Blog Archive

ಉಡುಪಿ ಜಿಲ್ಲೆ14 ದಿನ ಸಂಪೂರ್ಣ ಲಾಕ್ ಡೌನ್, ಗಡಿಗಳು ಬಂದ್, ಬಸ್ಸು ಸಂಚಾರ ಇಲ್ಲ

Wednesday, July 15th, 2020
udupi DC

ಉಡುಪಿ  : ರಾಜ್ಯ ಸರಕಾರ ಕೋವಿಡ್ 19  ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿ ರುವ ಹಿನ್ನಲೆ . ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ವಿಧಿಸದಿರುವ ತೀರ್ಮಾನವನ್ನು ಮಂಗಳವಾರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 29ರವರೆಗೆ ಅಂದರೆ 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡುವ ನಿರ್ಧಾರಕ್ಕೆ ಸಭೆ ಬಂದಿತ್ತು. ಮತ್ತು ಈ 14 […]

ಹರೇಕಳ ಗ್ರಾಮ ಹತ್ತು ದಿನ ಸಂಪೂರ್ಣ ಲಾಕ್ ಡೌನ್

Friday, July 3rd, 2020
Harekala

ಕೊಣಾಜೆ: ಮಂಗಳೂರು ತಾಲೂಕಿನ ಹರೇಕಳ ಗ್ರಾಮದಲ್ಲಿ ಈಗಾಗಲೇ 5 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿರುವಂತೆ ಆತಂಕಗೊಂಡಿರುವ ಗ್ರಾಮಸ್ಥರು, ಇನ್ನು ಮುಂದಕ್ಕೆ ಸಾಮುದಾಯಿಕವಾಗಿ ರೋಗ ಹರಡದಂತೆ ತಡಯಲು ಶುಕ್ರವಾರ ಸಭೆ ಸೇರಿ ಇಡೀ ಗ್ರಾಮವನ್ನು ಹತ್ತು ದಿನಗಳ ತನಕ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನಿಸಿದ್ದಾರೆ. ಹರೇಕಳ ಪಂಚಾಯತ್ ಅಧ್ಯಕ್ಷರಾದ ಅನಿತಾ ಡಿಸೋಜ ಉಪಾಧ್ಯಕ್ಷರಾದ ಮಹಾಬಲ ಹೆಗ್ಡೆ ಡೆಬ್ಬೇಲಿ, ಬಿಜೆಪಿಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು ಮತ್ತು ಪಂಚಾಯತ್ ನ ಇತರ ಸದಸ್ಯರು, ಊರಿನ […]

ಲಾಕ್ ಡೌನ್ ನಲ್ಲೂ ಯೇಮನ್‌ ದೇಶದ ಹುಡುಗಿಗೆ ಅಪರೂಪದ ಶಸ್ತ್ರಚಿಕಿತ್ಸೆ

Friday, June 19th, 2020
yemengirl

ಬೆಂಗಳೂರು : ಲಾಕ್ ಡೌನ್ ಸಮಯದಲ್ಲಿ ಎದುರಾದ ಸಂಕಷ್ಟಗಳನ್ನ ಗೆದ್ದು, ಯೆಮೆನ್ ರಾಷ್ಟ್ರದ 9 ವರ್ಷದ ಬಾಲಕಿಯ ಎಡ ತೊಡೆಯ ಎಲುಬಿಗೆ ಕಾಣಿಸಿಕೊಂಡ ಕ್ಯಾನ್ಸರ್ ಗೆ ಶಸ್ತ್ರ ಚಿಕಿತ್ಸೆ ಕೈಗೊಳ್ಳುವಲ್ಲಿ ನಗರದ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ನಿಜಕ್ಕೂ ಇದೊಂದು ಅಪರೂಪದ ಪ್ರಕರಣವಾಗಿದ್ದು ಸಂಕಷ್ಟದ ವೇಳೆಯಲ್ಲಿಯೂ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹೆಣೆಯಾಗಿದೆ. ಲಾಕ್ ಡೌನ್ ಆಗುವುದಕ್ಕೆ ಕೆಲ ದಿನಗಳು ಬಾಕಿ ಇರುವಾಗಲಷ್ಟೇ ಯೆಮೆನ್ […]

ಜೂನ್ 8 ರಿಂದ ಧಾರ್ಮಿಕ ಮಂದಿರಗಳು, ದೇವಸ್ಥಾನಗಳು ಪ್ರವೇಶ ಮುಕ್ತ : ವಿಡಿಯೋ

Monday, June 8th, 2020
bappanadu

ಮಂಗಳೂರು  : ಜೂನ್ 8 ರಿಂದ ಧಾರ್ಮಿಕ ಮಂದಿರಗಳು, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನಗಳು ತೆರೆಯಲಿದ್ದು, ಭಕ್ತರಿಗೆ ದೇವರ ದರ್ಶನದ  ಅವಕಾಶ ನೀಡಲಾಗುತ್ತಿದ್ದು, ಕೆಲವು ಷರತ್ತುಗೊಳೊಂದಿಗೆ ದೇವರ ದರ್ಶನ ಪಡೆಯಬಹುದು. ಲಾಕ್ ಡೌನ್ ಸಡಿಲಿಕೆಯ ಬಳಿಕ ಸುಮಾರು ಎರಡೂವರೆ ತಿಂಗಳ ಬಳಿಕ  ದೇವಸ್ಥಾನಗಳನ್ನು ತೆರೆಯ ಬಹುದು ಎಂದು ಸರಕಾರ ಸುತ್ತೋಲೆ ಹೊರಡಿಸಿದೆ . ಜೂನ್ 8 ರಿಂದ ಬಪ್ಪನಾಡು, ಮಂಗಳಾದೇವಿ, ಕಟೀಲು, ಕದ್ರಿ , ಧರ್ಮಸ್ಥಳ  ಅಂತೆಯೇ ಅನೇಕ  ದೇವಾಲಯದಲ್ಲಿ  ದೇವರ ದರ್ಶನಕ್ಕೆ ಪ್ರವೇಶ ಮುಕ್ತವಾಗಲಿದ್ದು, ಮುಂಜಾಗೃತಾ ಕ್ರಮಗಳೊಂದಿಗೆ ವ್ಯವಸ್ಥೆ […]

ಎಸ್ಸೆಸ್ಸೆಲ್ಸಿ ಪರೀಕ್ಷೆ ಏಕೆ ರದ್ದುಗೊಳಿಸಬೇಕು ? ಇಲ್ಲಿವೆ ಉತ್ತರಗಳು

Tuesday, May 26th, 2020
sslc exam

ಹುಬ್ಬಳ್ಳಿ: ಒಂದೆಡೆ ಕೊರೋನಾ ಭೀತಿಯಿಂದ ಇಡೀ ರಾಜ್ಯವೇ ಲಾಕ್‌ ಡೌನ್‌ ನಲ್ಲಿಯೇ ಎರಡು ತಿಂಗಳು ಕಾಲ ಕಳೆದಿದೆ. ಈಗ ವಿದ್ಯಾರ್ಥಿಗಳ ಭವಿಷ್ಯದ ಮುಂದಿನ ಭದ್ರ ಬುನಾದಿಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಒಂದು ಬಾರಿ ಮುಂದೂಡಲಾಗಿತ್ತು. ನಂತರ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಮತೆಯೇ ಸವಾಲಾಗಿತ್ತು. ಕೂಡಲೇ ಎಚ್ಚೆತ್ತ ಸರಕಾರ ರೆಡಿಯೋ ಹಾಗೂ ಟಿವಿ ಮಾಧ್ಯಮಗಳಲ್ಲಿ ಹಲವಾರು ಪರೀಕ್ಷಾ ಪೂರ್ವ ಪದ್ಧತಿ ಹಾಗೂ ವಿದ್ಯಾಭ್ಯಾಸದ ಮನನ ಮಾಡಲಾರಂಭಿಸಿದೆ. ಅದರಂತೆ ಕೆಲವು ಶಾಲೆಗಳು ಹಾಗೂ ಟ್ಯಟೋರೀಯಲ್‌ ಗಳು ಆನಲೈನ್‌ ತರಬೇತಿ ನೀಡುತ್ತಿವೆ. ಆದರೆ ಎಳೆ […]

ಲಾಕ್ ಡೌನ್ ಹೊಸ ಮಾರ್ಗಸೂಚಿ, ಮೇ 31 ರ ವರೆಗೆ ಭಾನುವಾರ ಸಂಪೂರ್ಣ ಲಾಕ್ ಡೌನ್

Friday, May 22nd, 2020
sindhu-b-roopesh

ಮಂಗಳೂರು : ಲಾಕ್ ಡೌನ್ ಕ್ರಮಗಳ ಕುರಿತು ಹೊಸ ಮಾರ್ಗ ಸೂಚಿಯನ್ನು ಹೊರಡಿಸಿದ್ದು ಮೇ 18 ರಿಂದ ಮೇ 31 ರ ವರೆಗೆ ಭಾನುವಾರ ದಂದು ಸಂಪೂರ್ಣ ಲಾಕ್ ಡೌನ್ ಇರುತ್ತದೆ.  ಮೇ 23ರ ಶನಿವಾರ ಸಂಜೆ 7 ಗಂಟೆಯಿಂದ ಮೇ 25ರ ಸೋಮವಾರ ಮುಂಜಾನೆ 7 ಗಂಟೆಯವರೆಗೆ ದ.ಕ. ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ಡೌನ್ ಆಗಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳಾದ ಪತ್ರಿಕೆ, ತರಕಾರಿ, ಮೀನು, ಮಾಂಸ, ಹಾಲು, ಔಷಧ ಪೂರೈಕೆ/ಖರೀದಿಗೆ ಯಾವುದೇ […]

ಮಸ್ಕತ್ ನಿಂದ ಮೊದಲ ವಿಮಾನ ಮಂಗಳೂರಿಗೆ ಆಗಮನ

Wednesday, May 20th, 2020
Muscut-flight

ಮಂಗಳೂರು : ಲಾಕ್ ಡೌನ್ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಸ್ಕತ್ ನಿಂದ ಮೊದಲ ವಿಮಾನ ಇಂದು ರಾತ್ರಿ ಬಂದಿಳಿಯಿತು. ಸುಮಾರು 63 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ಸಂಜೆ 8.05 ಕ್ಕೆ ಲ್ಯಾಂಡ್‌ ಆಯಿತು.  ಮಸ್ಕತ್ ನಿಂದ ಬೆಂಗಳೂರಿಗೆ ಆಗಮಿಸಿ, ಅಲ್ಲಿನ ಪ್ರಯಾಣಿಕರನ್ನು ಇಳಿಸಿದ ನಂತರ ಮಂಗಳೂರಿಗೆ ವಿಮಾನ ಆಗಮಿಸಿತು. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ […]

ರಾಷ್ಟ್ರವ್ಯಾಪಿ ಲಾಕ್ ಡೌನ್ ಮೇ 31ರವರೆಗೂ ಮುಂದುವರಿಕೆ, ಗರ್ಭಿಣಿಯರು, ಮಕ್ಕಳು, ವೃದ್ಧರು ಮನೆಯ ಹೊರಗೆ ಬರುವಂತಿಲ್ಲ

Sunday, May 17th, 2020
lockdown

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ  ಮೇ 31ರ ವರೆಗೂ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು, ರಾಜ್ಯಸರ್ಕಾರ , ಕೇಂದ್ರಾಡಳಿತ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಕೋವಿಡ್ ಸಂಬಂಧಿತ ರಾಷ್ಟ್ರವ್ಯಾಪಿ ಲಾಕ್ ಡೌನ್ ಇನ್ನೆರಡು ವಾರಗಳ ಕಾಲ ಮುಂದುವರಿಯಲಿದೆ.   ದೇಶಾದ್ಯಂತ ಈ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಕೇಂದ್ರ ಗೃಹಸಚಿವಾಲಯದ ಅನುಮತಿ ಮೇರೆಗೆ ತುರ್ತು ವೈದ್ಯಕೀಯ […]

ಲಾಕ್ ಡೌನ್ ಸಂದರ್ಭದಲ್ಲಿ ಮುಂಬಯಿ ಜನತೆಯ ಹಸಿವು ನೀಗಿಸುವ ಹೋಟೆಲು ಉದ್ಯಮಿ, ಇನ್ನಂಜೆ ಶಶಿಧರ ಕೆ. ಶೆಟ್ಟಿ

Sunday, May 17th, 2020
shashidhara shetty

ಮುಂಬಯಿ : ಕೊರೋನಾ ಮಹಾಮಾರಿಯಿಂದಾಗಿ ಲೋಕ್ ಡೌನ್ ನ ಅಂಧಕಾರದಲ್ಲಿ ಮುಂಬಯಿ ಮಹಾನಗರ ಹಾಗೂ ಉಪನಗರಗಳು ಸಂಕಷ್ಟವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ತವರೂರಲ್ಲಿ ಇದ್ದೂ ಮುಂಬಯಿಯಲ್ಲಿರುವ ತುಳು ಕನ್ನಡಿಗರ ಬಗ್ಗೆ ಕಾಳಜಿ ವಹಿಸುತ್ತಿದ್ದವರು ನಲಾಸೋಪಾರದ ಜನಪ್ರಿಯ ಹೋಟೇಲು ಉದ್ಯಮಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಇವರು. ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರೂ ಆದ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಲಾಕ್ ಡೌನ್ ನಿಂದಾಗಿ ಊರಲ್ಲಿದ್ದು ಮುಂಬಯಿಗೆ ಬರಲು ಅಸಾಧ್ಯವಾದರೂ, ಲಾಕ್ ಡೌನ್ […]

ಲಾಕ್ ಡೌನ್ : ದುಬೈ ನಿಂದ ಮಂಗಳೂರು ಏರ್ ಪೋಟ್೯ಗೆ ಆಗಮಿಸಿದ ಮೊದಲ ವಿಮಾನ

Tuesday, May 12th, 2020
dubai-flight

ಮಂಗಳೂರು :  ಲಾಕ್ ಡೌನ್ ಬಳಿಕ‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ  ಮೊದಲ ವಿಮಾನ ಮಂಗಳವಾರ  ರಾತ್ರಿ ಬಂದಿಳಿಯಿತು. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು 176 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ರಾತ್ರಿ 10.10 ಕ್ಕೆ ಲ್ಯಾಂಡ್‌ ಆಯಿತು. 176 ಮಂದಿಯಲ್ಲಿ  95 ಪುರುಷರು, 81 ಮಹಿಳೆಯರು, 12 ಮೆಡಿಕಲ್ ಎಮರ್ಜನ್ಸಿ, 38 ಬಾಣಂತಿಯರು  ಪ್ರಯಾಣಿಸಿದ್ದರು. ಜೊತೆಗೆ ಕೆಲಸಕಳಕೊಂಡವರು, ವೀಸಾ ಮುಗಿದವರು, ಮನೆಯವರಿಗೆ ಎಮರ್ಜೆನ್ಸಿ ಚಿಕಿತ್ಸೆ, ಲಾಕ್ ಡೌನ್ ನಿಂದ ಸಿಕ್ಕಿ ಹಾಕಿ ಕೊಂಡವರು ಇದ್ದರು. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ […]