮೂಲಕ ಪ್ರೇಮಿಗಳ ದಿನಕ್ಕೆ ಹೊಸ ಭಾಷ್ಯ […]

ಯಾರಿಗೆ ಸಿಗುತ್ತೆ ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್?

Monday, January 15th, 2018
abhay-chandra

ಮಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಭಾರೀ ಕುತೂಹಲ ಕೆರಳಿಸಿದ ಕ್ಷೇತ್ರ ಮುಲ್ಕಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರ. ಭಾರಿ ನಿರೀಕ್ಷೆಯ ಕ್ಷೇತ್ರವಾದ ಮುಲ್ಕಿ- ಮೂಡಬಿದಿರೆಗೆ ಈ ಭಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಕುತೂಹಲ ಹಾಗೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕ್ಷೇತ್ರದಿಂದ ಕಳೆದ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಭಯಚಂದ್ರ ಜೈನ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಸುಳಿವು ಈ ಹಿಂದೆಯೇ ನೀಡಿದ್ದರು. ಈ ಬಾರಿ ಕ್ಷೇತ್ರ ದಿಂದ […]