ಮಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ಮಲ್ಲಿಗೆಯ ಕಂಪು

Wednesday, April 4th, 2018
airport

ಮಂಗಳೂರು: ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ವಿ.ವಿ.ರಾವ್, ವಿಮಾನದಿಂದ ಇಳಿದು ಮಂಗಳೂರು ವಿಮಾನ ನಿಲ್ದಾಣದ ಹೊರಗೆ ಬರಬೇಕಾದರೆ ಇನ್ನು ಮಲ್ಲಿಗೆಯ ಸುವಾಸನೆ ಸ್ವಾಗತಿಸಲಿದೆ. ಜಾಗತಿಕವಾಗಿ ಮನ್ನಣೆ ತಂದುಕೊಟ್ಟ ಮಂಗಳೂರು ಮಲ್ಲಿಗೆಯ ಖ್ಯಾತಿಯನ್ನು ಇನ್ನಷ್ಟು ಪಸರಿಸಲು ಹೊರಹೋಗುವ ಪ್ರಯಾಣಿಕರಿಗೆ ಮಲ್ಲಿಗೆಯ ಕಂಪು ಘಮಿಸಲಿದೆ ಎಂದು ಹೇಳಿದರು. ಇದಲ್ಲದೆ ವಿಮಾನ ನಿಲ್ದಾಣದ ಒಳಹೊರಗು ಗೋಡೆಗಳಲ್ಲಿ ಮಂಗಳೂರಿನ ಪ್ರಾದೇಶಿಕತೆ, ಸಂಸ್ಕೃತಿಯನ್ನು ಸಾರುವ ಚಿತ್ರಪಟಗಳು ಕಣ್ಮನ ಸೆಳೆಯಲಿವೆ. ಇದಕ್ಕಾಗಿಯೇ ಸುಮಾರು 1 ಕೋಟಿ ರೂ. ವೆಚ್ಚ ಮಾಡಲಾಗುವುದು. […]

ರನ್‌‌ ವೇಯಲ್ಲಿ ಟ್ರ್ಯಾಕ್ಟರ್‌‌ ಇರಲಿಲ್ಲ: ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕರ ಸ್ಪಷ್ಟನೆ

Friday, January 12th, 2018
Airport

ಮಂಗಳೂರು: ವಿಮಾನ ನಿಲ್ದಾಣದ ರನ್‌‌ ವೇಯಲ್ಲಿ ಟ್ರ್ಯಾಕ್ಟರ್‌‌ ಇರಲಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ ಎಂದು ಎಎನ್ಐ ವರದಿ ಮಾಡಿತ್ತು. ರನ್‌‌ ವೇ ಸಮೀಪವೇ ಟ್ರ್ಯಾಕ್ಟರ್‌‌ವೊಂದು ನಿಲ್ಲಿಸಲಾಗಿತ್ತು. ಆಗ ಮುಂಬೈನತ್ತ ತೆರಳಬೇಕಾಗಿದ್ದ ವಿಮಾನವೊಂದು ಟೇಕಾಫ್ ಆಗುತ್ತಿತ್ತು. ಇದು ಏರ್‌‌ ಟ್ರಾಫಿಕ್ ಕಂಟ್ರೋಲರ್‌‌ ಗಮನಕ್ಕೆ ಬಂದಿತ್ತು. ಎಟಿಎಸ್‌‌ ಸಿಬ್ಬಂದಿ ಕೂಡಲೇ ವಿಮಾನದ ಪೈಲಟ್‌ಗೆ ಸಂದೇಶ […]