Blog Archive

ಕಂಕನಾಡಿ ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಯುವಕರ ಶವ ಪತ್ತೆ

Thursday, February 16th, 2017
kankanady

ಮಂಗಳೂರು: ನಗರದ ಕಂಕನಾಡಿ ಬೈಪಾಸ್ ನಲ್ಲಿನ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಸುಮಾರು 40 ವರ್ಷ ಪ್ರಾಯದ ಇಬ್ಬರು ಅಪರಿಚಿತ ಪುರುಷರ ಮೃತದೇಹ ಭಾಗಶ: ಕೊಳೆತ ಸ್ಥಿತಿಯಲ್ಲಿ ಬುಧವಾರದಂದು ಪತ್ತೆಯಾಗಿವೆ. ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಇನ್ನು ತಿಳಿದು ಬಂದಿಲ್ಲ. ಕಟ್ಟಡದ ಆರನೇ ಮಹಡಿಯಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿವೆ. ಶವದ ಬಳಿ ಮರದ ದೊಣ್ಣೆಗಳೂ ಪತ್ತೆಯಾಗಿವೆ. ಕಟ್ಟಡದ ಕಾಮಗಾರಿ ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿದೆ. ಸ್ಥಳಕ್ಕೆ ಆಗಮಿಸಿರುವ ಕದ್ರಿ ಪೊಲೀಸರು […]

ಎಂಡೋ ಸಂತ್ರಸ್ತ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ

Thursday, January 5th, 2017
belthangady

ಬೆಳ್ತಂಗಡಿ: ಎಂಡೋ ಸಂತ್ರಸ್ತ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಬ್ಬ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕ ಗ್ರಾಮದಲ್ಲಿ ನಡೆದಿದೆ. ಕೊಕ್ಕ ಗ್ರಾಮದ ನಿವಾಸಿಗಳಾದ ಬಾಬು ಗೌಡ (62), ಪತ್ನಿ ಗಂಗಮ್ಮ (55), ಮಗ ಸದಾನಂದ (32) ಹಾಗೂ ಮತ್ತೊಬ್ಬ ಮಗ ನಿತ್ಯಾನಂದ (30) ಎಂಬುವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮನೆಯಲ್ಲಿನ ಇಬ್ಬರು ಮಾರಕ ಎಂಡೋ ಸಲ್ಫಾನ್‌ ಅಡ್ಡಪರಿಣಾಮದಿಂದ ಬಳಲುತ್ತಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. […]

ಕೊಲೆಗೈದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಪತ್ತೆ

Saturday, November 5th, 2016
Bunder murder

ಮಂಗಳೂರು: ಕೊಲೆಗೈದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಹಳೆ ಬಂದರಿನ ರೈಲ್ವೆ ಸಿಮೆಂಟ್ ಗೋದಾಮಿನಲ್ಲಿ ಪತ್ತೆಯಾಗಿದೆ. ಕೊಲೆಗೀಡಾದ ವ್ಯಕ್ತಿ ಕೂಲಿ ಕಾರ್ಮಿಕ ಎನ್ನಲಾಗಿದ್ದು, ಮುಖ ಜಜ್ಜಿ ಹೋಗಿದ್ದು, ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಕಳೆದ ತಡರಾತ್ರಿ ಕೊಲೆ ನಡೆದಿರಬಹುದು ಎನ್ನಲಾಗಿದೆ. ಎಸಿಪಿ ಶ್ರುತಿ ಎನ್. ಎಸ್., ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್‍ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಲ್ಲರೆ ವಿವಾದದಿಂದ ಮನನೊಂದು ನದಿಗೆ ಹಾರಿದ ಕಂಡೆಕ್ಟರ್‌: ಇನ್ನೂ ಪತ್ತೆಯಾಗದ ಮೃತದೇಹ

Tuesday, September 27th, 2016
condacter

ಸುಬ್ರಹ್ಮಣ್ಯ: ಯುವತಿಯೊಂದಿಗಿನ ಚಿಲ್ಲರೆ ವಿವಾದದಿಂದ ಮನನೊಂದು ನದಿಗೆ ಹಾರಿದ ಕೆಎಸ್ಸಾರ್ಟಿಸಿ ಬಸ್‌ ಕಂಡೆಕ್ಟರ್‌ ಮಂಗಳೂರು ಗುರುಪುರ ನಿವಾಸಿ ದೇವದಾಸ್‌ (47) ಅವರಿಗಾಗಿ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಎರಡನೇ ದಿನವಾದ ಸೋಮವಾರವೂ ತೀವ್ರ ಶೋಧ ನಡೆಯಿತು. ಆದರೆ ದೇವದಾಸ್‌ ಅವರ ಸುಳಿವು ಲಭಿಸಿಲ್ಲ. ಸೋಮವಾರ ಮುಂಜಾನೆಯೇ ಪುತ್ತೂರಿನ ಅಗ್ನಿಶಾಮಕ ದಳ ಮತ್ತು ಗುಂಡ್ಯದ 15 ಮಂದಿ ನುರಿತ ಈಜುಗಾರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರೆಯಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿತು. ಸಂಜೆ 6 ಗಂಟೆಯ ತನಕ ನಿರಂತರವಾಗಿ ಅಗ್ನಿ […]

ಸಾಲ ಹಿಂದಿರುಗಿಸದ್ದಕ್ಕೆ ಕೋಪಗೊಂಡ ಯುವಕನೊಬ್ಬ ಸ್ನೇಹಿತನ ತಲೆ ಕಡಿದು ಪೊಲೀಸ್‌ ಠಾಣೆಗೆ ಶರಣು

Wednesday, August 24th, 2016
Anjaneya

ದೇವನಹಳ್ಳಿ: 27 ಸಾವಿರ ರೂಪಾಯಿ ಸಾಲ ಹಿಂದಿರುಗಿಸದ್ದಕ್ಕೆ ಕೋಪಗೊಂಡ ಯುವಕನೊಬ್ಬ, ಸ್ನೇಹಿತನ ತಲೆ ಕಡಿದು ರುಂಡ ಸಮೇತ ಪೊಲೀಸ್‌ ಠಾಣೆಗೆ ಬಂದು ಶರಣಾಗಿರುವ ಘಟನೆ ತಾಲೂಕಿನ ವಿಶ್ವನಾಥಪುರ ಠಾಣೆಯಲ್ಲಿ ನಡೆದಿದೆ. ತಾಲೂಕಿನ ಕೆಂಪತಿಮ್ಮನಹಳ್ಳಿಯ ಮಂಜುನಾಥ್‌ (26) ಬರ್ಬರವಾಗಿ ಕೊಲೆಯಾದ ದುರ್ದೈವಿ. ಉಗನವಾಡಿ ಶಶಿಕುಮಾರ್‌ ಕೊಲೆ ಮಾಡಿ ಪೊಲೀಸರಿಗೆ ಶರಣಾದವ. ಈತ ಕನ್ನಮಂಗಲ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಅವರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಶಶಿಕುಮಾರ್‌ ಮತ್ತು ಮಂಜುನಾಥ್‌ ಸ್ನೇಹಿತರಾಗಿದ್ದು ಶಶಿಕುಮಾರ್‌, ಮಂಜುನಾಥಗೆ 27 ಸಾವಿರ ರೂ. […]

ಹೂವಿನ ವ್ಯಾಪಾರಿಯ ಮೃತದೇಹ ಬಾವಿಯಲ್ಲಿ ಪತ್ತೆ

Thursday, August 18th, 2016
Jayaraj-Shetty

ಮಂಗಳೂರು: ನಗರದ ಹೂವಿನ ವ್ಯಾಪಾರಿ ಜಯರಾಜ್ ಶೆಟ್ಟಿ(42) ಎಂಬುವವರ ಮೃತದೇಹ ಅವರ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಶಂಕಿಸಲಾಗಿದೆ. ನಗರದ ಪಚ್ಚನಾಡಿ ನಿವಾಸಿಯಾಗಿರುವ ಅವರು, ಮನೆಯಲ್ಲಿ ಹಣಕಾಸಿನ ಸಮಸ್ಯೆಯಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಮೃತರು ನಗರದ ರಥಬೀದಿಯಲ್ಲಿ ಸಂಭ್ರಮ ಹೆಸರಿನ ಹೂವಿನ ಅಂಗಡಿ ಹೊಂದಿದ್ದು, ಹೂವಿನ ಆಲಂಕಾರದ ಕೆಲಸ ನಿರ್ವಹಿಸುತ್ತಿದ್ದರು. ಆ. 16ರ ಮಧ್ಯಾಹ್ನ ಮನೆಯಿಂದ ಹೊರ ಹೋದವರು ಕಾಣೆಯಾಗಿದ್ದರು. ಇಂದು ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಎರಡು ತಿಂಗಳ ಹಿಂದೆ ಪಚ್ಚನಾಡಿಯಲ್ಲಿ […]

ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುರುಪುರದ ಕೊಳಂಬೆ ನಿವಾಸಿ ಯೋಗಿಣಿ ಮೃತದೇಹ ಪತ್ತೆ

Friday, August 5th, 2016
Yogini

ಮಂಗಳೂರು: ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಮೃತದೇಹ ನಿನ್ನೆ ಪತ್ತೆಯಾಗಿದೆ. ಗುರುಪುರದ ಕೊಳಂಬೆ ನಿವಾಸಿ ಯೋಗಿಣಿ ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿ. ಯೋಗಿಣಿ ಬೈಕಂಪಾಡಿಯಲ್ಲಿರುವ ಪ್ಲಾಸ್ಟಿಕ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಳು. ಜುಲೈ ಮೂರರಂದು ಕೆಲಸಕ್ಕೆಂದು ಮನೆಬಿಟ್ಟವಳು ಅಂದು ಮಧ್ಯಾಹ್ನವೇ ರಜೆ ಕೇಳಿ ಬಂದಿದ್ದಳು. ಅಲ್ಲಿಂದ ಆಕೆ ಗುರುಪುರದ ಫಲ್ಗುಣಿ ನದಿ ಬಳಿ ತಲುಪಿದ್ದು, ತನ್ನ ಬ್ಯಾಗ್ ಹಾಗೂ ಮೊಬೈಲ್‌ನ್ನು ತಟದಲ್ಲಿಯೇ ಬಿಟ್ಟು ಅಲ್ಲಿಂದಲೇ ನದಿಗೆ ಹಾರಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳೀದ್ದರು. ವಿಷಯ ಮನೆಯವರಿಗೆ ತಿಳಿದು ಹುಡುಕಾಟ […]

ಬಿಜೆಪಿ ಮಂಜೇಶ್ವರ ಮಂಡಲ ಬೂತ್ ಮಟ್ಟ ಕಾರ್ಯಕರ್ತರ ತರಬೇತಿ ಶಿಬಿರ

Wednesday, January 6th, 2016
BJP Mandala

ಉಪ್ಪಳ: ಕೇರಳದಲ್ಲಿ ಕಳೆದ 10 ವರ್ಷಗಳಲ್ಲಿ ಜನರ ಆಶೋತ್ತರಗಳನ್ನು ರಕ್ಷಣೆ ಮಾಡದವರು ಇದೀಗ ಚುನಾವಣೆಯ ಸನಿಹದಲ್ಲಿ ಮತ್ತೆ ೫ ವರ್ಷ ಕಾಲ ಅಧಿಕಾರಕ್ಕಾಗಿ ಕೇರಳ ರಕ್ಷಾ ಯಾತ್ರೆಯನ್ನು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯೆಂದು ಕೇರಳ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ , ರಾಜ್ಯ ಚುನಾವಣಾ ಉಸ್ತುವಾರಿಯ ವಿ.ಮುರಳೀಧರನ್ ಅಭಿಪ್ರಾಯಪಟ್ಟರು. ಮಂಗಲ್ಪಾಡಿ ಲಯನ್ಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಬಿಜೆಪಿ ಮಂಜೆಶ್ವರ ಮಂಡಲ ಬೂತ್ ಕಾರ್ಯಕರ್ತರ ನಾಯಕತ್ವ ತರಬೇತಿ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು. ಕೇರಳದ ಎಡ ಬಲ ರಂಗಗಳ ಆಡಳಿತ ವೈಫಲ್ಯ,ಅತಿಯಾದ […]