ʼದೇಶ ಮೊದಲುʼ ಎಂಬ ಭಾವನೆ ನಮ್ಮೆಲ್ಲರಲ್ಲಿ ಮೂಡಲಿ: ಡಾ. ಶಿಕಾರಿಪುರ ಕೃಷ್ಣಮೂರ್ತಿ

Sunday, August 15th, 2021
Konaje University

ಮಂಗಳೂರು: ದೇಶದಲ್ಲಿ ಜನರ ಮೂಲಭೂತ ಅಗತ್ಯಗಳಾದ ಆಹಾರ, ನೀರು ಮತ್ತು ವಿದ್ಯೆ ಉಚಿತವಾಗಿ ಸಿಗುವಂತಾಗಬೇಕು. ಇದನ್ನು ಬಿಟ್ಟು ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ ಸಮಾಜ ಅಧೋಗತಿಗಿಳಿಯುವುದು ಖಚಿತ, ಎಂದು ನಿವೃತ್ತ ಪ್ರಾಧ್ಯಾಪಕ, ನಟ, ಚಿಂತಕ ಡಾ. ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಎನ್‌ಎಸ್‌ಎಸ್‌ ಮುಂದಾಳತ್ವದಲ್ಲಿ ಆಯೋಜಿಸಲಾಗಿದ್ದ 75 ನೇ ಸ್ವಾತಂತ್ರ್ಯೋತ್ಸವದ ಉದ್ಘಾಟನೆ (ʼಆಜಾದಿ ಕ ಅಮೃತ್‌ ಮಹೋತ್ಸವ್‌ʼ) ನೆರವೇರಿಸಿ ಮಾತನಾಡಿದ ಅವರು, ದೇಶವಾಸಿಗಳು ಸ್ವಾತಂತ್ರ್ಯದ ಮೌಲ್ಯದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. […]