ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ ಪ್ರಾಂಶುಪಾಲ ಪ್ರೊ. ಎ.ಎಸ್‌ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ, 6 ಮಂದಿ ದೋಷಿ ಎಂದು ಕೋರ್ಟ್ ತೀರ್ಪು

Thursday, September 28th, 2023
Ramakrishna-R

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ ಪ್ರಾಂಶುಪಾಲರಾಗಿದ್ದ ಪ್ರೊ. ಎ.ಎಸ್‌ ರಾಮಕೃಷ್ಣ ಅವರ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಪ್ರೊ. ಎ. ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪು ರದ್ದುಗೊಳಿಸಿರುವ ಹೈಕೋರ್ಟ್ ಅವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಈ […]

ಸುಳ್ಯ : ಅಕ್ರಮ ಶ್ರೀಗಂಧ ಸಾಗಿಸುತ್ತಿದ್ದ ಮೂವರು ಆರೋಪಿಗಳ ಬಂಧನ

Wednesday, November 6th, 2019
Sulya

ಸುಳ್ಯ : ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿ, ಎರಡು ಗೋಣಿ ಚೀಲಗಳಲ್ಲಿ ಸುಮಾರು 31.424 ಕೆಜಿ ಗಳಷ್ಟು ತೂಕದ 40 ಗಂಧದ ಹಸಿ ಕೊರಡುಗಳನ್ನು ಮತ್ತು 3 ಚಕ್ಕೆಗಳನ್ನು, ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಮಧ್ಯಾಹ್ನ ತಾಲೂಕಿನ ಜಾಲ್ಸೂರು ಎಂಬಲ್ಲಿ ಸುಳ್ಯ ಪೊಲೀಸರು ಮಡಿಕೇರಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎ-55, ಎಂ-0314 ಮಾರುತಿ ಆಲ್ಟೋ ಕಾರಿನಲ್ಲಿ, ಕೊಡಗು ಜಿಲ್ಲೆಯ ಸೋಮವಾರಪೇಟೆಯ ನಿವಾಸಿಗಳಾದ ಅಶ್ರಫ್ ಮತ್ತು ಉನೈಸ್ […]

ಸುಳ್ಯದಲ್ಲಿ ಶಾಲಾ ವಾಹನಕ್ಕೆ ಬೆಂಕಿ: ತಪ್ಪಿದ ಭಾರಿ ಅನಾಹುತ

Thursday, March 15th, 2018
bus-fire

ಸುಳ್ಯ: ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್ಸೊಂದು ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಮುಂಜಾನೆ ನಡೆದಿದೆ. ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್‌ ಇಂದು ಮುಂಜಾನೆ ಶಾಲಾ ಮಕ್ಕಳನ್ನು ಕರೆತರಲು ತೆರಳುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ಘಟನೆ ನಡೆದ ಸಂದರ್ಭ ಬಸ್ಸಿನಲ್ಲಿ ಮಕ್ಕಳು ಇರದ ಕಾರಣ ಯಾವುದೇ ದುರಂತ ಸಂಭವಿಸಲಿಲ್ಲ. ಬಸ್ಸಿಗೆ ಬೆಂಕಿ ಹೊತ್ತಿದ ಸಂದರ್ಭ ಬಸ್ ಚಾಲಕ ಸೇರಿ ಇಬ್ಬರು ಬಸ್ಸಿನಿಂದ ಜಿಗಿದಿದ್ದಾರೆ. ಬೆಂಕಿ ಬಸ್‌ನ್ನು ಆವರಿಸಿಕೊಂಡಿದ್ದು, […]