ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸವ

Friday, September 11th, 2020
vitla pindi

ಉಡುಪಿ: ಸಂಪ್ರದಾಯದಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರೀಕೃಷ್ಣ ಲೀಲೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋವಿಡ್ ನಿಯಮಾವಳಿಯಂತೆ ಭಕ್ತರಿಗೆ ರಥಬೀದಿಗೆ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಮಠದ ವೈದಿಕರು, ಗೊಲ್ಲರು, ಸಿಬ್ಬಂದಿಗಳು ಮಾತ್ರ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಣೆ ನಡೆಸಿದರು. ಪರ್ಯಾಯ ಅದಮಾರು ಮಠಾಧೀಶರು ಕಡಗೋಲು ಕೃಷ್ಣನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಪ್ರದಕ್ಷಿಣೆ ತರುವಾಗ ಮಠದ ಗೊಲ್ಲರು ಮೊಸರುಕುಡಿಕೆಗಳನ್ನು ಒಡೆಯುತ್ತಾ ಸಾಗಿದರು. ರಥಬೀದಿಯ ನಾಲ್ಕೂ ಪ್ರವೇಶ ದ್ವಾರಗಳನ್ನು ಪೊಲೀಸರು ಬಂದ್ ಮಾಡುವ ಮೂಲಕ ಪ್ರವೇಸಕ್ಕೆ ನಿರಾಕರಣೆ ಮಾಡಿದ್ದರು.    

ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ಶ್ರೀಕೃಷ್ಣ ಜಯಂತಿ ಉತ್ಸವ, ಶುಕ್ರವಾರ ವಿಟ್ಲಪಿಂಡಿ

Thursday, September 10th, 2020
Krishna Matt

ಉಡುಪಿ : ಶ್ರೀಕೃಷ್ಣಮಠದಲ್ಲಿ ಗುರುವಾರ ಶ್ರೀಕೃಷ್ಣ ಜಯಂತಿ ಉತ್ಸವ ನಡೆಯಲಿದ್ದು ಶ್ರೀಕೃಷ್ಣಮಠವನ್ನು ಬಗೆಬಗೆಯ ಹೂವು ಗಳಿಂದ ಅಲಂಕರಿಸಲಾಗಿದೆ. ವಿಟ್ಲಪಿಂಡಿ ಉತ್ಸವಕ್ಕೆ ಈಗಾಗಲೇ 12 ಗುರ್ಜಿ, ಎರಡು ಮಂಟಪಗಳನ್ನು ನಿರ್ಮಿಸಿದ್ದು, ಬುಧವಾರ ಇದಕ್ಕೆ ಬಟ್ಟೆ ಕಟ್ಟುವ ಕೆಲಸ ನಡೆದಿದೆ. ಇಷ್ಟು ವರ್ಷ ಮುದ್ದುಕೃಷ್ಣ ವೇಷ ಸ್ಪರ್ಧೆ ಮತ್ತು ಇತರ ವೇಷಗಳ ಸ್ಪರ್ಧೆ ನಡೆಯುತ್ತಿದ್ದರೆ ಈ ಬಾರಿ ಇವೆರಡಕ್ಕೂ ಅವಕಾಶ ಇಲ್ಲ. ಶ್ರೀಕೃಷ್ಣಮಠದ ವಾದ್ಯ ಕಲಾವಿದ ದಾಮೋದರ ಶೇರಿಗಾರ್‌ ಅವರ ಸಂಯೋಜನೆಯಲ್ಲಿ ಶಿವಮೊಗ್ಗದ ಕೃಷ್ಣಮೂರ್ತಿ ಬಳಗ, ಬಂಟ್ವಾಳದ ಪ್ರಶಾಂತ ಸಜಿಪ, ಅಲೆವೂರಿನ […]

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಪ್ರಾರಂಭ

Thursday, August 22nd, 2019
Udupi

ಉಡುಪಿ : ಆಗಸ್ಟ್‌ 23ರಂದು ದೇಶದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಸದ್ಯ ಕೃಷ್ಣನೂರು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸಿದ್ಧತೆ ಭರದಿಂದ ಸಾಗಿದ್ದು, ಅತ್ಯಂತ ವೈಭವದಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ರಾಜ್ಯದ ವಿವಿಧ ಭಾಗದಿಂದ ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಲಕ್ಷಾಂತರ ಜನ ಉಡುಪಿಗೆ ಆಗಮಿಸುತ್ತಾರೆ. ಈಗಾಗಲೇ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಪ್ರಾರಂಭಗೊಂಡಿದ್ದು, ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ಲಕ್ಷಾಂತರ ಉಂಡೆ-ಚಕ್ಕುಲಿ ತಯಾರಿ ಆ.20ರಿಂದಲೇ ಪ್ರಾರಂಭವಾಗಿದೆ. 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 24ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಆ.23ರಂದು ರಾತ್ರಿ […]