ಶಿಕ್ಷಕರಿಗೆ ಸುಲಭ ಪ್ರಾತ್ಯಕ್ಷಿಕೆಗಳ ತರಬೇತಿ

Saturday, July 28th, 2018
pilukula

ಮಂಗಳೂರು: ಸರಕಾರಿ ಶಾಲೆಗಳಲ್ಲಿ ವಿಜ್ಞಾನ ಕಲಿಕೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅನುಸಾರವಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜಿಲ್ಲೆಯ ಆಯ್ದ ಸರ್ಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಸುಲಭ ಪ್ರಾತ್ಯಕ್ಷಿಕೆಗಳ ತರಬೇತಿ ಕಾರ್ಯಕ್ರಮವನ್ನು ಜುಲೈ 25 ರಂದು ಏರ್ಪಡಿಸಲಾಗಿತ್ತು. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಕೊಲ್ಕತ್ತಾದ ಬಿರ್ಲಾ ಇಂಡಸ್ಟ್ರಿ ಮತ್ತು ಟೆಕ್ನಾಲಜಿ ಮ್ಯೂಜಿಯಂನ ನಿವೃತ್ತ ನಿರ್ದೇಶಕ ಹಾಗೂ ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಖ್ಯಾತರಾದ ಸಮರ್ ಕುಮಾರ್ […]

ಗಣಿತ, ವಿಜ್ಞಾನ ಪಾಠಕ್ಕೆ ಗೂಗಲ್ ಗ್ರೂಪ್!

Tuesday, February 25th, 2014
Google-Group

ಮಂಗಳೂರು: ಗುಣಾತ್ಮಕ ಶಿಕ್ಷಣದ ಕೂಗು ಎಲ್ಲೆಡೆ ಕೇಳಿಬರುತ್ತಿರುವ ಬೆನ್ನಿಗೇ ಗುಣಾತ್ಮಕ ಅಧ್ಯಾಪನವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ್ದು. ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಕಾಯಿ ಗಣಿತದ ಜತೆ ವಿಜ್ಞಾನ ಸುಲಭಗೊಳಿಸುವ ಕಲಿಕಾ ಪ್ರಕ್ರಿಯೆಗೆ ಬ್ಲಾಕ್ ಮಟ್ಟದಲ್ಲಿ ಮಂಗಳೂರು ಗಣಿತ ಹಾಗೂ ವಿಜ್ಞಾನ ಗೂಗಲ್‌ನಲ್ಲಿ ಆನ್‌ಲೈನ್ ಶಿಕ್ಷಕರ ವೇದಿಕೆ ಸಿದ್ಧಗೊಂಡಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪಾಠೋಪಯೋಗಿ ಬೋಧನ ಕ್ರಮದಲ್ಲಿ ನೈಪುಣ್ಯತೆ ಗಳಿಸಲು ಶಿಕ್ಷಕರಿಗಾಗಿ ಇರುವ ವೇದಿಕೆ ಇದು. ಪ್ರಸ್ತುತ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಜಿಲ್ಲೆಯ ಎಲ್ಲ ಬ್ಲಾಕ್‌ಗಳಲ್ಲಿ ವೇದಿಕೆ […]