Blog Archive

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸನಾತನ ಸಂಸ್ಥೆಯ ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನಕ್ಕೆ ಶಾಸಕರಾದ ವೇದವ್ಯಾಸ ಕಾಮತ್ ಭೇಟಿ

Monday, February 24th, 2020
sanatana

ಮಂಗಳೂರು : ಮಹಾಶಿವರಾತ್ರಿಯ ಪ್ರಯುಕ್ತ ಸನಾತನ ಸಂಸ್ಥೆಯ ವತಿಯಿಂದ ಮಂಗಳೂರು ಸಹಿತ ಪುತ್ತೂರು, ಸುಳ್ಯ, ಉಜಿರೆ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ ಮತ್ತು ವಿತರಣೆ ಮಳಿಗೆಯನ್ನು ಹಮ್ಮಿಕೊಳ್ಳಲಾಯಿತು. ಮಂಗಳೂರಿನ ಸುಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಶಾಸಕರಾದ ಶ್ರೀ. ವೇದವ್ಯಾಸ ಕಾಮತ್ ಇವರು ಭೇಟಿ ನೀಡಿದರು. ಗ್ರಂಥ ಪ್ರದರ್ಶನಿಯನ್ನು ವೀಕ್ಷಿಸಿದ ಶ್ರೀ. ವೇದವ್ಯಾಸ ಕಾಮತ್ ಇವರು ಅಧ್ಯಾತ್ಮ ಪ್ರಸಾರ ಮಾಡಲು ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು. ಈ ಗ್ರಂಥ ಪ್ರದರ್ಶನಿಗೆ ಅನೇಕ ಜಿಜ್ಞಾಸುಗಳು ಭೇಟಿ […]

ಪವರ್ ಟಿವಿಯ ವರದಿಗಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸನಾತನ ಸಂಸ್ಥೆ ಒತ್ತಾಯ

Tuesday, January 28th, 2020
sanatana

ಮಂಗಳೂರು : ದಿನಾಂಕ 23.1.2020 ರಂದು ಪವರ ಟಿವಿಯು “ಬಾಂಬ್ ಶರಣಗತಿ” ಕನ್ನಡ ವಾರ್ತಾ ವಾಹಿನಿಯ ಕಾರ್ಯಕ್ರಮದ ವರದಿಯಲ್ಲಿ ಮಂಗಳೂರು ವಿಮಾನನಿಲ್ದಾಣ ದಲ್ಲಿ ಸಜೀವ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಇವನಿಗೆ ಸನಾತ‌ನ ಸಂಸ್ಥೆಯ ಲಿಂಕ್ ಇದೆ. ಮಂಗಳೂರು ಬಾಂಬ್ ಪ್ರಕರಣದ ಹಿಂದೆ ಸನಾತನ ಸಂಸ್ಥೆಯ ಕೈವಾಡ ಇರುವ ಬಗ್ಗೆ ಪವರ ಟಿವಿ ಬ್ರೇಕಿಂಗ್ ವರದಿಯನ್ನು ನಿರಂತರವಾಗಿ ಪ್ರಸಾರ ಮಾಡಿತ್ತು. ಇದು ಶುದ್ದ ಸುಳ್ಳಾಗಿದೆ. ಆದಿತ್ಯರಾವ ಮತ್ತು‌ ಸನಾತನ ಸಂಸ್ಥೆಗೆ ಯಾವುದೇ ಸಂಬಂದ ಇಲ್ಲ. ಸನಾತನ […]

ಸನಾತನ ಸಂಸ್ಥೆ ಮಂಗಳೂರು ವತಿಯಿಂದ ಉಚಿತ ದಂತ ತಪಾಸಣೆ ಶಿಬಿರ

Monday, November 25th, 2019
dental

ಮಂಗಳೂರು  : ಎಯ್ಯಾಡಿಯಲ್ಲಿರುವ ರಾಮಾಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನಾತನ ಸಂಸ್ಥೆ ಮಂಗಳೂರು, ಇದರ ವತಿಯಿಂದ ಉಚಿತ ದಂತ ತಪಾಸಣೆ ಶಿಬಿರವನ್ನು ಅಯೋಜಿಸಲಾಯಿತು. ಡಾ ರಮ್ಯಾ ಇವರು ಶಾಲೆಯ ವಿದ್ಯಾರ್ಥಿಯರಿಗೆ ದಂತ ತಪಾಸಣೆಯನ್ನು ಮಾಡಿದರು. ಕಾರ್ಯಕರ್ತರಾದ ಕು.ಭವ್ಯಾ ನಾಯ್ಕ್, ಶ್ರೀ ಉಮೇಶ್ ಆಚಾರ್ಯ ಇವರು ಉಪಸ್ಥಿತರಿದ್ದರು.

ಭಾವಪೂರ್ಣ ‘ಗುರುಪೂರ್ಣಿಮಾ’ ಮಹೋತ್ಸವ

Wednesday, July 17th, 2019
sanathana

ಮಂಗಳೂರು : ಗುರುಗಳ ಸ್ಥೂಲ ದೇಹ ಅಂದರೆ ವ್ಯಷ್ಟಿ ರೂಪ ಹಾಗೂ ಸಂಪೂರ್ಣ ರಾಷ್ಟ್ರವೆಂದರೆ ಗುರುಗಳ ಸಮಷ್ಟಿ ರೂಪವಾಗಿದೆ. ಗುರುಕಾರ್ಯದ ಕಕ್ಷೆಯು ವ್ಯಕ್ತಿಯ ಆಧ್ಯಾತ್ಮಿಕ ಉದ್ಧಾರದಿಂದ ಸಮಾಜ, ರಾಷ್ಟ್ರ ಹಾಗೂ ಧರ್ಮದ ಉತ್ಥಾನದ ತನಕ ವ್ಯಾಪಿಸಿರುತ್ತದೆ.  ವೈಯಕ್ತಿಕ ಉದ್ಧಾರಕ್ಕಿಂತ ಸಮಷ್ಟಿ ಉತ್ಕರ್ಷಕ್ಕಾಗಿ ಕಾರ್ಯವನ್ನು ಮಾಡುವವರ ಮೇಲೆ ಗುರುಕೃಪೆ ಹೆಚ್ಚಾಗುತ್ತದೆ. ಧರ್ಮಸಂಸ್ಥಾಪನೆಯ ಅಂದರೆ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯವು ವ್ಯಕ್ತಿ, ಸಮಾಜ, ರಾಷ್ಟ್ರ ಹಾಗೂ ಧರ್ಮ ಇವೆಲ್ಲದರ ಉತ್ಕರ್ಷವನ್ನು ಸಾಧಿಸುವ ಹಾಗೂ ಕಾಲಾನುಸಾರ ಆವಶ್ಯಕ ಗುರುಕಾರ್ಯವೇ ಆಗಿದೆ. ಈ ಕಾರ್ಯಕ್ಕಾಗಿ ಸ್ವಕ್ಷಮತೆಯಂತೆ […]

ಗುರು-ಶಿಷ್ಯ ಪರಂಪರೆ ಜಗತ್ತಿಗೇ ಹಿಂದೂ ಧರ್ಮ ನೀಡಿದ ಅಮೂಲ್ಯ ಕೊಡುಗೆ

Monday, July 30th, 2018
Gurupurnime

ಮಂಗಳೂರು : ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನ ಸಭಾಗೃಹದಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ಗುರುಪೂಜೆ ಹಾಗೂ ಸಾಯಂಕಾಲ ಸಭಾ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ಆದಿಗುರು ಮಹರ್ಷಿ ವ್ಯಾಸರ ಪ್ರತಿಮೆಯ ಪೂಜೆಯನ್ನು ಮಾಡಲಾಯಿತು. ಗುರುಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ಶ್ರೀ. ವೇಣು ಗೋಪಾಲ ರಾಮ ಮತ್ತು ಸೌ. ಪರಮೇಶ್ವರಿ ಇವರು ಮಾಡಿದರು. ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ ಭಕ್ತರಾಜ ಮಹಾರಾಜರ ಪ್ರತಿಮೆಗೆ ಆರತಿ ಬೆಳಗಲಾಯಿತು. ಗುರುಪೂಜೆಯ ಪೌರೋಹಿತ್ಯವನ್ನು […]

ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ !

Monday, April 23rd, 2018
HJS

ಮಂಗಳೂರು  : ಹಿಂದೂ ಜನಜಾಗೃತಿ ಸಮಿತಿ ಇದು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಾರ್ಯ ಮಾಡುವ ರಾಜಕೀಯೇತರ ಸ್ವಯಂಸೇವಾ ಸಂಘಟನೆಯಾಗಿದೆ. ಸಮಿತಿಯು ಕಳೆದ ೧೬ ವರ್ಷಗಳಿಂದ ಧರ್ಮಶಿಕ್ಷಣ, ಧರ್ಮಜಾಗೃತಿ ಮತ್ತು ಧರ್ಮರಕ್ಷಣೆಯ ಉಪಕ್ರಮಗಳ ಮಾಧ್ಯಮದಿಂದ ರಾಷ್ಟ್ರವ್ಯಾಪಿ ಹಿಂದೂ ಸಂಘಟನೆಯ ಕಾರ್ಯ ಮಾಡುತ್ತಿದೆ. ಹಿಂದೂಗಳ ಸಾಮಾಜಿಕ, ರಾಷ್ಟ್ರೀಯ ಮತ್ತು ಧಾರ್ಮಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು’, ಇದೊಂದೇ ಧ್ಯೇಯವನ್ನಿಟ್ಟುಕೊಂಡು ಸಮಿತಿಯು ಸಮಸ್ತ ಹಿಂದೂಗಳನ್ನು ಜಾಗೃತ ಮತ್ತು ಸಂಘಟಿತಗೊಳಿಸುವ ಕಾರ್ಯ ಮಾಡುತ್ತಿದೆ. ಕೆಲವು ದಿನಪತ್ರಿಕೆಗಳಲ್ಲಿ ಸನಾತನ […]

ರಕ್ಷಾಬಂಧನ ಸ್ತ್ರೀಯು ಪುರುಷನಿಗೆ ಕಟ್ಟುವುವುದರಲ್ಲಿ ಶ್ರೇಷ್ಠವಿದೆ : ಸಂಗೀತಾ ಪ್ರಭು

Monday, August 7th, 2017
Rakshbandhana

ಮಂಗಳೂರು: ನಗರದ ಬೋಳೂರಿನ ಪ್ರಭು ನಿವಾಸ ಕಂಪೌಂಡ್ ನಲ್ಲಿನ ಸೇವಾಕೇಂದ್ರದಲ್ಲಿ ಪತ್ರಕರ್ತರಿಗೆ ಸೇರಿದಂತೆ ಧರ್ಮಪ್ರೇಮಿಗಳನ್ನು ಒಟ್ಟುಸೇರಿಸಿ ಶಾಸ್ತ್ರೋಕ್ತವಾಗಿ ರಾಖಿ ಕಟ್ಟಲಾಯಿತು. ಸನಾತನ ಸಂಸ್ಥೆಯ ವಕ್ತಾರರಾದ ಸೌ. ಸಂಗೀತಾ ಪ್ರಭು ಇವರು ರಕ್ಷಾಬಂಧನದ ಮಹತ್ವದ ಕುರಿತಾಗಿ ಮಾತನಾಡುತ್ತಾ, ಶ್ರಾವಣ ಮಾಸದ ಹುಣ್ಣಿಮೆಯ ದಿನ ಸೋದರನಿಗೆ ಸೋದರಿಯು ರಕ್ಷೆಯನ್ನು ಕಟ್ಟುವುದಕ್ಕೆ ರಕ್ಷಾಬಂಧನ ಎಂದು ಹೇಳುತ್ತಾರೆ, ‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’ ರಾಖಿಯನ್ನು […]

ಹಿಂದೂ ದೇವಸ್ಥಾನಗಳಲ್ಲಿನ ಭಕ್ತರ ಬಂಗಾರ ಸರಕಾರ ಮುಟ್ಟಬಾರದು

Monday, May 11th, 2015
Sanatana

ಮಂಗಳೂರು: ಹಿಂದೂ ದೇವಸ್ಥಾನಗಳಲ್ಲಿನ ಬಂಗಾರ ಬ್ಯಾಂಕ್‌ಗಳಲ್ಲಿಡುವ ಹಾಗೂ ಯೋಗದಿಂದ ಓಂ ತೆಗೆಯುವ ಸರಕಾರದ ಪ್ರಸ್ತಾಪ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಿತು. ಸನಾತನ ಸಂಸ್ಥೆಯ ಸಂಗೀತಾ ಪ್ರಭು ಮಾತನಾಡಿ, ಸರಕಾರ ದೇವಸ್ಥಾನಗಳ ಬಂಗಾರವನ್ನು ಬ್ಯಾಂಕ್‌ಗಳಲ್ಲಿಡುವ ಪ್ರಸ್ತಾವ ಕೈಬಿಡಬೇಕು ಎಂದರು. ರಾಷ್ಟ್ರೀಯ ಹಿಂದೂ ಆಂದೋಲನದ ವಿವೇಕ ಪೈ ಮಾತನಾಡಿ, ದೇವಸ್ಥಾನಗಳಲ್ಲಿನ ಧನವನ್ನು ಭಕ್ತರು ಧರ್ಮಕಾರ್ಯಕ್ಕಾಗಿ ನೀಡಿರುತ್ತಾರೆ. ಇದರ ಬಳಕೆ ಅಭಿವೃದ್ಧಿಗೆ ಅಲ್ಲ, ಹಿಂದೂ ಧರ್ಮದ ಪ್ರಸಾರಕ್ಕೆ. ಸರಕಾರ ದೇವಸ್ಥಾನಗಳಲ್ಲಿನ ಬಂಗಾರ ತೆಗೆದುಕೊಳ್ಳಲು ನಿರ್ಧರಿಸಿದಲ್ಲಿ […]