ಕುಕ್ಕುಂದೂರಿನ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿ ಕಾರ‍್ಯಕ್ರಮ
Monday, December 16th, 2019ಕಾರ್ಕಳ : ಕಾರ್ಕಳ ತಾಲ್ಲೂಕಿನ ಕುಕ್ಕುಂದೂರಿನ ಮಹಾತ್ಮಾಗಾಂಧಿ ವಸತಿ ಪ್ರೌಢಶಾಲೆಯಎಲ್ಲಾ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿಕಾರ‍್ಯಕ್ರಮ ನಡೆಯಿತು. ಮೂಡುಬಿದಿರೆಯ ಗ್ರಾಹಕ ಸಂಘಟನೆಯ ಅಧ್ಯಕ್ಷ, ರಾಜ್ಯ ಸಂಪನ್ಮೂಲ ವ್ಯಕ್ತಿ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದಜತೆ ಕಾರ‍್ಯದರ್ಶಿ ರಾಯೀ ರಾಜಕುಮಾರರು ಕಾರ‍್ಯಕ್ರಮವನ್ನು ನಡೆಸಿಕೊಟ್ಟರು.ಅವರುತಮ್ಮ ಮಾಹಿತಿ ಕಾರ‍್ಯಕ್ರಮದಲ್ಲಿ ಬಳಕೆದಾರರ ಹಿತರಕ್ಷಣಾ ಕಾಯಿದೆಯ ಎಲ್ಲಾ ಅಂಶಗಳನ್ನೂ ತಿಳಿಸಿಕೊಟ್ಟರು. ಗ್ರಾಹಕ ಹಕ್ಕು ಹಾಗೂ ಕರ್ತವ್ಯಗಳ ಸಂಪೂರ್ಣ ಮಾಹಿತಿಯನ್ನು ಹಲವಾರು ಉದಾಹರಣೆಗಳ ಮೂಲಕ ಪ್ರಸ್ತುತ ಪಡಿಸಿದರು.ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ ಸಮಗ್ರ ಮಾರ್ಗದರ್ಶನ […]