Blog Archive

ಲಾಕ್ ಡೌನ್ ವಿರಾಮದಲ್ಲಿ ಟೆಲಿ ಫಿಲ್ಮ್ ನಿರ್ಮಿಸಿದ 8ನೇ ತರಗತಿ ವಿದ್ಯಾರ್ಥಿ

Monday, May 11th, 2020
Balaratna Tele film

ಮಂಜೇಶ್ವರ : ಕೇವಲ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ಹನ್ನೆರಡು ನಿಮಿಷಗಳ “ಬಾಲ ರತ್ನ” ಎಂಬ ಟೆಲಿ ಫಿಲಂ ಒಂದನ್ನು ಇನ್ ಫ್ಯಾಂಟ್  ಜೀಸಸ್ ಇಂಗ್ಲಿಷ್ ಮಧ್ಯಮ ಶಾಲೆ ಮಂಜೇಶ್ವರದ 8 ನೇ ತರಗತಿ ವಿದ್ಯಾರ್ಥಿ ಅನುಭವ್ ಎಲ್.ಎ ನಿರ್ಮಿಸಿದ್ದಾನೆ. ಯಕ್ಷ ಗುರು ರಾಮ ಸಾಲ್ಯಾನ್ ಅವರಿಂದ ಯಕ್ಷಗಾನ ತರಬೇತಿ ಪಡೆಯುತ್ತಿರುವ ಅನುಭವ್ ಎಲ್.ಎ. ಈ ಮೊದಲು ಎರಡು ಟೆಲಿ ಫಿಲಂ ನಿರ್ಮಿಸಿದ್ದಾನೆ ಇದು ಅತನದ್ದು ಮೂರನೇ ಪ್ರೊಜೆಕ್ಟ್. ನಾನು 2 ವರ್ಷಗಳ ಹಿಂದೆ, ಸುಮ್ಮನೆ ತಮಾಷೆಗೆ ಅಂತ ಹತ್ತಿರದ […]

ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡಿಗ ಸಹೋದರರ ಸಮಾಜ ಸೇವೆ

Monday, May 11th, 2020
ambika food

ಮುಂಬೈ :  ರಾಜು ಮೊಗವೀರ ಹಾಗೂ ಸತೀಶ ಮೊಗವೀರ ಇವರ ಅಂದೇರಿಯ ಅಂಬಿಕಾ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಇದರ ಪ್ರಾಯೋಜಕತ್ವದಲ್ಲಿ ಕೊರೊನ ಸಂತ್ರಸ್ತರಿಗೆ ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಪ್ರತಿ ದಿನ ಹದಿನೈದು ಸಾವಿರ ದಿಂದ ಇಪತ್ತು ಸಾವಿರ ಊಟದ ಪ್ಯಾಕೆಟ್ ಗಳನ್ನು ವಿತರಿಸಲಾಗುತ್ತಿದೆ. ದಿನಾಲೂ ಬೇರೆ ಬೇರೆ ರೀತಿಯ ಪುಲಾವ್, ಬಿರಿಯಾನಿ, ಕಿಚಡಿ, ಮಸಾಲಾ ಬಾತ್, ಹಾಗೂ ಪಾವ್ ಬಾಜಿ ಯನ್ನು ವಿತರಿಸುತ್ತಿದ್ದಾರೆ. ಹಾಗೂ ಅಲ್ಲಿನ ಹತ್ತಿರದ ನಿವಾಸಿಗಳಿಗೂ, ಕಾರ್ಮಿಕರಿಗೂ, ಊಟವಿಲ್ಲದೆ ಪರದಾಡುತ್ತಿದ್ದವರಿಗೆ ಉಚಿತ […]

ಲಾಕ್ ಡೌನ್ : ದುಬೈಯಲ್ಲಿ ಉಳಿದಿರುವ ಕರಾವಳಿಗರ ಮೊದಲ ವಿಮಾನ ಮೇ 14 ಕ್ಕೆ ಮಂಗಳೂರಿಗೆ

Friday, May 8th, 2020
Air-India

ಮಂಗಳೂರು: ಲಾಕ್ ಡೌನ್ ನಿಂದ ದುಬೈಯಲ್ಲಿ ಉಳಿದಿರುವ ಕರಾವಳಿಗರನ್ನು ಹೊತ್ತ ಮೊದಲ ವಿಮಾನ ಮೇ 14 ಕ್ಕೆ ಮಂಗಳೂರಿಗೆ ಬರಲಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. ದುಬೈನಿಂದ ಮಂಗಳೂರಿಗೆ ಮೇ 12 ರಂದು ಮೊದಲ ವಿಮಾನ ತಲುಪಬೇಕಿತ್ತು, ಅದನ್ನು ಈಗ ಮೇ 14 ಕ್ಕೆ ಮರು ನಿಗದಿಪಡಿಸಲಾಗಿದೆ. ಯುಎಇ ಸಮಯ 16.10 ಕ್ಕೆ ಏರ್ ಇಂಡಿಯಾ ವಿಮಾನ ದುಬೈನಿಂದ ಮೇ 14 ರಂದು ಹೊರಟು ರಾತ್ರಿ 9.10 ಕ್ಕೆ ಮಂಗಳೂರು ತಲುಪಲಿದೆ. ವಿಮಾನದಲ್ಲಿ ಪ್ರಯಾಣಿಕರನ್ನು ಸಾಮಾಜಿಕ ಅಂತರವನ್ನು ಕಾಯ್ದು […]

ಲಾಕ್ ಡೌನ್ ಸಮಯದಲ್ಲಿ ಜನಸಾಮಾನ್ಯರ ಸೇವೆಯಲ್ಲಿ ಕುಲಾಲ ಸಂಘ ಮುಂಬಯಿ

Tuesday, May 5th, 2020
kulal sangha Mumbai

ಮುಂಬಯಿ : ಲಾಕ್ ಡೌನ್ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಾರಂಭದಿಂದಲೇ ಕುಲಾಲ ಸಂಘ ಮುಂಬಯಿಯ ಕಾರ್ಯಕರ್ತರು ಸದ್ದು ಗದ್ದಲವಿಲ್ಲದೆ ಅಸಾಯಕ ಸಮಾಜ ಬಾಂಧವರಿಗೆ ಹಾಗೂ ಇತರ ಸಮಾಜದವರಿಗೆ ಒಟ್ಟು 200 ರಕ್ಕೂ ಮಿಕ್ಕಿ ಕುಟುಂಬಕ್ಕೆ ದೈನಂದಿನ ದವಸದಾನ್ಯಗಳನ್ನು ವಿತರಿಸಿದೆ. ಇದುವರಿಗೆ ದಾನಿಗಳ ಸಹಾಯದಿಂದ ಮುಂಬಯಿ ಮಹಾನಗರ, ಉಪನಗರ, ನವಿಮುಂಬಯಿ ಹಾಗೂ ಪರಿಸರದಲ್ಲಿ ಸುಮಾರು ಐದು ಲಕ್ಷ ರೂಪಾಯಿಗೂ ಹೆಚ್ಚಿನ ಮೊತ್ತದ ಆಹಾರ ಸಾಮಾಗ್ರಿಗಳನ್ನು ವಿತರಿಸುದರೊಂದಿಗೆ ಮಾನವೀಯತೆಯನ್ನು ಮೆರೆದಿದೆ. ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ ಕುಲಾಲ್ ಇವರ […]

ಮಣಿಪಾಲದ ಮದ್ಯದಂಗಡಿಯಲ್ಲಿ ವಿದ್ಯಾರ್ಥಿನಿಯರದ್ದೇ ಕ್ಯೂ

Tuesday, May 5th, 2020
udupi wine

ಉಡುಪಿ: ಮೂರನೇ ಹಂತದ ಲಾಕ್ ಡೌನ್ ನಲ್ಲಿ ಮದ್ಯದಂಗಡಿ ತೆರೆಯುತ್ತಿದಂತೆ  ಮಣಿಪಾಲದ ಹಾಸ್ಟೆಲ್, ಪಿಜಿ ಗಳಲ್ಲಿದ್ದ ವಿದ್ಯಾರ್ಥಿನಿಯರು ಸಾರ್ವಜನಿಕವಾಗಿ ಸರತಿಯಲ್ಲಿ ನಿಂತು ಮದ್ಯ ಖರೀದಿಸಿದ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ ಕೊರೊನಾ ಲಾಕ್ ಡೌನ್ ಮೊದಲು ವೀಕೆಂಡ್ ಮೋಜು ಮಸ್ತಿಗಳಲ್ಲಿ ತೊಡಗುತ್ತಿದ್ದ ಈ ಯುವತಿಯರು  ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಮದ್ಯ ಖರೀದಿ ಗಾಗಿ ಮಟಮಟ ಬಿಸಿಲಲ್ಲೂ ಸರತಿಯ ಮೊರೆ ಹೋಗಿದ್ದರು, ಮಣಿಪಾಲದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಇರುವ ವಿದ್ಯಾರ್ಥಿನಿಯರು ಲಾಕ್ ಡೌನ್ ನಿಂದ  ಊರಿಗೆ ಹೋಗಲಾಗದೆ ಸಿಕ್ಕಿಬಿದ್ದಿದ್ದರು. ಹೊರ […]

ಮೇ 4 ರಿಂದ ಮೂರನೇ ಹಂತದ ಲಾಕ್ ಡೌನ್ ಮುಂದುವರೆರಿಕೆ, ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಸೀಮಿತ ಸಡಿಲಿಕೆ

Sunday, May 3rd, 2020
sindhu roopesh

ಮಂಗಳೂರು : ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಮೇ.4 ರಿಂದ ಮೂರನೇ ಹಂತದ ಲಾಕ್ ಡೌನ್ ಮುಂದುವರೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಕೊರೋನಾ ಪ್ರಕರಣಗಳು ಸಕ್ರಿಯವಾಗಿದ್ದು 8 ವಲಯಗಳನ್ನು ಸಂಪೂರ್ಣ ನಿರ್ಬಂಧದಲ್ಲಿ ಇಡಲಾಗಿದೆ ಇಲ್ಲಿ ಯಾವುದೇ ಸಡಿಲಿಕೆ ನೀಡಿಲ್ಲ ಮೇ.17ರ ವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಆದರೆ ರಾಜ್ಯ ಸರ್ಕಾರ ಕೆಲವೊಂದು ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ದ.ಕ. ಜಿಲ್ಲೆಯಲ್ಲೂ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಅದರಂತೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಓಡಾಟಕ್ಕೆ ಅವಕಾಶವಿದೆ. […]

ಲಾಕ್ ಡೌನ್ ಉಲ್ಲಂಘಿಸಿ ಮಸೀದಿಯೊಳಗೆ ಗುಂಪು ಸೇರಿ ಶುಕ್ರವಾರದ ನಮಾಜ್, ಹನ್ನೊಂದು ಮಂದಿಯ ವಶ

Friday, May 1st, 2020
Kolara Namaz

ಕೋಲಾರ : ಲಾಕ್ ಡೌನ್ ನಿಯಮ ಉಲ್ಲಂಘಿಸಿ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಎಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಾರದು ಎಂಬ ನಿರ್ಬಂಧ ಇದ್ದರೂ  ಮಸೀದಿಯೊಳಗೆ ನಮಾಜ್ ಮಾಡಿ  ಕೊರೋನಾ  ಹರಡಲು ಮತ್ತಷ್ಟು ಪ್ರೇರಣೆ ನೀಡುತ್ತಿದ್ದ ಕೆಲವರನ್ನು ಕೋಲಾರ ತಹಶೀಲ್ದಾರ್ ಪತ್ತೆ ಹಚ್ಚಿ  ವಶಕ್ಕೆ ಪಡೆದಿದ್ದಾರೆ. ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ ನುಗ್ಗಿದ ತಹಶೀಲ್ದಾರ್ ಶೋಭಿತಾ ಅವರು, ಲಾಕ್ ಡೌನ್ ಸಮಯದಲ್ಲಿ ನಮಾಜ್ ಮಾಡಲು ನಿಮಗೆ ಯಾರು ಹೇಳಿದ್ದು, ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ ಎಂದು ಹೇಳಿ […]

ಲಾಕ್ ಡೌನ್ ನಲ್ಲಿ ವಿನಾಯಿತಿ ಇಲ್ಲ, ಅಗತ್ಯವೆನಿಸಿದರೆ ಕಠಿಣ ಕ್ರಮ: ಸಚಿವ ಕೋಟ ಸೂಚನೆ

Sunday, April 26th, 2020
Kota Meeting

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಅಗತ್ಯವೆನಿಸಿದರೆ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಬಂಟ್ವಾಳ ತಾಲ್ಲೂಕಿನ ಕಸಬಾ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೋರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಚಿವರು ಹಾಗೂ ಸಂಸದರು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ತುರ್ತು ಸಭೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ನಡೆಯಿತು. ಬಂಟ್ವಾಳದಲ್ಲಿ ಮೇ 3ರವರೆಗೆ ಲಾಕ್ ಡೌನ್‌ನಲ್ಲಿ ಯಾವುದೇ ವಿನಾಯಿತಿ ಇಲ್ಲ. ಕಸಬಾ […]

ದ.ಕ. ಜಿಲ್ಲೆಯಲ್ಲಿ ಮೇ 3 ರವರೆಗೆ ಲಾಕ್ ಡೌನ್ ಯಥಾ ಸ್ಥಿತಿಯಲ್ಲಿ ಮುಂದುವರಿಕೆ

Thursday, April 23rd, 2020
Kota Poojary

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಮೇ 3 ರವರೆಗೆ ಹಾಲಿ‌ ನಿರ್ಬಂಧಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಲಾಕ್ ಡೌನ್ ಸಡಿಲಿಕೆ ಇಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಇಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅಂಗಡಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿ ಬೆಳಿಗ್ಗೆ 7 ರಿಂದ 12 ರವರೆಗೆ ತೆರೆಯಲಿವೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಸಂಬಂಧಿಸಿದಂತೆ ಬುಧವಾರದಂದು ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶ […]

ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಪುಂಡರಿಂದ ಹಲ್ಲೆ

Monday, April 20th, 2020
padarayanapura

ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಮತ್ತೆ ಕೋವಿಡ್ ಯೋಧರ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಇಲ್ಲಿನ 58 ಜನರನ್ನು ಕ್ವಾರೆಂಟೈನ್ ಮಾಡಲೆಂದು ತೆರಳಿದ್ದ ಆರೋಗ್ಯ ಯೋಧರ ಮೇಲೆ ಸ್ಥಳೀಯ ಕೆಲ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ ಮತ್ತು ಇದನ್ನು ತಡೆಯಲು ಬಂದ ಸೀಮಿತ ಪೊಲೀಸ್ ಪಡೆಗಳ ಮೇಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪುಂಡರು ಹಲ್ಲೆ ನಡೆಸಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇಂದು ರಾತ್ರಿಯಾಗುತ್ತಿದ್ದಂತೆ ಈ ಪ್ರದೇಶದ ಕೆಲ ಶಂಕಿತ ವ್ಯಕ್ತಿಗಳು ರೌಡಿಗಳ ರೀತಿಯಲ್ಲಿ ಅಟ್ಟಹಾಸ ಮೆರೆದಿದ್ದು […]