ರೈತರ ಸಾಲ ಮನ್ನಾ : ಬ್ಯಾಂಕಿಗೆ ದಾಖಲೆ ಸಲ್ಲಿಸಲು ಸೂಚನೆ

Wednesday, December 12th, 2018
Farmer

ಮಂಗಳೂರು: ಕರ್ನಾಟಕ ರಾಜ್ಯ ಸರಕಾರವು ಬ್ಯಾಂಕುಗಳಲ್ಲಿ ರೈತರು ಪಡೆದ ಬೆಳೆ ಸಾಲವನ್ನು ಸಾಲ ಮನ್ನಾ ಮಾಡಿ ಆದೇಶ ಹೊಡಿಸಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರು ಸಾಲ ಪಡೆದ ಬ್ಯಾಂಕ್ ಶಾಖೆಗಳಿಗೆ ತೆರಳಿ ಸ್ವಯಂ ದೃಡೀಕರಣ ಪತ್ರವನ್ನು ನೀಡ ಬೇಕಾಗಿರುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಜಮೀನಿನ ಸರ್ವೆ ನಂಬರ್ ಮಾಹಿತಿಯನ್ನುಸಂಬಂದಿಸಿದ ಬ್ಯಾಂಕಿಗೆ ಕೂಡಲೇ ತೆರಳಿ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಕೃತ ಬ್ಯಾಂಕ್​ನಲ್ಲಿರುವ ರೈತರ ಸಾಲವನ್ನು ಮುಂದಿನ ಜುಲೈ ತಿಂಗಳಲ್ಲಿ ಏಕಕಾಲಕ್ಕೆ ಮನ್ನಾ: ಕುಮಾರಸ್ವಾಮಿ

Saturday, September 15th, 2018
kumarswamy

ಬೆಳಗಾವಿ: ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ರಾಜ್ಯದ ರೈತರ ಸಾಲವನ್ನು ಮುಂದಿನ ಜುಲೈ ತಿಂಗಳಲ್ಲಿ ಏಕಕಾಲಕ್ಕೆ ಮನ್ನಾ ಮಾಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದರು. ನಗರದಲ್ಲಿ ಇಂದು ಕನ್ನಡ ಭವನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬ್ಯಾಂಕ್ನಲ್ಲಿ ರಾಜ್ಯದ ರೈತರು 30 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ಈ ಸಾಲ ಮನ್ನಾಗೆ ನಾಲ್ಕು ಕಂತು‌ ಪಡೆಯಲ್ಲ. ಬರುವ ಜುಲೈಗೆ ಏಕಕಾಲದಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದ ಅವರು, ರೈತರು ಗೊಂದಲಕ್ಕೀಡಾಗಬಾರದು ಎಂದು ಮನವಿ ಮಾಡಿಕೊಂಡರು. ಅಲ್ಲದೇ […]