Blog Archive

ಮಂಗನಕಾಯಿಲೆ ನಿಯಂತ್ರಣಕ್ಕೆ ಕ್ರಮ : ಸಚಿವ ಯು.ಟಿ.ಖಾದರ್

Tuesday, March 18th, 2014
ut khader

ಶಿವಮೊಗ್ಗ : ಇತ್ತೀಚೆಗೆ ರಾಜ್ಯದ ನಾಲ್ಕಾರು ಜಿಲ್ಲೆಗಳಲ್ಲಿ ಕಂಡುಬಂದಿರುವ ಮಂಗನಕಾಯಿಲೆ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗುವುದೆಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಅವರು ಸೋಮವಾರ ತೀರ್ಥಹಳ್ಳಿಯ ತಾಲೂಕು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈ ಕಾಯಿಲೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು. ವಿಶೇಷವಾಗಿ ಈ ಕಾಯಿಲೆಯು ಅರಣ್ಯಗಳಲ್ಲಿ ವಾಸಿಸುವ ವನವಾಸಿಗಳಲ್ಲೇ ಕಂಡುಬರುತ್ತಿರುವುದರಿಂದ ಮಲೆನಾಡಿನ ಅರಣ್ಯ ಪ್ರದೇಶಗಳಲ್ಲಿವಾಸಿಸುವ ಹಾಗೂ ಕಾಯಿಲೆ ಪೀಡಿತರಿಗೆ […]

ಎತ್ತಿನಹೊಳೆ ವಿರೋಧಿಗಳ ಪರ ಬ್ಯಾಟಿಂಗ್!

Saturday, March 8th, 2014
U.T.-Kadar

ಮಂಗಳೂರು: ಎತ್ತಿನಹೊಳೆ ಯೋಜನೆ ಪರವಾಗಿ ಮಾತನಾಡಿಲ್ಲ. ನೆಲ, ಜಲ ಉಳಿವಿಗಾಗಿ ಹೋರಾಟ ನಡೆಸಿದ ದಕ್ಷಿಣ ಕನ್ನಡದ ಜನರನ್ನು ಸಂಘಟನೆಗಳನ್ನು ಅಭಿನಂದಿಸುತ್ತೇನೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ‘ಎತ್ತಿನಹೊಳೆ ಯೋಜನೆ ಪರವಾಗಿದ್ದಾರೆ’ ಎಂಬ ಆರೋಪಗಳನ್ನು ಅಲ್ಲಗಳೆದ ಯು.ಟಿ.ಖಾದರ್ ದಕ್ಷಿಣ ಕನ್ನಡ ಜಿಲ್ಲೆ ಎತ್ತಿನಹೊಳೆ  ಹೋರಾಟ ವಿರುದ್ಧ ಹೇಳಿಕೆ ನೀಡಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೋಲಾರದಲ್ಲಿ ಈ ಕುರಿತು ತಾವು ಯಾವುದೇ ವಿರುದ್ಧ ಹೇಳಿಕೆ ನೀಡಿಲ್ಲ ಎಂದು ಅಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಹತ್ತು ನಿಮಿಷಗಳ ವೀಡಿಯೋ […]

ರೋಗ ತಡೆಗೆ ರಾಜ್ಯದೆಲ್ಲೆಡೆ ಉಚಿತ ತಪಾಸಣಾ ಕೇಂದ್ರಗಳು : ಯು.ಟಿ. ಖಾದರ್

Saturday, July 13th, 2013
ರೋಗ ತಡೆಗೆ ರಾಜ್ಯದೆಲ್ಲೆಡೆ ಉಚಿತ ತಪಾಸಣಾ ಕೇಂದ್ರಗಳು : ಯು.ಟಿ. ಖಾದರ್

ಮಂಗಳೂರು: ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಮಾಧ್ಯಮ ಪ್ರತಿನಿದಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ  ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್  ಭಾಗವಹಿಸಿದರು. ಜಿಲ್ಲೆಯ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಲು ಸರ್ಕಾರ 9 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಲು ಉಚಿತ ತಪಾಸಣಾ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು. ಡೆಂಗ್ಯೂ ಮುಂತಾದ ರೋಗಗಳ ಬಗ್ಗೆ ಮುಂದಿನ ವರ್ಷ ಜನವರಿ ತಿಂಗಳಿಂದಲೇ ಎಲ್ಲಾ ಜಿಲ್ಲೆಗಳಲ್ಲಿ […]

ವೆನ್ಲಾಕ್ ಆಸ್ಪತ್ರೆಯಲ್ಲಿ ಜನಸ್ನೇಹಿ ವಾತಾವರಣವಿರಲಿ: ಯು.ಟಿ.ಖಾದರ್

Saturday, June 15th, 2013
UT Khader Visits Lady Ghosen Hospital

ಮಂಗಳೂರು  : ಮಾನ್ಯವಾಗಿ ಜನರು ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಎಂದರೆ ಅನುಮಾನದಿಂದ ದೂರ ಉಳಿಯುತ್ತಾರೆ. ಆದ್ದರಿಂದ  ಅವರಲ್ಲಿ ವಿಶ್ವಾಸ ತುಂಬುವ, ಪ್ರೀತಿ ಸೌಹಾರ್ದಮಯ ಪರಿಸರ ನಿರ್ಮಾಣದ ಅಗತ್ಯ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿರಬೇಕೆಂದು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ. ಅವರು ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ಡೆಂಗಿ ಹಾಗೂ ಮಲೇರಿಯಾ ರೋಗ ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ ಅವರೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ […]

ಕೈಕೊ ಮತ್ತು ಸುಭಾಷ್ನಗರದಲ್ಲಿ ಕಡಲ್ಕೊರೆತ ತಡೆಗೆ ಸೋಮವಾರ ಕೆಲಸ ಆರಂಭಿಸಿ: ಯು ಟಿ ಖಾದರ್

Saturday, June 15th, 2013
Ut khader

ಮಂಗಳೂರು : ಕಡಲ್ಕೊರೆತದಿಂದ ತೀವ್ರವಾಗಿ ಹಾನಿಗೊಂಡಿರುವ ಕೈಕೋ ಸುಭಾಷ್ ನಗರದಲ್ಲಿ ಸೋಮವಾರದಿಂದಲೇ ತಾತ್ಕಾಲಿಕ ಕಾಮಗಾರಿ ಆರಂಭಿಸುವಂತೆ ಆರೋಗ್ಯ ಸಚಿವ ಶ್ರೀ ಯು ಟಿ ಖಾದರ್ ಅವರು ಬಂದರು ಅಧಿಕಾರಿಗಳಿಗೆ ಆದೇಶ ನೀಡಿದರು. ಈ ಸಂಬಂಧ ಇಂದು ಸರ್ಕ್ಯುಟ್  ಹೌಸ್ ನಲ್ಲಿ ನಡೆಸಿದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುಭಾಷ್ ನಗರ ಹಾಗೂ ಹಿಲರಿ ನಗರದ ತೀವ್ರ ಕೊರತೆವಿರುವ ಪ್ರದೇಶಗಳಲ್ಲಿ ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟವಾಗದಂತೆ ತಾತ್ಕಾಲಿಕ ತಡೆ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕೆಂದು ಸೂಚಿಸಿದ ಅವರು, ನಿಯಮಗಳನ್ನು ಜನರಿಗೋಸ್ಕರ ಸಡಿಲಗೊಳಿಸಿ […]

ಜನಪರವಾಗಿ ಕರ್ತವ್ಯ ನಿರ್ವಹಿಸಿ: ಸಚಿವ ಖಾದರ್

Friday, June 7th, 2013
Khader Zilla Panchayat

ಮಂಗಳೂರು : ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ಪ್ರಾಕೃತಿಕ ವಿಕೋಪದಲ್ಲಿ ಸಂಭವಿಸಿದ ಹಾನಿಗೆ ತುತರ್ು ಪರಿಹಾರ ನೀಡುವುದು ಇಂಜಿನಿಯರ್ ವಿಭಾಗದ ಹೊಣೆ ಎಂದು ಆರೋಗ್ಯ ಸಚಿವ ಶ್ರೀ ಯು ಟಿ ಖಾದರ್ ಹೇಳಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನೀರು, ನೈರ್ಮಲ್ಯ ಹಾಗೂ ರಸ್ತೆಗಳಿಗೆ ಆದ್ಯತೆ ನೀಡಿ. ನಮ್ಮ ಗ್ರಾಮ ನಮ್ಮ ರಸ್ತೆಯಡಿ ರಸ್ತೆಗಳಿಗಾಗಿ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಿ. ಮಳೆಗಾಲದಲ್ಲಿ ರಸ್ತೆ ಇಲ್ಲದೆ […]

ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು : ಆರೋಗ್ಯ ಸಚಿವ ಯು.ಟಿ.ಖಾದರ್

Saturday, May 25th, 2013
UT Khader pressmeet at circute house

ಮಂಗಳೂರು : ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಬಡ ಜನರ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಸರ್ಕಾರ ಭರಿಸಲಿದ್ದು, ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎರಡು ದಿನಗಳೊಳಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುವುದು ಮತ್ತು ಆರೋಗ್ಯ ಜಾಗೃತಿಯ ಬಗ್ಗೆ ಜಿಲ್ಲಾವಾರು ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೈಸೂರಿನಲ್ಲಿ […]

ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಪರವಾಗಿ ಮತಯಾಚಿಸಿದ ಚಿತ್ರನಟಿ ರಮ್ಯ

Friday, April 26th, 2013
Ramya

ಮಂಗಳೂರು : ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಕಾಂಗ್ರೆಸ್, ಬಿಜೆಪಿ ಪಕ್ಷದ ಹಿರಿಯ ನಾಯಕರು ಸೇರಿದಂತೆ ಚಿತ್ರ ನಟ ನಟಿಯರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಶುಕ್ರವಾರ ಕಾಂಗ್ರೆಸ್ ಪರ ನಗರದಲ್ಲಿ ಮತಯಾಚನೆ ಸಲುವಾಗಿ ಆಗಮಿಸಿದ ಕನ್ನಡ ಚಿತ್ರ ನಟಿ ರಮ್ಯ ಮಂಗಳೂರಿನ ತೊಕ್ಕೋಟು ಆಸುಪಾಸಿನಲ್ಲಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ಕೈಗೊಂಡರು. ಪ್ರಚಾರಕ್ಕು ಮುನ್ನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮ ಆಡಳಿತ ಹಾಗು […]

ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ :ಇಲ್ಲದ ನಿಯಮಗಳನ್ನು ಸೃಷ್ಟಿಸುತ್ತಿರುವ ಪೊಲೀಸರು : ಖಾದರ್ ಆರೋಪ

Thursday, March 21st, 2013
Passport applicants

ಮಂಗಳೂರು : ಪೊಲೀಸರೇ ಪಾಸ್ ಪೋರ್ಟ್ ಅರ್ಜಿದಾರರ ಮನೆಗೆ ಭೇಟಿ ನೀಡಿ, ಅರ್ಜಿದಾರನ ಪೂರ್ವಾಪರತೆಯ ಬಗ್ಗೆ ತಿಳಿದುಕೊಂಡು ನಂತರ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸುವ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ ಇತ್ತೀಚೆಗೆ ಪಾಸ್‌ಪೋರ್ಟ್ ಅರ್ಜಿದಾರರು ವಾಸದ ಮನೆ ಎದುರು ನಿಂತು ಪೊಟೊ ತೆಗೆಯಬೇಕು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಸಹಿ ಹಾಕಿದ ಸಾಕ್ಷಿದಾರರೇ ಪೊಲೀಸ್ ವಿಚಾರಣೆಯ ಸಂದರ್ಭದಲ್ಲೂ ಠಾಣೆಗೆ ಹಾಜರಾಗಬೇಕು ಎಂಬ ಕೆಲವು ಹೊಸ ಕ್ರಮಗಳನ್ನು ಪೊಲೀಸರು ಪ್ರಾರಂಭಿಸಿದ್ದಾರೆ ಇದರಿಂದ ಪಾಸ್ ಪೋರ್ಟ್ ಗೆ ಅರ್ಜಿ ದಾರರು ಅನಗತ್ಯ […]

ಜನಸಾಗರದಿಂದ ಕೂಡಿದ ಉಲ್ಲಾಳ ಬೀಚ್ ಉತ್ಸವ

Monday, November 26th, 2012
Ullal Beach Festival

ಮಂಗಳೂರು :ಮಾರುತಿ ಯುವಕ ಮಂಡಲದ ರಜತ ಮಹೋತ್ಸವದ ಅಂಗವಾಗಿ ಉಳ್ಳಾಲ ಮೊಗವೀರ ಪಟ್ಣದಲ್ಲಿ ಎರಡು ದಿನಗಳ ಕಾಲ ನಡೆದ ಬೀಚ್‌ ಉತ್ಸವದಲ್ಲಿ ಸಮುದ್ರಕ್ಕೆ ಸವಾಲೆಸೆಯುವಂತೆ ಜನ ಸಾಗರ ಸೇರಿತ್ತು. ಮೊದಲ ದಿನವಾದ ಶನಿವಾರವೇ ಜನರಿಂದ ತುಂಬಿದ್ದ ಉಳ್ಳಾಲ ಬೀಚ್ ಗೆ ರವಿವಾರ ನಾನಾ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು. ರವಿವಾರ ಬೆಳಗ್ಗೆ ಬಲೆ ಬೀಸುವ ಸ್ಪರ್ದೆ ಹಾಗೂ ನಾಡಾದೋಣಿ ಸ್ಪರ್ಧೆಗೆ ಶಾಸಕ ಯು. ಟಿ ಖಾದರ್ ಚಾಲನೆ ನೀಡಿದರು. ಕಾರ್ಯಕ್ರಮವು ಬಲೆ ಬೀಸುವ ಸ್ಪರ್ಧೆಯೊಂದಿಗೆ ಆರಂಭವಾಯಿತು. ಬಲೆ […]