Blog Archive

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ : ಡಿ.ವಿ. ಸದಾನಂದ ಗೌಡ

Tuesday, January 17th, 2017
dv sadananda Gowda

ಮಂಗಳೂರು: ಕರ್ನಾಟಕದಲ್ಲಿ ಪಕ್ಷದೊಳಗೆ ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಕೆಲವೊಂದು ಮಂದಿ ಅದನ್ನು ದೊಡ್ಡದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಷದ ವರಿಷ್ಠರು ಈ ಸಮಸ್ಯೆಯನ್ನು ಅರ್ಧ ಗಂಟೆಯೊಳಗೆ ಬಗೆಹರಿಸುತ್ತಾರೆ. ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ. ಶೀಘ್ರವೇ ಬಗೆಹರಿಯಲಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು. ಪಂಜಾಬ್‌, ಗುಜರಾತ್‌, ಉತ್ತರಪ್ರದೇಶ, ಗೋವಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ […]

ಡಿ.ವಿ.ಸದಾನಂದ ಗೌಡ ಅವರ ಸಹೋದರಿ ನಿಧನ

Tuesday, October 7th, 2014
ಡಿ.ವಿ.ಸದಾನಂದ ಗೌಡ ಅವರ ಸಹೋದರಿ ನಿಧನ

ಮಂಗಳೂರು : ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಅವರ ಸಹೋದರಿ ಯಳಂದೂರು ಜಿಲ್ಲಾ ಪಂಚಾಯತ್‌ ಸದಸ್ಯೆ ಸಾವಿತ್ರಿ ಶಿವರಾಂ ಅವರು ಮಂಗಳವಾರ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಾವಿತ್ರಿ ಅವರಿಗೆ 55 ವರ್ಷ ಪ್ರಾಯವಾಗಿದ್ದು, ಕೆಲ ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಸಾವಿತ್ರಿ ಶಿವರಾಂ ಅವರು ಸುಳ್ಯ ತಾಲೂಕಿನ ಪೆರಾಜೆಯವರಾಗಿದ್ದು 2009 ರಿಂದ 2011 ರ ವ್ರೆಗೆ ಪುತ್ತೂರು ತಾಲೂಕು ಪಂಚಾಯತ್ ನ ಅಧ್ಯಕ್ಷರಾಗಿದ್ದರು. ಮೃತ ಸಾವಿತ್ರಿ ಅವರು ಪತಿ ಶಿವರಾಂ, […]

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಆಡಳಿತಾವಧಿಯಲ್ಲಿ ಸಾಕಾರಗೊಂಡಿದೆ : ಡಿ.ವಿ.ಎಸ್

Friday, March 1st, 2013
BJP Election Campaign

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಹಿನ್ನಲೆಯಲ್ಲಿ ಮಂಗಳೂರು ಪುರಭವನದಲ್ಲಿ ಗುರುವಾರ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಅಭಿಯಾನವನ್ನು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ೨೫ ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಕೇವಲ ೫ ವರ್ಷಗಳಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಸಾಕಾರಗೊಂಡಿದೆ, ಕಳೆದ ೫ ವರ್ಷಗಳ ಆಡಳಿತದಲ್ಲಿ ಬಿಜೆಪಿ ರೂಪಾಯಿ ೫೨೦ ಕೋಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಹಿಂದಿನ ೨೫ ವರ್ಷಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್ […]

ಸದಾನಂದ ಗೌಡ ಜೆಡಿಎಸ್ ಸೇರ್ಪಡೆಗೊಳ್ಳುವ ಸುಳಿವು ನೀಡಿದ ಕೆಜೆಪಿ ಉಪಾಧ್ಯಕ್ಷ ಧನಂಜಯ್ ಕುಮಾರ್

Sunday, February 17th, 2013
Dananjaya Kumar

ಮಂಗಳೂರು  :  ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ  ಜೆಡಿಎಸ್ ಸೇರ್ಪಡೆಗೊಳ್ಳಲು ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿಯೇ ಶನಿವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಚುನಾವಣಾ ಸಿದ್ದತಾ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು  ಕೆಜೆಪಿ ಉಪಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಧನಂಜಯ್ ಕುಮಾರ್ ಹೇಳಿದ್ದಾರೆ. ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಜೆಡಿಎಸ್‌ನೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು. ಆಡಳಿತ ನಡೆಸುವಾಗ ಜೆಡಿಎಸ್ ವರಿಷ್ಟರ ಮಾತಿಗೆ ಮನ್ನಣೆ ನೀಡುತ್ತಿದ್ದರೆಂದರಲ್ಲದೆ, ಈಗಲೂ ಜೆಡಿಎಸ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸದಾನಂದ ಗೌಡರು ಜೆಡಿಎಸ್ ಸೇರಲಿದ್ದಾರೆ […]

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ವಿವಿಧ ಸಂಶೋಧನಾ ಕೇಂದ್ರಗಳ ಉದ್ಘಾಟನಾ ಸಮಾರಂಭ

Saturday, November 10th, 2012
Sahyaadri College

ಮಂಗಳೂರು :ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕಾಲೇ ಜ್ ಅಫ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್‌ನಲ್ಲಿ ಕರ್ನಾಟಕ ಸರಕಾರ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಸಹಯೋಗದೊಂದಿಗೆ ನೂತನವಾಗಿ ಸ್ಥಾಪನೆಗೊಂಡಿರುವ ಸಂಶೋಧನಾ ಕೇಂದ್ರ, ಇನ್‌ಕುಬೇಶನ್ ಸೆಂಟರ್, ಉದ್ಯೋಗಾವಕಾಶ ಒದಗಣೆ ಕೇಂದ್ರ, ತರಬೇತಿ ಕೇಂದ್ರಗಳು ಹಾಗೂ ಅಲಹಾಬಾದ್‌ನ ಐಐಐಟಿ ಸಂಸ್ಥೆಯ ಸಹಯೋಗದಲ್ಲಿ ಸ್ಥಾಪನೆಗೊಂಡಿರುವ ಉತ್ಕೃಷ್ಟತಾ ಕೇಂದ್ರ ಹಾಗೂ ನಾವಿನ್ಯತಾ ಪ್ರಯೋಗಾಲಯ ಮೊದಲಾದವುಗಳ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ಸಿ.ಟಿ ರವಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಭಾರತ ದೇಶವು […]

ಮುಖ್ಯಮಂತ್ರಿ ತವರಿನಲ್ಲಿ ಕನ್ನಡ ನುಡಿ ತೇರು ಜಾಗೃತಿ ಜಾಥಾಕ್ಕೆ ಚಾಲನೆ

Thursday, October 13th, 2011
Kannada Nudi Teru At Sullia

ಸುಳ್ಯ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ದ.ಕ ಮತ್ತು ಉಡುಪಿ ಜಿಲ್ಲಾಡಳಿತ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಸುಳ್ಯದಲ್ಲಿ ಬುಧವಾರ ಆಯೋಜಿಸಲಾದ ಕನ್ನಡ ನುಡಿ ತೇರು ಜಾಗೃತಿ ಜಾಥಾಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಚಾಲನೆ ನೀಡಿದರು. ಕನ್ನಡ ಭಾಷೆ, ಗಡಿನಾಡು ಅಭಿವೃದ್ಧಿಗೆ ಸರಕಾರ ಅನುದಾನ ನೀಡಲಿದ್ದು, 250 ಕೋಟಿ ರೂಪಾಯಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಗಿದೆ , ಗಡಿನಾಡ ಪ್ರದೇಶದಲ್ಲಿ ಕನ್ನಡ ಶಾಲೆಯ ಉಳಿವಿಗಾಗಿ 10 ಮಕ್ಕಳಿಗಿಂತ ಕಡಿಮೆ ಇದ್ದ ಶಾಲೆಗಳನ್ನು ಮುಚ್ಚುದೆ ಗ್ರಾಮೀಣ […]

‘ಸಂತೋಷ’ದಿಂದ ಹೋಗುತ್ತಿದ್ದೇನೆ. ಹುದ್ದೆ ಇಲ್ಲದಿದ್ದರೂ, ಪಕ್ಷದ ಅಭಿವೃದ್ಧಿಗೆ ನಿರಂತರ ದುಡಿಯುತ್ತೇನೆ: ಯಡಿಯೂರಪ್ಪ

Sunday, July 31st, 2011
CM Yeddyurappa Resigns/ಯಡಿಯೂರಪ್ಪ ರಾಜೀನಾಮೆ

ಬೆಂಗಳೂರು : ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರ್ಕಾರದ ಮುಖ್ಯ ಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಸಂಜೆ 3.30ರ ಸುಮಾರಿಗೆ ತಮ್ಮ ಅಸಂಖ್ಯ ಬೆಂಬಲಿಗರೊಂದಿಗೆ ಅಧಿಕೃತ ನಿವಾಸದಿಂದ ರೇಸ್ ಕೋರ್ಸ್ ರಸ್ತೆಯ ಮೂಲಕ ಹೊರಟು ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ತಮ್ಮ ಒಂದು ವಾಕ್ಯದ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಂವಿಧಾನದ ಕಲಂ 164(1)ರ ಅನ್ವಯ ಯಡಿಯೂರಪ್ಪ ಅವರ ರಾಜೀನಾಮೆಯನ್ನು ಸ್ವೀಕರಿಸಿ, ಅಂಗೀಕಾರ ಮುದ್ರೆ ಒತ್ತಿದ್ದಾರೆ. ಹೊಸ ನಾಯಕನ ಆಯ್ಕೆಯಾಗುವವರೆಗೂ […]