Blog Archive

ಬಶೀರ್ ಕೊಲೆ ಸಮರ್ಥಿಸಿಕೊಂಡ ವಿಎಚ್‌ಪಿ ಮುಖಂಡ

Monday, January 29th, 2018
abdul-bashir

ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿ ಎಂಬಲ್ಲಿ ನಡೆದಿದ್ದ ಬಷೀರ್ ಹತ್ಯೆ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಸಮರ್ಥಿಸಿ ವಿವಾದಿದ ಹೇಳಿಕೆ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ನಡೆದ ಹಡೆದವ್ವನ ಶಾಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಗದೀಶ್ ಶೇಣವ ಈ ಹೇಳಿಕೆ ನೀಡಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅಮಾಯಕ ದೀಪಕ್ ರಾವ್ ಗೆ ಪ್ರತೀಕಾರವಾಗಿ ಅಬ್ದುಲ್ ಬಷೀರ್ ಹತ್ಯೆಯಾಗಿದೆ. ಬಷೀರ್ ಹತ್ಯೆಯಾಗಿದ್ದಕ್ಕೆ […]

ಜನವರಿ 3 ರಿಂದ ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನ

Tuesday, January 2nd, 2018
Love-jihad

ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳದ ಯುವ ವಿಭಾಗ ಹಾಗೂ ದುರ್ಗಾವಾಹಿನಿ ವತಿಯಿಂದ ಲವ್ ಜಿಹಾದ್ ವಿರುದ್ಧ ಜನಜಾಗೃತಿ ಅಭಿಯಾನವನ್ನು ಜನವರಿ 3 ರಿಂದ 15 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾಹಿತಿ ನೀಡಿದ್ದಾರೆ. ಮಂಗಳೂರಲ್ಲಿ ಶಂಕಿತ ಲವ್ ಜಿಹಾದ್ ಪ್ರಕರಣ, ಎನ್ಐಎ ತನಿಖೆಗೆ ಆಗ್ರಹ ವಾರ್ಡ್, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಗ್ರಾಮಕ್ಕೊಂದು ಸಮಿತಿ ರಚಿಸಿ, ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದ ಅವರು ಲವ್ ಜಿಹಾದ್ ವಿರೋಧಿಸಿ, […]

ಕುಲಭೂಷಣ್ ಅವರ ತಾಯಿ, ಪತ್ನಿಗೆ ಅವಮಾನ ಆರೋಪ: ಪ್ರತಿಭಟನೆ

Saturday, December 30th, 2017
prathibatane

ಮಂಗಳೂರು: ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಭಾರತದ ಯೋಧ ಕುಲಭೂಷಣ್ ಜಾದವ್ ಅವರನ್ನು ಭೇಟಿ ಮಾಡಲು ಹೋಗಿದ್ದ ಕುಲಭೂಷಣ್ ಅವರ ತಾಯಿ ಹಾಗೂ ಪತ್ನಿಗೆ ಅವಮಾನ ಮಾಡಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಶುಕ್ರವಾರ ಕದ್ರಿ ಮಲ್ಲಿಕಟ್ಟೆ ವೃತ್ತದ ಬಳಿ ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟನೆ ನಡೆಯಿತು.

ಹಿಂಸಾಚಾರ:ಅಂಗಡಿ,ಗುಡಿಗಳ ಮೇಲೆ ಕಲ್ಲು ತೂರಾಟ

Wednesday, December 13th, 2017
sirsi

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆರಂಭವಾದ “ಕೋಮು ಜ್ವಾಲೆ’ ಈಗ ಶಿರಸಿಗೂ ವ್ಯಾಪಿಸಿದೆ. ಪರೇಶ ಮೇಸ್ತ ಹತ್ಯೆ ಖಂಡಿಸಿ ಮಂಗಳವಾರ ಕರೆ ನೀಡಿದ್ದ ಶಿರಸಿ ಬಂದ್‌ ಹಿಂಸಾಚಾರಕ್ಕೆ ತಿರುಗಿದ್ದು, ಅಂಗಡಿ, ಪ್ರಾರ್ಥನಾ ಮಂದಿರ, ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿ ಬೆಂಕಿ ಹಚ್ಚಲಾಗಿದೆ. ಈ ವೇಳೆ ಎಂಟಕ್ಕೂ ಅಧಿಕ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರು ವಾಯು ಪ್ರಯೋಗಿಸಿದ ಪೊಲೀಸರು ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ, ಹಿಂದೂ […]

ನಕಲಿ ಗೋರಕ್ಷಕರು ಎಂಬ ಹೇಳಿಕೆ ಸುಳ್ಳು :ಜಗದೀಶ್ ಶೇಣವ

Wednesday, October 18th, 2017
vishva hindu parishath

ಮಂಗಳೂರು: ಗೋವುಗಳ ರಕ್ಷಣೆಗೆ ಮುಂದಾಗುವವರೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋರಕ್ಷಕರು ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ನಮ್ಮ ಅನಿಸಿಕೆ ಪ್ರಕಾರ ದೇಶದಲ್ಲಿ ಯಾರೂ ನಕಲಿ ಗೋರಕ್ಷಕರಿಲ್ಲ. ಇರುವವರೆಲ್ಲ ಗೋವುಗಳನ್ನು ಪ್ರೀತಿಸುವವರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋ ರಕ್ಷಕರು ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆ ಕುರಿತು ಮಾಹಿತಿ ನೀಡಿದ ಸಾಫ್ಟ್‌‌ವೇರ್ […]

ಕಾರಂತರ ಬಂಧನ ಪ್ರಕರಣ, ಮೂಡಬಿದಿರೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳದ ಖಂಡನೆ

Saturday, October 14th, 2017
Jagadhish karanth

ಮೂಡಬಿದಿರೆ: ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ ಕಾರಂತರ ಬಂಧನ ಪ್ರಕರಣವನ್ನು ಮೂಡಬಿದಿರೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ಖಂಡಿಸಿದೆ. ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕುವುದರ ಮೂಲಕ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಸೂಕ್ತ ಎಚ್ಚರಿಕೆಯನ್ನು ನೀಡಬೇಕಾಗಿ ಕೋರುವ, ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್‌ ಸಹಿ ಮಾಡಿರುವ ಮನವಿಯನ್ನು ಮೂಡಬಿದಿರೆ ತಹಶೀಲ್ದಾರರಿಗೆ ಸಲ್ಲಿಸಲಾಯಿತು. ವಿ.ಹಿಂ.ಪ. ಕಾರ್ಯದರ್ಶಿ ಶಾಂತರಾಮ ಕುಡ್ವ, ಗುರುಪುರ ಹಿ.ಜಾ.ವೇದಿಕೆ […]

ರಾಜ್ಯ ಸರಕಾರದ ವಿರುದ್ಧ ಸಂಘ ಪರಿವಾರದಿಂದ ಪ್ರತಿಭಟನೆ

Wednesday, October 11th, 2017
kadri

ಮಂಗಳೂರು: ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಇಂದು ಕದ್ರಿ ಸರ್ಕೂಟ್ ಹೌಸ್ ಎದುರುಗಡೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮನಪಾ ಸದಸ್ಯೆ ರೂಪಾ ಡಿ. ಬಂಗೇರ, ಹಿಂಜಾವೇ ಜಿಲ್ಲಾ ಸಂಚಾಲಕ ಅಮಿತ್ ಕುಮಾರ್, ಸಹ ಸಂಚಾಲಕ ಸಂದೀಪ್ ಅಂಬ್ಲಮೊಗರು, ಕದ್ರಿ ನಗರ ಸಂಚಾಲಕ ಹರೀಶ್ ಜೋಗಿಮಠ ಮತ್ತಿತರರು ಉಪಸ್ಥಿತರಿದ್ದರು.

ರಾಜಕೀಯ ಲಾಭಕೋಸ್ಕರ ಜಿಲ್ಲೆಯ ಗಲಭೆಗಳಿಗೆ ರೈ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ : ಪುರಾಣಿಕ್

Tuesday, June 20th, 2017
vhp

ಮಂಗಳೂರು : ಆರ್‌ಎಸ್‌ಎಸ್ ಮುಖಂಡ ಡಾ. ಪ್ರಭಾಕರ ಭಟ್‌ರನ್ನು ಏಕವಚನದಲ್ಲಿ ಸಂಭೋದಿಸಿ 307 ಕೇಸು ದಾಖಲಿಸಿ ಎಂದು ಸಚಿವರು ಸೂಚಿಸುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಗಲಭೆ, ಅಹಿತಕರ ಘಟನೆಗಳಿಗೆ ಕಾಂಗ್ರೆಸ್ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಅದನ್ನು ಮರೆಮಾಚಿ ಹಿಂದೂಗಳೇ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿ ಕೋಮು ಭಾವನೆ ಹಚ್ಚಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ನಡೆದ ಎಲ್ಲಾ ಗಲಭೆ ಪ್ರಕರಣಗಳನ್ನು ಸರಕಾರ ಸಿಬಿಐಗೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ […]

ಮಾತೃ ಶಕ್ತಿ ಜಾಗೃತವಾದಾಗ ದೇಶದ ಪ್ರಗತಿ ಸಾಧ್ಯ : ಹರೀಶ್ ಶೆಟ್ಟಿ ಮಾಡ

Saturday, August 13th, 2016
Varamahalkshmi pooja

ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ಇದರ ಆಶ್ರಯದಲ್ಲಿ 13 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಮಡೆಯಿತು. ಬಾಲ್ಯದಲ್ಲೇ ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ಒಳಗೊಂಡ ವಿಷಯಗಳನ್ನು ತಿಳಿಯಪಡಿಸಿ ಮುಂದಿನ ಪೀಳಿಗೆಯನ್ನು ಸನ್ಮಾರ್ಗದಲ್ಲಿ ನಡೆಸುವಂತೆ ಪ್ರೇರೇಪಿಸಬೇಕು. ಮಾತೆಯರೆಲ್ಲ ಸುರುಚಿಯಂತಾಗದೆ ಸುನೀತಿಯಂತಾಗಿ ಧ್ರುವಕುಮಾರನಂತಹ ಪೀಳಿಗೆಯಿಂದ ಬಲಿಷ್ಠ ಭಾರತ, ಶ್ರೇಷ್ಠಭಾರತ, ಜಗದ್ಗುರು ಭಾರತವನ್ನಾಗಿಸಿ ತ್ಯಾಗದಿಂದ ಶಾಂತಿಯಿಂದ ಸಮೃದ್ಧಿಯನ್ನು ಬೆಳೆಸೋಣ. ಮಾತೃಶಕ್ತಿ ಜಾಗೃತವಾದಾಗ ದೇಶದ ಪ್ರಗತಿ ಸಾಧ್ಯ ಎಂದು ಧಾರ್ಮಿಕ ಮುಂದಾಳು […]

`ವಿದಾಯ್’ ಶಾದಿ ಭಾಗ್ಯ ಯೋಜನೆಗೆ ವಿಶ್ವ ಹಿಂದೂ ಪರಿಷತ್ ವಿರೋಧ

Wednesday, October 30th, 2013
VHP

ಮಂಗಳೂರು : ಸಮಾಜದ ಪ್ರತಿಯೊಂದು ಸಮುದಾಯದಲ್ಲೂ ಬಡ ವರ್ಗದವರಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ನೀಡಲಾಗುವ ವಿದಾಯ್ ಹೆಸರಿನ ಶಾದಿ ಭಾಗ್ಯ ಯೋಜನೆಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಗಳು ತೀವ್ರರೀತಿಯಾಗಿ ವಿರೋಧಿಸುತ್ತವೆ ಎಂದು ವಿಶ್ವ ಹಿಂದೂ ಪರಿಷತ್‌ನ ವಿಭಾಗ ಸೇವಾ ಪ್ರಮುಖ್ ಡಾ.ಪಿ.ಅನಂತಕೃಷ್ಣ ಭಟ್ ಹೇಳಿದರು. ಅವರು ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಕೇವಲ ಮುಸ್ಲಿಂ ಹೆಣ್ಣುಮಕ್ಕಳಿಗೆ ವಿವಾಹದ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸುವುದಕ್ಕಾಗಿ ಧನ ಸಹಾಯ ನೀಡುವುದು ರಾಜ್ಯ ಸರ್ಕಾರದ ಪಕ್ಷಪಾತಿ ಹಾಗೂ ವೋಟ್ ಬ್ಯಾಂಕ್ […]