Blog Archive

ವಿಟ್ಲ : ಅಕ್ರಮ ಜಾನುವಾರು ಸಾಗಾಟ; ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಬಂಧನ

Thursday, October 17th, 2019
vitla

ಮಂಗಳೂರು : ಅಕ್ರಮ ದನ ಸಾಗಾಟ ಮಾಡುತ್ತಿದ್ದ ವಾಹನ ತಡೆದು ಪರಿಶೀಲಿಸುತ್ತಿದ್ದ ವೇಳೆ ವಾಹನದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಮುಹಮ್ಮದ್ ಇಕ್ಬಾಲ್ (36), ಬೋಳಂತೂರು ಗ್ರಾಮದ ಉನೈಜ್ (25) ಬಂಧಿತರು. ಅಕ್ಬೋಬರ್‌ 14 ರಂದು ವಿಟ್ಲ ಪಡ್ನೂರು ಗ್ರಾಮದ ಚನಿಲ ಎಂಬಲ್ಲಿ ಕೋಡಪದವು ಕಡೆಯಿಂದ ಬರುತ್ತಿದ್ದ ಲಾರಿಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದ ತಕ್ಷಣ ಇಬ್ಬರೂ ಪರಾರಿಯಾಗಿದ್ದರು. ಅನಂತರ ವಾಹನದಲ್ಲಿ […]

ವಿಟ್ಲ : ಎರಡೂವರೆ ಲಕ್ಷ ರೂ.ಗಳಿದ್ದ ಲಾಕರನ್ನೇ ಕದ್ದ ಕಳ್ಳರು

Wednesday, October 2nd, 2019
locker

ವಿಟ್ಲ : ಕೇಪು ಗ್ರಾಮದ ಕುದ್ದುಪದವಿನಲ್ಲಿ ಮತ್ತೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಕುದ್ದುಪದವು ಪೆಟ್ರೋಲ್ ಪಂಪ್ ನಿಂದ ಎರಡೂವರೆ ಲಕ್ಷ ರೂ.ಗಳಿದ್ದ ಲಾಕರನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಮಾತ್ರವಲ್ಲದೆ ವಿಟ್ಲ ಕಾಶಿಮಠದಿಂದ ತ್ರೀ ವೀಲ್ಹರ್ ಆಪೆ ವಾಹನ ಮುಂಜಾನೆ 4.30ರ ಸುಮಾರಿಗೆ ಕಳುವಾಗಿದೆ. ಲಾಕರನ್ನು ಆಪೆಯಲ್ಲಿ ಕೊಂಡೊಯ್ದಿರುವ ಶಂಕೆಯಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.    

ವಿಟ್ಲ : ಮನೆ ಕಳ್ಳತನ ಪ್ರಕರಣ ಆರೋಪಿ ಸೆರೆ

Saturday, September 28th, 2019
vitla

ಮಂಗಳೂರು : ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಲಪ್ಪುರಂ‌ ಜಿಲ್ಲೆಯ ನೀಲಂಬೂರು ತಾಲೂಕಿನ ವಂಡೂರು ಗ್ರಾಮದ ರಮ್ಶೀದ್ (32) ಬಂಧಿತ ಆರೋಪಿ. ಈತ ಜು.02 ರಂದು ಪೆರಾಜೆ ಗ್ರಾಮದ ಗಡಿಯಾರ ಎಂಬಲ್ಲಿ ಮುಹಮ್ಮದ್ ರಫೀಕ್ ಎಂಬವರ ಮನೆಯಲ್ಲಿ 19.5 ಲಕ್ಷ ರೂ. ನಗದು ಮತ್ತು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಬಂಧಿತನಿಂದ ಸುಮಾರು 140 ಗ್ರಾಂ. ಚಿನ್ನಾಭರಣ ಮತ್ತು […]

ವಿಟ್ಲ : ಬೈಕ್-ಓಮ್ನಿ ಕಾರು ನಡುವೆ ಢಿಕ್ಕಿ; ಸವಾರ ಗಂಭೀರ

Wednesday, September 25th, 2019
vitla

ವಿಟ್ಲ : ಇಂದು ಬೆಳಿಗ್ಗೆ ವಿಟ್ಲ ಸಾಲೆತ್ತೂರು ರಸ್ತೆಯ ನಾಡಕಚೇರಿ ಬಳಿ ಓಮ್ನಿ ವಾಹನ ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಗಾಯಾಳುವನ್ನು ಮೇಗಿನ ಪೇಟೆ ನಿವಾಸಿ ಝೈನೇದ್ (18) ಎಂದು ಗುರುತಿಸಲಾಗಿದೆ. ಝೈನೇದ್ ಕೆಲಸ ಮಾಡಲೆಂದು ಬೆಳಿಗ್ಗೆ ತನ್ನ ಬೈಕ್‌ನಲ್ಲಿ ವಿಟ್ಲ ಕಡೆಯಿಂದ ಬರುತ್ತಿದ್ದ ವೇಳೆ ಸಾಲೆತ್ತೂರು ಕಡೆಯಿಂದ ಬಂದ ಓಮ್ನಿ ಡಿಕ್ಕಿ ಹೊಡೆದಿದೆ. ಈತ ವಿಟ್ಲದಿಂದ ಸಾಲೆತ್ತೂರು ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಸಾಲೆತ್ತೂರು ಕಡೆಯಿಂದ […]

ಕಳ್ಳತನ ಪ್ರಕರಣ : ಓರ್ವ ಆರೋಪಿ ಬಂಧನ

Tuesday, September 24th, 2019
ibrahim

ಪುತ್ತೂರು : ಮನೆಯೊಂದರಲ್ಲಿ ನಡೆಸಿದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು‌ ಪೊಲೀಸರು ಬಂಟ್ವಾಳ ತಾಲೂಕಿನ ವಿಟ್ಲ ಎಂಬಲ್ಲಿ ಬಂಧಿಸಿದ್ದಾರೆ. ಕಡಬ ತಾಲೂಕಿನ ಕೊಯಿಲ ಗ್ರಾಮದ ಕಲಾಯಿ ಮನೆಯ ಇಬ್ರಾಹೀಂ ಕಲಂದರ್(31) ಬಂಧಿತ ಆರೋಪಿ. ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕ ಮತ್ತು ಠಾಣಾ ಸಿಬ್ಬಂದಿ ಆರೋಪಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಎಂಬಲ್ಲಿ ಬಂಧಿಸಿ, ಸುಮಾರು 50 ಸಾವಿರ ರೂ. ಮೌಲ್ಯದ 20 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ‌. ಆರೋಪಿ ಇಬ್ರಾಹಿಂ ಕಲಂದರ್ ಜುಲೈ 3 ರಂದು ಪುತ್ತೂರು […]

ಮಾಣಿ : ರಸ್ತೆಯ ಹೊಂಡಕ್ಕೆ ಖಾಸಗಿ ಬಸ್; ಸಂಚಾರಕ್ಕೆ ಅಡಚಣೆ

Saturday, September 14th, 2019
maani

ವಿಟ್ಲ : ಬೆಂಗಳೂರು ಕಡೆಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ ರಸ್ತೆ ಹೊಂಡಕ್ಕೆ ಸಿಕ್ಕಿಹಾಕಿಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಮಾಣಿ ಸಮೀಪದ ಬೊಳ್ಳುಕಲ್ಲು ಎಂಬಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದ್ದು, ಬೆಳಗ್ಗೆ ಹೊಂಡದಲ್ಲಿ ಬಸ್ ಸಿಲುಕಿದೆ. ಇದರಿಂದ ಘನ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ 2 ತಾಸುಗಳ ವರೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಂಗಳೂರು ಸುತ್ತಮುತ್ತಲಿನ ಪ್ರಯಾಣಿಕರು ರಸ್ತೆಯಲ್ಲಿ ಕಾಲಕಳೆಯುವಂತಾಯಿತು. ಬಳಿಕ ಉಪ್ಪಿನಂಗಡಿಯಿಂದ ಕ್ರೇನ್ ತರಿಸಿ ಬಸ್ಸನ್ನು […]

ಕೊಲೆ ಯತ್ನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ಬಂಧನ

Wednesday, November 14th, 2018
arret-kerala

ಮಂಗಳೂರು: ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಆರೋಪಿ ಕೇರಳದ ಕಾಸರಗೋಡು ಜಿಲ್ಲೆಯ ಬಿ.ಎ ಸಂಶುದ್ದೀನ್ ಎಂಬಾತ 2013ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವನು. ಇದೀಗ ಈತನನ್ನು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ಸಮೀಪದ ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

Saturday, September 1st, 2018
vitla-mangaluru

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕುಕ್ಕುತ್ತಡ್ಕ ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಹಮೂದ್ (55) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ.ಕುಕ್ಕುತ್ತಡ್ಕ ಮೋನು ಬ್ಯಾರಿ ಅವರ ಪುತ್ರರಾಗಿರುವ ಮಹಮೂದ್ ಕಳೆದ 18 ವರ್ಷಗಳಿಂದ ಗಲ್ಫ್ನಲ್ಲಿ ಉದ್ಯೋಗದಲ್ಲಿದ್ದರು. ಅವರು ಇತ್ತೀಚೆಗಷ್ಟೇ ರಜೆಯಲ್ಲಿ ಊರಿಗೆ ಬಂದು ಸೌದಿಗೆ ಮರಳಿದ್ದು, ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸಾವನ್ನಪ್ಪಿದ್ದಾರೆ.

ವಿಟ್ಲದಲ್ಲಿ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ

Wednesday, December 20th, 2017
blood-donation

ವಿಟ್ಲ: ‘ಡಿ ಗ್ರೂಪ್ ವಿಟ್ಲ’ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಡಿ. 23ರಂದು ಬೆಳಗ್ಗೆ 9ರಿಂದ ವಿಟ್ಲದ ವಿಎಚ್ ಕಟ್ಟಡದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರದ ಜೊತೆ ಸನ್ಮಾನ ಕಾರ್ಯಕ್ರಮವೂ ಜರುಗಲಿದೆ. ರಕ್ತದಾನ ಮಾಡಿದ ಎಲ್ಲ ರಕ್ತದಾನಿಗಳಿಗೂ ಶಿಬಿರಾರ್ಥ ಪತ್ರ ದೊರಕಲಿದೆ ಎಂದು ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಡಿ ಗ್ರೂಪ್ ವಿಟ್ಲ ಇದರ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮೇಲೆ ವಿಟ್ಲ ಠಾಣೆಯಲ್ಲಿ ದೂರು ದಾಖಲು

Thursday, October 19th, 2017
sanjeeva matandur

ಮಂಗಳೂರು: ರಾಜಕೀಯ ಮೇಲಾಟದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ, ಪ್ರತ್ಯಾರೋಪ, ಜಿಲ್ಲೆಯಲ್ಲಿ ದೂರು, ಪ್ರತಿದೂರುಗಳ ಹಾವಳಿ ಜಾಸ್ತಿಯಾಗಿದೆ.  ಅವಹೇಳನಕಾರಿಯಾಗಿ ಮಾತನಾಡುವುದು ಈಗ ಸರ್ವೇಸಾಮಾನ್ಯವಾಗಿದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದರ ವಿರುದ್ಧ ಬಿಜೆಪಿಯ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮೇಲೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರತಿಭಟನಾ ಸಭೆಯಲ್ಲಿ ಸಚಿವ ರಮಾನಾಥ ರೈಯವರನ್ನು ಪಿಲಿಗೊಬ್ಬುನ ಅರೆಮರ್ಲ (ಹುಲಿವೇಷ ಆಡುವ ಅರೆಹುಚ್ಚ) ಹಾಗೂ ಶಾಸಕಿ ಶಕುಂತಳಾ ಶೆಟ್ಟಿಯವರನ್ನು ಏಕವಚನದಲ್ಲಿ […]