ಮಂಗಳೂರು : ನೀರುಮಾರ್ಗದ 40 ವಯಸ್ಸಿನ ಮಹಿಳೆಯಲ್ಲಿ ಕೊರೋನಾ ಸೋಂಕು ಪತ್ತೆ
Wednesday, May 20th, 2020
ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಿದ ನೀರುಮಾರ್ಗದ 40 ವಯಸ್ಸಿನ ಮಹಿಳೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಈ ಮಹಿಳೆ ನೀರುಮಾರ್ಗದ ಕುಟ್ಟಿಕಲದ ನಿವಾಸಿಯಾಗಿದ್ದರೆ. ಅವರು ಮೇ.10 ರಂದು ಕಾರಿನಲ್ಲಿ ತನ್ನ ಮಗನೊಂದಿಗೆ ಬೆಂಗಳೂರಿನ ರಾಜಾಜಿನಗರದಿಂದ ಮಂಗಳೂರಿಗೆ ಬಂದಿದ್ದು ಅಸ್ತಮ ಮತ್ತು ಬಿಪಿಯಿಂದಾಗಿ ಮೇ.17 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ದ.ಕ. ಜಿಲ್ಲೆಯಲ್ಲಿ ಈವರೆಗೆ 55 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 33 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಒಟ್ಟು 11 ಮಂದಿ ಗುಣಮುಖರಾಗಿದ್ದಾರೆ. 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.