ಮಾರ್ಚ್ 3 ರಿಂದ 6 ರವರೆಗೆ ಸೂಟರ್‌ಪೇಟೆ ಶ್ರೀ ಕೋರ‍್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

Tuesday, February 27th, 2018
sutarpete nema

ಸೂಟರ್‌ಪೇಟೆ :  ವಿಶಿಷ್ಠ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡಿರುವ ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್‌ಪೇಟೆ ಶ್ರೀ ಕೋರ‍್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವ ಮಾರ್ಚ್ 3 ರಿಂದ 6ರವರೆಗೆ ನಡೆಯಲಿದೆ. ಮಾರ್ಚ್ 3 ರಂದು ಬೆಳಿಗ್ಗೆ ಹೋಮ ನಂತರ ಶ್ರೀ ಬಬ್ಬುಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ದರ್ಶನ ಸೇವೆಯೊಂದಿಗೆ ಭಂಡಾರ ಏರುವುದು, ಮಧ್ಯಾಹ್ನ ಸ್ಥಳದ ಗುಳಿಗ ದೈವದ ನೇಮ, ರಾತ್ರಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ. ಮಾರ್ಚ್ 4ರಂದು ಸಂಜೆ ರಾಹುಗುಳಿಗ ನೇಮ, ರಾತ್ರಿ ಶ್ರೀ […]

ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ : ರಾಜ ಬೆಳ್ಚಪ್ಪಾಡರು

Thursday, April 16th, 2015
Durga Devi Temple Thoudugoli

ತೌಡುಗೋಳಿ (ನರಿಂಗಾನ): ಆಧುನಿಕತೆ ಬೆಳೆದರೂ ದೈವದೇವರಲ್ಲಿ ನಂಬಿಕೆ ಕಡಿವೆಯಾಗಲಿಲ್ಲ, ಹತ್ತು ಜನ ಸೇರಿದರೆ ಮಣ್ಣಿನ ಪಾವಿತ್ಯತೆ ಹೆಚ್ಚುತ್ತದೆ ಎನ್ನುವುದಕ್ಕೆ ತೌಡುಗೋಳಿಯ ಶ್ರೀ ದುರ್ಗಾ ದೇವಿಯ ಸಾನಿಧ್ಯವೇ ಸಾಕ್ಷಿ ಎಂದು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ರಾಜ ಬೆಳ್ಚಪ್ಪಾಡ ಹೇಳಿದರು. ಅವರು ತೌಡುಗೋಳಿಯ ಶ್ರೀ ದುರ್ಗಾ ದೇವಿ ಕ್ಷೇತ್ರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಕ್ಷೇತ್ರದ ನವೀಕರಣಕ್ಕಾಗಿ ಜೀರ್ಣೋದ್ಧಾರ ಸಮಿತಿ ರಚನೆ ಹಾಗೂ ಧಾರ್ಮಿಕ ಸಭೆsಯನ್ನು ಉಧ್ಘಾಟಿಸಿ ಮಾತನಾಡಿದರು. ಧಾರ್ಮಿಕತೆಯಲ್ಲಿ ಒಗ್ಗಟ್ಟು […]

ಮಂಗಳಾದೇವಿಯಲ್ಲಿ ವೈಭವದ ನವರಾತ್ರಿ ರಥೋತ್ಸವ

Tuesday, October 15th, 2013
mangaladevi-dasara

ಮಂಗಳೂರು : ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೋಮವಾರ ವಿಜಯ ದಶಮಿಯಂದು ವೈಭವದ ರಥೋತ್ಸವ ನಡೆಯಿತು. ವಿದ್ಯೆಯನ್ನು ಆರಂಭಿಸುವ ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ.ಗಣೇಶ್ ನೇರವೇರಿಸಿದರು. ಮಧ್ಯಾಹ್ನ ರಥಾರೋಹಣಗೊಂಡು ರಥವನ್ನು ಅಲಂಕರಿಸಿ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಇಡಲಾಯಿತು. ರಥವನ್ನು ಹೂ, ಸಿಯಾಳ ಫಲವಸ್ತು ಮತ್ತು ವಿದ್ಯುದ್ದೀಪಗಳಿಂದ ಆಲಂಕರಿಸಿ ರಥವನ್ನು ಎಳೆಯಲಾಯಿತು. ಬಳಿಕ ಮಹಾಪೂಜೆ ನಡೆಯಿತು. ಸಂಜೆ ಅಂತರ್ ರಾಷ್ಟ್ರೀಯ ಖ್ಯಾತಿಯ ಪ್ರಶಸ್ತಿ ವಿಜೇತ ಮಚ್ಚೆಂದ್ರನಾಥ್ ಮತ್ತು ಬಳಗದವರಿಂದ ಸ್ಯಾಕ್ಸೋಫೊನ್ ವಾದನ ನಡೆಯಿತು. […]