Blog Archive

20ರ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿ, ನಾಲಗೆಯನ್ನು ಕತ್ತರಿಸಿದ ಭಯಾನಕ ಕಾಮುಕರು

Tuesday, September 29th, 2020
UPrape

ನವದೆಹಲಿ: ನಾಲ್ವರು ಕಾಮುಕರು 20 ವರ್ಷದ ಯುವತಿಯೊಬ್ಬಳನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಕೃತ್ಯವನ್ನು ಬೇರೆಯವರಿಗೆ ತಿಳಿಸದಂತೆ ಆಕೆಯ ನಾಲಗೆಯನ್ನು ಕತ್ತರಿಸಿ ಚಿತ್ರಹಿಂಸೆ ನೀಡಿದ್ದರು. ಆದರೆ ಕಾಮುಕರ ಪೈಶಾಚಿಕ ಕೃತ್ಯಕ್ಕೆ ಒಳಗಾದ ಯುವತಿ  ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ ನಿವಾಸಿ 20 ವರ್ಷದ ದಲಿತ ಯುವತಿ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಆಕೆಯ ದುಪ್ಪಟ್ಟಾದಿಂದ ಹೊಲಕ್ಕೆ ಎಳೆದುಕೊಂಡು ಹೋಗಲಾಗಿತ್ತು. ಅಲ್ಲದೇ ಆಕೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ನಂತರ […]

ಲೇಡಿಸ್ ಪಿಜಿಗೆ ನುಗ್ಗಿ ಒಳವಸ್ತ್ರಗಳನ್ನು ಕದಿಯುತ್ತಿದ್ದವನಿಗೆ ಥಳಿಸಿದ ಯುವತಿಯರು

Thursday, August 27th, 2020
ladise PG

ಮಂಗಳೂರು: ಶರವು ದೇವಸ್ಥಾನದ ಬಳಿ ಇರುವ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯರ ಒಳವಸ್ತ್ರಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಥಳಿಸಿರುವ ಘಟನೆ  ನಡೆದಿದೆ. ಮಹಿಳಾ ಪಿಜಿಗೆ ರಾತ್ರಿ ವೇಳೆ ನುಗ್ಗಿದ ಕಾಮುಕನೊಬ್ಬ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ. ಈಗಾಗಲೇ ಅನೇಕ ಬಾರಿ ಈ ರೀತಿಯ ಕೆಲಸ ಮಾಡಿದ್ದ ಈತನಿಗೆ ಬುದ್ದಿ ಕಲಿಸಬೇಕು ಎಂದು ಅಲ್ಲಿದ್ದ ಕೆಲಸಗಾರರ ಜೊತೆ ಸೇರಿ ಯುವತಿಯರು ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ

ಲಾಡ್ಜ್‌ವೊಂದರಲ್ಲಿ ಮೂವರು ಯುವತಿಯರನ್ನುಇಟ್ಟುಕೊಂಡು ದಂಧೆ, ಇಬ್ಬರು ಅರೆಸ್ಟ್

Thursday, August 20th, 2020
prostitution

ಮಂಗಳೂರು : ನಗರದ ಲಾಡ್ಜ್‌ವೊಂದರಲ್ಲಿ ಮೂವರು ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ನಗರ ಪೊಲೀಸರು ಬಂಧಿಸಿ ದ್ದಾರೆ. ಕಡಂದಲೆ ನಿವಾಸಿ ಹರೀಶ್(45), ಬೊಳುವಾರು ನಿವಾಸಿ ಸಾಗರ್ (40) ಬಂಧಿತ ಆರೋಪಿಗಳು. ನಗರದ  ಪಂಪ್‌ವೆಲ್ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಹರೀಶ್ ಲಾಡ್ಜ್ ಸಿಬ್ಬಂದಿಯಾಗಿದ್ದರೆ, ಸಾಗರ್ ದಲ್ಲಾಳಿಯಾಗಿದ್ದ. ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಂಗಳೂರು ಮಹಿಳಾ ಪೊಲೀಸ್ […]

ಇಂಡಿಯಾನ ಆಸ್ಪತ್ರೆಗೆ ಕೆಲಸಕ್ಕೆ ಹೋದ ಯುವತಿ ನಾಪತ್ತೆ

Tuesday, August 18th, 2020
poornima

ಮಂಗಳೂರು :  ಪಂಪ್‍ವೆಲ್ ಇಂಡಿಯಾನ ಆಸ್ಪತ್ರೆಗೆ ಕೆಲಸಕ್ಕೆಂದು ಹೋದ ಯುವತಿ ವಾಪಸ್ಸು ಮನೆಗೆ ಬಾರದೆ  ಆಗಸ್ಟ್ 13 ರಿಂದ ಕಾಣೆಯಾಗಿದ್ದಾರೆ. ಪೂರ್ಣಿಮಾ (35) ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು- ಪೂರ್ಣಿಮಾ, ಪ್ರಾಯ – 35 ವರ್ಷ, ಎತ್ತರ-5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ಎದುರಿನ ಹಲ್ಲು ಹೊರಬಂದಂತೆ ಕಾಣುತ್ತದೆ. ಧರಸಿದ ಬಟ್ಟೆ-ನೀಲಿ ಬಣ್ಣದ ಟಾಪ್ ಹಾಗೂ ಜೀನ್ಸ್ ಪ್ಯಾಂಟ್ ಶರ್ಟ್, […]

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ, ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ, ಜೊತೆಗೆ ಇನ್ನೊಬ್ಬಳನ್ನೂ ಪ್ರೀತಿಸಿದ್ದ !

Saturday, August 8th, 2020
priyanka

ಹಾಸನ : ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸಾಲಗಾಮೆ ಹೋಬಳಿ ಗೌಡಗೆರೆ ಗ್ರಾಮದ ಪ್ರಿಯಾಂಕಾ (23) ಮೃತ ಗೃಹಿಣಿ. ಆಕೆಯ ಗಂಡ ಹಾಗೂ ಅತ್ತೆ-ಮಾವ ಸೇರಿಕೊಂಡು ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿ, ನೇಣು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಆಲೂರು ತಾಲೂಕಿನ ಪುರಬೈರವನಹಳ್ಳಿ ಗ್ರಾಮದ ಕಿರಣ್ ಜೊತೆ ಕಳೆದ ಮದುವೆಯಾಗಿದ್ದಳು. ನಮ್ಮ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ, ಮಾವ […]

ಡೆತ್ ನೋಟಲ್ಲಿ ಪ್ರಿಯಕರನ ಹೆಸರು ಬರೆದಿಟ್ಟು ವಿಷ ಸೇವಿಸಿದ ಯುವತಿ

Thursday, July 23rd, 2020
uma

ತೆಲಂಗಾಣ : ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಸಹಪಾಠಿಯಾಗಿದ್ದವನನ್ನು ಪ್ರೀತಿಸಿ ನಂತರ ಮದುವೆ ಮಾಡಿಕೊ ಎಂದಿದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಪೋಥರಂ ಗ್ರಾಮದ 19 ವರ್ಷದ ಯುವತಿ ಉಮಾ ಎಂಬ ಹುಡುಗಿ ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಸಹಪಾಠಿಯಾಗಿದ್ದ ರಂಜಿತ್ ಎಂಬ ಯುವಕನ ಪ್ರೇಮಕ್ಕೆ ಬಿದ್ದಿದ್ದಾಳೆ. ಆತನೂ ಇವಳನ್ನು ಪ್ರೀತಿಸುವುದಾಗಿ ಹೇಳಿದ್ದು, ಅದನ್ನು ಉಮಾ ನಂಬಿದ್ದಾಳೆ. ಈ ಬಗ್ಗೆ ಅರಿವು ಇಲ್ಲದಿದ್ದ ಉಮಾ ಪಾಲಕರು ಮಗಳಿಗೆ ಹುಡುಗನನ್ನು ನೋಡಲು ಶುರು ಮಾಡಿದ್ದಾರೆ. ಮನೆಯವರಿಗೆ […]

ಕಡಬ : ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ

Wednesday, November 27th, 2019
Kadaba

ಕಡಬ : ಕಡಬದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಯುವತಿಯೊಬ್ಬಳು ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹರಿಮಜಲು ನಿವಾಸಿ ಸವಿತ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಮಂಗಳವಾರ ವಿಷ ಸೇವಿಸಿದ್ದಳು. ನಂತರ ಈಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇನ್ನು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ […]

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಲು ಮುಂದಾದ ಯುವಕನನ್ನು ಬಂಧಿಸಿದ ಪೊಲೀಸರು

Thursday, July 11th, 2019
Devin pinto

ಮಂಗಳೂರು : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಅಶ್ಲೀಲ ವಿಡಿಯೋ ತೋರಿಸಲು ಮುಂದಾದ ಯುವಕನೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದ ಯೆಯ್ಯಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಬಂಧಿತನನ್ನು ಬೆಂದೂರ್ ‌ವೆಲ್ ನಿವಾಸಿ ಡೆವಿನ್ ಪಿಂಟೋ (29) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಇಲ್ಲಿಯ ಶರ್ಬತ್ ಕಟ್ಟೆ ಬಳಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಡೆವಿನ್ ಪಿಂಟೋ ಹಿಂಬಾಲಿಸಿ ಬಂದಿದ್ದಾನೆ. ಈ ಸಂದರ್ಭದಲ್ಲಿ ಯುವತಿಯನ್ನು ಅಡ್ಡಗಟ್ಟಿ ತನ್ನ ಮೋಬೈಲ್ ನಲ್ಲಿದ್ದ ಅಶ್ಲೀಲ ವೀಡಿಯೊ ತೋರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ […]

ಯುವತಿಯೊಂದಿಗೆ ನಗ್ನವಾಗಿರುವ ವಿಡಿಯೋ ಮಾಡಿಸಿಕೊಂಡು ಹಣ ಕಳಕೊಂಡ ಬಂಟ್ವಾಳ ಮೀನು ವ್ಯಪಾರಿ

Friday, June 28th, 2019
darshni

ಬಂಟ್ವಾಳ : ಮಡಿಕೇರಿಯ ಯುವತಿಯೊಂದಿಗೆ ನಗ್ನ ವಾಗಿರುವ ಅಶ್ಲೀಲ ವಿಡಿಯೋ ತೋರಿಸಿ ಹಣಕ್ಕಾಗಿ ಅಪಹರಿಸಿ ದರೋಡೆ ನಡೆಸಿದ ಅಪರಿಚಿತ ವ್ಯಕ್ತಿಯ ವಿರುದ್ದ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಟಿಪ್ಪು ನಗರದ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ  ಈ ರೀತಿ ಯುವತಿಯೊಂದಿಗೆ  ವಿಡಿಯೋ ಮಾಡಿಸಿಕೊಂಡು ಹಣ ಕಳಕೊಂಡಿದ್ದಾನೆ . ಬಂಟ್ವಾಳ ನಿವಾಸಿಯಾಗಿರುವ ಅಬ್ದುಲ್ ರಹಿಮಾನ್ ಗೆ ವಾಯ್ಸ್ ಮೆಸೇಜ್ ಮೂಲಕ ಸುಮಾರು 8 ತಿಂಗಳ ಹಿಂದೆ ಒರ್ವ ಹುಡುಗಿಯ ಪರಿಚಯವಾಗಿದ್ದು ಕೆಲವು ದಿನಗಳ ನಂತರ ಆ ಹುಡುಗಿಯನ್ನು ಮಂಗಳೂರಿನ ಲಾಡ್ಜ್ ಒಂದರಲ್ಲಿ ಅವರನ್ನು ಬೇಟಿಯಾಗಿದ್ದಾರೆ. ಆ […]

ಪ್ರೀತಿಗೆ ಪ್ರತಿರೋಧ ಮಾಡಿದ ಯುವತಿಯನ್ನು ಕೊಲೆಗೈದ ಆರೋಪಿಯ ಬಂಧನ

Saturday, November 30th, 2013
yogisha

ಮಲ್ಪೆ : ಉಡುಪಿ ಅಜ್ಜರಕಾಡಿನ ಮಹಿಳಾ ಪ್ರ.ದರ್ಜೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ರಂಜಿತಾ (19)ಳನ್ನು ನವಂಬರ್ 27 ರಂದು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿ ಯೋಗೀಶನನ್ನು ಮಲ್ಪೆ ಪೊಲೀಸರು ನವಂಬರ್‌ 30 ರಂದು ಮಧ್ಯಾಹ್ನ ಸ್ಥಳೀಯರ ನೆರವಿನಿಂದ ಬಂಧಿಸಿದ್ದಾರೆ. ಯೋಗೀಶ (26). ಈತ ವೃತ್ತಿಯಲ್ಲಿ ಎಲೆಕ್ಟೀಶಿಯನ್‌, ಪೈಂಟಿಗ್‌ ಇನ್ನಿತರ ಕೆಲಸ ಮಾಡಿಕೊಂಡಿದ್ದ. ಆತ ಸ್ಥಳೀಯವಾಗಿ ರಂಜಿತಾಳನ್ನು ತಾನು ಲವ್‌ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ. ತನ್ನನ್ನು ಪ್ರೀತಿಸುವಂತೆ ಆಕೆಯನ್ನು ಪದೇ ಪದೇ ಪೀಡಿಸುತ್ತಿದ್ದ, ಆಕೆ […]