ವಿಶ್ವ ತುಳುವರೆ ಆಯನೊ ತುಳು ಮನಸ್ಸುಗಳನ್ನು ಜೋಡಿಸುವ ಮೌಲ್ಯಯುತ ಉತ್ಸವವಾಗಬೇಕು: ಹರ್ಷೇಂದ್ರ ಕುಮಾರ್

Saturday, July 30th, 2016
Thuluvere-Ayano

ಬದಿಯಡ್ಕ: ವಿಶ್ವ ತುಳುವರೆ ಆಯನೊ ಆಡಂಬರಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ತುಳು ಮನಸ್ಸುಗಳನ್ನು ಜೋಡಿಸುವ ಮೌಲ್ಯಯುತ ಉತ್ಸವವಾಗುವಂತೆ ಶ್ರಮಿಸಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮಾರ್ಗದರ್ಶನ ನೀಡಿದರು. ತುಳುವರೆ ಆಯನೊದ ಪೂರ್ವಭಾವಿಯಾಗಿ ಸಂಘಟನಾ ಸಮಿತಿಯ ಮಾಹಿತಿಯ ಬಗ್ಗೆ ವಿವರ ನೀಡಲು ಸ್ವಾಗತ ಸಮಿತಿ ಪದಾಧಿಕಾರಿಗಳು ಶ್ರೀಕ್ಷೇತ್ರಕ್ಕೆ ಇತ್ತೀಚೆಗೆ ನೀಡಿದ ಭೇಟಿಯ ವೇಳೆ ತಂಡದೊಂದಿಗೆ ಮಾತನಾಡಿ ಮಾರ್ಗದರ್ಶನ ನೀಡಿ ಮಾತನಾಡಿದರು. ಕಾರ್ಯಕ್ರಮದ ಯಶಸ್ವಿಗೆ ಶ್ರೀಕ್ಷೇತ್ರದ ಹಾಗೂ ಗ್ರಾಮಾಭಿವೃದ್ದಿ ಯೋಜನೆಯ ಎಲ್ಲಾ ಸಹಾಯ-ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಈಗಾಗಲೇ ಯೋಜನೆಯ ಸಂಬಂಧಿತ ಅಧಿಕೃತರಿಗೆ […]

ಚಲಿಸುವ ದೇವಾಲಯ, ನೀರ್ಚಾಲಿನಲ್ಲಿ ಗೋ ಆಲಯಕ್ಕೆ ಭರ್ಜರಿ ಸ್ವಾಗತ

Friday, January 8th, 2016
Go Deva

ಬದಿಯಡ್ಕ : ಭಗವಾನ್ ಶ್ರೀಕೃಷ್ಣನು ಬಾಲ್ಯ ಕಾಲದಲ್ಲಿ ಊಟ ಮಾಡದೆ ಹಠಮಾಡುವ ಸಂದರ್ಭದಲ್ಲಿ ಗೋವುಗಳನ್ನು ತೋರಿಸಿ ಊಟ ಮಾಡಿಸುತ್ತಿದ್ದರು ಎಂಬುದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅನಾದಿ ಕಾಲದಿಂದಲೇ ನಾವು ಪೂಜಿಸಿಕೊಂಡು ಬಂದ ಗೋಮಾತೆ ರಾಷ್ಟ್ರಮಾತೆ, ರಾಷ್ಟ್ರೀಯ ಪ್ರಾಣಿಯಾಗಬೇಕು ಎಂದು ಚಲಿಸುವ ಗೋ ಆಲಯದ ರೂವಾರಿ ಗಣೇಶ್ ಭಟ್ ಮುಣ್ಚಿಕ್ಕಾನ ಹೇಳಿದರು. ಅವರು ಮಂಗಳವಾರ ಸಂಜೆ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾಮಂದಿರದಲ್ಲಿ ಸೇರಿದ್ದ ಭಕ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಧರ್ಮಶಾಸ್ತಾ ಸೇವಾ ಸಮಿತಿಯ ವತಿಯಿಂದ ಚಲಿಸುವ ಗೋ ಆಲಯಕ್ಕೆ ಅಯ್ಯಪ್ಪ ಭಕ್ತರು ಹಾಗೂ […]